ಎಚ್ಎಸ್ಆರ್ ಟು ಹೇಸರಘಟ್ಟ
Team Udayavani, Nov 4, 2017, 3:12 PM IST
“ವಾರವಿಡೀ ಆಫೀಸ್ನಲ್ಲಿ ಸೈಕಲ್ ಹೊಡೆದು ಬೇಜಾರಾಗಿದೆ, ವೀಕೆಂಡ್ನಲ್ಲಿ ಏನಾದ್ರೂ ಮಾಡ್ಬೇಕು’ ಅಂದುಕೊಳ್ಳುವರಿಗಾಗಿ ಸೈಕ್ಲಥಾನ್ ನಡೆಯುತ್ತಿದೆ. ಸೈಕಲ್ ಇಲ್ಲದಿದ್ದರೂ ಪರವಾಗಿಲ್ಲ, ಹೇಸರಘಟ್ಟದ ಕೆರೆಯವರೆಗೆ ಸೈಕಲ್ ತುಳಿಯುವ ಶಕ್ತಿ ಇದ್ದರೆ ಸಾಕು. ಬಾಡಿಗೆಗೆ ಸೈಕಲ್ ಸಿಗುತ್ತದೆ.
ಇದು ಒಟ್ಟು 130 ಕಿ.ಮೀ ದೂರದ ಸೈಕ್ಲಥಾನ್ ಆಗಿದ್ದು, ಜಿಪಿಎಸ್ ಕೆಲಸ ಮಾಡುವ ಸ್ಮಾರ್ಟ್ಫೋನ್ ಜೊತೆಗಿರಬೇಕು. ನೀರಿನ ಬಾಟಲ್, ಹೆಲ್ಮೆಟ್, ಕ್ಯಾಪ್, ಗಾಗಲ್ಸ್ಗಳನ್ನು ಇದ್ದರೆ ಒಳಿತು. ಬೆಳಗ್ಗೆ 5ಕ್ಕೆ ಹೊರಡುವ ತಂಡ, ಮಧ್ಯಾಹ್ನ 3.30ಕ್ಕೆ ವಾಪಸಾಗುತ್ತದೆ. ಪ್ರಕೃತಿ ಸೌಂದರ್ಯ ಹಾಗೂ ಪಕ್ಷಿ ವೀಕ್ಷಣೆಯಲ್ಲಿ ಆಸಕ್ತಿಯಿರುವವರು ನಿಗದಿತ ಜಾಗಕ್ಕೆ ಬನ್ನಿ.
ಎಲ್ಲಿ?: ಎಚ್ಎಸ್ಆರ್ ಲೇಔಟ್
ಯಾವಾಗ?: ನವೆಂಬರ್ 4, ಬೆಳಗ್ಗೆ 4.45
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.