ಮಧುರ ಮೊದಲ ರವಿ ನಿವೃತ್ತರ ಗಾನ!
Team Udayavani, Jan 6, 2018, 12:57 PM IST
ಬೆಂಗಳೂರಿನಲ್ಲಿ ಬ್ಯುಸಿ ಬದುಕಿನ ವೃತ್ತಿ ಜೀವನ ಮುಗಿಸಿ ನಿವೃತ್ತಿ ಹೊಂದಿದವರಿಗೆ ವಿಚಿತ್ರವಾದ ಶೂನ್ಯ ಆವರಿಸಿಕೊಂಡುಬಿಡುತ್ತೆ. ಅಲ್ಲಿಗೆ ಮಾನಸಿಕವಾಗಿ ಅರ್ಥ ವೃದ್ಧಾಪ್ಯ ಕವಿಯುತ್ತದೆ. ವೃತ್ತಿಯಲ್ಲಿದ್ದಾಗ ಸಾಕಪ್ಪಾ ಸಾಕು, ನಿವೃತ್ತಿಯಾದರೆ ಸಾಕು ಎಂದು ಹಲುಬುವ ಮನಸ್ಸು, ಬದುಕು ಶಾಶ್ವತ ರಜೆಗೆ ಹೊರಳಿದರೆ ಬದುಕು ಬೋರ್ ಎನಿಸುತ್ತದೆ.
ನಿವೃತ್ತ ಜೀವನ ದೋಹಕ್ಕೂ ಮನಸ್ಸಿಗೂ ಮುದಿತನ ಆವರಿಸಿಕೊಳ್ಳುತ್ತದೆ. ಎರಡೆರಡು ಮೆಟ್ಟಿಲುಗಳನ್ನು ಹತ್ತಲು ಮನಸ್ಸು ಹೇಳಿದರೂ ದೇಹ ಸಾಥ್ ನೀಡುವುದಿಲ್ಲ. ಮಂಡಿ ನೋವು, ಮಧುಮೇಹ, ರಕ್ತದೊತ್ತಡ, ಸಂಧಿ ನೋವು, ದೃಷ್ಟಿ ದೋಷ, ಶ್ರವಣ ದೋಷ ದೇಹವನ್ನು ಹಿಂಡಲಾರಂಭಿಸುತ್ತದೆ. ಅದಕ್ಕಿಂತಲೂ ಹೆಚ್ಚಾಗಿ ಒಂಟಿತನ ಕಾಡಲಾರಂಭಿಸುತ್ತದೆ.
ಇದನ್ನೆಲ್ಲಾ ಪರಿಗಣಿಸಿಯೇ ಆರ್.ಎಂ.ಎಸ್. (ರೈಲ್ವೆ ಮೇಲ್ ಸರ್ವೀಸ್) ಮತ್ತು ಎಂ.ಎಂ.ಎಸ್.ನ (ಮೇಲ್ ಮೋಟಾರ್ ಸರ್ವೀಸ್) ನಿವೃತ್ತ ನೌಕರರು ವರ್ಷಕ್ಕೊಂದು ಬಾರಿ ಒಂದೆಡೆ ಸೇರುತ್ತಾರೆ. ಇದಕ್ಕೊಂದು ಸುಂದರವಾದ ಹೆಸರನ್ನೂ ಇಟ್ಟಿದ್ದಾರೆ- “ಮಧುರ ಮಿಲನ’ ಸುಮಾರು 15 ವರ್ಷಗಳ ಹಿಂದೆ ಈ ಕಾರ್ಯಕ್ರಮಕ್ಕೆ ನಾಂದಿ ಹಾಡಿದವರು ಭಾಸ್ಕರನ್, ಸದಾಶಿವರಾವ್. ರಾಮಯ್ಯ, ವಿಠuಲ್ ರಾವ್, ರಾಮನಾಥ. ಅವರು ಆರಿಸಿದ ದಿನ ವರ್ಷದ ಮೊದಲ ಭಾನುವಾರ.
ಒಂಟಿತನದ ಶಿಕ್ಷೆಯಿಂದ ಪಾರಾಗುವ ವರ್ಷದ ಮೊದಲ ಭಾನುವಾರ ಆನಂದದಾಯಕ. ವರ್ಷವಿಡೀ ಒಂಟಿತನ, ಜಂಜಡಗಳಿಂದ ಮುಕ್ತಗೊಳ್ಳುವ ಏಕೈಕ ದಿನ ಅದು. ಬಹಳಷ್ಟು ವರ್ಷಗಳ ಕಾಲ ಜೊತೆ ಕೆಲಸ ಮಾಡಿದ ಸಹೋದ್ಯೋಗಿಗಳನ್ನು ಕಂಡಾಗ ಅವರ ಮನ ಅರಳುತ್ತದೆ. ತಮ್ಮ ತವಕ, ದುಗುಡಗಳನ್ನು ಹಂಚಿಕೊಳ್ಳಲು ಮನಸ್ಸು ತಹತಹಿಸುತ್ತದೆ.
ಎಲ್ಲರೊಂದಿಗೆ ಕಾಫಿ ತಿಂಡಿ ಸವಿದು, ಊಟವನ್ನೂ ಮುಗಿಸಿ, ಮುಂದಿನ ವರ್ಷದ ಕಾರ್ಯಕ್ರಮ ನಡೆಯವು ವೇಳೆ ತಾವಿರುತ್ತೇವೆ ಎಂಬ ಭರವಸೆಯೊಂದಿಗೆ “ಮುಂದಿನ ಬಾರಿಯೂ ಸಿಗೋಣ’ ಎಂದು ಬೀಳ್ಕೊಟ್ಟು ಮರಳಿ ಮನೆಗೆ ಹೋಗುತ್ತಾರೆ. ಅಂದ ಹಾಗೆ ನಾಳೆ ಈ ವರ್ಷದ “ಮಧುರ ಮಿಲನ’ ನಡೆಯುತ್ತಿದೆ.
ಎಲ್ಲಿ?: ರಘೋತ್ತಮನ್ ಸ್ಮಾರಕ ಭವನ, ಸಂಜಯನಗರ ಅಂಚೆ ಕಚೇರಿ ಮೇಲ್ಗಡೆ
ಯಾವಾಗ?: ಜನವರಿ 7, ಬೆಳಗ್ಗೆ 10
* ಕೆ.ಕೆ. ಗಂಗಾಧರನ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.