ಬಾರೋ ಮಾವಿನ ಮನೆಗೆ…ಲಾಲ್‌ಭಾಗ್‌ ಆಗುತ್ತೆ ಹಲಸೂರು!


Team Udayavani, May 6, 2017, 3:50 PM IST

6554.jpg

ಬೆಂಗ್ಳೂರಲ್ಲಿ ರಾಮನವಮಿ ಉತ್ಸವದಂದು ದಾರಿಯುದ್ದಕ್ಕೂ ಸ್ಟಾಲ್‌ಗ‌ಳನ್ನು ಹಾಕಿರುತ್ತಾರೆ. ಆ ಸಂದರ್ಭದಲ್ಲಿ ಒಳಕ್ಕೆ ಹೋಗುವ ಬಹುತೇಕ ಜನರು ಮಜ್ಜಿಗೆ ತುಂಬಿಕೊಳ್ಳಲು 4-5 ದೊಡ್ಡ ದೊಡ್ಡ ಕೋಕಾಕೋಲಾ, ಪೆಪ್ಸಿ ಬಾಟಲಿಗಳನ್ನು ಕೊಂಡೊಯ್ಯುತ್ತಿದ್ದುದನ್ನು ಆಶ್ಚರ್ಯಚಕಿತಳಾಗಿ ನೋಡುತ್ತಿದ್ದೆ. ಅಂಥದ್ದೇ ಘಟನೆಯನ್ನು ನೋಡಿದ್ದು ಲಾಲ್‌ಭಾಗಲ್ಲಿ, ವಾಕಿಂಗ್‌ಗೆಂದು ಹೋಗುತ್ತಿದ್ದಾಗ. ಅಲ್ಲಿ ಜನರು ಪೇಪರ್‌ ಬ್ಯಾಗು, ಚೀಲ, ಬಾಕ್ಸ್‌, ಬಟ್ಟೆ ಬ್ಯಾಗು ಏನು ಸಿಗುತ್ತದೋ ಅದನ್ನು ತೆಗೆದುಕೊಂಡು ಹೋಗುತ್ತಿದ್ದರು. ಒಳಕ್ಕೆ ಹೋಗುವಷ್ಟೆ ಸಂಖ್ಯೆಯಲ್ಲಿ ಜನರು ತಾವು ಮನೆಯಿಂದ ತಂದಿದ್ದ ಬ್ಯಾಗುಗಳಲ್ಲಿ, ಕೈಚೀಲಗಳಲ್ಲಿ ಅದೇನನ್ನೋ ತುಂಬಿಕೊಂಡು ಹೊರಬರುತ್ತಿದ್ದರು. ಸೀರೆ ಅಂಗಡಿಗಳಲ್ಲಿ ಸ್ಟಾಕ್‌ ಕ್ಲಿಯರೆನ್ಸ್‌ ಸೇಲ್‌ ಇದ್ದಾಗ ಚೆನ್ನಾಗಿರೋ ಸೀರೆಗಳು ಖಾಲಿಯಾಗೋದಕ್ಕೆ ಮುಂಚೆ ಒಳನುಗ್ಗೊàಣ ಎಂಬ ಧಾವಂತದಲ್ಲಿ ಗೃಹಿಣಿಯರು ಮುಗಿಬೀಳುತ್ತಾರಲ್ಲ, ಹಾಗೆ. ಏನೂಂತ ಹೋಗಿ ನೋಡಿದರೆ ಮಾವು ಹಲಸು ಮೇಳ ನಡೀತಿದೆ ಅಂತ ಗೊತ್ತಾಯ್ತು. ಇದು ಮಾವಿನ ಹಣ್ಣಿನ ಸೀಸಸ್‌ ಆಗಿರೋದ್ರಿಂದ ಎಲ್ಲಾ ಹಣ್ಣಿನ ಅಂಗಡಿಗಳಲ್ಲೂ ಮಾವು ಸಿಗುತ್ತಲ್ಲ; ಇಲ್ಲೇ ಯಾಕೆ ಇಷ್ಟೊಂದು ಜನ ತಗೋತಿದ್ದಾರೆ ಅಂತ ಕುತೂಹಲ ಆಯ್ತು. ಅದಕ್ಕೇ ಮೇಳದ ಕುರಿತು ತಿಳಿದವರಲ್ಲಿ ವಿಚಾರಿಸಿದೆ. ಬೇಕಾಗಿದ್ದ ಮಾಹಿತಿ ಸಿಕ್ಕವು. ಅದರ ಪರಿಣಾಮ ಏನಾಯ್ತು ಅಂದ್ರೆ, ನಾನೂ ಮನೆಯಲ್ಲಿದ್ದ ಮೂರ್ನಾಲ್ಕು ಕೈಚೀಲಗಳನ್ನು ಎತ್ತಿಕೊಂಡು ಮಾವು ಹಲಸು ಮೇಳಕ್ಕೆ ಹೋಗಿ ಒಂದಷ್ಟು ಕೆ.ಜಿ ತುಂಬಿಕೊಂಡು ಬಂದೆ.

ಸಾಮಾನ್ಯವಾಗಿ ಹಣ್ಣುಗಳನ್ನು ಬೆಳೆಸುವಾಗ ನಾನಾ ಹಂತಗಳಲ್ಲಿ ಕೆಮಿಕಲ್‌ಗ‌ಳನ್ನು ಬಳಸುತ್ತಾರೆ. ಮೊದಲು ಕೆಮಿಕಲ್‌ ಗೊಬ್ಬರ, ಆಮೇಲೆ ಬಣ್ಣ ಚೆನ್ನಾಗಿ ಬರಲಿ ಅಂತ ಒಂದು ಕೆಮಿಕಲ್‌, ಬೇಗ ಕೆಡದಿರಲಿ ಅಂತ ಒಂದು ಕೆಮಿಕಲ್‌  ಹೀಗೆ… ಇವೆಲ್ಲದರಿಂದಾಗಿ ಎಲ್ಲಾ ಹಣ್ಣುಗಳನ್ನು ಅನುಮಾನದ ದೃಷ್ಟಿಯಿಂದಲೇ ನೋಡಿ ಅವನ್ನು ತಿನ್ನುವವರ ಸಂಖ್ಯೆ ಕಡಿಮೆಯಾಯಿತು. ಆಮೇಲೆ ಸಾವಯವ ಕೃಷಿಯ ಮೂಲಕ ಬೆಳೆದಿದ್ದು ಅಂತ ಹೇಳಿ ಹಣ್ಣುಗಳು ಮಾರುಕಟ್ಟೆಗೆ ಬಂದವು. ಜನರು ಅವುಗಳನ್ನೂ ಅನುಮಾನದ ದೃಷ್ಟಿಯಿಂದಲೇ ನೋಡುತ್ತಿದ್ದರು. ಯಾಕೆ ಅಂತಂದರೆ ಹಣ್ಣುಗಳನ್ನು ಯಾವ ರೀತಿ ಬೆಳೆದಿದ್ದಾರೆ ಅನ್ನೋದನ್ನು ಜನಸಾಮಾನ್ಯರು ತಿಳಿದುಕೊಳ್ಳೋಕೆ ಆಗುವುದಿಲ್ಲ. ಬೆಳೆಗಾರರು ಮತ್ತು ಪರಿಣಿತರು ಹೇಳಬಹುದಷ್ಟೇ. ಇನ್ನೊಂದು ತಂತ್ರ ಬೇರೆ ನಡೆಯುತ್ತದೆ. ಮಾವು ಹಣ್ಣಾಗುವ ಮೊದಲೇ, ಕಾಯಿಗಳನ್ನೇ ಕಿತ್ತು ಕೆಮಿಕಲ್‌ ಬಳಸಿ ಕೆಂಪು ಬಣ್ಣಕ್ಕೆ ತಿರುಗಿಸುತ್ತಾರೆ. ಇವನ್ನು ತುಂಬಾ ದಿನಗಳ ಕಾಲ ಕೆಡದಂತೆ ಸಂರಕ್ಷಿಸಬಹುದು ಎನ್ನುವ ಕಾರಣಕ್ಕೆ ಹೀಗೆ ಮಾಡುತ್ತಾರೆ. 

ಅದಕ್ಕೇ ಮಾರುಕಟ್ಟೆಯಲ್ಲಿ ಎಷ್ಟೋ ಸಲ ಮಾವನ್ನು ಹಣ್ಣೆಂದು ಕೊಂಡು ತಂದು ಕಟ್‌ ಮಾಡಿ ತಿಂದಾಗ ಹುಳಿಯಾಗುವುದು. ಆದ್ದರಿಂದ ಪ್ರಮಾಣೀಕೃತ ಮತ್ತು ವಿಶ್ವಾಸಾರ್ಹ ಸಂಸ್ಥೆಗಳಿಂದ ಸಾವಯವ ಮಾವು ಸಿಗುತ್ತದೆ ಅಂತಾದರೆ ಜನರು ಯಾವತ್ತೂ ಮುಗಿಬೀಳುವರು. ಅದರಲ್ಲೂ ಸರ್ಕಾರವೇ, ಕೃಷಿಕರಿಗೆ ಸಾವಯವ ವಿಧಾನದಲ್ಲಿ ಮಾವು ಹಲಸು ಬೆಳೆಯಲು ಪ್ರೋತ್ಸಾಹ ನೀಡಿ, ಅವರಿಗೆ ಉತ್ತಮ ಮತ್ತು ನೇರ ಮಾರುಕಟ್ಟೆ ಒದಗಿಸುವ ಸಲುವಾಗಿ ಲಾಲ್‌ಬಾಗಿನಲ್ಲಿ ಮೇಳ ನಡೆಸುತ್ತಿದೆ ಎಂದು ತಿಳಿದ ಮೇಲೆ ಜನರ ಸ್ಪಂದನೆ ಹೆಚ್ಚಿರುವುದರಲ್ಲಿ ಆಶ್ಚರ್ಯವಿಲ್ಲ. ಇಲ್ಲಿ ರೈತ ನೇರವಾಗಿ ಗ್ರಾಹಕರಿಗೆ ತಾನು ಬೆಳೆದುದನ್ನು ಮಾರುತ್ತಾನೆ. ಮಧ್ಯವರ್ತಿಗಳಿಲ್ಲ. ಹೀಗಾಗಿ ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಮಾವು ಸಿಗುವುದಲ್ಲದೆ ರೈತರಿಗೂ ಲಾಭವಾಗುವುದು. ಲಾಲ್‌ಭಾಗ್‌ನಲ್ಲಿ ಸುಮಾರು 100 ಮಾವು ಸ್ಟಾಲ್‌ಗ‌ಳು ಮತ್ತು 15 ಹಲಸಿನ ಸ್ಟಾಲ್‌ಗ‌ಳನ್ನು ಹಾಕಿದ್ದಾರೆ. ಮಾವಿನ ಹಣ್ಣುಗಳ ವಿವಿಧ ತಳಿಗಳು ಖರೀದಿಗೆ ಸಿಗುತ್ತವೆ. ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಚಿತ್ರದುರ್ಗ, ಮಂಡ್ಯ ಮುಂತಾದೆಡೆಗಳಲ್ಲಿ ಬೆಳೆದ ಮಾವು ಮತ್ತು ಹಲಸು ಮೇಳದಲ್ಲಿ ಸಿಗುತ್ತಿವೆ.

2 ಡಜನ್‌ಗೆ 5,000 ರೂಪಾಯಿ!
ಮಾವು ಸಿಹಿ ಮಾತ್ರವಲ್ಲ, ಸುಗಂಧಪೂರಿತ ಕೂಡ. ನನಗೆ ಚಿಕ್ಕಂದಿನಿಂದಲೂ ಮಾವು ಅಂದರೆ ಇಷ್ಟ. ಊಟ ಬೇಕಾದರೂ ಬಿಟ್ಟೇನು, ಮಾವು ಮಾತ್ರ ಬಿಡೆ ಅನ್ನುವಷ್ಟು ಇಷ್ಟ. ಇಷ್ಟವೇನೋ ಇತ್ತು ಆದರೆ ಯಾವಾಗಲೂ ತಿನ್ನಲು ಸಿಗುತ್ತಿರಲಿಲ್ಲ. ಎಷ್ಟೋ ಸಲ ಕದ್ದು ತಿಂದಿದ್ದೂ ಇದೆ. ಅದಕ್ಕೆ ಶಿಕ್ಷೆಯಾಗಿ ಪೆಟ್ಟು ತಿಂದರೂ ಬುದ್ಧಿ ಕಲಿತಿರಲಿಲ್ಲ. ಮಾವಿನ ಹಣ್ಣಿಗಾಗಿ ಪೆಟ್ಟು ತಿನ್ನಲೂ ಸಿದ್ಧನಿದ್ದೆ. ಮಾವಿನ ಹಣ್ಣುಗಳಲ್ಲಿ ಅಲ್ಫಾನ್ಸೊ ಮಾವು ನನಗಿಷ್ಟ. ಇವನ್ನು ಭಾರತಕ್ಕೆ ಪರಿಚಯಿಸಿದವರು ಪೋರ್ಚುಗೀಸರು. ಮಹಾರಾಷ್ಟ್ರದ ರತ್ನಗಿರಿ, ಅಲ್ಫಾನ್ಸೋ ಮಾವಿಗೆ ಹೆಸರುವಾಸಿ. ಅಲ್ಫಾನ್ಸೊ ಮಾವಿನಹಣ್ಣು ಗರ್ಭಿಣಿಯರಿಗೆ ತುಂಬಾ ಒಳ್ಳೆಯದು ಅಂತ ವೈದ್ಯರು ಹೇಳುತ್ತಾರೆ. ನನ್ನ ಮೊದಲ ಮಗಳು ಪ್ರಗ್ನೆಂಟ್‌ ಆಗಿದ್ದಾಗ ಸ್ವೀಡನ್ನಿನಲ್ಲೇ ಅಲ್ಫಾನ್ಸೊ ಮಾವು ಕೊಂಡು ತಿನ್ನುತ್ತಿದ್ದಳು. ಅಲ್ಲಿಯೂ ತುಂಬಾ ದುಬಾರಿ. ಈಗ ನನ್ನ ಎರಡನೇ ಮಗಳು ಪ್ರಗ್ನೆಂಟ್‌. ಸಾವಯವ ಮಾದರಿಯಲ್ಲಿ ಬೆಳೆದ ಮಾವು ಇಲ್ಲಿ ಸಿಗಲ್ಲ ಅಂತ ಅದರ ಗೊಡವೆಗೇ ಹೋಗಿರಲಿಲ್ಲ. ಆಮೇಲೆ ಇಂಟರ್‌ನೆಟ್‌ನಲ್ಲಿ ಹುಡುಕಿದಾಗ ಕೆಮಿಕಲ್‌ ಮುಕ್ತ ಅಲ್ಫಾನ್ಸೊ ಮಾವನ್ನು ರತ್ನಗಿರಿ ಮೂಲದ ಸಂಸ್ಥೆಯೊಂದು ಡೆಲಿವರಿ ಮಾಡುತ್ತಿದೆ ಅಂತ ತಿಳಿಯಿತು. ಆನ್‌ಲೈನ್‌ನಲ್ಲಿ ತರಿಸಿದೆ. ಪೆಟ್ಟಿಗೆಯಲ್ಲಿ ಬಂತು ಮಾವು. 2 ಡಜನ್‌ ಮಾವಿನಹಣ್ಣುಗಳಿಗೆ 5 ಸಾವಿರ ರೂ. ಈಗ ನಮ್ಮ ಬೆಂಗ್ಳೂರಿನಲ್ಲೇ ಮಾವು ಹಲಸು ಮೇಳ ನಡೀತಿದೆ. ಖಂಡಿತ ಹೋಗ್ತಿನಿ.
– ಉದಯ್‌ ಜಾದೂಗರ್‌

ಮೇಳದಿಂದ ರೈತರಿಗೆ ಹೆಚ್ಚಿನ ಉಪಯೋಗ ಆಗುತ್ತೆ. ಮಧ್ಯವರ್ತಿಗಳಿಂದ ಅವರು ಬೆಳೆದ ಬೆಲೆಗೆ ಸರಿಯಾದ ಬೆಲೆ ಸಿಗುತ್ತಿರಲಿಲ್ಲ. ಆದರೆ ಇಲ್ಲಿ ರೈತರ ಖರ್ಚು- ವೆಚ್ಚ ಮುಂತಾದ ಅಂಶಗಳನ್ನೆಲ್ಲಾ ಗಮನದಲ್ಲಿರಿಸಿಕೊಂಡೇ ಬೆಲೆ ನಿಗದಿಗೊಳಿಸಿರುವುದರಿಂದ ರೈತರೂ ಸಂತಸಗೊಂಡಿದ್ದಾರೆ. ಸಗಣಿ, ಗಂಜಲ ಮುಂತಾದ ಸಾವಯವ ಗೊಬ್ಬರದಿಂದ ಬೆಳೆಸಿದ ಮಾವು- ಹಲಸು, ಕಾರ್ಬೈಡ್‌ ಮುಕ್ತವಾಗಿರುವುದರಿಂದ ಗ್ರಾಹಕರಿಂದಲೂ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.
– ದಿವ್ಯಾ

ಮೇಳ- ಮೇ 5ರಿಂದ ಮೇ 24ರ ತನಕ

100 ಮಾವಿನ ಸ್ಟಾಲ್‌ಗ‌ಳು
15 ಹಲಸಿನ ಸ್ಟಾಲ್‌ಗ‌ಳು
25 ಮಾವಿನ ತಳಿಗಳು
1,500 ಟನ್‌ಗಳಷ್ಟು ಮಾವು ಮಾರಾಟವಾಗುವ ಅಂದಾಜು

– ಹವನ

ಟಾಪ್ ನ್ಯೂಸ್

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

dhankar (2)

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-eeee

Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ

rape

Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.