ಮೈಸೂರು ಜತಿಯಲ್ಲಿ ಮಿಂಚಿದ ಹರ್ಷಿತಾ

Team Udayavani, Jan 25, 2020, 6:05 AM IST

minchida

ರಂಗದ ಮೇಲೆ ಮಿಂಚಿನ ಬಳ್ಳಿಯೊಂದು ಝಳಪಿಸಿದಂತೆ ಅದಮ್ಯ ಚೈತನ್ಯದಿಂದ ಲೀಲಾಜಾಲವಾಗಿ ನರ್ತಿಸಿದವಳು ಭರತನಾಟ್ಯ ಕಲಾವಿದೆ ಹರ್ಷಿತಾ ಜಗದೀಶ್‌. ಅದು ಅವಳ ಮೊದಲ ರಂಗಾರ್ಪಣೆ ಅಂತ ನೆರೆದವರಿಗೆ ಅನ್ನಿಸಲೇ ಇಲ್ಲ. ಆತ್ಮವಿಶ್ವಾಸ, ಹರ್ಷಚಿತ್ತ-ಹಸನ್ಮುಖದಿಂದ, ಲವಲವಿಕೆಯ ಅಂಗಿಕಾಭಿನಯಗಳಿಂದ ಭರವಸೆಯ ಕಲಾವಿದೆಯಾಗಿ ಹೊರಹೊಮ್ಮಿದ ಹರ್ಷಿತಾ, ಇತ್ತೀಚಿಗೆ ಎ.ಡಿ.ಎ.ರಂಗಮಂದಿರದಲ್ಲಿ “ರಂಗಪ್ರವೇಶ’ ನೆರವೇರಿಸಿಕೊಂಡಳು.

ಶ್ರುತಿಲಯ ಫೈನ್‌ ಆರ್ಟ್ಸ್ ನೃತ್ಯಶಾಲೆಯ ನುರಿತ ನಾಟ್ಯಗುರು ಹೇಮಲತಾ ಪ್ರಕಾಶರ ಸಮರ್ಥ ತರಬೇತಿಯಲ್ಲಿ ರೂಪುಗೊಂಡ ಕಲಾಶಿಲ್ಪ ಹರ್ಷಿತಾ. ಅಂದು ಆಕೆ ಪ್ರದರ್ಶಿಸಿದ ಕೃತಿಗಳೆಲ್ಲ ಉತ್ತಮ ಆಯ್ಕೆಯಿಂದ ಕೂಡಿದ್ದು, ಕಲಾವಿದೆಯ ಅಂತಃಸತ್ವಕ್ಕೆ, ಕಲಾಪ್ರಪೂರ್ಣತೆಗೆ ಕನ್ನಡಿ ಹಿಡಿದವು. “ಆಕರ್ಷಕ ಪುಷ್ಪಾಂಜಲಿ’ಯಿಂದ ಆರಂಭಿಸಿ, ನರ್ತನ ಗಣಪತಿ­ಯನ್ನು ಸ್ತುತಿಸಿ, ಮೈಸೂರು ಅರಸರ ಕಾಲದಲ್ಲಿ ದೇವದಾಸಿಯರು ಪ್ರಸ್ತುತಪಡಿಸುತ್ತಿದ್ದ “ಮೈಸೂರು ಜತಿ’ಯನ್ನು ಅತ್ಯಂತ ಮನೋಹರ ನೃತ್ತ, ಮುದವಾದ ಭಂಗಿಗಳ ಮೂಲಕ ನೃತ್ಯಾರ್ಪಣೆ ಮಾಡಿದಳು.

ಗುರು ಹೇಮಲತಾ ಅವರ ಕವಿತಾತ್ಮಕ ನಿರೂಪಣೆ, ನಟುವಾಂಗ ಪರಿಣಾಮಕಾರಿಯಾಗಿತ್ತು. ಅನಂತರ, ಅಪರೂಪದ ಉತ್ಕೃಷ್ಟಮಟ್ಟದ “ಗೋಕುಲಬಾಲ ಪದವರ್ಣ’ದಲ್ಲಿ ಶ್ರೀಕೃಷ್ಣನ ಬಾಲಲೀಲಾ ವಿಶೇಷಗಳನ್ನು, ತನ್ನ ನಂಬಿದ ಭಕ್ತರನ್ನು ಶ್ರೀಕೃಷ್ಣ ಕಾಪಾಡಿದ ಹಲವಾರು ಮನನೀಯ ಸಂಚಾರಿಗಳ ನಾಟಕೀಯ ಸನ್ನಿವೇಶಗಳ ಮೂಲಕ ಜತಿಗಳ ಝೇಂಕಾರಗಳಲ್ಲಿ ಕಟ್ಟಿಕೊಟ್ಟಳು ಕಲಾವಿದೆ. ತುಂಟಕೃಷ್ಣ ಯಶೋದೆ ಮೇಲೆ ಮುಚ್ಚಿಟ್ಟಿದ್ದ ಬೆಣ್ಣೆಯನ್ನು ಕದ್ದನಷ್ಟೇ ಅಲ್ಲ, ಅಂದವನು ನೋಡುಗರ ಹೃದಯಗಳನ್ನೂ ಅಪಹರಿಸಿಬಿಟ್ಟಿದ್ದ!

“ಶಿವಸ್ತುತಿ’ಯಲ್ಲಿ ಕಲಾವಿದೆಯ ಅಂಗಶುದ್ಧಿ, ಅಭಿನಯ ಸಾಮರ್ಥ್ಯ ಅಭಿವ್ಯಕ್ತವಾದರೆ, ದಾಸರ ದೇವರನಾಮದ ಸಾಕ್ಷಾತ್ಕಾರದ ಭಾವುಕತೆಯಲ್ಲಿ ಹರ್ಷಿತಾಳಿಗೆ ಇಡೀ ರಂಗ ಆಡುಂಬೊಲವಾಗಿತ್ತು. ಕೊರವಂಜಿಯ ನೃತ್ಯ­ವಂತೂ ಉಲ್ಲಾಸಮಯವಾಗಿದ್ದು, ಜಾನಪದ ಆಯಾಮಗಳ ಹೆಜ್ಜೆ-ಗೆಜ್ಜೆಗಳ ಮಟ್ಟು ಆನಂದದಾಯಕವಾಗಿತ್ತು. ಕೊನೆಯ ನೃತ್ಯಬಂಧ- “ತಿಲ್ಲಾನ’­ದಲ್ಲಿ ಹರ್ಷಿತಾ, ನವಚೈತನ್ಯದ ಚಿಲುಮೆಯಾಗಿ ನರ್ತನದ ಪ್ರತಿರೂಪವಾಗಿ ಮನಸೂರೆಗೊಂಡಳು.

* ವೈ.ಕೆ.ಸಂಧ್ಯಾ ಶರ್ಮ

ಟಾಪ್ ನ್ಯೂಸ್

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Leopard: ಮನೆಯ ತಾರಸಿ ಮೇಲೆ ಚಿರತೆ ಓಡಾಟ… ಆತಂಕದಲ್ಲಿ ಗ್ರಾಮಸ್ಥರು

Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು

ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

2-hunsur

Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ

Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Leopard: ಮನೆಯ ತಾರಸಿ ಮೇಲೆ ಚಿರತೆ ಓಡಾಟ… ಆತಂಕದಲ್ಲಿ ಗ್ರಾಮಸ್ಥರು

Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.