ಪ್ರಾಣಿಗಳು-ಮನುಷ್ಯರ ಜುಗಲ್‌ ಬಂದಿ:ಸಂಘರ್ಷಕ್ಕೆ ಎಣೆಯಿಲ್ಲ,ತಡೆಗೆ ದಾರಿ


Team Udayavani, Jul 8, 2017, 4:36 PM IST

658744.jpg

ನಮ್ಮಲ್ಲಿ ದಿನೇ ದಿನೇ ವನ್ಯತಾಣಗಳ ಸಂಖ್ಯೆ ಕಡಿಮೆಯಾಗುತ್ತಿವೆ.  ಇದರಿಂದ ಗ್ರಾಮೀಣ, ನಗರ ಭಾಗದ ಮಾನವ ಹಾಗೂ ವನ್ಯಜೀವಿಗಳ ನಡುವಿನ ಸಂಕೀರ್ಣ ಸಂಬಂಧ ಸೂಕ್ಷ್ಮವಾಗುತ್ತಿದೆ. ಮನುಷ್ಯ ಹಾಗೂ ವನ್ಯಪ್ರಾಣಿಗಳ ಮುಖಾಮುಖೀಯು ಬೆಳೆ, ಆಸ್ತಿ ನಾಶ, ಜಾನುವಾರುಗಳ ಖನ್ನತೆ, ಮನುಷ್ಯರ ಗಾಯಗೊಳ್ಳುವಿಕೆಯೂ ಸಾವಿಗೂ ಎಡೆಮಾಡಿಕೊಡುತ್ತಿದೆ.  ವಿಶೇಷವಾಗಿ,  ಗ್ರಾಮೀಣ ಪ್ರದೇಶದಲ್ಲಿ ವನ್ಯಜೀವಿ ಸಂರಕ್ಷ$ಣೆಗೆ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. 

ಕಳೆದ  8 ವರ್ಷಗಳಲ್ಲಿ ದೇಶದ 7 ರಾಜ್ಯಗಳ, 17 ವಿವಿಧ ಸ್ಥಳಗಳಲ್ಲಿ ನಮ್ಮ ಸಂಶೋಧನಾ ಹಾಗೂ ಸಂರಕ್ಷಣಾ ತಂಡಗಳ ಜೊತೆಗೆ ನಾವು ಉತ್ತರ ಹುಡುಕಲು ಪ್ರಾರಂಭಿಸಿದ ಪ್ರಶ್ನೆಗಳೆಂದರೆ : ವನ್ಯಜೀವಿ ಸಂಬಂಧಿತ ಸಮಸ್ಯೆಗಳಿಂದಾಗುವ ನಷ್ಟದ ಬಗೆ ಹಾಗೂ ಮಟ್ಟವೇನು? ವನ್ಯಜೀವಿ ಸಮಸ್ಯೆಯಿಂದ ಬಾಧಿತರಾದ ಜನ ಹಾಗೂ ಸ್ಥಳಗಳನ್ನು ಗುರುತಿಸಿ ಸಹಾಯಮಾಡಬಹುದೇ?  ನಷ್ಟದ ಪರಿಣಾಮವನ್ನು ತಗ್ಗಿಸಿ ಪರಿಹಾರವನ್ನು ಉತ್ತಮಗೊಳಿಸಬಹುದೇ? ಜನರ ಜೀವವ ಮತ್ತು ಜೀವನಾಧಾರ ನಾಶವಾಗದಂತೆ ಎಚ್ಚರ ವಹಿಸಲು ಸಾಧ್ಯವೆ? ಜೊತೆಗೆ ವನ್ಯಜೀವಿಗಳ ಬಗ್ಗೆ ಜನರಲ್ಲಿ ಪ್ರತೀಕಾರದ ಭಾವನೆಯ ಬದಲಾಗಿ ತಾಳ್ಮೆಯ ಮನೋಭಾವವನ್ನು ನಾವು ಹೇಗೆ ಉತ್ತೇಜಿಸಬಹುದು?- ಇವಿಷ್ಟು. 

ನಷ್ಟದ ಮಟ್ಟವನ್ನು ತಿಳಿದುಕೊಳ್ಳುವ ಸಲುವಾಗಿ ಪ್ರತಿ ರಾಜ್ಯದಲ್ಲಿ ದಾಖಲಾದ ಮಾನವ-ವನ್ಯಜೀವಿ ಸಂಘರ್ಷದ ಘಟನೆ ಸಂಬಂಧಿಸಿದಂತೆ ನೀಡಲಾದ ಪರಿಹಾರ ಹಾಗೂ ಅದರ ವಿಧಾನವನ್ನು ಅಧ್ಯಯನ ಮಾಡಿದೆವು. ಇದರಿಂದ ಕಂಡುಕೊಂಡ ಉತ್ತರ ನಮ್ಮನ್ನು ದಿಗ½$›ಮೆಗೊಳಿಸಿತು! ಕಾರಣ  ಕೇವಲ ಒಂದು ವರ್ಷದ ಅವಧಿಯಲ್ಲಿ 81 ಸಾವಿರ ಪ್ರಕರಣಗಳಲ್ಲಿ ಪರಿಹಾರ ವಿತರಿಸಲಾಗಿದೆ.  ಇದರಲ್ಲಿ ಬೆಳೆ ಹಾಗೂ ಆಸ್ತಿ ನಷ್ಟದ ಪ್ರಕರಣಗಳು ಶೇ. 73 ರಾಗಿದ್ದರೆ,  ಜಾನುವಾರು ನಷ್ಟಗಳು ಶೇ. 21 ಆಗಿತ್ತು.  ಶೇ. 6 ರಷ್ಟು ಮನುಷ್ಯನಿಗೆ ಗಾಯವಾದ ಪ್ರಕರಣಗಳಾದರೆ, ಶೇ. 0.4 ರಷ್ಟು ಜೀವಹಾನಿ ಪ್ರಕರಣಗಳು ಇದ್ದವು.  ದೇಶಾದ್ಯಂತ ಒಟ್ಟಾಗಿ ಸುಮಾರು 35 ಕೋಟಿ ರೂ. ಗಳಷ್ಟು ಪರಿಹಾರವನ್ನು ವಿತರಿಸಲಾಗಿತ್ತು. ಹೀಗಿದ್ದಲ್ಲಿ, ಮಾನವ-ವನ್ಯಜೀವಿಗಳ ನಡುವೆ ಅತಿ ಹೆಚ್ಚು ಸಂಘರ್ಷಗಳನ್ನು ಕಾಣುವ ದೇಶಗಳಲ್ಲಿ ಭಾರತವನ್ನೂ ಸೇರಿಸಬಹುದು.

ನೊಂದ ಕುಟುಂಬಗಳಿಗೆ ಸಿಗುವ ನೆರವು ಹಾಗೂ ಪರಿಹಾರ ನೀತಿ ದೇಶದ ವಿವಿಧ ರಾಜ್ಯಗಳಲ್ಲಿ ತೀರಾ ಭಿನ್ನವಾಗಿದೆ. ಸಾಮಾನ್ಯವಾಗಿ ಪರಿಶೀಲಿಸಬಹುದಾದ ನಷ್ಟವು ದೊಡ್ಡ ಪ್ರಾಣಿಗಳಿಂದ ಉಂಟಾಗಿದ್ದು ಈ ಬಗೆಯ ನಷ್ಟದ ಮೇಲೆ ಹೆಚ್ಚು ಗಮನ ನೀಡಿ, ಸಣ್ಣ ಪ್ರಮಾಣದ, ನಿರಂತರವಾಗಿರುವ,  ಹಂದಿ ಹಾಗೂ ಕಪಿಗಳಿಂದಾಗುವ ನಷ್ಟಗಳನ್ನು ಪರಿಹಾರ ಪ್ರಕ್ರಿಯೆಯು ಕಡೆಗಣಿಸಿದೆ. ಇಲ್ಲಿ ಆಗುವ ವಿಳಂಬ ಹಾಗೂ ಹಣಪಾವತಿಯಲ್ಲಿಲ್ಲದ ಪಾರದರ್ಶಕತೆಯಿಂದ ಇಡೀ ಪರಿಹಾರ ವಿಧಾನವು ಉದ್ವೇಗ, ಒತ್ತಡಗಳಿಂದ ತುಂಬಿಹೋಗಿದೆ. ಇದರಿಂದಾಗಿ, ಕ್ರಮೇಣ ಜನರ ನಂಬಿಕೆಯು ಕ್ಷೀಣಿಸಿ ವನ್ಯಜೀವಿಗಳ ಬಗೆಗಿನ ಜವಾಬ್ದಾರಿ ಸಂಪೂರ್ಣವಾಗಿ ಸರ್ಕಾರದ ಮಗ್ಗುಲಿಗೆ ಬಿದ್ದಿದೆ. ಬಹುತೇಕ ಸ್ಥಳಗಳಲ್ಲಿ ಸರ್ಕಾರಿ ಕಚೇರಿಗಳು ಈ ಪ್ರಮಾಣದ ಪ್ರಕರಣಗಳನ್ನು ನಿಭಾಯಿಸಲು ಸಾಧ್ಯವಾಗದಿದ್ದರಿಂದ  ಸಕಾಲಿಕ ಹಾಗೂ ಪರಿಣಾಮಕಾರಿಯಾಗಿ ಇದರ ವಿಲೇವಾರಿ ಮಾಡಲು ಸಾಧ್ಯವಾಗುತ್ತಿಲ್ಲ. ಚಿರತೆಗಳನ್ನು ಸುಟ್ಟುಹಾಕಿರುವುದು, ನೇರ ವಿದ್ಯುತ್‌ ಬೇಲಿಗೆ ಹರಿಸಿ ಆನೆಗಳನ್ನು ಕೊಂದುಹಾಕಿರುವುದು, ಅರಣ್ಯಾಧಿಕಾರಿಗಳ ಮೇಲೆ ನಡೆದಿರುವ ಹಲ್ಲೆ  ಇತ್ಯಾದಿ ಪ್ರಕರಣಗಳು ವನ್ಯಜೀವಿಗಳ ಮೇಲೆ ಕ್ಷೀಣಿಸುತ್ತಿರುವ ಜನರ ತಾಳ್ಮೆಗೆ ಸಾಕ್ಷಿ ಒದಗಿಸುತ್ತದೆ.  

ನಮ್ಮ ಮಧ್ಯಸ್ಥಿಕೆಯ ಪ್ರಯತ್ನ 

ದೇಶದ 11 ವಿವಿಧ ವನ್ಯಜೀವಿ ಸಂರಕ್ಷಿತ ಪ್ರದೇಶಗಳ ಸುತ್ತಮುತ್ತ ಜೀವಿಸುತ್ತಿರುವ ಸುಮಾರು 5 ಸಾವಿರ ಕುಟುಂಬಗಳ ಕುರಿತ ಅಧ್ಯಯನದಿಂದ ನಮಗೆ  ಅನೇಕ ಸತ್ಯಗಳು ಕಂಡು ಬಂದವು.  32 ಜಾತಿಯ ವನ್ಯಪ್ರಾಣಿಗಳಿಂದ ಶೇ. 71 ಕುಟುಂಬಗಳು ಬೆಳೆ ಹಾಗೂ ಶೇ. 17 ಕುಟುಂಬಗಳು ಜಾನುವಾರುಗಳನ್ನು ಕಳೆದುಕೊಂಡಿದ್ದರೆ, ಶೇ.3ರಷ್ಟು ಕುಟುಂಬಗಳಲ್ಲಿ ಜನರಿಗೆ ಗಾಯ ಅಥವಾ ಜೀವಹಾನಿಯಾಗಿತ್ತು. ವನ್ಯಜೀವಿಗಳಿಂದ ಉಂಟಾಗುವ ಹಾನಿಯನ್ನು ತಗ್ಗಿಸಲು ಜನರು 12 ಬಗೆಯ ವಿವಿಧ ಉಪಾಯಗಳನ್ನು ಅಳವಡಿಸಿಕೊಂಡಿದ್ದು – ಇದರಲ್ಲಿ ರಾತ್ರಿಯೆಲ್ಲಾ ಬೆಳೆ ಕಾಯುವುದು, ಪ್ರಾಣಿಯನ್ನು ಬೆದರಿಸುವ ಸಾಧನಗಳು ಹಾಗೂ ಬೇಲಿಗಳು ಪ್ರಮುಖವಾಗಿದೆ.  ಸ್ಥಳೀಯ ಮಧ್ಯಸ್ಥಿಕೆಯ ಮೂಲಕ ಪರಿಣಾಮಕಾರಿಯಾಗಿ ಜನರ ಜೀವ ಮತ್ತು ಜೀವನೋಪಾಯವನ್ನು ರಕ್ಷಿಸಲು ಸರ್ಕಾರವು ತುರ್ತಾಗಿ ಕಾರ್ಯೋನ್ಮುಖವಾಗಬೇಕಾಗಿದೆ. 

ದಕ್ಷಿಣ ಭಾರತದ ಎರಡು ಪ್ರಮುಖ ರಾಷ್ಟ್ರೀಯ ಉದ್ಯಾನಗಳಾದ ಬಂಡೀಪುರ ಹಾಗೂ ನಾಗರಹೊಳೆಯಲ್ಲಿ ವೈಲ್ಡ್‌  ಲೈಫ್ ಕನ್ಸರ್ವೇಶನ… ಸೊಸೈಟಿಯು ವೈಲ್ಡ್‌  ಸೇವೆ ಕಾರ್ಯಕ್ರಮವನ್ನು 20 ತಿಂಗಳ ಹಿಂದೆ ಪ್ರಾರಂಭಿಸಿತು. ಶುಲ್ಕ ರಹಿತ ಮೊಬೈಲ… ಸಂಖ್ಯೆಗೆ ಸಂತ್ರಸ್ತರು ಪ್ರಕರಣವನ್ನು ವೈಲ್ಡ್‌ ಸೇವೆ ದತ್ತಸಂಚಯದಲ್ಲಿ ದಾಖಲಿಸುತ್ತಿದ್ದಂತೆ ತಂಡದ ಸ್ವಯಂಸೇವಕರು ಆ ಪ್ರಕರಣಕ್ಕೆ ಕೂಡಲೇ ಮರು ಪ್ರತಿಕ್ರಿಯಿಸುತ್ತಾರೆ.  ಬಂಡೀಪುರ ಹಾಗೂ ನಾಗರಹೊಳೆ ರಾಷ್ಟ್ರೀಯ ಉದ್ಯಾನಗಳ ಸುತ್ತಲಿನ ಸುಮಾರು 600 ಹಳ್ಳಿಗಳಲ್ಲಿ ವರದಿಯಾದ ಮಾನವ-ವನ್ಯಜೀವಿ ಸಂಘರ್ಷದ ಪ್ರಕರಣಗಳ ಸಕಾಲಿಕ ದಾಖಲೆ ಹಾಗೂ ಸರ್ಕಾರದಿಂದ ತುರ್ತು ವಿಲೇವಾರಿ ಪ್ರಕ್ರಿಯೆಯನ್ನು ಸುಗಮಗೊಳಿಸುವುದೇ ಈ ಕಾರ್ಯಕ್ರಮದ ಉದ್ದೇಶ.

ಈವರೆಗೆ 6,964 ಕುಟುಂಬಗಳಿಗೆ ವೈಲ್ಡ್‌ ಸೇವೆ ಸಹಾಯವನ್ನು ಒದಗಿಸಿದೆ. ಇದರಲ್ಲಿ 1,888 ಕುಟುಂಬಗಳಿಗೆ 53 ಲಕ್ಷ ರೂಪಾಯಿಗಳಷ್ಟು ಪರಿಹಾರ ಪಡೆದುಕೊಳ್ಳುವಲ್ಲಿ ಸಹಕರಿಸಿದೆ. ನಿರಂತರವಾಗಿ ಜಾನುವಾರುಗಳನ್ನು ಕಳೆದುಕೊಳ್ಳುತ್ತಿದ್ದ ಕುಟುಂಬಗಳಿಗಾಗಿ 22 ಮಾದರಿ ಕೊಟ್ಟಿಗೆಗಳನ್ನು ಕೂಡ ವೈಲ್ಡ… ಸೇವೆ ನಿರ್ಮಿಸಿದೆ. 

ಮುನ್ಸೂಚನಾ ವ್ಯವಸ್ಥೆ ಹಾಗೂ ವಿಮಾ ಯೋಜನೆಗಳನ್ನೂ ಕೂಡ ಕೆಲವು ಪ್ರದೇಶಗಳಲ್ಲಿ ಕಲ್ಪಿಸಿಕೊಡಲಾಗಿದೆ. ಜೊತೆಗೆ ವೈಲ್ಡ… ಸೇವೆಯ ಈ ಕಾರ್ಯಕ್ರಮ ಮಿಶ್ರಫ‌ಲವನ್ನು ನೀಡಿದೆ. ಕಡಿಮೆ ಜನಸಾಂದ್ರತೆಯ ಏಕರೂಪದ ಜನವಸತಿ ಪ್ರದೇಶಗಳಲ್ಲಿ ಇದು ಯಶಸ್ಸನ್ನು ಕಂಡಿದೆ. ಹೆಚ್ಚು ಜನಸಾಂದ್ರತೆಯ ಬಹುಸಂಸ್ಕೃತಿ ಜನಪ್ರದೇಶಗಳಲ್ಲಿ ಈ ಕಾರ್ಯಕ್ರಮವು ಇನ್ನೂ ಹೆಚ್ಚು ಪರಿಣಾಮಕಾರಿಯಾಗಬೇಕಾಗಿದೆ. 

ಗ್ರಾಮೀಣ ಜೀವನದಿಂದ ನಗರ ವ್ಯವಸ್ಥೆಯೆಡೆಗೆ ನಮ್ಮ ಸಮಾಜವು ಈಗ ಬದಲಾಗುತ್ತಿದೆ. ವನ್ಯಜೀವಿಗಳ ಜೊತೆಗಿನ ಸಂಘರ್ಷದ ಸಂತ್ರಸ್ತರಿಗೆ ನಾವು ನೀಡಬಲ್ಲ ಆಸರೆ ಹಾಗೂ ವನ್ಯಜೀವಿಗಳನ್ನು ಆಶ್ರಯಿಸುವ ಜೀವಿತ ಭೂಭಾಗಗಳನ್ನು ಹೇಗೆ ವ್ಯವಸ್ಥಿತವಾಗಿ ಕಟ್ಟಿ ಉಳಿಸಿಕೊಳ್ಳಬಹುದು ಎಂಬ ದೊಡ್ಡ ಸವಾಲೊಂದು ಈಗ ನಮ್ಮ ಮುಂದಿದೆ. 
ಅದನ್ನು ಎದುರಿಸಲು ರೆಡಿಯಾಗಿರಬೇಕು. 

ಲೇಖಕರು : ಡಾ. ಕೃತಿ ಕಾರಂತ ಮತ್ತು ಶ್ರೀ. ನರಸಿಂಹ ಮೂರ್ತಿ 

ಟಾಪ್ ನ್ಯೂಸ್

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Vijayendra (2)

Congress 40 ಪರ್ಸೆಂಟ್‌ ಕಮಿಷನ್‌ ಆರೋಪ ಸುಳ್ಳೆಂದು ಸಾಬೀತು: ಬಿಜೆಪಿ

police

Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

puttige-4

Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.