ಮಿಸ್ಟರಿಯಲ್ಲ ಹಿಸ್ಟರಿ!: ಪೂರ್ವ ಬೆಂಗಳೂರ ಇತಿಹಾಸ ಕಾರ್ಯಗಾರ
Team Udayavani, Jun 8, 2019, 2:55 PM IST
ವೈಟ್‌ಫೀಲ್ಡ್ ಎಂದಾಕ್ಷಣ ನಮಗೆ ಮೊದಲು ನೆನಪಾಗುವುದು ಕೆ.ಆರ್.ಪುರಂ ಸೇತುವೆ, ಅಲ್ಲಿನ ಟ್ರಾಫಿಕ್, ಗಾಜಿನ ಐಟಿ ಕಟ್ಟಡಗಳು. ಆದರೆ ಅದನ್ನು ಹೊರತಾದ ಬೇರೆಯದೇ ಕಥೆಯನ್ನು ಇತಿಹಾಸ ಹೇಳುತ್ತದೆ. ಅದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು. ವೈಟ್‌ಫೀಲ್ಡ್ ಸುತ್ತಮುತ್ತ ಸಿಕ್ಕ ಶಾಸನಗಳನ್ನು ಗಮನಿಸಿದರೆ ಆ ಸ್ಥಳ 1000 ವರ್ಷಗಳಷ್ಟು ಹಳೆಯದೆಂಬುದು ತಿಳಿದುಕೊಳ್ಳಬಹುದು. ಬೆಂಗಳೂರಿನ ಶಾಸನ ಕಲ್ಲುಗಳ ಸಂರಕ್ಷಣೆಗೆ ಟೊಂಕ ಕಟ್ಟಿ ನಿಂತಿರುವ ಸಾಫ್ಟ್ವೇರ್ ಉದ್ಯೋಗಿ ಉದಯ್‌ಕುಮಾರ್ ಈ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಬೆಂಗಳೂರೆಂದರೆ ಬರಿ ಐಟಿ ರಾಜಧಾನಿಯಲ್ಲ, ಬರೀ ಕಟ್ಟಡಗಳಲ್ಲ ಎನ್ನುವುದನ್ನು ತೋರಿಸುವುದು ಅವರ ಉದ್ದೇಶ. ಅದರೊಂದಿಗೆ ಆಧುನಿಕತೆಯ ಭರಾಟೆಯಲ್ಲಿ ನಮ್ಮ ಇತಿಹಾಸ ಮರೆತುಹೋಗಬಾರದು ಎನ್ನುವ ಕಾಳಜಿ ಅವರದು.
ಕಲ್ಲು ಕತೆಯ ಹೇಳಿದೆ!
ಬೆಂಗಳೂರು ಪೂರ್ವದಲ್ಲಿರುವ ಹೂಡಿ, ದೇವಸಂದ್ರ, ಪಟ್ಟಂದೂರು, ಕಾಡುಗೋಡಿ, ಇಮ್ಮಡಿಹಳ್ಳಿ, ವರ್ತೂರು, ಗುಂಜೂರು ಪ್ರದೇಶಗಳೂ 1000 ವರ್ಷಗಳಷ್ಟು ಇತಿಹಾಸವನ್ನು ಹೊಂದಿವೆ. ಅಲ್ಲಿ ಸಿಕ್ಕ ಶಾಸನ ಕಲ್ಲುಗಳು ಈ ಮಾಹಿತಿಗೆ ಸಾಕ್ಷ್ಯ ನುಡಿದಿವೆ. ಬೆಂಗಳೂರಿನಲ್ಲಿ ಸಾವಿರಾರು ಕೆರೆಗಳಿದ್ದ ಕಾಲವನ್ನು ಕಲ್ಪಿಸಿಕೊಳ್ಳುವುದು ಇಂದು ಕಷ್ಟಕರವಾದ ಕೆಲಸ. ಆದರೆ ಅಂಥದ್ದೊಂದು ಕಾಲದಲ್ಲಿ ಕೆತ್ತಲ್ಪಟ್ಟ ಶಾಸನಕಲ್ಲುಗಳು ಇಂದಿಗೂ ನಮ್ಮ ನಡುವೆಯೇ ಅಂದಿನ ಕಥೆಯನ್ನು ಸಾರುತ್ತಿದೆ. ಆಗಿನ ಕಾಲದಲ್ಲಿ ಇಲ್ಲಿ ವಾಸವಿದ್ದ ಜನರು ಯಾವ ಧರ್ಮವನ್ನು ಪಾಲಿಸುತ್ತಿದ್ದರು, ಯಾವ ಭಾಷೆಗಳನ್ನು ಮಾತಾಡುತ್ತಿದ್ದರು, ಯಾವೆಲ್ಲಾ ದೇವಸ್ಥಾನಗಳನ್ನು ಅವರು ಕಟ್ಟಿಸಿದರು, ಅಲ್ಲಿ ನಡೆದ ಕದನಗಳು ಮುಂತಾದ ಸ್ವಾರಸ್ಯಕರ ಮಾಹಿತಿ ಈ ಕಾರ್ಯಕ್ರಮದಿಂದ ಸಿಗುತ್ತದೆ. ಈ ಶಾಸನ ಕಲ್ಲುಗಳಿದ್ದಲ್ಲಿಗೆ ಕರೆದೊಯ್ಯಲಾಗುವುದು. ಅದರ ಮಹತ್ವವನ್ನು ಸ್ಥಳದಲ್ಲಿ ತಿಳಿಸಿಕೊಡಲಾಗುವುದು.
ಇದು ಪ್ಲ್ಯಾನ್
ಜೂನ್ 9ರಂದು ಬೆಳಿಗ್ಗೆ 8.30ಕ್ಕೆ ಕಾಡುಗೋಡಿಯ ಹೋಪ್ ಫಾರ್ಮ್(bit.ly/Hopefarm) ಬಳಿ ಸೇರುವುದು. ಅಲ್ಲಿಂದ ಕಾಡುಗೋಡಿ ಕುರಿತಾದ 7 ಶಾಸನಕಲ್ಲುಗಳಿದ್ದಲ್ಲಿಗೆ ಭೇಟಿ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಯಾವುದೇ ಶುಲ್ಕ ಇರುವುದಿಲ್ಲ. ಆದರೆ ಮುಂಚಿತವಾಗಿ ಆಸಕ್ತರು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳತಕ್ಕದ್ದು. ಪಾಲ್ಗೊಳ್ಳುವವರು ಸ್ವಂತ ವಾಹನ ವ್ಯವಸ್ಥೆಯನ್ನು ಮಾಡಿಕೊಂಡಿರಬೇಕು.
ಸಂಪರ್ಕ: 9845204268(ಉದಯ್)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.