ಅಂತಾರಾಷ್ಟ್ರೀಯ ಕಲಾ ಉತ್ಸವ- 2018
Team Udayavani, Sep 22, 2018, 4:07 PM IST
ಕಲೆಯ ಮೂಲಕ ಸೌಹಾರ್ದವನ್ನು ಸಾರುವ ಬೆಂಗಳೂರು ಅಂತಾರಾಷ್ಟ್ರೀಯ ಕಲಾ ಉತ್ಸವ 2018 ಮತ್ತೆ ಕಾಲಿಡುತ್ತಿದೆ. ಕಳೆದ ಹತ್ತು ವರ್ಷಗಳಿಂದ ನಡೆದುಕೊಂಡು ಬಂದಿರುವ ಈ ಉತ್ಸವದಲ್ಲಿ ಭಾರತ ಹಾಗೂ ವಿದೇಶಿ ಕಲಾವಿದರು ಭಾಗಿಯಾಗುವುದು ವಿಶೇಷ. ಈ ವರ್ಷ ಬಿಐಎಎಫ್(ಬೆಂಗಳೂರು ಇಂಟರ್‌ನ್ಯಾಷನಲ್ ಆರ್ಟ್ಸ್ ಫೆಸ್ಟಿವಲ್), ಜಪಾನ್, ಆಸ್ಟ್ರಿಯಾ, ಶ್ರೀಲಂಕಾ ಮುಂತಾದ ರಾಷ್ಟ್ರಗಳ ಸಾಂಸ್ಕೃತಿಕ ಇಲಾಖೆಯೊಂದಿಗೆ ಕೈಜೋಡಿಸಿದೆ. ನಗರದ ವಿವಿಧ ಸ್ಥಳಗಳಲ್ಲಿ ಉತ್ಸವದ ಕಾರ್ಯಕ್ರಮಗಳು ನಡೆಯಲಿವೆ.
ಉತ್ಸವದ ಮೊದಲ ದಿನವಾದ ಸೆ. 22ರಂದು ಕೊಡಿಗೇಹಳ್ಳಿ, ಕನ್ನಳಿಯ ಅಲ್ಲಮ ಕಲಾಶಾಲೆಯಲ್ಲಿ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಬಳಿಕ ಚತ್ತೀಸ್‌ಗಡಧ ಪಂಥಿ ಜಾನಪದ ನೃತ್ಯ, ಸಮನ್ವಯ ನೃತ್ಯ ಕಂಪನಿಯಿಂದ ಗರ್ಬಾ ಮತ್ತು ದಾಂಡಿಯಾ ಹಾಗೂ ಡಾ. ಅರ್ಧನಾರೀಶ್ವರ ವೆಂಕಟ್ ಅವರಿಂದ ಕೂಚಿಪುಡಿ ನೃತ್ಯ ಪ್ರದರ್ಶನಗೊಳ್ಳಲಿವೆ.
ಸಂಜೆ ಫ್ರೀಡಂಪಾರ್ಕ್‌ನಲ್ಲಿ ರಮೇಶ್ ಪಾಲ್ ಮತ್ತು ತಂಡದಿಂದ ದಿವಾರಿ ಜಾನಪದ ನೃತ್ಯ ನಡೆಯಲಿದೆ. ಜತೆಗೆ ತ್ರಿಧರ ತಂಡದಿಂದ ಒಡಿಸ್ಸಿ ನೃತ್ಯ, ಚತ್ತೀಸ್‌ಗಢದ ಪಂಥಿ ಜಾನಪದ ನೃತ್ಯ, ಶ್ರೀಲಂಕಾದ ರಂಗೀಸರ ನೃತ್ಯ ತಂಡದಿಂದ ನೃತ್ಯ, ಸಮನ್ವಯ ತಂಡದಿಂದ ಗರ್ಭಾ ಮತ್ತು ದಾಂಡಿಯಾ ಹಾಗೂ ಅರ್ಧನಾರೀಶ್ವರ ವೆಂಕಟ್ ಅವರಿಂದ ಕೂಚಿಪುಡಿ ನೃತ್ಯ ಕಾರ್ಯಕ್ರಮಗಳು ನಡೆಯಲಿವೆ.
ಎಲ್ಲಿ?: ಕನ್ನಳಿಯ ಅಲ್ಲಮ ಕಲಾಶಾಲೆ, ಕೊಡಿಗೇಹಳ್ಳಿ, ಚೌಡಯ್ಯ ಮೆಮೋರಿಯಲ್ ಹಾಲ್, ವೈಯಾಲಿಕಾವಲ್
ಸ್ಮತಿ ನಂದನ್ ಸಾಂಸ್ಕೃತಿಕ ಭವನ, ವಸಂತನಗರ ಫ್ರೀಡಂ ಪಾರ್ಕ್
ಯಾವಾಗ?: ಸೆ. 22, 23, 30
ಪ್ರವೇಶ: ಉಚಿತ
ಸಂಪರ್ಕ: 9741350377
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.