ಹೊಸ ರೂಪದಲ್ಲಿ “ಎರಡು ಕನಸು’
Team Udayavani, Jan 6, 2018, 12:57 PM IST
ಅಡುಗೆ ಮನೆ ದಾಟಿ ಬೆಳೆಯುವ ಕನಸುಗಳನ್ನು ಹೊತ್ತ ಇಬ್ಬರು ಅಕ್ಕ ತಂಗಿಯರ ಕತೆಯನ್ನು ಹೊಂದಿರುವ ಸ್ಟಾರ್ ಸುವರ್ಣ ವಾಹಿನಿಯ “ಎರಡು ಕನಸು’ ಧಾರಾವಾಹಿ ಹೊಸ ರೂಪವನ್ನು ಪಡೆದುಕೊಳ್ಳುತ್ತಿದೆ. ಹೊಸ ವರ್ಷಕ್ಕೆ ಧಾರಾವಾಹಿಯ ಕಥೆ, ನಿರೂಪಣೆ, ಸಂಗೀತ ಮತ್ತು ಕಲಾವಿದರ ವಸ್ತ್ರವಿನ್ಯಾಸ ಎಲ್ಲವೂ ಹೊಸ ಮಾರ್ಪಾಡನ್ನು ಪಡೆಯಲಿದೆ. ನಟಿ ಅಶ್ವಿನಿ ಗೌಡ ಅವರು ಭಾರತಿ ಪಾತ್ರದ ಮೂಲಕ “ಎರಡು ಕನಸು’ ಧಾರಾವಾಹಿಗೆ ವಾಪಸಾಗುತ್ತಿದ್ದಾರೆ.
ಮತ್ತೂಂದೆಡೆ ಸಹಜ ಮತ್ತು ಅರ್ಜುನ್ ದಂಪತಿ, ಮದುವೆಯ ನಂತರ ಹೊಸ ಬದುಕಿಗೆ, ಹೊಸ ಹೊಸ ಸವಾಲುಗಳಿಗೆ ತೆರೆದುಕೊಳ್ಳುತ್ತಿದ್ದಾರೆ. ಇತ್ತ ವೈದ್ಯೆಯಾಗಿರುವ ಸಹನಾ ತನ್ನ ಮಾನಸಿಕ ಅಸ್ವಸ್ಥ ಗಂಡನನ್ನು ಗುಣಪಡಿಸುವ ಕಥೆ ಕುತೂಹಲಕರ ಘಟ್ಟವನ್ನು ತಲುಪಲಿದೆ. ಒಟ್ಟಿನಲ್ಲಿ ಧಾರಾವಾಹಿಯು ಎಂದಿನಂತೆ ಮಹಿಳೆಯರಿಗೆ ಸ್ಫೂರ್ತಿ ನೀಡುವಂತಿರುತ್ತದೆ ಎನ್ನುವುದು ತಂಡದ ನಂಬಿಕೆಯಾಗಿದೆ.
ಸಮಯ: ರಾ.9 (ಸೋಮವಾರ- ಶುಕ್ರವಾರ)
ವಾಹಿನಿ: ಸ್ಟಾರ್ ಸುವರ್ಣ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.