ಹ್ಯಾಪಿ ಫ್ರಿಡ್ಜ್: ಬಡವರ ಹಸಿವು ನೀಗಿಸುವ ಭಗವಂತ
Team Udayavani, Oct 5, 2019, 3:05 AM IST
ಬೆಂಗಳೂರು ರೇಲ್ವೆ ನಿಲ್ದಾಣಕ್ಕೆ ಒಬ್ಬ ದೇವರು ಬಂದು, ಸ್ಥಾಪನೆ ಆಗಿದ್ದಾನೆ. ಕೇಳಿದ್ದನ್ನೆಲ್ಲ ಕೊಡುವ ಭಗವಂತ ಅವನಲ್ಲವಾದರೂ, ಹಸಿದವರಿಗೆ ಏನು ಬೇಕೋ, ಅದನ್ನು ಕೊಡುವ ಕಲ್ಪವೃಕ್ಷ ಆತ! ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೇಲ್ವೆ ಸ್ಟೇಷನ್ನಿಗೆ ಹೋದಾಗ, “ಕೈಯಲ್ಲಿ ಹಣವಿಲ್ಲ. ಹೊಟ್ಟೆ ಹಸಿದಿದೆ. ಏನು ಮಾಡೋದೀಗ?’ ಎಂದು ಬಡವರು, ನಿರ್ಗತಿಕರು ಇನ್ನು ಮುಂದೆ ಚಿಂತೆಗೆಟ್ಟು ಕೂರುವ ಅಗತ್ಯವೇ ಇಲ್ಲ.
ಹಸಿದ ಜೀವಗಳು ಈತನ “ಸನ್ನಿಧಾನ’ಕ್ಕೆ ಬಂದರೆ ಸಾಕು, ಕ್ಷಣಮಾತ್ರದಲ್ಲಿ ಸಂತೃಪ್ತರಾಗಬಹುದು! ಅರೆ, ಇದ್ಯಾವ ದೇವರು ಅಂತ ಅಂದ್ಕೋಂಡ್ರಾ? ಇದು “ಹ್ಯಾಪಿ ಪ್ರಿಡ್ಜ್’! “ಫೀಡಿಂಗ್ ಇಂಡಿಯಾ’ ಎನ್ನುವ ಸಂಸ್ಥೆಯು, ರೇಲ್ವೆ ನಿಲ್ದಾಣದಲ್ಲಿ ಇಟ್ಟಿರುವ ಫ್ರಿಡ್ಜ್. ಹಸಿದವರ, ನಿರ್ಗತಿಕರ ಹಸಿವನ್ನು ನೀಗಿಸಲೆಂದೇ, ಭಾರತೀಯ ರೇಲ್ವೆಯ ಸಹಯೋಗದೊಂದಿಗೆ ಇದನ್ನು ಇತ್ತೀಚಿಗೆ ಇಲ್ಲಿ ಸ್ಥಾಪಿಸಲಾಗಿದೆ.
ಹಾಗಾದರೆ, “ಈ ಫ್ರಿಡ್ಜ್ನೊಳಗೆ ಆಹಾರ ಇಡೋರ್ಯಾರು’- ಎನ್ನುವ ಪ್ರಶ್ನೆಯೇ? ಯಾರು ಬೇಕಾದರೂ ಆಗಬಹುದು. ಯಾರ ಬಳಿ, ಹೆಚ್ಚುವರಿಯಾಗಿ ಆಹಾರವಿದೆಯೋ, ಅದನ್ನು ತಂದು ಇಲ್ಲಿ ಇಡಬಹುದು. ಹಣ್ಣು, ಮನೆ ಆಹಾರಗಳು, ರೆಸ್ಟೋರೆಂಟ್ ಆಹಾರಗಳನ್ನು ಇಲ್ಲಿ ಇಡಬಹುದು. ಬಡವರ, ಅಸಹಾಯಕರ ಹಸಿವು ನೀಗಿಸಲು ನಮ್ಮಿಂದ ಸಾಧ್ಯವಾಗುವ ಪುಟ್ಟ ಉಪಕಾರವನ್ನು ಈ ಮೂಲಕ ನೆರವೇರಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.