ಗೊಮ್ಮಟನನ್ನು ಅಳೆದದ್ದು ಹೀಗೆ…
Team Udayavani, Feb 17, 2018, 11:54 AM IST
ಗೊಮ್ಮಟ ಮೂರ್ತಿಯನ್ನು ಅಳೆಯುವಾಗ ನಾನು ಶ್ರವಣಬೆಳಗೊಳದಲ್ಲೇ ಇದ್ದೆ, ಅಧ್ಯಯನ ದೃಷ್ಟಿಯಿಂದ. ನನ್ನ ಜೊತೆ ಸಹೋದ್ಯೋಗಿಗಳು, ಸ್ಥಳೀಯರು ಇದ್ದರು. ಹಿರಿಯ ಮುನಿಗಳಾದ ಎಲಾಚಾರ್ಯರು, ಆಗ ತಾನೇ ಬಂದಿದ್ದ ಚಾರುಕೀರ್ತಿ ಭಟ್ಟಾರಕರು ಬಹಳ ಸಹಕಾರ ಕೊಟ್ಟರು. ಗೊಮ್ಮಟನ ಅಳತೆ ಮಾಡಲು ಥಿಯೋಡಲೈಟ್ ಅನ್ನೋ ಉಪಕರಣ ಬಳಸಿದ್ದೆವು.
ಹೊಯ್ಸಳ ದೇವಾಲಯಗಳು, ಅಲ್ಲಿನ ಕಲೆಗಳ ಬಗ್ಗೆ ಸಂಶೋಧನೆ ಮಾಡುತ್ತಿದ್ದಾಗ ಆಕರ್ಷಿಸಿದ್ದು ಜೈನ ದೇವಾಲಯಗಳು. ಅದು ಹೇಗಿರಬಹುದು? ಹೊಯ್ಸಳರ ಕಾಲದಲ್ಲಿ ನಿರ್ಮಾಣ ಗೊಂಡ ದೇಗುಲಗಳಂತೆಯೇ ಜೈನದೇವಾಲಯಗಳೂ ಇರಬಹುದೇ ಅನ್ನೋ ಕುತೂಹಲ ಇತ್ತು. ಆಗಾಗಿ ನಾನು ಶ್ರವಣಬೆಳಗೊಳಕ್ಕೆ ಹೋಗಿದ್ದೆ. ನೋಡಿದರೆ ಆಶ್ಚರ್ಯ. ಹೊಯ್ಸಳರ ಕಾಲದಲ್ಲಿ ಕಟ್ಟಿದ ಬಸದಿಗಳೆಲ್ಲವೂ ಹೊಯ್ಸಳ ಶೈಲಿಯಲ್ಲಿರಲಿಲ್ಲ. ಬದಲಾಗಿ ದ್ರಾವಿಡ ಸಂಪ್ರದಾಯದಲ್ಲಿ ಇದ್ದವು. ಈ ಭಿನ್ನತೆಯೇ ನನ್ನ ಅಧ್ಯಯನಕ್ಕೆ ಪ್ರೇರಣೆಯಾಗಿದ್ದು.
ಆಮೇಲೆ ಗೊಮ್ಮಟ ಮೂರ್ತಿಯನ್ನು ಅಳೆಯಲು ಮುಂದಾದೆವು. ಆಗ ನಾನು ಶ್ರವಣಬೆಳಗೊಳದಲ್ಲೇ ಇದ್ದೆ, ಅಧ್ಯಯನ ದೃಷ್ಟಿಯಿಂದ. ನನ್ನ ಜೊತೆ ಸಹೋದ್ಯೋಗಿಗಳು, ಸ್ಥಳೀಯರು ಇದ್ದರು. ಹಿರಿಯ ಮುನಿಗಳಾದ ಎಲಾಚಾರ್ಯರು, ಆಗ ತಾನೇ ಬಂದಿದ್ದ ಚಾರುಕೀರ್ತಿ ಭಟ್ಟಾರಕರು ಬಹಳ ಸಹಕಾರ ಕೊಟ್ಟರು. ಗೊಮ್ಮಟನ ಅಳತೆ ಮಾಡಲು ಥಿಯೋಡಲೈಟ್ ಅನ್ನೋ ಉಪಕರಣ ಬಳಸಿದ್ದೆವು. ಇದೊಂಥರಾ ನಮ್ಮ ಕ್ಯಾಮರ ಇದ್ದ ಹಾಗೆ. ಗೊಮ್ಮಟ ಮೂರ್ತಿಯ ಮುಂದೆ ಫಿಕ್ಸ್ ಮಾಡಿ, ಅದರ ಒಟ್ಟಾರೆ ಉದ್ದವನ್ನು ಅಳೆದುಕೊಂಡೆವು.
ಈ ಹಿಂದೆ ಮೈಸೂರಿನ ಪುರಾತತ್ವ ಇಲಾಖೆ ಗೊಮ್ಮಟ ಮೂರ್ತಿಯನ್ನು ಅಳತೆ ಮಾಡಿ 58 ಅಡಿ ಇದೆ ಎಂದು ಹೇಳಿತ್ತಾದರೂ ದೇಹದ ಇತರೆ ಭಾಗಗಳ ಉದ್ದಗಲಗಳನ್ನು ದಾಖಲು ಮಾಡಿರಲಿಲ್ಲ. ನಾವು ಆ ಕೆಲಸ ಮಾಡಬೇಕಾಯಿತು. ಎತ್ತರದ ಹೊರತಾಗಿ ಮೂರ್ತಿಯ ದೇಹ ಅಡ್ಡಡ್ಡ, ಎದೆ, ಕತ್ತಿನ ವಿಶಾಲ ಪ್ರದೇಶಗಳೆಲ್ಲವೂ ಎಷ್ಟಿದೆ ಎನ್ನುವುದನ್ನೆಲ್ಲಾ ದಾಖಲು ಮಾಡಲು ಟೇಪು ಬಳಸಿಯೇ ಅಳೆದದ್ದು. ಇದು ಮೂರು ದಿನಗಳ ಕೆಲಸವಾದರೂ, ನಂತರವೂ ಒಂದಕ್ಕಿಂತ ಹೆಚ್ಚು ಸಲ ಸರಿಯಾಗಿದೆಯಾ? ಅಂತ ಖಚಿತ ಪಡಿಸಿಕೊಳ್ಳುತ್ತಲೇ ಇದ್ದೆವು. ಹಾಗಾಗಿ ಗೊಮ್ಮಟನನ್ನು ಅಳೆಯುವ ಕೆಲಸ ಇಷ್ಟೇ ದಿನಕ್ಕೆ ಮುಗಿದು ಹೋಯ್ತು ಅಂತ ಹೇಳಲು ಕಷ್ಟವಾಗಬಹುದು.
ಮೂರ್ತಿ ದೊಡ್ಡದಾಗಿದ್ದರಿಂದ ತಾಂತ್ರಿಕ ಸಮಸ್ಯೆ ಇತ್ತು, ಇದು ಈಗಲೂ ಇದೆ ಎನ್ನಿ. ಅದಕ್ಕೆ ಏನು ಬೇಕು ಅನ್ನೋದು ಗೊತ್ತಿದ್ದರಿಂದ ಸಿದ್ಧತೆ ಮಾಡಿಕೊಂಡಿದ್ದೆವು. ಉದಾಹರಣೆಗೆ- ಭುಜ ಅಳೆಯ ಬೇಕು ಅಂತಿಟ್ಟುಕೊಳ್ಳಿ. ಯಾವ ಪಾಯಿಂಟಿನಿಂದ ಯಾವ ಪಾಯಿಂಟಿಗೆ ಟೇಪು ಇಟ್ಟುಕೊಳ್ಳಬೇಕು ಅನ್ನೋದರ ಮೇಲೆ ಇತರೆ ಭಾಗಗಳ ಅಳತೆ ತಿಳಿಯುತ್ತದೆ. ಇದರಲ್ಲಿ ಸ್ವಲ್ಪ ಹೆಚ್ಚುಕಡಿಮೆ ಆದರೂ ಅಳತೆ ವ್ಯತ್ಯಾಸವಾಗುತ್ತದೆ. ಗೊಮ್ಮಟನ ಭುಜ ಅಳೆಯಬೇಕಾದಾಗ ಹಿಂಭಾಗದಿಂದ ಅಳೆಯಬೇಕು. ಅದನ್ನು ಶುರುವಿನ ಪಾಯಿಂಟ್ ಮಾರ್ಕ್ ಮಾಡಿಕೊಂಡಿದ್ದರಿಂದ ಅದರಂತೆ ಭುಜದ ತುದಿಯಿಂದ ತೋಳಿನ ಉದ್ದವನ್ನು ಅಳೆಯಲು ಸುಲಭವಾಯಿತು. ಪಾಯಿಂಟ್ ಮಾಡುವ ಕೆಲಸ ಮಾಡದೇ ಇದ್ದಿದ್ದರೆ ತೋಳಿನ ನಿಜವಾದ ಉದ್ದ ತಿಳಿಯುತ್ತಿರಲಿಲ್ಲ. ಅಳತೆ ಮಾಡುವ ಸಂದರ್ಭದಲ್ಲಿ ನಾವು ಎದುರಿಸಬೇಕಾದ ತಾಂತ್ರಿಕ ಅಂಶಗಳನ್ನು ಮೊದಲೇ ಟಿಪ್ಪಣಿ ಮಾಡಿಕೊಂಡಿದ್ದೆವು.
ವಿಗ್ರಹದ ಎತ್ತರದ ಕುರಿತು ಒಂದು ನಿರ್ಧಾರವಾದ ನಂತರ, ಪಾದದಿಂದ ತೌಕದ ವರೆಗೂ, ಪಾದದಿಂದ ಹೊಕ್ಕಳು ವರೆಗೂ, ಪಾದದಿಂದ ಕತ್ತಿನ ರೇಖೆವರೆಗೂ ಎಷ್ಟು ಅಡಿ ಇದೆ, ಮೊಣಕಾಲಿನಿಂದ ಟೊಂಕದವರೆಗೂ ಎಷ್ಟೆಷ್ಟು ಅಡಿಗಳಿವೆ ಅನ್ನೋದರ ಲೆಕ್ಕ ಮಾಡಿದೆವು. ಬೆರಳುಗಳ ಉದ್ದ, ಕಿವಿ, ಮೂಗಿನ ಅಗಲ, ಉದ್ದಗಳನ್ನು ಬಹಳ ಕೇರ್ ಫುಲ್ಲಾಗಿ ಅಳೆಯಬೇಕಾದಾಗ ವಿಗ್ರಹದ ಸೌಂದರ್ಯಕ್ಕೆ, ಗೌರವಕ್ಕೆ ದಕ್ಕೆಯಾಗದಂತೆ ರಕ್ಷಣಾತ್ಮಕವಾಗಿ ಕೆಲಸ ಮಾಡಬೇಕಾಗುತ್ತದೆ.
ನಮ್ಮಲ್ಲಿರುವ ವಿಗ್ರಹಗಳಲ್ಲಿ ಅತ್ಯಂತ ಸುಂದರ ವಿಗ್ರಹ ಎಂದರೆ ಈ ಶ್ರವಣಬೆಳಗೊಳದ ಗೊಮ್ಮಟ ಮೂರ್ತಿ. ಮುಖಭಾವ, ಅದರಲ್ಲಿ ತುಳುಕುವ ದೈವೀ ಪ್ರಭಾವ ಇದನ್ನೆಲ್ಲಾ ಮೀರಿಸುವ ವಿಷಯ ಬಂದಾಗ ಶ್ರವಣಬೆಳಗೊಳದ ಗೊಮ್ಮಟನಿಗೆ ಸರಿಸಾಟಿಯಾಗಿ ನಿಲ್ಲುವ ಮೂರ್ತಿ ಯಾವುವೂ ಇಲ್ಲ ಅನಿಸುತ್ತದೆ. ಒಟ್ಟಾರೆ ಬಹಳ ಆಳವಾಗಿ ಅಭ್ಯಸಿಸಿದರೆ, ಈ ಮೂರ್ತಿಯನ್ನು ಮೇಲಿಂದ ನೋಡಿದರೆ ಭುಜದಿಂದ ಸೊಂಟದವರೆಗಿನ ಭಾಗ ಹೆವಿ ಅನಿಸುತ್ತದೆ. ಅಲ್ಲೇನಾದರೂ ಸ್ವಲ್ಪ ಪ್ರಪೋಷನ್ ಇಂಪ್ರೂ ಆಗಬಹುದಾಗಿತ್ತೇನೋ ಅನ್ನೋ ರೀತಿ ಭಾಸವಾಗುತ್ತದೆ. ಆದರೆ ಆಕಾಲದಲ್ಲಿ ದೊಡ್ಡಬಂಡೆಯನ್ನು ಕೊರೆಯಬೇಕಾದಾಗ, ಅವರಿಗಿದ್ದ ಅಡಚಣೆ ಏನಿದ್ದವೋ, ಏನೋ, ಅಲ್ಲವೇ? ಆದರೆ ದೇಹ ಭಾಗದೊಳಗೆ ಸ್ವಲ್ಪ ಮಟ್ಟಿಗೆ ವ್ಯತ್ಯಾಸ ಕಂಡರೂ, ಸೂಕ್ಷ್ಮವಾಗಿ ನೋಡಿದಾಗ ಎಲ್ಲೋ ಒಂದು ಕಡೆಗೆ ವಾಲ್ಯುಮ್ ಹೆಚ್ಚಾಯೆ¤àನೋ ಅಂತ ಅನಿಸಿದರೂ ಗೊಮ್ಮಟನ ಮುಖಚರ್ಯೆ ಇದೆಯಲ್ಲ ಅದು ಅತ್ಯದ್ಬುತ. ಗೊಮ್ಮಟನ ಸೌಂದರ್ಯವನ್ನು ಬೊಪ್ಪಣ ಕವಿ 12ನೇ ಶತಮಾನದಲ್ಲೇ ವರ್ಣನೆ ಮಾಡಿದ್ದಾರೆ. ಇವರಿಗಿಂತ ಚೆನ್ನಾಗಿ ವರ್ಣನೆ ಮಾಡುವುದಾಗಲೀ, ಅಂಥ ಗೊಮ್ಮಟನನ್ನು ಮೀರಿಸುವಂತೆ ಕೆತ್ತುವುದಕ್ಕಾಗಲಿ ಈವರೆಗೂ ಸಾಧ್ಯವಾಗಲೇ ಇಲ್ಲ.
ಒಂದು ವಿಚಾರ ಏನೆಂದರೆ, ಇದೇ ಗೊಮ್ಮಟನ ಅಲ್ಪಪ್ರಮಾಣದ ಮೂರ್ತಿಗಳಲ್ಲಿ ಕೆಲವು ಬಹಳ ಸೌಂದರ್ಯಯುತವಾಗಿವೆ. ಆದರೆ ಮಹಾ ಪ್ರಮಾಣದ ಮೂರ್ತಿಗಳಲ್ಲಿ ಈ ರೀತಿಯ ಸೌಂದರ್ಯ ಖನಿ ಇಲ್ಲವೇ ಇಲ್ಲ ಎನ್ನಬೇಕು. ಕೆಲವು ಮೂರ್ತಿಗಳಲ್ಲಿ ಎತ್ತರವೂ, ಸೌಂದರ್ಯವೂ ಎಲ್ಲವೂ ಇದ್ದರೂ ದೈವೀ ಭಾವ ಇರುವುದಿಲ್ಲ. ಹೀಗಾಗಿ ಈ ಮೂರ್ತಿ ಕೆತ್ತನೆಗಳಲ್ಲಿ ಗಾತ್ರಗಳಿಗಿಂತ ಹೆಚ್ಚಾಗಿ ಅದರಲ್ಲಿನ ಭಾವಗಳ ಪ್ರಮಾಣಗಳನ್ನು ಕಾಪಾಡಿಕೊಳ್ಳುವುದು ಬಹಳ ಕಷ್ಟ. ಈ ಎಲ್ಲದರ ಸಮ್ಮಿಲನವನ್ನು ಶ್ರವಣಬೆಳಗೊಳದ ಗೊಮ್ಮಟ ಮೂರ್ತಿಯಲ್ಲಿ ಮಾತ್ರ ಕಾಣಬಹುದು.
ಪ್ರೊ.ಷ. ಶೆಟ್ಟರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Goa: ಗೋರಕ್ಷಕರಿಂದ ದಾಳಿ ಆರೋಪ: ಗೋವಾದಲ್ಲಿ ಮಾಂಸದಂಗಡಿಗಳ ಮುಷ್ಕರ
Agriculture: ಬೆಂಬಲ ಬೆಲೆಯಲ್ಲಿ ತೊಗರಿ, ಕಡಲೆ ಖರೀದಿಗೆ ಅನುಮತಿ: ಸಚಿವ ಶಿವಾನಂದ ಪಾಟೀಲ್
Vinod ಕಾಂಬ್ಳಿಗೆ ಉಚಿತ ಚಿಕಿತ್ಸೆ ಘೋಷಿಸಿದ ಥಾಣೆ ಆಸ್ಪತ್ರೆ
Bareilly Court: ಪ್ಯಾಲೆಸ್ತೀನ್ ಪರ ಘೋಷಣೆ: ಸಂಸದ ಒವೈಸಿಗೆ ಸಮನ್ಸ್
Sajipamunnur: ಅಪಘಾತದ ವೇಳೆ ಗೋಮಾಂಸ ಸಾಗಾಟ ಪತ್ತೆ; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.