“ಮಲೆಗಳಲ್ಲಿ ಮದುಮಗಳು’ ಮೊದಲ ಶೋ
Team Udayavani, Dec 23, 2017, 4:17 PM IST
ಮೈ ಮರಗಟ್ಟಿಸುವಂಥ ಚಳಿ, ಕಣ್ಣೆದುರು ನಾಟಕಗಳ ದೃಶ್ಯಾವಳಿ… ಇವೆರಡೂ ಸಂದರ್ಭಕ್ಕೆ ಸಾಕ್ಷಿ ಆಗಲಿದೆ ಕಲಾಗ್ರಾಮ. ರಾತ್ರಿಯಿಡೀ ನಡೆಯುವ “ಮಲೆಗಳಲ್ಲಿ ಮದುಮಗಳು’ ನಾಟಕ ಈ ವಾರ ಮೊದಲ ಪ್ರದರ್ಶನ ಕಾಣುತ್ತಿದೆ. ರಾತ್ರಿ 8ಕ್ಕೆ ಶುರುವಾಗಿ, ಬೆಳಗ್ಗೆ 6ಕ್ಕೆ ಮುಗಿಯುವ ನಾಟಕದಲ್ಲಿ ಮಲೆನಾಡಿನ ತಾಜಾ ಚಿತ್ರಗಳನ್ನು ಕಾಣಬಹುದು.
“ರಸಋಷಿ’ ಕುವೆಂಪು ವಿರಚಿತ “ಮಲೆಗಳಲ್ಲಿ ಮದುಮಗಳು’ ಕಾದಂಬರಿಗೆ ಕೆ.ವೈ. ನಾರಾಯಣ ಸ್ವಾಮಿ ಅವರ ರಂಗರೂಪಕ್ಕೆ ನೀಡಿದ್ದು, ಸಿ. ಬಸವಲಿಂಗಯ್ಯ ನಿರ್ದೇಶನ ಮಾಡಿದ್ದಾರೆ. ನಾಯಿಗುತ್ತಿ, ಪೀಂಚಲು ಪಾತ್ರಗಳು ಕೊನೆಯ ತನಕವೂ ಪ್ರೇಕ್ಷಕನನ್ನು ಸೆಳೆಯುತ್ತಾ, ದಟ್ಟ ಕಾಡಿನಲ್ಲಿ ಮನಸ್ಸನ್ನು ಅಲೆದಾಡಿಸುತ್ತವೆ. ಅಂದಹಾಗೆ, ಈ ನಾಟಕವು 3ನೇ ಅವತರಿಣಿಕೆಯಲ್ಲಿ ಬೃಹತ್ ಪ್ರದರ್ಶನ ಕಾಣುತ್ತಿದ್ದು, 5 ರಂಗವೇದಿಕೆಯಲ್ಲಿ ಪ್ರಯೋಗಗೊಳ್ಳಲಿದೆ. ಹಂಸಲೇಖ ಅವರು ರಚಿಸುವ ರಂಗಗೀತೆಗಳ ಮಾಧುರ್ಯಕ್ಕೆ ಮನಸೋಲುವುದು ನಿಶ್ಚಿತ. ಮುಂಗಡ ಬುಕಿಂಗ್‌ಗಾಗಿ ಬುಕ್ ಮೈ ಶೋ ಜಾಲತಾಣಕ್ಕೆ ಭೇಟಿ ನೀಡಬಹುದು.
ಯಾವಾಗ?: ಡಿ.29, ಶುಕ್ರವಾರ, ರಾತ್ರಿ 8
ಎಲ್ಲಿ?: ಕಲಾಗ್ರಾಮ, ಮಲ್ಲತ್ತಹಳ್ಳಿ
ಪ್ರವೇಶ ದರ: 249 ರೂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.