ಮತ್ತೂಮ್ಮೆ ಮಾರ್ಕ್ವೆಝ್, ಕನ್ನಡಕ್ಕೆ…
Team Udayavani, Jan 27, 2018, 11:23 AM IST
“ಮ್ಯಾಜಿಕ್ ರಿಯಲಿಸಂ’ ಪ್ರಕಾರಕ್ಕೆ ಹೆಸರಾದ ಕೊಲಂಬಿಯನ್ ಲೇಖಕ ಮಾರ್ಕ್ವೆಝ್ ಅವರು ರಚಿಸಿದ ಕತೆ ನೋ ಒನ್ ರೈಟ್ಸ್ ಟು ಕರ್ನಲ್. ಅ ಕಥೆಯನ್ನೊಳಗೊಂಡಿದ್ದ ಕಥಾಸಂಕಲನಕ್ಕೂ ಅದೇ ಹೆಸರನ್ನು ನೀಡಿದ್ದರವರು. ತಾವು ಬರೆದುದರಲ್ಲಿ ಅವರಿಗೆ ಬಹಳ ಇಷ್ಟವಾದ ಕಥಾಸಂಕಲನ ಅದಾಗಿತ್ತು.
ಮಾರ್ಕ್ವೆಝ್ ಅವರು ಈ ಕಥಾಸಂಕಲನವನ್ನು ಎಷ್ಟು ಇಷ್ಟಪಟ್ಟಿದ್ದರೆಂದರೆ ತಮಗೆ ಜಗದ್ವಿಖ್ಯಾತಿಯನ್ನು ತಂದುಕೊಟ್ಟ “ಒನ್ ಹಂಡ್ರೆಡ್ ಇಯರ್ ಆಫ್ ಸಾಲಿಟ್ಯೂಡ್’ ಕಾದಂಬರಿಯನ್ನು ಬರೆದಿದ್ದೇ ಓದುಗರು ನೋ ಒನ್ ರೈಟ್ಸ್ ಟು ಕರ್ನಲ್ ಕಥಾಸಂಕಲನವನ್ನು ಓದಲಿ ಎಂಬ ಉದ್ದೇಶದಿಂದ ಎಂದಿದ್ದರು.
ಈ ಕಥಾಸಂಕಲನವನ್ನು ಆಕೃತಿ ಪುಸ್ತಕ ಪ್ರಕಾಶನ ಕನ್ನಡಕ್ಕೆ ತರುತ್ತಿದೆ. ಪ್ರೊ. ರಘುನಾಥ್ ಅವರು ಅನುವಾದಿಸಿರುವ ಕರ್ನಲ್‌ಗೆ ಯಾರೂ ಬರೆಯುವುದಿಲ್ಲ ಎನ್ನುವ ಹೆಸರಿನ ಈ ಕಥಾಸಂಕಲನ ಬಿಡುಗಡೆಗೆ ಸಿದ್ಧವಾಗಿದೆ. ವಿಮರ್ಶಕರಾದ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಪುಸ್ತಕವನ್ನು ಬಿಡುಗಡೆಗೊಳಿಸುವುದರ ಜೊತೆಗೆ ಪುಸ್ತಕದ ಕುರಿತು ಉಪನ್ಯಾಸ ಮತ್ತು ಸಂವಾದದಲ್ಲಿ ಭಾಗಿಯಾಗಲಿದ್ದಾರೆ.
ಎಲ್ಲಿ?: ಆಕೃತಿ ಪುಸ್ತಕ ಮಳಿಗೆ, ನಂ. 31/1, 12ನೇ ಮುಖರಸ್ತೆ, ರಾಜಾಜಿನಗರ
ಯಾವಾಗ?: ಜನವರಿ 28, ಬೆಳಗ್ಗೆ 10
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.