ಇಂಗ್ಲೆಂಡಿನ ಮಾದರಿಯೊಂದು ಬೆಂಗಳೂರಿಗೆ ಬಂದು…


Team Udayavani, Mar 11, 2017, 4:27 PM IST

19.jpg

ಲಾಲ್‌ಭಾಗ್‌ನಲ್ಲಿರುವ ಅತಿ ಮುಖ್ಯ ಆಕರ್ಷಣೆಯೇ ಗಾಜಿನ ಮನೆ. ಫ‌ಲಪುಷ್ಪ ಪ್ರದರ್ಶನ ಸೇರಿದಂತೆ ಹಲವು ಅತಿ ಮುಖ್ಯ ಕಾರ್ಯಕ್ರಮಗಳು ನಡೆಯುವುದು ಇದೇ ಗಾಜಿನ ಮನೆಯಲ್ಲಿ. ಈ ಗಾಜಿನ ಮನೆಯ ನಿರ್ಮಾಣದ ಹಿಂದಿರುವ ಸ್ವಾರಸ್ಯದ ವಿವರವನ್ನು ಕೆದಕಿದರೆ, ಬ್ರಿಟಿಷರ ಆಳ್ವಿಕೆಯ ಕಾಲಕ್ಕೇ ಹೋಗಿ ಒಂದೆರಡು ಸುತ್ತು ಹೊಡೆದ ಅನುಭವವಾಗುತ್ತದೆ.

ಬೆಂಗಳೂರಿನಲ್ಲಿದೆ ಕ್ರಿಸ್ಟಲ್‌ ಪ್ಯಾಲೇಸ್‌ ಮತ್ತು ಎಂ.ಸಿ ರಸ್ತೆ.
ಈ ಮೇಲಿನ, ಸಾಲು ನೋಡಿದ ಕೂಡಲೇ, ಬೆಂಗಳೂರಿನಲ್ಲಿ ಕ್ರಿಸ್ಟಲ್‌ ಪ್ಯಾಲೆಸ್ಸೇ? ಸಾಧ್ಯವೇ ಇಲ್ಲ. ಬೆಂಗಳೂರಿನಲ್ಲಿರುವ ಇರುವ ಪ್ಯಾಲೇಸ್‌ಗಳೆಂದರೆ ಎರಡೇ. ಅದು ಮೈಸೂರು ರಾಜ ವಂಶಸ್ಥರಿಗೆ ಸೇರಿದ ಬಳ್ಳಾರಿ ರಸ್ತೆಯಲ್ಲಿರುವ ಅರಮನೆ ಮತ್ತು ಕೋಟೆ ವೆಂಕಟರಮಣಸ್ವಾಮಿ ದೇವಸ್ಥಾನದ ಹಿಂಬದಿ ಇರುವ ಟಿಪ್ಪು ಪ್ಯಾಲೇಸ್‌ ಅಂದಿರಾ? ಒಂದ್ನಿಮಿಷ ಕೇಳಿ. ಬೆಂಗಳೂರಿನಲ್ಲಿರುವ ಕ್ರಿಸ್ಟಲ್‌ ಪ್ಯಾಲೇಸ್‌ ಎಂದರೆ ಇಂಗ್ಲೆಂಡಿನ ಕ್ರಿಸ್ಟಲ್‌ ಪ್ಯಾಲೇಸ್‌ ಮಾದರಿಯದ್ದು ಎಂದರ್ಥ.

ಗಾಜಿನ ಅರಮನೆ ಇತಿಹಾಸ
ಇಂಗ್ಲೆಂಡ್‌ ಮೂಲದ ಜಾನ್‌ ಕೆಮರಾನ್‌ 1874ರಲ್ಲಿ ಬೆಂಗಳೂರಿನ ಲಾಲ್‌ಬಾಗ್‌ಗೆ ಕ್ಯೂರೇಟರ್‌ ಆಗಿ ಬಂದು ನೂರಾರು ಸಸ್ಯ ಪ್ರಭೇದಗಳನ್ನು ಲಾಲ್‌ಭಾಗ್‌ ಸಸ್ಯಕಾಶಿಗೆ ಪರಿಚಯಿಸಿದರು. ಸಸ್ಯ ಶಾಸ್ತ್ರಜ್ಞರಾದ ಕೆಮರಾನ್‌ ಹೊಸ ಪ್ರಭೇದಗಳನ್ನು ಇಲ್ಲಿನ ಹವಾಮಾನಕ್ಕೆ ಅಳವಡಿಸಲು ಅಗತ್ಯವಾಗಿ ಬೇಕಾದ ಶಾಶ್ವತ ಗಾಜಿನ ಮನೆಯನ್ನು ನಿರ್ಮಿಸಲು ಕಾರ್ಯೋನ್ಮುಖರಾದರು.

ವೇಲ್ಸ್‌ನ ರಾಜಕುಮಾರ ಆಲ್ಬರ್ಟ್‌ ವಿಕ್ಟರ್‌ ಮೈಸೂರು ಪ್ರಾಂತ್ಯಕ್ಕೆ ಬಂದಾಗ ಅಂದಿನ ಮಹಾರಾಜರಾದ ಶ್ರೀ ಚಾಮರಾಜ ಒಡೆಯರ್‌ ಒಂದು ಗೌರವಾರ್ಥ ಔತಣಕೂಟವನ್ನು ಲಾಲ್‌ಭಾಗಿನಲ್ಲಿ ಏರ್ಪಡಿಸಿದ್ದರು. ಆ ನೆನಪಿಗಾಗಿ ಜಾನ್‌ ಕೆಮರಾನ್‌ ಪರಿಕಲ್ಪನೆಯ ಗಾಜಿನ ಮನೆಗೆ 30-11-1889ರಂದು ಅಡಿಗಲ್ಲು ಹಾಕಲಾಯಿತು. ಈ ಅಡಿಗಲ್ಲನ್ನು ಈಗಲೂ ಗಾಜಿನ ಮನೆಯ ಪ್ರವೇಶದ್ವಾರದಲ್ಲಿ ನೋಡಬಹುದು. ಈ ಗಾಜಿನ ಮನೆಯ ನಿರ್ಮಾಣಕ್ಕೆ ಇಂಗ್ಲೆಂಡ್‌ನ‌ ಪ್ರಮುಖ ಸಂಸ್ಥೆ “”ಮ್ಯಾಕ್‌ ಫ್ಲೋರೆನ್ಸ್‌’ ಕಂಪನಿಯಿಂದ ಸಲಕರಣೆಗಳು ಅಂದರೆ ಕಬ್ಬಿಣ, ಗಾಜಿನ ಬಿಡಿ ಭಾಗಗಳನ್ನು ಪಡೆಯಲಾಗಿದೆ. ಈ ಗಾಜಿನ ಮನೆಯ ವಿನ್ಯಾಸ ಇಂಗ್ಲೆಂಡ್‌ನ‌ ಕ್ರಿಸ್ಟಲ್‌ ಪ್ಯಾಲೇಸ್‌ ಮಾದರಿಯದು. ಈ ಗಾಜಿನ ಅರಮನೆಗೆ ಈಗ 128 ವರ್ಷವಾಗಿದೆ.

ಏಕಮೇವ ಕ್ರಿಸ್ಟಲ್‌ ಪ್ಯಾಲೇಸ್‌ ಎಂಬ ಹೆಗ್ಗಳಿಕೆ
ಇಂಗ್ಲೆಂಡ್‌ನ‌ ಕ್ರಿಸ್ಟಲ್‌ ಪ್ಯಾಲೇಸನ್ನು ವಿಶ್ವದ ಪ್ರಪ್ರಥಮ ಅತಿದೊಡ್ಡ ಫ‌ಲಪುಷ್ಪ ಪ್ರದರ್ಶನವನ್ನು ಏರ್ಪಡಿಸಲು 6144 ಚದುರ ಅಡಿ ವಿಸ್ತೀರ್ಣದಲ್ಲಿ 1851ರಲ್ಲಿ ಲಂಡನ್‌ನಲ್ಲಿ ನಿರ್ಮಿಸಲಾಯಿತು. ವಿಶೇಷವೆಂದರೆ ಈ ಪ್ಯಾಲೇಸಿನ  ಜೋಡಣೆ ಭಾಗಗಳನ್ನು ಕಳಚಿ ಬೇರ್ಪಡಿಸಬಹುದು. ಈ ಪ್ರಕಾರವಾಗಿ ಕ್ರಿಸ್ಟಲ್‌ ಪ್ಯಾಲೇಸನ್ನು ಆಗಿನ ಫ‌ಲಪುಷ್ಪ ಪ್ರದರ್ಶನ ಮುಗಿದ ನಂತರ ಜೋಡಣೆಗಳನ್ನು ಬೇರ್ಪಡಿಸಿ ಲಂಡನ್‌ನ ಅತಿ ಎತ್ತರದ ಪ್ರದೇಶದಲ್ಲಿ ಮರು ಜೋಡಣೆ ಮಾಡಿ ಸ್ಥಾಪಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಕ್ರೀಡಾಕೂಟಗಳೂ ನಡೆಯುತ್ತಿದ್ದವು. 1936ರಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಆಕರ್ಷಕ ವಿನ್ಯಾಸದ ಕ್ರಿಸ್ಟಲ್‌ ಪ್ಯಾಲೇಸ್‌ ಸಂಪೂರ್ಣವಾಗಿ ಭಸ್ಮವಾಯಿತು.

ಈಗ ಇಡೀ ವಿಶ್ವದಲ್ಲೇ ಕ್ರಿಸ್ಟಲ್‌ ಪ್ಯಾಲೇಸ್‌ ಮಾದರಿಯೆಂದರೆ ಅದು ಲಾಲ್‌ಭಾಗಿನ ಗಾಜಿನ ಮನೆ ಮಾತ್ರ.

ಎ.ವಿ. ರಸ್ತೆ
1829ರಲ್ಲಿ ವೇಲ್ಸ್‌ನ ರಾಜಕುಮಾರ ಆಲ್ಬರ್ಟ್‌ ವಿಕ್ಟರ್‌ ಬೆಂಗಳೂರಿಗೆ ಆಗಮಿಸಿ ಗಾಜಿನ ಮನೆ ಶಂಕುಸ್ಥಾಪನೆ ಮಾಡಿದುದರ ಸ್ಮರಣಾರ್ಥವಾಗಿ ಬೆಂಗಳೂರಿನ ಕೇಂದ್ರ ಪ್ರದೇಶ ಅಂದರೆ ಚಾಮರಾಜಪೇಟೆಯ ಮೊದಲನೇ ಮುಖ್ಯ ರಸ್ತೆಗೆ “ಆಲ್ಬರ್ಟ್‌ ವಿಕ್ಟರ್‌’ ರಸ್ತೆ ಎಂದು ನಾಮಕರಣ ಮಾಡಲಾಗಿತ್ತು.

ಪುನರ್‌ ನಾಮಕರಣಗೊಂಡ ಎ.ವಿ. ರಸ್ತೆ
ಜಾಗತೀಕರಣ, ಉದಾರೀಕರಣ ಮುಂತಾದ ಕಾರಣಗಳಿಂದಾಗಿ ಬೆಂಗಳೂರು ಇಡೀ ವಿಶ್ವದಲ್ಲೇ ವಿಶಿಷ್ಟ ಸ್ಥಾನ ಪಡೆದಿದೆ. ಉದಾರ ನೀತಿ ಮತ್ತು ಅಭಿವೃದ್ಧಿ ಮಂತ್ರದ ನೆಪದಲ್ಲಿ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲೇ ನೆಲ ಭಾಷೆಯನ್ನು ಉಳಿಸಿಕೊಳ್ಳಲಾಗದ ಪರಿಸ್ಥಿತಿ. ದೇಶಕ್ಕಾಗಿ ದುಡಿದ ಕನ್ನಡಿಗರು ಮತ್ತು ಕನ್ನಡಕ್ಕಾಗಿ ಶ್ರಮಿಸಿದ ಧೀಮಂತರ ಹೆಸರುಗಳೂ ಸಹ ಕನ್ನಡ ಮನಸ್ಸುಗಳಿಂದ ಮರೆಯಾಗುತ್ತಿರುವ ಸನ್ನಿವೇಶದಲ್ಲಿ ಬಡಾವಣೆಗಳಿಗೆ, ಪ್ರಮುಖ ರಸ್ತೆಗಳಿಗೆ ಆ ಹಿರಿಯರ ಹೆಸರನ್ನಡುವ ಪ್ರಯತ್ನ ದಶಕಗಳಿಂದಲೂ ನಡೆಯುತ್ತಾ ಬಂದಿದೆ. ಅಂಥದರಲ್ಲಿ ಕೀರ್ತಿಶೇಷ ಕನ್ನಡ ಕುಲ ಪುರೋಹಿತರೆಂದು ಖ್ಯಾತನಾಮರಾದ ಆಲೂರು ವೆಂಕಟರಾಯರೂ ಒಬ್ಬರು. ಪ್ರಖ್ಯಾತ ಸಾಹಿತಿಗಳಾಗಿ, ಪತ್ರಕರ್ತರಾಗಿ, ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕರ್ನಾಟಕದ ಇತಿಹಾಸ ಸಂಶೋಧಕ ಮಂಡಳಿಗಳಿಗೆ ಕಾರಣೀಭೂತರಾಗಿ, ಕರ್ನಾಟಕದ ಉತ್ಕರ್ಷಕ್ಕಾಗಿ ದುಡಿದ ಆಲೂರು ವೆಂಕಟರಾಯರ ಹೆಸರನ್ನು ಇದೇ ಆಲ್ಬರ್ಟ್‌ ವಿಕ್ಟರ್‌ ರಸ್ತೆಗೆ “ಆಲೂರು ವೆಂಕಟರಾವ್‌ ರಸ್ತೆ’ ಎಂದು ಪುನರ್‌ ನಾಮಕರಣ ಮಾಡಲಾಗಿದೆ.

ವಿಪರ್ಯಾಸವೆಂದರೆ ಬೆಂಗಳೂರು ಮೆಡಿಕಲ್‌ ಕಾಲೇಜಿನಿಂದ ಕಲಾಸಿ ಪಾಳ್ಯಂ ರಸ್ತೆಯಲ್ಲಿನ  ಆನೇಕ ಟೂರಿಸ್ಟ್‌ ಸಂಸ್ಥೆಗಳ ಫ‌ಲಕಗಳಲ್ಲಿ “ಆಲ್ಬಟ್‌ರ ವಿಕ್ಟರ್‌ ರಸ್ತೆ’ ಎಂದೇ ದಾಖಲಿಸಿರುವುದನ್ನು ನೋಡಬಹುದು.
– ಅಂಜನಾದ್ರಿ

ಟಾಪ್ ನ್ಯೂಸ್

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

ACC U-19 Asia Cup: ರಾಜ್ಯದ ಮೂವರು

ACC U-19 Asia Cup: ರಾಜ್ಯದ ಮೂವರು

Ranji Trophy: ಕರ್ನಾಟಕಕ್ಕೆ ನಾಕೌಟ್‌ ಕಷ್ಟ

Ranji Trophy: ಕರ್ನಾಟಕಕ್ಕೆ ನಾಕೌಟ್‌ ಕಷ್ಟ

Udupi: ರೈಲು ಬಡಿದು ವ್ಯಕ್ತಿ ಸಾವು

Udupi: ರೈಲು ಬಡಿದು ವ್ಯಕ್ತಿ ಸಾವು

Puttur: ಮೃತದೇಹ ಪಿಕಪ್‌ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ

Puttur: ಮೃತದೇಹ ಪಿಕಪ್‌ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ

Ranji Trophy: ಶಮಿ ಭರ್ಜರಿ ಪುನರಾಗಮನ; ಬಂಗಾಳಕ್ಕೆ ಜಯ

Ranji Trophy: ಶಮಿ ಭರ್ಜರಿ ಪುನರಾಗಮನ; ಬಂಗಾಳಕ್ಕೆ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.