ಬುದ್ಧ, ಬಸವ, ಶಿವಾಜಿ ಇಲ್ಲಿಯೇ ಇದ್ದಾರೆ..!
Team Udayavani, Sep 1, 2018, 2:00 PM IST
ಧ್ಯಾನಾಸಕ್ತ ಬುದ್ಧ, ಕೃಷ್ಣ, ರಾಧಾಕೃಷ್ಣ, ಶಿವಾಜಿ, ಗುರು ರಾಘವೇಂದ್ರ, ಇಡಗುಂಜಿ ಗಣಪ… ಹೀಗೆ ದೇವತೆಗಳ ಸಾಲೇ ಇಲ್ಲಿದೆ. ಇನ್ನೇನು ಪ್ರತ್ಯಕ್ಷರಾಗಿ, ಆಶೀರ್ವಾದ ಮಾಡುತ್ತವೆ ಎನ್ನುವಷ್ಟು ಪ್ರಸನ್ನತೆ ಆ ಶಿಲ್ಪಗಳಲ್ಲಿ. ಈ ಎಲ್ಲ ಕಲಾಕೃತಿಗಳನ್ನು ಫೈಬರ್‌ನಲ್ಲಿ ಕಡೆದು ಚಿತ್ರಕಲಾ ಪರಿಷತ್‌ನ ಆವರಣದಲ್ಲಿ ನಿಲ್ಲಿಸಿದ್ದಾರೆ ಕಲಾವಿದ ಕೃಷ್ಣ ನಾಯ್ಕ.
ಮೂಲತಃ ಉತ್ತರ ಕನ್ನಡ ಜಿಲ್ಲೆ, ಹೊನ್ನಾವರ ತಾಲೂಕಿನ ಇಡಗುಂಜಿಯವರಾದ ಕೃಷ್ಣ ನಾಯ್ಕರಿಗೆ ಬಾಲ್ಯದಿಂದಲೂ ಕಲೆಯಲ್ಲಿ ಆಸಕ್ತಿ. ಮುಂದೆ ಕುವೆಂಪು ಕಾಲೇಜಿನಲ್ಲಿ ಬಿ.ಎಫ್.ಎ. ಪದವಿ ಗಳಿಸಿದ ಇವರು ಪ್ರಸಿದ್ಧ ಶಿಲ್ಪಕಲಾವಿದ ಗಣೇಶ್ ಎಲ್. ಭಟ್‌ರ ಬಳಿ ವಿದ್ಯಾಭ್ಯಾಸ ಮುಂದುವರಿಸಿದರು. ಫೈಬರ್ ಬಳಸಿ ಶಿಲ್ಪಗಳನ್ನು ನಿರ್ಮಿಸುವುದರಲ್ಲಿ ಇವರು ನಿಪುಣರು.
ಬುದ್ಧನ ಚಿಂತನೆಗಳೆಡೆಗೆ ಆಕರ್ಷಿತರಾಗಿರುವ ಕೃಷ್ಣ ನಾಯ್ಕರು, ಬುದ್ಧನ ಅನೇಕ ಶಿಲ್ಪಗಳನ್ನು ರಚಿಸಿದ್ದಾರೆ. ಕನ್ನಡ ಭವನದ ಮುಂದಿನ ಧ್ಯಾನಾಸಕ್ತ ಬುದ್ಧ, ಬೆಂಗಳೂರು ವಿ.ವಿ.ಯ ಕನ್ನಡ ಅಧ್ಯಯನ ಕೇಂದ್ರದ ಮುಂಭಾಗದಲ್ಲಿರುವ ಬುದ್ಧ ಹಾಗೂ ಬಸವ, ಮೈಸೂರಿನ ಭೋಗಾದಿಯಲ್ಲಿ, ಬಳಕೂರಿನ ನೀಲಗೋಡ್ ದೇವಾಲಯ ಮುಂತಾದ ಶಿಲ್ಪಗಳಿಗೆ ಜೀವ ಕೊಟ್ಟವರು ಇವರೇ. ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ನಡೆಯುತ್ತಿರುವ ಕಲಾಪ್ರದರ್ಶನದಲ್ಲಿ ಅವರ ಕಲಾನೈಪುಣ್ಯವನ್ನು ಸವಿಯಬಹುದು.
ಎಲ್ಲಿ?: ಕರ್ನಾಟಕ ಚಿತ್ರಕಲಾ ಪರಿಷತ್
ಯಾವಾಗ?: ಸೆಪ್ಟೆಂಬರ್ 1-5, ಬೆಳಗ್ಗೆ 10-7
ಬಳಕೂರು ವಿ.ಎಸ್.ನಾಯಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.