ಕತ್ತಲಲ್ಲಿ ಸಿಕ್ಕ ಕರುಣಾಳುಗಳ್ಯಾರು?
Team Udayavani, Apr 29, 2017, 4:42 PM IST
ಬೆಂಗಳೂರಿನ ವಿಷಯವಾಗಿ ಹಲವರಿಗೆ ಅಸಮಾಧಾನವಿದೆ. ಈ ಊರಿನ ಜನರಿಗೆ
ಹೃದಯವಂತಿಕೆಯಿಲ್ಲ. ಕೃತಜ್ಞತೆ ಹೇಳುವ, ಸಹಾಯ ಮಾಡುವ ಬುದ್ಧಿಯಿಲ್ಲ. ಸಮಾಧಾನದಿಂದ
ಮಾತಾಡುವ ತಾಳ್ಮೆಯೂ ಇಲ್ಲ… ದೂರುಗಳ ಪಟ್ಟಿ ಹೀಗೆ ಬೆಳೆಯುತ್ತಲೇ ಹೋಗುತ್ತದೆ. ಈ ನಿಷ್ಠುರ
ಸತ್ಯಗಳ ನಡುವೆಯೇ ಮನಸ್ಸನ್ನು ಬೆಚ್ಚಗಾಗಿಸುವ ಪ್ರಸಂಗಗಳೂ ಈ ಬೆರಗಿನ ಬೆಂಗಳೂರಲ್ಲಿ ನಡೆದು
ಬಿಡುತ್ತವೆ. ಅಂತಹ ಹೃದ್ಯ ಪ್ರಸಂಗದ ಅನಾವರಣಕ್ಕೆ ಈ ಅಂಕಣ ಮೀಸಲು.
ಹಾದಿಯಲಿ ಎಂದೋ ಕಂಡು ಮರೆತಂಥಾ ಯಾವ ಮುಖ ಒಲಿದೊಮ್ಮೆ ಬಳಿ ಸಾರಬಹುದೋ?
ಈ ಹಾಡಿಗೂ ನಡೆದ ಘಟನೆಗೂ ಯಾವ ರೀತಿ ಸಂಬಂಧಾನೋ ಗೊತ್ತಿಲ್ಲ. ಒಟ್ಟಿನಲ್ಲಿ ಅವಧಿತ್ತಿಧಿನ ಸಂದಧಿರ್ಭಧಿದಧಿಲ್ಲಿ ಎಂದೂ ಕಾಣದ ಮುಖಗಳು, ಮತ್ತೆಂದೂ ಕಾಣಸಿಗದೇ ಇರಬಹುದಾದ ಕೈಗಳು ನಮಗೆ ಸಹಾಯ ಮಾಡಿದ್ದಂತೂ ನಿಜ. ಅವರೆಲ್ಲಾ ನಾವಿಧಿದ್ದಧಿಲ್ಲಿ ಇದ್ದಧಿಕ್ಕಿದ್ದಂತೆ ಯಾಕೆ ಬಂದರು? ಯಾಕೆ ನಮಗೇ ಸಹಾಯ ಮಾಡಿದರು? ಅದೂ ಪಕ್ಕದ ಮನೆಯವರ ಪರಿಚಯವೇ ಇಲ್ಲದವರಂತೆ ಬದುಕುವ ಈ ಮಹಾನಗರದಲ್ಲಿ?
ಇಷ್ಟಧಿಕ್ಕೂ ಅವಧಿತ್ತು ಏನಾಧಿಯ್ತು ಅಂದ್ರೆ ಆ ದಿನ ಸಂಜೆ “ಬ್ರಿಗೇಡ್ ಮಿಲೇನಿಯಂ’ನಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮ ಮುಗಿಸಿ ಹೊರಟ ನಾನು, ನಮ್ಮೆಜಮಾನ್ರು ಅದರ ಬಗ್ಗೇನೇ ಮಾತಾಡ್ತಾ, ರಸ್ತೆ ಕ್ರಾಸ್ ಮಾಡಿಕೊಂಡು ಕೊತ್ತನೂರು ತಿರುವಿಗೆ ಬಂದುಬಿಟ್ಟೆವು. ದಾರಿ ತಪ್ಪಿದ್ದೀವಿ ಅಂತ ಗೊತ್ತಾಗುವಷ್ಟ್ರಲ್ಲಿ ಎರಡು ಜರ್ಕ್ ಹೊಡೆದು ನಮ್ ಕಾರು ನಿಂತೇ ಹೋಯಿತು. ಯಾಕೆ ಹೀಗಾಧಿಯ್ತು ಅಂತ ಧಿಚೆಧಿಕ್ ಮಾಡಿಧಿದಧಿರೆ, ಒಂದು ಹನಿ ಪೆಟ್ರೋಲ್ ಇಲ್ಲ! ಇಬ್ಬರೂ ಸೇರಿ ಗಾಡೀನ ಒಂದು ಪಕ್ಕಕ್ಕೆ ತಳ್ಳಿ, “ಏನಾಗಿದೆ?’ ಅಂತ ಕೇಳ್ಳೋ ಸೌಜನ್ಯವೂ ಇಲ್ಲದಂಥಾ ವಾಹನಗಳನ್ನ, ಅದರೊಳಗಿನ ಮನುಷ್ಯರನ್ನ ನೋಡ್ತಾ ನಿಂತ್ವಿ.
ಅದು ಬೀದಿ ದೀಪವೂ ಇಲ್ಲದ ಕತ್ತಲ ಪ್ರದೇಶ! ಪೆಟ್ರೋಲ್ ಬಂಕ್ ಎಲ್ಲಿದೆ ಅಂತಾನೂ ಗೊತ್ತಿಲ್ಲ. ಅಷ್ಟರಲ್ಲಿ ಟಾಕ್ಸಿಯೊಂದು ಪಕ್ಕಕ್ಕೆ ಬಂದು ನಿಲು¤. ತಲೆ ಹೊರಗೆ ಹಾಕಿದ ಡ್ರೆ„ವರ್, “ಏನಾಗಿದೆ ಸಾರ್?’ ಎನ್ನುತ್ತಲೇ ತನ್ನ ಕಾರ್ ಪಾರ್ಕ್ ಮಾಡಿ ಇಳಿದು ಬಂದೇ ಬಿಟ್ಟ. ಪೆಟ್ರೋಲ್ ಮುಗಿದ ವಿಚಾರ ತಿಳಿದು, “ಇಲ್ಲೇ 2 ಕಿ.ಮೀ. ದೂರದಲ್ಲಿ ಪೆಟ್ರೋಲ್ ಬಂಕ್ ಇದೆ. ಬನ್ನಿ ಡ್ರಾಪ್ ಮಾಡ್ತೀನಿ’ ಅಂತ ನಮ್ಮನ್ನ ಕೂರಿಸಿಕೊಂಡು ಪೆಟ್ರೋಲ್ ಬಂಕ್‌ಗೆ ಹೋಗಿ ತನ್ನದೇ ಕ್ಯಾನ್‌ನಲ್ಲಿ ಪೆಟ್ರೋಲ್ ತುಂಬಿಸಿಕೊಂಡು ಮತ್ತೆ ನಮ್ಮನ್ನ ನಮ್ಮ ಕಾರ್ ನಿಂತಿದ್ದ ಸ್ಪಾಟ್‌ಗೆ ಕರ್ಕೊಂಡು ಬಂದ. ತಾನೇ ಖುದ್ದಾಗಿ ಪೆಟ್ರೋಲ್ ತುಂಬಿಸಿ, ಗಾಡಿ ಸ್ಟಾರ್ಟ್ ಮಾಡಿಕೊಟ್ಟು ಹೊರಡುವಾಗ ನಮ್ಮೆಜಮಾನ್ರು ಕೊಟ್ಟ ದುಡ್ಡನ್ನ ತೊಗೊಳ್ಳಲೇ ಇಲ್ಲ! ಬಲವಂತ ಮಾಡಿದಾಗ, “ಸರ್, ಮನುಷ್ಯ ಅಂದ್ಮೇಲೆ ಒಬ್ರು ಕಷ್ಟದಲ್ಲಿ ಇರೋವಾಗ ಸಹಾಯ ಮಾಡ್ಬೇಕು. ಅದನ್ನ ದುಡ್ಡಿನಿಂದ ಅಳೀಬೇಡಿ. ನಂಗೆ ಥ್ಯಾಂಕ್ಸ್ ಹೇಳ್ಳೋದಿದ್ರೆ ನೀವೂ ಹಿಂಗೇ ಯಾರಿಗಾದ್ರೂ ಸಹಾಯ ಮಾಡಿ’ ಅಂದ! ಅವಧಿನ ಮಾತು ಕೇಳಿನಿಜಕ್ಕೂ ದಂಗಾಗಿಬಿಟ್ಟೆ. ಆತ ಯಾರೋ? ಎಲ್ಲಿಂದ ಬಂದ್ರೋ? ನಮಗ್ಯಾಕೆ ಸಹಾಯ ಮಾಡಿದ್ರೋ? ಒಟ್ನಲ್ಲಿ ಆತನಿಂದ ಒಂದೊಳ್ಳೆ ಪಾಠ ಕಲಿತೆವು! ಥ್ಯಾಂಕ್ಸ್ ಸತೀಶ್ (ಆತನ ಹೆಸರು).
ಅಷ್ಟಕ್ಕೇ ಮುಗೀಲಿಲ್ಲ!
ಯಾಕೋ ಆ ರಾತ್ರಿ ನಮ್ಮ ಗ್ರಹಚಾರ ಸರಿ ಇರಲಿಲ್ಲಾ ಅನ್ಸುತ್ತೆ! ಅಥವಾ ನನ್ನ ಅನಿಸಿಕೆಯಂತೆ, ನಮಗವತ್ತು ಒಂದಿಷ್ಟು ಒಳ್ಳೆ ಜನರನ್ನ ನೋಡೋದಿತ್ತು ಬಹುಶಃ! ಕೊತ್ತನೂರಿನಲ್ಲಿ ಪೆಟ್ರೋಲ್ ತುಂಬಿಸಿಕೊಂಡು ಹೊರಟ ಕಾರ್ ಜಯದೇವ ಆಸ್ಪಧಿತ್ರೆ ದಾಟಿ ಸ್ವಲ್ಪ ಮುಂದೆ ಬರೋವಷ್ಟರಲ್ಲೇ ಪಂಕ್ಚರ್ ಆಗಿ ಮತ್ತೆ ನಿಂತು ಹೋಯಿತು. ಈಗ ನಾಲ್ಕು ಜನರ ಸರತಿ! ಡಿವೈಡರ್‌ನ ಆ ಕಡೆ ನಿಂತು ಮಾತಾಡುತ್ತಿದ್ದ ನಾಲ್ಕು ಮುಸ್ಲಿಂ ಹುಡುಗರು ನಮ್ಮೆಜಮಾನ್ರು ಸ್ಟೆಪ್ನಿ ಹಿಡ್ಕೊಂಡು ಕಷ್ಟಪಡ್ತಾ ಇದ್ದಿದ್ದನ್ನ ನೋಡಿ ನಮ್ಮಲ್ಲಿಗೆ ಬಂದು ಬಿಡಿ ಸರ್ ನಾವು ಹಾಕ್ಕೊಡ್ತೀವಿ ಅಂತ 15 ನಿಮಿಷಗಳಲ್ಲಿ ಟೈರ್ ಫಿಕ್ಸ್ ಮಾಡಿ, “ಹೊರಡಿ ಸರ್, ಕೂತ್ಕೊಳಿ ಮ್ಯಾಮ್’ ಅಂತ ತಾವೇ ಕಾರಿನ ಬಾಗಿಲು ತೆರೆದರು! ನಮ್ಮೆಜಮಾನ್ರು ಕಾರು ಸ್ಟಾರ್ಟ್ ಮಾಡಿದ ಕೂಡಲೇ ಟಾಟಾ ಬೈ ಬೈ ಅಂತ ಹೇಳಿ ಹೊರಟೇ ಹೋದ್ರು!
ಇನ್ನೂ ಅರ್ಥ ಆಗ್ತಿಲ್ಲ! ಈ ಎರಡು ಘಟನೆಗಳು ಸರತಿಯಲ್ಲಿ ಯಾಕೆ ನಡೀತು? ಹೇಳದೇ ಕೇಳದೇ ತಾವಾಗೇ ಬಂದು ಸಹಾಯ ಮಾಡಿದ ಈ ವ್ಯಕ್ತಿಗಳು ಯಾರು? ಏಕೆ? ಒಟ್ಟಿನಲ್ಲಿ ಈ ಐವರನ್ನೂ ಮರೆಯೋಕೆ ಸಾಧ್ಯವಿಲ್ಲ.
ಇಂಥ ಮಧುರ ನೆನಪುಗಳನ್ನು ಉಡುಗೊರೆಯಾಗಿ ನೀಡಿದ್ದು ನನ್ನ ಬೆಂಗಳೂರು. ಹೀಗಿರುವಾಗ, ಈ ಬೆರಗಿನ ಊರಿಗೆ ಶರಣು ಅನ್ನದೆ ಹೇಗಿರಲಿ?
– ಕುಮುದವಳ್ಳಿ ಅರುಣ್ ಮೂರ್ತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.