ಆಭರಣ ಹಬ್ಬ

ಚಿನ್ನಾಭರಣ ಫ್ಯಾಷನ್‌ ಶೋ

Team Udayavani, Oct 19, 2019, 8:35 PM IST

c-17

 

ರಾಜಧಾನಿಯ ಆಭರಣಪ್ರಿಯರಿಗೆ, ಇದೊಂದು ಸುಗ್ಗಿ. ಭಾರತದ ಅತಿ ದೊಡ್ಡ ಆಭರಣ ಪ್ರದರ್ಶನವಾದ ಜ್ಯುವೆಲ್ಸ್‌ ಆಫ್ ಇಂಡಿಯಾ ಅಕ್ಟೋಬರ್‌ 18ರಿಂದ ನಗರದಲ್ಲಿ
ನಡೆಯುತ್ತಲಿದೆ. ದೀಪಾವಳಿ ಹಬ್ಬಕ್ಕೆ ಚೆಂದದ ಆಭರಣಗಳನ್ನು ಕೊಳ್ಳಬೇಕು ಎಂದು ಬಯಸುವವರಿಗೆ ಒಂದೇ ಸೂರಿನಡಿ ಸಾವಿರಾರು ವಿನ್ಯಾಸದ ಚಿನ್ನ- ವಜ್ರದ
ಆಭರಣಗಳು ದೊರಕಲಿವೆ.

ಇದು ಜುವೆಲ್ಸ್‌ ಆಫ್ ಇಂಡಿಯಾದ 21ನೇ ಆವೃತ್ತಿಯ ಪ್ರದರ್ಶನವಾಗಿದೆ. ದೇಶದ 100 ಜ್ಯುವೆಲ್ಲರಿಗಳ ಚಿನ್ನದ ಉತ್ಪನ್ನಗಳನ್ನು ಈ ಪ್ರದರ್ಶನದಲ್ಲಿ ಕಾಣಬಹುದು. ಪ್ರದರ್ಶನದ ಬ್ರ್ಯಾಂಡ್‌ ಅಂಬಾಸಿಡರ್‌ ನಟಿ ಪ್ರಣೀತಾ ಸುಭಾಷ್‌, ಜೋಸೆಫ್ ಹೈಸ್ಕೂಲ್‌ ಮೈದಾನದಲ್ಲಿ ನಡೆದ ಫ್ಯಾಷನ್‌ ಶೋನಲ್ಲಿ ಆಭರಣಗಳನ್ನು ಧರಿಸಿ, ರ್‍ಯಾಂಪ್‌ ಮೇಲೆ ಹೆಜ್ಜೆ ಹಾಕಿದರು.

ಪ್ರದರ್ಶನದಲ್ಲಿ ವಿಶೇಷವಾಗಿ ಜೈಪುರದ ಕುಂದನ್‌ ಮತ್ತು ಮೀನಾಕ್ಷಿ ಆಭರಣಗಳು, ತಮಿಳುನಾಡಿನ ಪ್ರಾಚೀನ ವಿನ್ಯಾಸದ ಆಭರಣಗಳು, ರಾಜಾಸ್ಥಾನದ ಥೇವಾ ಮಾಧರಿಯ ಆಭರಣಗಳು, ಮುಂಬೈನ ಹೊಸ ವಿನ್ಯಾಸದ ಮತ್ತು ಬ್ರಾಂಡೆಡ್‌ ವಜ್ರಾಭರಣಗಳು, ಕೋಲ್ಕತ್ತಾದ ಕರಕುಶಲ ಮತ್ತು ಸೂಕ್ಷ್ಮ ವಿನ್ಯಾಸದ ಆಭರಣಗಳು, ಮೂಲ ಬರ್ಮಾ ರೂಬಿ ಹರಳುಗಳು, ಗುಜರಾತಿ ಶೈಲಿಯ ಚಿನ್ನಾಭರಣಗಳು, ದಕ್ಷಿಣ ಭಾರತದ ಸಾಂಪ್ರದಾಯಿಕ ಆಭರಣಗಳು, ಮದುಮಗಳ ಅಲಂಕಾರದ ಆಭರಣಗಳು, ಅಪರೂಪದ ಬಳೆಗಳ ಸಂಗ್ರಹ, ಫ್ಯೂಷನ್‌ ಆಭರಣಗಳು, ಪುರುಷರ ಆಭರಣಗಳು, ಎಲ್ಲಾ ವಿಧದ ಹರಳು ಕಲ್ಲುಗಳು ಪ್ರದರ್ಶನ ಮಳಿಗೆಗಳಲ್ಲಿ ಲಭ್ಯವಾಗಲಿವೆ. ಬೆಂಗಳೂರಿನ ಸ್ಥಳೀಯ ಆಭರಣ ಮಾರಾಟ ಸಂಸ್ಥೆಗಳಲ್ಲದೆ, ಕರ್ನೂಲ್‌, ಕೋಲ್ಕತ್ತಾ, ದೆಹಲಿ, ಹೈದರಾಬಾದ್‌, ಮುಂಬೈ ಸೇರಿದಂತೆ ಒಟ್ಟು 120 ಆಭರಣ ಸಂಸ್ಥೆಗಳು ಪ್ರದರ್ಶನದಲ್ಲಿ ಪಾಲ್ಗೊಳ್ಳಲಿವೆ.

ಎಲ್ಲಿ?: ಸೇಂಟ್‌ ಜೋಸೆಫ್ಸ್ ಇಂಡಿಯನ್‌
ಹೈಸ್ಕೂಲ್‌ ಆವರಣ, ಯು.ಬಿ. ಸಿಟಿ ಎದುರು
ಯಾವಾಗ?: ಅ.19-21
ಪ್ರವೇಶ: ಉಚಿತ
ಸಂಪರ್ಕ: 7259514859

ಟಾಪ್ ನ್ಯೂಸ್

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

kejriwal-2

Delhi; ಸ್ತ್ರೀಯರಿಗೆ ಸಹಾಯಧನ: ಮನೆಯಲ್ಲೇ ನೋಂದಣಿ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

1-kuu

ಕಾರ್ಗಿಲ್‌ ದಾಳಿ ಮಾಹಿತಿ ಕೊಟ್ಟ ಕುರಿಗಾಹಿ ಸಾವು: ಸೇನೆ ನಮನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.