“ನಾಗಮಂಡಲ’ ಮಧ್ಯದೊಳಗೆ…
Team Udayavani, May 19, 2018, 4:00 PM IST
ಟಿ.ಎಸ್. ನಾಗಾಭರಣ ನಿರ್ದೇಶನದ ನಾಗಮಂಗಲ ಸಿನಿಮಾವನ್ನು ಬಹುತೇಕರು ನೋಡಿರುತ್ತಾರೆ. ಅದರ ಪ್ರತಿ ದೃಶ್ಯಗಳು, ಹಾಡುಗಳು, ಹಾವಿನೊಂದಿಗೆ ಸರಸ ಸನ್ನಿವೇಶಗಳೆಲ್ಲ ಕಲಾಪ್ರಿಯರ ಕಣ್ಣಲ್ಲಿ ತಾಜಾ ಆಲ್ಬಮ್ಮಿನಂತಿದೆ. ಇದೇ ಕತೆಯ ನಾಟಕವನ್ನು ನೋಡಿದವರು ಬಹಳ ಕಡಿಮೆ. ಇದು ಆಗಾಗ್ಗೆ ಪ್ರದರ್ಶನಗೊಳ್ಳುತ್ತಿರುತ್ತದೆ. ಮೇ 23ರಂದು ರಂಗಶಂಕರದಲ್ಲಿ ಈ ಸಲ ಪ್ರಯೋಗ ಕಾಣುತ್ತಿದೆ.
ಆಗಷ್ಟೇ ಮದುವೆಯಾದ ರಾಣಿ ತನ್ನ ಗಂಡನ ಸಾಮೀಪ್ಯವನ್ನು ಸದಾ ಬಯಸುತ್ತಿರುತ್ತಾಳೆ. ಆದರೆ, ಆತ ಮನೆಯಿಂದ ಸದಾ ಹೊರಗೇ ಉಳಿದು ಪರಸ್ತ್ರೀ ಸಹವಾಸ ಮಾಡುತ್ತಿರುತ್ತಾನೆ. ಈ ಹೊತ್ತಿನಲ್ಲಿ ರಾಣಿಯ ವಿರಹವನ್ನು ತಣಿಸುವ ಕೆಲಸವನ್ನು ಒಂದು ಹಾವು ಮಾಡುತ್ತಿರುತ್ತೆ. ಗಿರೀಶ್ ಕಾರ್ನಾಡ್ ರಚಿಸಿರುವ ನಾಟಕವನ್ನು ಸುನಯನ ಪ್ರೇಮಚಂದರ್ ನಿರ್ದೇಶಿಸಿದ್ದಾರೆ. ಲೈರಿಯಾ ಕುರಿಯನ್, ನಳಿನಿ ನಾರಾಯಣಿ, ಶ್ರೀಹರಿ ಅಜಿತ್ ಬಣ್ಣ ಹಚ್ಚಿದ್ದಾರೆ.
ಯಾವಾಗ?: ಮೇ 23, ಬುಧವಾರ, ರಾ.7.30
ಎಲ್ಲಿ?: ರಂಗಶಂಕರ, ಜೆ.ಪಿ. ನಗರ
ಪ್ರವೇಶ: 100 ರೂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chamarajpete: ಕೆಚ್ಚಲು ಕೊಯ್ದ ಪ್ರಕರಣ: ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ
ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್ ಚಿರತೆ ಸೆರೆ ಕಾರ್ಯಾಚರಣೆ ಸ್ಥಗಿತ
Hubballi: ವರೂರಿನ ನವಗ್ರಹ ತೀರ್ಥಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕಕ್ಕೆ ವಿಧ್ಯುಕ್ತ ಚಾಲನೆ
Chikkaballapura: “ಈಶ’ದಲ್ಲಿ 54 ಅಡಿ ಎತ್ತರದ ತ್ರಿಶೂಲ ಲೋಕಾರ್ಪಣೆ
Chamarajpete: ಕೆಚ್ಚಲು ಕೊಯ್ದ ಕೇಸ್; 3 ಲಕ್ಷ ರೂ.ಮೌಲ್ಯದ 3 ಹಸು ಕೊಡಿಸಿದ ಸಚಿವ ಜಮೀರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.