ಆಲಿವ್ ಪ್ಲಾನೆಟ್ನಲ್ಲಿ ಮಿಲಿಟರಿ ಜಾಕೆಟ್
Team Udayavani, Jan 7, 2017, 4:32 PM IST
ಮಿಲಿಟರಿ ಕ್ಯಾಪ್, ಮಿಲಿಟರಿ ಜಾಕೆಟ್, ಮಿಲಿಟರಿ ಟಿಷರ್ಟ್ ಹೀಗೆ ಮಿಲಿಟರಿ ಸ್ಟೈಲ್ ವಸ್ತುಗಳನ್ನು ಪ್ರೀತಿಸುವವರು ಬೆಂಗಳೂರಲ್ಲಿ ತುಂಬಾ ಜನ ಇದ್ದಾರೆ. ಅದರಲ್ಲೂ ಅಡ್ವೆಂಚರ್ ಇಷ್ಟ ಪಡುವವರಿಗಂತೂ ಈ ವಸ್ತುಗಳ ಮೇಲೆ ಪ್ರೀತಿ ಜಾಸ್ತಿ. ಟ್ರೆಕ್ಕಿಂಗ್ ಹೋಗುವವರು, ಟೂರ್ ಹೋಗುವವರಿಗೆಲ್ಲಾ ಈ ಮಿಲಿಟರಿ ವಸ್ತುಗಳ ಅವಶ್ಯಕತೆಯೂ ಜಾಸ್ತಿ. ಆದರೆ ಈ ವಸ್ತುಗಳು ಎಲ್ಲಾ ಕಡೆ ಸಿಗುವುದಿಲ್ಲ. ಈ ವಸ್ತುಗಳನ್ನು ಪಡೆಯಬೇಕಾದರೆ ನಿಮಗೊಂದು ಇಂಟರೆಸ್ಟಿಂಗ್ ತಾಣವಿದೆ. ಅದರ ಹೆಸರು ಆಲಿವ್ ಪ್ಲಾನೆಟ್.
ಏನಿದು ಆಲಿವ್ ಪ್ಲಾನೆಟ್?
ಮೂಲತಃ ಮಡಿಕೇರಿಯವರಾದ ಕ್ಯಾಪ್ಟನ್ ಚೇತನ್ ವೈ.ಕೆ. ಅವರು 2009ರಲ್ಲಿ ಆರಂಭಿಸಿದ ಸಂಸ್ಥೆ ಈ ಆಲಿವ್ ಪ್ಲಾನೆಟ್. ಚೇತನ್ ಆರ್ಮಿಯಲ್ಲಿದ್ದು ಬಂದವರು. ಅವರಿಗೆ ಮೊದಲಿಂದಲೂ ಮಿಲಿಟರಿ ವಸ್ತುಗಳೆಂದರೆ ಇಷ್ಟ. ಆದರೆ ಈ ವಸ್ತುಗಳೆಲ್ಲಾ ಎಲ್ಲಾ ಕಡೆ ಸಿಗುತ್ತಿರಲಿಲ್ಲ. ಹಾಗಾಗಿ ಅವರು ಆಲಿವ್ ಪ್ಲಾನೆಟ್ ಶುರು ಮಾಡಿದರು. ಅವರು ಪರಿಚಯಿಸಿದ್ದು ಡಾಗ್ ಟ್ಯಾಗ್ ಪ್ರೊಡಕ್ಟ್. ಈಗ ಆಲಿವ್ ಪ್ಲಾನೆಟ್ನಲ್ಲಿ ಸುಮಾರು ನಾಲ್ಕು ನೂರರಷ್ಟು ಮಿಲಿಟರಿ ಉತ್ಪನ್ನಗಳು ದೊರೆಯುತ್ತವೆ ಅನ್ನುತ್ತಾರೆ ಕ್ಯಾಪ್ಟನ್ ಚೇತನ್.
ಬೆಂಗಳೂರಿನಲ್ಲಿ ಅಡ್ವೆಂಚರ್ ಇಷ್ಟ ಪಡೋರು ತುಂಬಾ ಜನ ಇದ್ದಾರೆ. ಅವರು ಆಗಾಗ ಟೂರ್ ಹೋಗುತ್ತಾರೆ. ಕಾಡಿಗೆ ಟ್ರೆಕ್ ಹೋಗುತ್ತಾರೆ. ಹಾಗೆಲ್ಲಾ ಹೋಗುವಾಗ ಅದಕ್ಕೆ ತಕ್ಕ ವಸ್ತುಗಳು ಬೇಕಾಗುತ್ತವೆ. ಟೆಂಟ್ ಬೇಕು, ಕ್ಯಾಪ್, ಜಾಕೆಟ್ ಬೇಕು, ಕಾಡಿಗೆ ಹೋಗುತ್ತೀರಾದರೆ ಮಿಲಿಟರಿ ದಿರಿಸುಗಳು ಬೇಕೇ ಬೇಕು. ಅವೆಲ್ಲವೂ ಆಲಿವ್ ಪ್ಲಾನೆಟ್ನಲ್ಲಿ ಸಿಗುತ್ತದೆ. ಕ್ಯಾಂಪ್ ಮಾಡೋದಕ್ಕೆ ಬೇಕಾದ ಸಲಕರಣೆಗಳು, ಜಂಗಲ್ ಶೂಗಳು, ಬೆಲ್ಟ್ಗಳು, ಸ್ನೋ ಬೂಟ್ಗಳು, ಬೈನಾಕ್ಯುಲರ್ಗಳು, ಬ್ಯಾಗ್ಗಳು ಹೀಗೆ ಎಲ್ಲವೂ ಸಿಗುತ್ತವೆ. ಇಲ್ಲಿ ಸಿಗೋ ಕೆಲವು ವಸ್ತುಗಳು ಇಂಪೋರ್ಟೆಡ್ ವಸ್ತುಗಳು. ಹಾಗಾಗಿ ಯಾರಿಗೆಲ್ಲಾ ಈ ಮಿಲಿಟರಿ ವಸ್ತುಗಳ ಮೇಲೆ ಮೋಹವಿದೆಯೋ ಅವರೆಲ್ಲಾ ಆಲಿವ್ ಪ್ಲಾನೆಟ್ ಸಂಪರ್ಕಿಸಬಹುದು.
ಎಲ್ಲಿ- 16, ಫಸ್ಟ್ ಕ್ರಾಸ್, ಸ್ಯಾಂಡಿವ್ ಆರ್ಕಾರ್ಡ್ಸ್, ಕಟ್ಟಿಗೇನಹಳ್ಳಿ, ಜಾಲ ಹೋಬ್ಳಿ
ದೂ- 9141623338, 91413 38880
ಫೇಸ್ಬುಕ್- https://www.facebook.com/OlivePlanet/
ವೆಬ್ಸೈಟ್- http://www.oliveplanet.in/
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.