ಇಂಚರ ಅಂದ್ರೆ ಇಷ್ಟಾರೀ…
Team Udayavani, Oct 20, 2018, 4:04 PM IST
ಬಾಣಸವಾಡಿಯ ವಿಜಯಾ ಬ್ಯಾಂಕ್ ಕಾಲೊನಿಗೆ ಹೋದವರು “ಇಂಚರ’ಕ್ಕೆ ಭೇಟಿ ಕೊಡದೇ ವಾಪಸಾಗುವುದಿಲ್ಲ. ಅಷ್ಟರಮಟ್ಟಿಗೆ ಈ ಹೋಟೆಲ್ ಹೆಸರು ಮಾಡಿದೆ.
ಎಲ್ಲಾರು ಮಾಡುವುದು ಹೊಟ್ಟೆಗಾಗಿ… ಅಂತ ದಾಸವಾಣಿಯೇ ಇದೆ. ರುಚಿರುಚಿಯಾಗಿದ್ದನ್ನು ತಿನ್ನಬೇಕು ಅಂತ ಬಯಸುವುದು ಮನುಷ್ಯನ ಸಹಜ ಗುಣ. ಹಾಗಾಗಿಯೇ, ಶುಚಿ ರುಚಿಯ ಆಹಾರ ಬಡಿಸುವ ಹೋಟೆಲ್‌ಗಳಿಗೆ ಜನ ನುಗ್ಗುವುದು. ಆಹಾರಪ್ರಿಯರನ್ನು ಸೆಳೆಯುವ ಅಂಥ ಹೋಟೆಲ್‌ಗಳಲ್ಲಿ ಇಂಚರ ಫ್ಯಾಮಿಲಿ ರೆಸ್ಟೋರೆಂಟ್ ಕೂಡ ಒಂದು.
ಇಲ್ಲಿ ಎಲ್ಲವೂ ಇದೆ
ಇಂಚರ ಹೋಟೆಲ್ ಜನರನ್ನು ಆಕರ್ಷಿಸಲು ಮುಖ್ಯ ಕಾರಣ ಅಲ್ಲಿನ ಶುಚಿತ್ವ ಮತ್ತು ಅಲ್ಲಿ ಸಿಗುವ ಖಾದ್ಯಗಳಿಗೆ ಇರುವ ವಿಶಿಷ್ಟ ಸ್ವಾದ. ಬಾಣಸವಾಡಿಯ ವಿಜಯಾ ಬ್ಯಾಂಕ್ ಕಾಲೊನಿಗೆ ಹೋದವರನ್ನು, ಈ ಹೋಟೆಲ್ ತನ್ನ ಪರಿಮಳದಿಂದಲೇ ಸೆಳೆಯುತ್ತದೆ. ದಕ್ಷಿಣ ಭಾರತ, ಉತ್ತರ ಭಾರತ ಶೈಲಿಯ ಆಹಾರದ ಜೊತೆಗೆ ಮಾಂಸಾಹಾರಿ ಖಾದ್ಯಗಳೂ ಇಲ್ಲಿ ಲಭ್ಯ.
ಮುಂಬೈ ಟು ಬೆಂಗಳೂರು
ವೆಂಕಟೇಶ್ ಗೌಡ, ರಾಜೇಂದ್ರ, ರಾಮಚಂದ್ರ, ಲೋಕೇಶ್ ಎಂಬ ನಾಲ್ವರು ಗೆಳೆಯರು, 2013ರಲ್ಲಿ ಈ ಹೋಟೆಲ್‌ಅನ್ನು ಪ್ರಾರಂಭಿಸಿದರು. ಮಾಲೀಕರಲ್ಲಿ ಒಬ್ಬರಾದ ವೆಂಕಟೇಶ್‌ಗೌಡ ಅವರು ಸ್ವತಃ ಪಾಕಪ್ರವೀಣರು. ಮುಂಬೈನ ಪ್ರತಿಷ್ಠಿತ ಹೋಟೆಲ್ ಒಂದರ ಪಾಕಶಾಲೆಯಲ್ಲಿ ಪಳಗಿದವರು. ಮುಂಬೈನ ವಿಶಿಷ್ಟ ಆಹಾರಶೈಲಿಯನ್ನು ಬೆಂಗಳೂರಿಗರಿಗೆ ಪರಿಚಯಿಸುವ ಉದ್ದೇಶದಿಂದ, ಗೆಳೆಯರೊಟ್ಟಿಗೆ ಸೇರಿಕೊಂಡು ಇಂಚರ ಹೋಟೆಲ್‌ಅನ್ನು ತೆರೆದರು.
ಏನೇನು ಸಿಗುತ್ತೆ ಗೊತ್ತಾ?
ರಾಜಸ್ಥಾನಿ ಸಬ್ಜಿ, ಸಬ್ಜಿ ಚಟ್‌ಪಟ್, ದಿವಾನಿ ಹಂಡಿ, ತವಾ ಸಬ್ಜಿ, ಕೊಲ್ಲಾಪುರಿ ದಾಲ್ ಥಡಕ, ಕೊಲ್ಲಾಪುರಿ ವೆಜ್ ಪಲಾವ್ ಇಲ್ಲಿನ ವೆಜ್ ಸ್ಪೆಷಲ್. ಜೊತೆಗೆ, ಮುಂಬೈ ಬಟರ್ ಚಿಕನ್, ಚಿಕನ್ ಕಬಾಬ್, ಚಿಕನ್ ಪಟಿಯಾಲಾ, ಅಫಾYನಿ ಚಿಕನ್, ಮೃಗಮಸಾಲ ಇತ್ಯಾದಿಗಳು ಮಾಂಸಾಹಾರಿಗಳ ಮೆಚ್ಚಿನ ಖಾದ್ಯಗಳು. ಪ್ರತಿ ದಿನ 15 ಬಗೆಯ ವಿಶೇಷ ಖಾದ್ಯಗಳನ್ನೊಳಗೊಂಡ ಸ್ಪೆಷಲ್ ಬಫೆ ಎಲ್ಲರಿಗೂ ಇಷ್ಟ.
ಗ್ರಾಹಕರ ರುಚಿಗೆ ತಕ್ಕ ಹಾಗೆ ವಿಭಿನ್ನ ಶೈಲಿಯ ಖಾದ್ಯಗಳನ್ನು ನೀಡುವುದು ನಮ್ಮ ಹೋಟೆಲ್‌ನ ಗುರಿ. ಶುಚಿ, ರುಚಿ ಹಾಗೂ ಗ್ರಾಹಕರ ಆತ್ಮಸಂತೃಪ್ತಿಯ ಜೊತೆಗೆ ರಾಜಿ ಮಾಡಿಕೊಳ್ಳದೆ ಉದ್ಯಮ ನಡೆಸುತ್ತಿದ್ದೇವೆ.
-ವೆಂಕಟೇಶ್ ಆರ್ ಗೌಡ
ಎಲ್ಲಿದೆ?
ಇಂಚರ ಫ್ಯಾಮಿಲಿ ರೆಸ್ಟೋರೆಂಟ್
ನಂ.66, ವಿಜಯ ಬ್ಯಾಂಕ್ ಕಾಲೊನಿ ಎಕ್ಸ್‌ಟೆನÒನ್, ಔಟರ್ ರಿಂಗ್ ರೋಡ್, ನಂದಿ ಟೊಯೊಟ ಎದುರು, ಬಾಣಸವಾಡಿ.
ಸಮಯ: ಬೆಳಗ್ಗೆ 11ರಿಂದ ರಾತ್ರಿ 11
ಸಂಪರ್ಕ: 080-41179777/40937198/9945158768
ಬಳಕೂರು ವಿ.ಎಸ್.ನಾಯಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.