ಲಲಿತಾ ಕಲಾನಿಕೇತನದ ವೈವಿಧ್ಯ ನೃತ್ಯವಲ್ಲರಿ


Team Udayavani, Feb 15, 2020, 6:06 AM IST

lalita

“ಶ್ರೀ ಲಲಿತಾ ಕಲಾನಿಕೇತನ’ ನೃತ್ಯಸಂಸ್ಥೆಯ ನಾಟ್ಯಗುರು, ವಿದುಷಿ ರೇಖಾ ಜಗದೀಶ್‌ ದಿನ ದಿನವೂ ಹೊಸ ಪರಿಕಲ್ಪನೆಗಳ ಚಟುವಟಿಕೆಗಳಲ್ಲಿ ತೊಡಗಿಕೊಂಡು, ದೇಶ-ವಿದೇಶಗಳ ಶಿಷ್ಯಸಮೂಹದಿಂದ ನೃತ್ಯ ಕಾರ್ಯಕ್ರಮಗಳನ್ನು ನೀಡುತ್ತಲೇ ಇರುವ ಕ್ರಿಯಾಶೀಲ ವ್ಯಕ್ತಿ. ಜೊತೆಗೆ, ರಂಗಪ್ರವೇಶ ಮತ್ತು ವಿಶೇಷ ಕಾರ್ಯಕ್ರಮಗಳನ್ನು ರೂಪಿಸುತ್ತ, ಪ್ರತಿವರ್ಷ ಅರ್ಥಪೂರ್ಣ ವಾರ್ಷಿಕೋತ್ಸವ ನಡೆಸುವುದು ಇವರ ವಿಶೇಷ.

ಪ್ರತಿ ವರ್ಷ ಕನಿಷ್ಠ ಇನ್ನೂರು ಉದಯೋನ್ಮುಖ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುತ್ತಾ, ವಾರ್ಷಿಕೋತ್ಸವಕ್ಕೆ ನವ ಸಂಯೋಜನೆಯ ನೃತ್ಯವಿನ್ಯಾಸಗಳನ್ನು ಅರ್ಪಿಸುವುದು ಕಲಾನಿಕೇತನದ ಹೆಗ್ಗಳಿಕೆ. ಇತ್ತೀಚಿಗೆ, ಎ.ಡಿ.ಎ. ರಂಗಮಂದಿರದಲ್ಲಿ ಸಂಸ್ಥೆಯು ತನ್ನ 19ನೇ ವಾರ್ಷಿಕೋತ್ಸವ ಪ್ರಯುಕ್ತ ವೈವಿಧ್ಯಪೂರ್ಣ ನೃತ್ಯ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಭರತನಾಟ್ಯದ ವೇಷಭೂಷಣ ತೊಟ್ಟ ಪುಟಾಣಿಗಳು ವೇದಿಕೆಯ ತುಂಬಾ ನರ್ತಿಸುತ್ತಾ, ನಂದನವನದ ಸುಂದರ ಹೂವುಗಳಂತೆ ಕಂಗೊಳಿಸುತ್ತಿದ್ದರು.

ಮೊದಲಿಗೆ, “ಶಿವತಾಂಡವ ಸ್ತುತಿ’ಯಲ್ಲಿ ತೋರಿದ ಯೋಗಾಸನದ ವಿಶಿಷ್ಟ ಭಂಗಿಗಳು, ಮಂಡಿ ಅಡವು, ಆಕಾಶಚಾರಿ-ಭ್ರಮರಿಗಳು ಆಕರ್ಷಕವಾಗಿದ್ದವು. “ಪೂರ್ಣಚಂದಿರ ಬಂದ ಧರೆಗೆ ಮಗುವಾಗಿ’ ಎಂಬ ಹಾಡಿನಲ್ಲಿ ಪುಟ್ಟ ಮಣಿಕಂಠ, ಅಯ್ಯಪ್ಪನ ಕುರಿತ ನೃತ್ಯದ ಲಹರಿ, ಕೋಲಾಟದ ಮುದವಾದ ಲಯ ಮನರಂಜಕವಾಗಿತ್ತು. ವಿಘ್ನರಾಜನ ಕುರಿತ ಪ್ರಾರ್ಥನೆಯಲ್ಲಿ ವಿನಾಯಕನ ವಿವಿಧ ರೂಪಗಳನ್ನು ಕಲಾವಿದರು ತಮ್ಮ ಸುಂದರ ಆಂಗಿಕಾಭಿನಯದಲ್ಲಿ ಪಡಿಮೂಡಿಸಿದರು.

“ಶ್ರೀಕೃಷ್ಣ ಕಮಲನಾಥೋ’ -ಘನವಾದ ವರ್ಣದ ಸಂಕೀರ್ಣ ಜತಿಗಳನ್ನು ಅಷ್ಟೇ ಸೊಗಸಾದ ಅಭಿನಯದಲ್ಲಿ ಅಭಿವ್ಯಕ್ತಿಸಿ ಮೆಚ್ಚುಗೆ ಗಳಿಸಿದರು. ವಯಸ್ಸನ್ನು ಮೀರಿದ ಅವರ ನೃತ್ಯಪ್ರತಿಭೆ, ಅಭಿನಯ ಚಕಿತಗೊಳಿಸಿತು. “ನಮಸ್ತೇಷು ಮಹಾಮಾತೆ’ -ಅಷ್ಟಲಕ್ಷ್ಮಿಯರ ಮಹಿಮೆ ಎತ್ತಿ ಹಿಡಿವ ಮನೋಜ್ಞ ಶ್ಲೋಕಗಳನ್ನು, ಕಲಾವಿದೆಯರು ಬಹು ಆತ್ಮವಿಶ್ವಾಸದಿಂದ, ಲವಲವಿಕೆಯಿಂದ ಸಾಕ್ಷಾತ್ಕರಿಸಿದರು. ಭಾಗ್ಯದ ಲಕ್ಷ್ಮಿಯನ್ನು ಬರಮಾಡಿಕೊಂಡ ನರ್ತನ ವೈಭವ ಆಹ್ಲಾದಕಾರಿಯಾಗಿತ್ತು.

* ವೈ.ಕೆ. ಸಂಧ್ಯಾಶರ್ಮ

ಟಾಪ್ ನ್ಯೂಸ್

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

4

Karkala: ಅಸ್ವಸ್ಥಗೊಂಡು ವ್ಯಕ್ತಿ ಸಾವು

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

1-vasu

Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.