ಬೇಕನಿಸುವ ತಿಂಡಿಗಳ ನೂರು ವರ್ಷ ಹಳೆಯ ಬೇಕರಿ !


Team Udayavani, Apr 15, 2017, 3:31 PM IST

12.jpg

 ಬೇಕರಿ ಶುರುವಾದ ಹೊಸತರಲ್ಲಿ ಅಂಗಡಿ ಒಂದು ಗೋಡೌನ್‌ ಆಗಿತ್ತು. ಅಲ್ಲಿ ತಯಾರಾಗುತ್ತಿದ್ದ ಬಿಸಿ ಬಿಸಿ ಬನ್ನು, ಬಿಸ್ಕತ್ತುಗಳನ್ನು ಸಬೀರ್‌ ಅವರ ಮುತ್ತಾತ ಸೈಕಲ್‌ ಮೇಲೆ ಹೇರಿಕೊಂಡು ಮನೆ ಮನೆಗೂ ಮಾರಾಟ ಮಾಡುತ್ತಿದ್ದರಂತೆ. ಆ ಪ್ರದೇಶದಲ್ಲಿ ವಾಸಿಸುತ್ತಿದ್ದ ಬ್ರಿಟಿಷ್‌ ಸೈನಿಕರು, ಅಧಿಕಾರಿಗಳು ಬೇಕರಿಯ ರುಚಿಗೆ ಮನಸೋತು ಬಹಳ ಬೇಗ ಗ್ರಾಹಕರಾದರು. 

ನಗರದಲ್ಲೊಂದು ನೂರು ವರ್ಷ ಹಳೆಯ ಬೇಕರಿ ಇದೆ. ಸರಿಯಾಗಿ ಹೇಳಬೇಕೆಂದರೆ 115 ವರ್ಷ! ಎಷ್ಟೋ ಜನ ಈ ಬೇಕರಿ ಮುಂದುಗಡೆಯೇ ಓಡಾಡಿದ್ದರೂ, ಅಲ್ಲಿ ಅನೇಕ ಸಾರಿ ತಮ್ಮಿಷ್ಟದ ತಿಂಡಿಗಳನ್ನು ಖರೀದಿಸಿದ್ದರೂ ಆ ಬೇಕರಿ ನೂರು ವರ್ಷ ಹಳೆಯದೆಂಬ ಸಂಗತಿ ತಿಳಿದಿರಲಿಕ್ಕಿಲ್ಲ. ಅಂದ ಹಾಗೆ ಈ ಬೇಕರಿ ಹೆಸರು ಆಲ್ಬರ್ಟ್‌ ಬೇಕರಿ. ಪ್ರೇಜರ್‌ ಟೌನಿನಲ್ಲಿ ಮೊಹಮ್ಮದ್‌ ಯಾಕೂಬ್‌ ಅವರು 1902ನೇ ಇಸವಿಯಲ್ಲಿ ಶುರು ಮಾಡಿದ ಬೇಕರಿಯನ್ನು ಇಂದಿನವರೆಗೂ ಕುಟುಂಬಸ್ಥರು ನಡೆಸಿಕೊಂಡು ಬಂದಿದ್ದಾರೆ. ಅವರ ನಂತರ ಮಗ ಮೊಹಮ್ಮದ್‌ ಇಬ್ರಾಹಿಂ, ಈಗ ಮೊಮ್ಮಗ ನವಾಬ್‌ ಜಾನ್‌ ಬೇಕರಿಯ ಪ್ರೊಪ್ರೈಟರ್‌ ಆಗಿದ್ದಾರೆ. ಸದ್ಯ ನವಾಬ್‌ ಅವರ ಮಗ ಸಬೀರ್‌ ಫೈಜಾನ್‌ ಕೂಡಾ ತಂದೆಗೆ ಬೇಕರಿ ನಿರ್ವಹಿಣೆಯಲ್ಲಿ ನೆರವಾಗುತ್ತಿದ್ದಾರೆ.

ಆಲ್ಬರ್ಟ್‌ ಹೆಸರಿನ ಹಿಂದೆಯೂ ಒಂದು ಕತೆಯಿದೆ. ಅದು ಇಂಗ್ಲೀಷರು ಬಾರತವನ್ನು ಆಳುತ್ತಿದ್ದ ಕಾಲವಾದ್ದರಿಂದ, ಬೇಕರಿಗೆ ಇಂಗ್ಲೀಷ್‌ ಹೆಸರಿಟ್ಟರೆ ಉಪಯೋಗ ಹೆಚ್ಚೆಂಬುದು ಸಬೀರರ ಮುತ್ತಾತನವರ ಯೋಚನೆ. ಈ ಉಪಾಯ ಫ‌ಲ ನೀಡಿತು ಕೂಡಾ. ಬ್ರಿಟಿಷ್‌ ಅಧಿಕಾರಿಗಳು, ಸೈನಿಕರು ಬಹಳಷ್ಟು ಮಂದಿ ಈ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಅವರೆಲ್ಲರೂ ಬೇಕರಿಯ ಗ್ರಾಹಕರಾದರು. ಬೇಕರಿ ಶುರುವಾದ ಹೊಸತರಲ್ಲಿ ಅಂಗಡಿ ಒಂದು ಗೋಡೌನ್‌ ಆಗಿತ್ತು. ಅಲ್ಲಿ ತಯಾರಾಗುತ್ತಿದ್ದ ಬಿಸಿ ಬಿಸಿ ಬನ್ನು, ಬಿಸ್ಕತ್ತುಗಳನ್ನು ಸಬೀರ್‌ ಅವರ ಮುತ್ತಾತ ಸೈಕಲ್‌ ಮೇಲೆ ಹೇರಿಕೊಂಡು ಮನೆ ಮನೆಗೂ ಮಾರಾಟ ಮಾಡುತ್ತಿದ್ದರಂತೆ. ಬಿಸ್ಕತ್ತು- ಬನ್ನುಗಳ ಗುಣಮಟ್ಟ ಮತ್ತು ರುಚಿಗೆ ಬಹಳ ಬೇಗ ಗ್ರಾಹಕರು ಆಕರ್ಷಿತರಾಗಿದ್ದರಿಂದ ಬಹಳ ಬೇಗ ಖಾಲಿಯಾಗುತ್ತಿದ್ದವಂತೆ.  ಹೀಗೆ ಸಣ್ಣ ಪ್ರಮಾಣದಲ್ಲಿ ಶುರುವಾದ ವ್ಯಾಪಾರ ಕೈಹಿಡಿದಿದ್ದರಿಂದ, ಗೋಡೌನ್‌ನಂತಿದ್ದ ಅಂಗಡಿ, ಚಿಕ್ಕ ಅವಧಿಯಲ್ಲಿಯೇ ಪರಿಪೂರ್ಣ ಬೇಕರಿಯಾಗಿ ಬದಲಾಯಿತು. 

ಮಸೀದಿ ರಸ್ತೆಯಲ್ಲಿರುವ ಆಲ್ಬರ್ಟ್‌ ಬೇಕರಿ ಒಳಗೆ ಕಾಲಿಡುತ್ತಿದ್ದಂತೆ ಮುಂದುಗಡೆ ಇರಿಸಿರುವ ಥರಹೇವಾರಿ ಬಿಸ್ಕತ್ತುಗಳು ಕೈಬೀಸಿ ಕರೆಯುತ್ತವೆ. ಅಷ್ಟೇ ಅಲ್ಲದೆ ಕ್ರಸಾಂಟ್‌ಗಳು, ಪೇಸ್ಟ್ರಿ, ಕೇಕುಗಳ ಬಹಳಷ್ಟು ಸ್ವಾದಗಳೇ ಇಲ್ಲಿ ಲಭ್ಯವಿದ್ದು, ಅವೆಲ್ಲದರ ರುಚಿ ನೋಡಲು ಆಸೆಯಾದರೆ, ಯಾವುದೇ ಹಿಂಜರಿಕೆ ಬೇಡ. ಅಂದ ಹಾಗೆ ಅಲ್ಲಿಗೆ ಭೇಟಿ ಕೊಟ್ಟಾಗ ಉಪ್ಪಿನ ಬೆಣ್ಣೆ ಬಿಸ್ಕತ್ತು, ಚಾಕಲೇಟ್‌ ಲಾವಾ ಕೇಕ್‌, ಮೇಯೊ ರೋಲ್ಸ್‌, ಬನಾನಾ ಮತ್ತು ಗ್ರೇಪ್ಸ್‌ ಮಫಿನ್‌ ಮತ್ತು ಗಾರ್ಲಿಕ್‌ ಬ್ರೆಡ್ಡುಗಳನ್ನು ಕೊಳ್ಳಲು ಮರೆಯದಿರಿ. ಅವೆಲ್ಲವೂ ಇಲ್ಲಿನ ವಿಶೇಷತೆ. 

ಮತ್ತೂಂದು ವಿಶೇಷತೆಯನ್ನು ಹೇಳುವುದನ್ನೇ ಮರೆತೆವು. ನಾನ್‌ವೆಜ್‌ ಪ್ರಿಯರ ಬಾಯಲ್ಲಿ ನೀರೂರಿಸುವಂಥ ವಿವಿಧ ಖಾದ್ಯಗಳನ್ನೂ ಇಲ್ಲಿ ತಯಾರಿಸುತ್ತಾರೆ. ಮಟನ್‌ ಖೀಮಾ ಸಮೋಸ, ಮಲಾಯಿ ಕಟ್ಲೆಟ್‌, ಕಾಕ್‌ಟೇಲ್‌ ಸಮೋಸ, ಖೋವ ನಾನ್‌, ಚಿಕನ್‌ ಪಫ್Õಗಳು ಇಲ್ಲಿಗೆ ಭೇಟಿ ನೀಡುವ ನಾನ್‌ವೆಜ್‌ ಪ್ರಿಯರ ಫೇವರಿಟ್ಟುಗಳು. ಇವನ್ನು ಹೊರತುಪಡಿಸಿ ಕ್ರಿಸ್‌ಮಸ್‌ ಸಮಯದಲ್ಲಿ ತಯಾರಾಗುವ ನಾನ್‌ ಆಲ್ಕೋಹಾಲಿಕ್‌ ಪ್ಲಮ್‌ ಕೇಕ್‌, ಹಾಟ್‌ ಕ್ರಾಸ್‌ ಬನ್‌ಗಳು ಇಲ್ಲಿನ ಖಾಯಂ ಗಿರಾಕಿಗಳಿಗೆ ಬಹಳ ಇಷ್ಟ.

ಎಲ್ಲಿ?: 93, ಮಸೀದಿ ರಸ್ತೆ, ಫ್ರೆಜರ್‌ ಟೌನ್‌
ಸಮಯ: ಮಧ್ಯಾಹ್ನ 3-ರಿಂದ ರಾತ್ರಿ 9
– ಸೌರಭ

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.