ಜಗದ ಕವಿಯ ಧ್ಯಾನ
Team Udayavani, Dec 28, 2019, 6:01 AM IST
“ಯುಗದ ಕವಿ, ಜಗದ ಕವಿ’ಯೆಂದೇ ಬಣ್ಣಿಸಲ್ಪಟ್ಟ ಕುವೆಂಪು ಅವರ ಜನ್ಮದಿನ ಡಿಸೆಂಬರ್ 29. ಇದು ಅವರ 115ನೇ ಜನುಮ ದಿನ. ಕಾವ್ಯ, ಕಾದಂಬರಿಗಳೊಂದಿಗೆ ನಮ್ಮೊಂದಿಗೆ ಜೀವಂತವಾಗಿರುವ ಅವರನ್ನು ಕರುನಾಡು ಎಂದಿಗೂ ಮರೆಯದು. ಅದರಂತೆ, ರಾಜಧಾನಿಯ ಹಲವೆಡೆಗಳಲ್ಲೂ ಕುವೆಂಪು ಜನ್ಮದಿನ ಆಚರಣೆಗೊಳ್ಳುತ್ತಿದೆ…
ವಿಶ್ವಮಾನವ ದಿನ
ಕನ್ನಡ ಸಂಘರ್ಷ ಸಮಿತಿಯು, ಕುವೆಂಪು ಅವರ 116ನೇ ಹುಟ್ಟುಹಬ್ಬವನ್ನು ವಿಶ್ವಮಾನವ ದಿನಾಚರಣೆಯಾಗಿ ಆಚರಿಸುತ್ತಿದೆ. ಕುವೆಂಪು ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಮಹಾಪೌರರಾದ ಎಂ. ಗೌತಮ್ ಕುಮಾರ್, ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕ.ಸಾ.ಪ ಮಾಜಿ ಅಧ್ಯಕ್ಷ ಡಾ.ಆರ್.ಕೆ.ನಲ್ಲೂರು ಪ್ರಸಾದ್, ಪಾಲಿಕೆ ಸದಸ್ಯೆ ವಾಣಿ ವಿ.ರಾವ್, ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟದ ಅಧ್ಯಕ್ಷ ಎಂ.ತಿಮ್ಮಯ್ಯ ಭಾಗವಹಿಸಲಿದ್ದಾರೆ. ಪತ್ರಕರ್ತ ರಾಮಣ್ಣ ಕೋಡಿಹೊಸಹಳ್ಳಿ, ಅಧ್ಯಕ್ಷತೆ ವಹಿಸುವರು. ಕವಯಿತ್ರಿ ಡಾ. ವರದಾ ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ, ಗೀತೆಗಳ ಗಾಯನ ನಡೆಯಲಿದೆ.
ಎಲ್ಲಿ?: ಲಾಲ್‌ಬಾಗ್ ಪಶ್ಚಿಮ ದ್ವಾರ
ಯಾವಾಗ?: ಡಿ. 29, ಭಾನುವಾರ ಬೆಳಗ್ಗೆ 8.30
ಕುವೆಂಪು ಗೀತೆಗಳ ಗಾಯನ ಸ್ಪರ್ಧೆ
ಕನ್ನಡ ಸಂಘರ್ಷ ಸಮಿತಿಯ ವತಿಯಿಂದ, ಕುವೆಂಪು ಗೀತೆಗಳ ಗಾಯನ ಸ್ಪರ್ಧೆ ಏರ್ಪಡಿಸಿದೆ. ಜನವರಿ 5ರಂದು, ಬೆಳಗ್ಗೆ 10 ಗಂಟೆಗೆ ಇಸ್ರೊ ಬಡಾವಣೆ ಬಸ್ ನಿಲ್ದಾಣದ ಹತ್ತಿರದ ಶ್ರೀಶಾರದಾ ವಿದ್ಯಾನಿಕೇತನ (ಎಸ್‌ಎಸ್‌ವಿಎನ್) ಶಾಲೆಯ ಸಭಾಂಗಣದಲ್ಲಿ ಸ್ಪರ್ಧೆ ನಡೆಯಲಿದೆ. ಹತ್ತು ವರ್ಷದೊಳಗಿನ ಮಕ್ಕಳ ವಿಭಾಗ, ಹದಿನೆಂಟು ವರ್ಷದೊಳಗಿನ ಕಿರಿಯರ ವಿಭಾಗ ಹಾಗೂ ಅದಕ್ಕಿಂತ ಮೇಲ್ಪಟ್ಟ ಹಿರಿಯರ ವಿಭಾಗ- ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಉದಯೋನ್ಮುಖ ಕಲಾವಿದರಿಗೆ ಮಾತ್ರ ಅವಕಾಶ.
ವಿವರಗಳಿಗೆ: 94488 51781, ಶುಲ್ಕ: 50 ರೂ.
ಕುವೆಂಪು ಜನ್ಮದಿನ
ರಂಗದರ್ಶನ ಪ್ರದರ್ಶನ ಕಲಾಕೇಂದ್ರದ ವತಿಯಿಂದ ರಾಷ್ಟ್ರಕವಿ ಕುವೆಂಪು ಜನ್ಮದಿನವನ್ನು ಆಚರಿಸಲಾಗುತ್ತಿದೆ. ಆ ಪ್ರಯುಕ್ತ, “ಜಲ ಗಾರ’ ನಾಟಕದ ವಿಡಿಯೊ ಚಿತ್ರ ಪ್ರದರ್ಶನ ನಡೆಯಲಿದೆ. ನಿರ್ಮಾಣ ಬಿ.ಕೆ. ಶ್ರೀಧರ್, ನಿರ್ದೇಶನ ಮೈಕೋ ಶಂಕರ್ ಅವರದ್ದು.
ಎಲ್ಲಿ?: ವಿದ್ಯಾರಣ್ಯಪುರ ಹಿರಿಯ ನಾಗರಿಕರ ವೇದಿಕೆ, 2ನೇ ಅಡ್ಡರಸ್ತೆ, 1ನೇ ಬ್ಲಾಕ್, ಎಚ್‌ಎಂಟಿ ಬಡಾವಣೆ, ವಿದ್ಯಾರಣ್ಯಪುರ
ಯಾವಾಗ?: ಡಿ.30, ಸೋಮವಾರ, ಸಂಜೆ 6.15
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.