ನಿತ್ಯೋತ್ಸವದ ನಿಸಾರರಿಗೆ ಸಾರಸ್ವರ ಸಿರಿ


Team Udayavani, Jan 7, 2017, 3:34 PM IST

564.jpg

ಕವಿ ಕೆ ಎಸ್‌ ನಿಸಾರ್‌ ಅಹಮದ್‌ ಬಹುಮುಖೀ. ಕವಿತೆ ಬರೆದಿದ್ದಾರೆ, ಲೇಖನಗಳ ಸಂಕಲನ ಹೊರಬಂದಿದೆ. ವಿಮರ್ಶೆ ಬರೆದದ್ದೂ ಉಂಟು. ಅನುವಾದಿಸಿದ್ದೂ ರುಚಿಸಿದೆ. ಗದ್ಯದಲ್ಲೂ ಸುರಳೀತ. ಭಾಷಣಕ್ಕೆ ನಿಂತರೆ ಸರಾಗ. ಮೇಲಾಗಿ ಸ್ನೇಹಜೀವಿ. ಹೊಸಬರ ಪುಸ್ತಕಗಳನ್ನು ಓದುವ, ಪ್ರೋತ್ಸಾಹಿಸುವ ಉತ್ಸಾಹ. ರಾಜ್‌ಕುಮಾರ್‌ ಅಭಿಮಾನಿ, ಕನ್ನಡ ಪ್ರೇಮಿ, ಅಧ್ಯಯನಶೀಲ ಪ್ರತಿಭೆ.

ಅವರು “ಮತ್ತದೇ ಬೇಸರ ಅದೇ ಸಂಜೆ ಅದೇ ಏಕಾಂತ’ ಪ್ರೇಮಿಗಳು ಮಮ್ಮಲ ಮರುಗಿ ವಿರಹೋತ್ಕಂಟಿತರಾಗಿ ಉರಿದು ಹೋದರು. ನಾಡದೇವಿಯೇ ಕಂಡೆ ನಿನ್ನ ಮಡಿಲಲ್ಲಿ ಎಂಥ ದೃಶ್ಯ ಅಂತ ಕನ್ನಡದ ಪರಿಸ್ಥಿತಿಯನ್ನು ತೆರೆದಿಟ್ಟಾಗ ಹೋರಾಟಗಾರರು ಕಿಚ್ಚಾದರು. ಅಂಥ ಅಕುಟಿಲ ಬೆಣ್ಣೆಯಂಥ ನಗು ಕಾಯಲಿ ಜಗದವರ, ಸಂತತ ನಗಿಸಲಿ ನಗದವರ ಅಂತ ಕೃಷ್ಣನ ಬಾಲಲೀಲೆಯನ್ನು ಕೊಂಡಾಡಿದಾಗ ನಿಸಾರ ಅಹಮದರನ್ನು ತಲೆಯೆತ್ತಿ ನೋಡಿದರು. ಜೋಗದ ಸಿರಿಬೆಳಕನ್ನೂ ತುಂಗೆಯ ತೆನೆ ಬಳುಕನ್ನೂ ಒಂದೇ ಎಸಳಲ್ಲಿ ಕಂಡವರು. ನೆರುಡಾನ ಪದ್ಯಗಳನ್ನು ಕನ್ನಡಕ್ಕೆ ತಂದವರು. ರಾಮನ್‌ ಸತ್ತ ಸುದ್ದಿಯನ್ನು ಜಗತ್ತಿಗೆ ಹಬ್ಬಿಸಿದವರು.

ಅವರಿಗೀಗ 81. ಎಂಬತ್ತೂಂದು ಎಂದು ನಂಬುವುದು ಕಷ್ಟವೆಂಬಂತೆ ಅವರಿದ್ದಾರೆ. ಭಾಷಣ ಮಾಡುತ್ತಾರೆ. ನೆನಪು ಕೈ ಕೊಡದ ಪ್ರತ್ಯಭಿಜ್ಞಾನಿ ಅವರು. ನೆನಪನ್ನೇ ಜೀವಿಸಬಲ್ಲವರು. ಮೊದಲ ಪದ್ಯ ಬರೆದ ಕ್ಷಣವನ್ನೂ ಅವರು ಜ್ಞಾಪಕಚಿತ್ರಶಾಲೆಯಿಂದ ಹೊರತೆಗೆಯಬಲ್ಲರು. ಗಾಂಧೀಬಜಾರಿನಲ್ಲಿ ಅಲೆದಾಡುತ್ತಲೇ ಮನಸು ಗಾಂಧೀಬಜಾರು ಅಂತ ಪದ್ಯ ಬರೆದರು. ಸಂಜೆ ಐದರ ಮಳೆಯನ್ನು ಕವಿತೆಯಾಗಿಸಿದರು. ನಿತ್ಯೋತ್ಸವ ಕವಿತೆಗಳು ಕ್ಯಾಸೆಟ್‌ ಆಗಿ ಬಂದಾಗ ಕನ್ನಡದಲ್ಲಾದ ರೋಮಾಂಚಕ್ಕೆ ಸಾಕ್ಷಿಯಾದರು.

ಇದೀಗ ಅವರ ಮಿತ್ರರು, ಹಿತೈಷಿಗಳು, ಸರೀಕರು ಮತ್ತು ಸಹವಾಸಿಗಳು ನಿಸಾರರ ಕುರಿತು ಬರೆದ ಪುಸ್ತಕವೊಂದನ್ನು ಸಪ್ನಾದ ಕನ್ನಡ ವಿಭಾಗದ ಮುಖ್ಯಸ್ಥರಾದ ದೊಡ್ಡೇಗೌಡರು ಸಂಪಾದನೆ ಮಾಡಿದ್ದಾರೆ. ಸಿ ಎನ್‌ ರಾಮಚಂದ್ರನ್‌, ದೇ. ಜವರೇಗೌಡ, ಜಿ ಎನ್‌ ರಂಗನಾಥ ರಾವ್‌, ಎಸ್‌ ಆರ್‌ ವಿಜಯಶಂಕರ್‌, ನಾ. ದಾಮೋದರ ಶೆಟ್ಟಿ, ಕೆ. ಮರುಳಸಿದ್ಧಪ್ಪ, ಚಂದ್ರಶೇಖರ ತಾಳ, ಎಚ್‌ ಎಲ್‌ ಪುಷ್ಪಾ, ಡುಂಡಿರಾಜ್‌, ಎಚ್ಚೆಸ್ವಿ, ಬಿಆರ್‌ ಲಕ್ಷ್ಮಣರಾವ್‌, ಟಿಪಿ ಅಶೋಕ ಮುಂತಾದವರು ನಿಸಾರ್‌ ಅಹಮದ್‌ ಕುರಿತು ಬರೆದ ಲೇಖನಗಳು, ಆಪ್ತನುಡಿಗಳು, ಸ್ನೇಹವಚನಗಳು, ಅನುಭವ ಕಥನಗಳು ಈ ಪುಸ್ತಕದಲ್ಲಿವೆ.  ಇದು 553 ಪುಟಗಳ ಅಕ್ಷರ ಬಾಗಿನ.

ಜನವರಿ, 14, ಸಂಕ್ರಾಂತಿಯ ಶುಭದಿನದಂದು ಬೆಳಗ್ಗೆ 10.30ಕ್ಕೆ  ಈ ಪುಸ್ತಕ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ ಬಿಡುಗಡೆ ಆಗಲಿದೆ.  ಜಿ ವೆಂಕಟಸುಬ್ಬಯ್ಯ, ಸಿ ಎನ್‌ ರಾಮಚಂದ್ರನ್‌, ಎಸ್‌ ಜಿ ಸಿದ್ದರಾಮಯ್ಯ, ಮನು ಬಳಿಗಾರ್‌, ನಿತಿನ್‌ ಶಾ ಮುಂತಾದವರ ಸಮ್ಮುಖದಲ್ಲಿ ನಿಸಾರ್‌ ಅಹಮದ್‌  ಕೂಡ ಇರುತ್ತಾರೆ.

ಅಲ್ಲಿ ನೀವು ನಿಸಾರ್‌ ಅಹಮದ್‌ ಅವರನ್ನು ನೋಡಬಹುದು, ಮಾತಾಡಬಹುದು, ಸೆಲ್ಪಿ-ಹಸ್ತಾಕ್ಷರ ಪಡೆಯಬಹುದು, ಅವರ ಮಾತುಗಳನ್ನು ಕೇಳಬಹುದು, ಪುಸ್ತಕವನ್ನು ವಿಶೇಷ ರಿಯಾಯಿತಿಯಲ್ಲಿ ಪಡೆಯಬಹುದು.

ದೊಡ್ಡೇಗೌಡರ ನಾಲ್ಕನೇ ಮಹಾಗ್ರಂಥ

ದೊಡ್ಡೇಗೌಡರು ಸಪ್ನ ಪುಸ್ತಕ ಮಳಿಗೆಯ ಕನ್ನಡ ವಿಭಾಗದ ಮುಖ್ಯಸ್ಥರು. ಕನ್ನಡ ವಿಭಾಗದಲ್ಲಿ ಅಸಂಖ್ಯ ಪ್ರತಿಭಾವಂತರ ಪುಸ್ತಕಗಳನ್ನು ಪ್ರಕಟಿಸಿದವರು. ಇವತ್ತಿಗೂ ದೊಡ್ಡೇಗೌಡರಿಗೆ ಅವರ ಅಗಾಧ ಪುಸ್ತಕ ಮಳಿಗೆಯ ಯಾವ ಕಪಾಟಿನಲ್ಲಿ ಯಾವ ಪುಸ್ತಕ ಇದೆ ಅನ್ನುವುದು ಕರಾರುವಾಕ್ಕಾಗಿ ಗೊತ್ತು. ನೀವು ಯಾವುದೇ ಪುಸ್ತಕ ಕೇಳಿದರೂ ಅವರು ಥಟ್ಟನೆ ಅದನ್ನು ತೋರಿಸುತ್ತಾರೆ. 

ಮೂಲತಃ ಚಿಕ್ಕಮಗಳೂರಿನವರಾದ ದೊಡ್ಡೇಗೌಡರು ಬೆಳೆದದ್ದು ತುಮಕೂರಿನಲ್ಲಿ, ಓದಿದ್ದು ಕುಣಿಗಲ್‌ನಲ್ಲಿ. ಕನ್ನಡ ಎಂ ಎ ಮಾಡಿದ ಆರ್‌ ಡಿ ಜಿ- ಆರ್‌. ದೊಡ್ಡೇಗೌಡರು ಸಪ್ನಾ ಜೊತೆ ಕಾಲು ಶತಮಾನದ ನಂಟುಳ್ಳವರು. ದೇಜಗೌ, ಪೂರ್ಣಚಂದ್ರ ತೇಜಸ್ವಿ, ಕನ್ನಡಕ್ಕಾಗಿ ಕೈ ಎತ್ತು ಮುಂತಾದ ಮಹಾಗ್ರಂಥಗಳ ನಂತರ ಇದೀಗ ನಿಸಾರ್‌ ಕುರಿತ ಪುಸ್ತಕ  ಹೊರಬರುತ್ತಿದೆ. ಮಕ್ಕಳಿಗಾಗಿ ಬರೆದ ಕತೆ, ಇತರ ಬರಹಗಳನ್ನು ಹೊರತು ಪಡಿಸಿದರೆ, ಮಹಾಗ್ರಂಥಗಳ ಮಾಲಿಕೆಯಲ್ಲಿ ಇದು ದೊಡ್ಡೇಗೌಡರ ನಾಲ್ಕನೇ ಪುಸ್ತಕ.

ಟಾಪ್ ನ್ಯೂಸ್

Anthyarambha: ನ.28ರಂದು ಕೊಂಕಣಿ ಚಲನಚಿತ್ರ “ಅಂತ್ಯಾರಂಭ’ ಪ್ರದರ್ಶನ

Anthyarambha: ನ.28ರಂದು ಕೊಂಕಣಿ ಚಲನಚಿತ್ರ “ಅಂತ್ಯಾರಂಭ’ ಪ್ರದರ್ಶನ

Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್

Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್

4-bharamasagara

Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್‌ ಆದ ಯುವಕನ ಹತ್ಯೆ

ಸಿಎಸ್‌ ಕೆ ಮಾಲಿಕ ಶ್ರೀನಿವಾಸನ್‌ ವಿರುದ್ದ ಫಿಕ್ಸಿಂಗ್‌ ಆರೋಪ ಮಾಡಿದ ಲಲಿತ್ ಮೋದಿ

IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್‌ ವಿರುದ್ದ ಫಿಕ್ಸಿಂಗ್‌ ಆರೋಪ ಮಾಡಿದ ಲಲಿತ್ ಮೋದಿ

Ranchi

Ranchi: ಪ್ರೇಯಸಿಯನ್ನು ಕೊಂದು 40ರಿಂದ 50 ತುಂಡು ಮಾಡಿದ ಕಟುಕ!

ICC Champions Trophy to be completely moved from Pakistan?: Decision will be taken at ICC meeting

ICC ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ

Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ

Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

5-koratagere

ಇಸ್ಪೀಟ್ ಅಡ್ಡೆಯ ಮೇಲೆ ಡಿವೈಎಸ್ಪಿ ದಾಳಿ; ಮಾಜಿ ಅಧ್ಯಕ್ಷ-ಹಾಲಿ ಉಪಾಧ್ಯಕ್ಷ ಸೇರಿ 8 ಜನರ ಬಂಧನ

Anthyarambha: ನ.28ರಂದು ಕೊಂಕಣಿ ಚಲನಚಿತ್ರ “ಅಂತ್ಯಾರಂಭ’ ಪ್ರದರ್ಶನ

Anthyarambha: ನ.28ರಂದು ಕೊಂಕಣಿ ಚಲನಚಿತ್ರ “ಅಂತ್ಯಾರಂಭ’ ಪ್ರದರ್ಶನ

Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್

Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್

4-bharamasagara

Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್‌ ಆದ ಯುವಕನ ಹತ್ಯೆ

Kiccha Sudeep’s max movie releasing on Dec 25th

Kiccha Sudeepa: ಕ್ರಿಸ್ಮಸ್‌ ಗೆ ಬರುತ್ತಿದೆ ʼಮ್ಯಾಕ್ಸ್‌ʼ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.