ನಂದಿಯ ಮಡಿಲಲ್ಲಿ…ಮೋಡದ ಜೊತೆಯಲ್ಲಿ… 


Team Udayavani, Feb 4, 2017, 3:01 PM IST

14.jpg

 ತಿಳಿ ಮೋಡ. ಆಗಾಗ ಬಂದು ಮುಖಕ್ಕೆ ಅಪ್ಪಳಿಸಬೇಕು. ಬಿಸಿ, ಬಿಸಿ ಗಾಳಿ ಹತ್ತಿರಕ್ಕೂ ಕೂಡ ಬರಬಾರದು. ಸಾಕಪ್ಪಾ ಈ ಬೆಂಗಳೂರು ಸಹವಾಸ ಅಂತ ನಿಮ್ಮ ಮನಸ್ಸು ಹೇಳುತ್ತಿದ್ದರೆ ನೇರ ನಂದಿ ಬೆಟ್ಟಕ್ಕೆ ಹೋಗಿ. 

  ಅರೇ, ಇದರಲ್ಲೇ ವಿಶೇಷ ಅಂತ ಕೇಳಬೇಡಿ. 
 ನಂದಿ ಬೆಟ್ಟ ಋತುಮಾನಕ್ಕೆ ತಕ್ಕಂತೆ ಬದಲಾಗುತ್ತದೆ. ಹೊಸ, ಹೊಸ ಸೀರೆ ಉಡುವ ತರುಣಿಯಂತೆ ಕಾಣುತ್ತದೆ. ಈಗಂತೂ ನಂದಿ ನೋಡಲು ಇದೇ ಸರಿಯಾದ ಸಮಯ. ಬೆಟ್ಟದ ಮೇಲೆ ನಿಂತು ಒಮ್ಮೆ ಎರಡೂ ಕೈಯನ್ನು ಅಗಲಿಸಿ ನೋಡಿ. ಆಕಾಶದ ಮೋಡಗನ್ನು ನಿಮ್ಮನ್ನು ಮುತ್ತಿಕೊಂಡು ಹೋಗುತ್ತದೆ. ಕಣ್ಣ ದಾಟಿಸಿದಷ್ಟೂ ವಿಶಾಲವಾದ ಮೋಡಸಮುದ್ರ. ಆಗಾಗ ಅಲೆಯಂತೆ ಅಪ್ಪಳಿಸುವ ಗಾಳಿ. ನೀವು ತೀರ ಅದೃಷ್ಟವಂತರಾದರೆ ಮೋಡಗಳನ್ನು ಹಿಡಿದು ಕೆನ್ನೆಗೆ ಮೆತ್ತಿಕೊಳ್ಳಬಹುದು. ಅಷ್ಟೊಂದು ಮೋಡದಾಟ.

 ಬೆಳ್ಳಂಬೆಳಗ್ಗೆ ಎದ್ದರೆ ಬೆಂಗಳೂರ ತಾಪ ಮರೆಸುವಷ್ಟು ತಂಪು, ತಂಪು. ಗಿರಿಶೃಂಗಗಳಿಂದ ಕೂಗುವ ಥರಹೇವಾರಿ ಪಕ್ಷಿಗಳ ಕಲರವವೇ ಜೋಗಳವಾದೀತು.  ನಂದಿಗೆ ಹೋದರೆ ಬೆಳಗಿನ ವಾಕಿಂಗ್‌ ಮರೆಯಬೇಡಿ. ಸಸ್ಯಸಂಕುಲದ ಮಧ್ಯೆ ವಾಕ್‌ ಮಾಡೋದು ಆರೋಗ್ಯ ಒಳ್ಳೆಯದು. ಇಲ್ಲಿ ಅಪರೂಪದ ಗಿಡಮೂಲಿಕೆಗಳೂ ಇರುವುದರಿಂದ ವಿಶಿಷ್ಟವಾದ ವಾಕ್‌ ಅನುಭೂತಿಯಾದೀತು. 

 ನಂದಿ ಬೆಟ್ಟ 4,851 ಅಡಿ ಎತ್ತರದಲ್ಲಿದೆ. ಬೆಟ್ಟವನ್ನು ಹತ್ತುತ್ತಿದ್ದಾಗೇ ಬೇಸಿಗೆಯ ಹಬೆ ಇಳಿಯಾತ್ತಾ ಬೆಟ್ಟದ ಪಾದಕ್ಕೆ ಸೇರಿರುತ್ತದೆ. 

 ನಂದಿ ಬೆಟ್ಟ ಹತ್ತಲು ಪ್ರತ್ಯೇಕ ಮೆಟ್ಟಿಲುಗಳೂ ಇವೆ. ಸಾಹಸಿಗರು ಈ ಮೂಲಕವೂ ಬೆಟ್ಟ ಹತ್ತಬಹುದು. ಮೆದುಹೃದಯಿಗಳಿಗೆ ಇದಕ್ಕಿಂತ ರಸ್ತೆಯ ಮೂಲಕ ಸಾಗುವುದೇ ಸೇಫ‌ು. 

 ಬೆಟ್ಟದ ಮೇಲೆ ತೋಟಗಾರಿಕೆ ಇಲಾಖೆಯ ಗೆಸ್ಟ್‌ಹೌಸ್‌ ಇದೆ. ರಾತ್ರಿ ತಂಗುವ ವ್ಯವಸ್ಥೆಯ ಕೂಡ ಇದೆ. ತಿಂಡಿ-ಊಟಕ್ಕೆ ಯಾವುದೇ ಚಿಂತೆ ಇಲ್ಲ.  ಬೆಟ್ಟ ಹತ್ತಿದರೆ ಇಲ್ಲೊಂದು ವಿಶಿಷ್ಟವಾದ ಪ್ರಪಂಚವೇ ತೆರೆದುಕೊಳ್ಳುತ್ತದೆ. 

  ನಂದಿ ಬೆಟ್ಟದ ಮೇಲೆ ಟಿಪ್ಪು ಡ್ರಾಪ್‌ ಇದೆ. ಈಗಂತೂ ರೂಪ್‌ವೇ ನಿರ್ಮಾಣ ಮಾಡಿರುವುದರಿಂದ ಬೆಟ್ಟದ ಮೇಲಿಂದ ಜಗತ್ತನ್ನು ನೋಡಬಹುದು. ಸಂಜೆ ಮತ್ತು ಬೆಳಗ್ಗೆಯ ಹೊತ್ತು ಇಲ್ಲಿ ಸುರಿಯುವ ಮಂಜನ್ನು ಕಣ್ತುಂಬಿಕೊಳ್ಳುವುದೇ ಸ್ವರ್ಗ ಸುಖ. 

 ತಲುಪುವ ಮಾರ್ಗ
  ಬೆಂಗಳೂರಿನಿಂದ ನಂದಿ ಬೆಟ್ಟ ಕೇವಲ ಒಂದೂವರೆ ಗಂಟೆ ಪ್ರಯಾಣ. ಸುಮಾರು 60ಕಿ.ಮೀ ದೂರದಲ್ಲಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೇವಲ 30ಕಿ.ಮೀ ಅಂತರ. ಬಸ್ಸುಗಳು ಬೇ‌ಕಾದಷ್ಟಿದೆ. ಸ್ವಂತ ವಾಹನವಿದ್ದರೆ ಅನುಕೂಲ. ಇಲ್ಲಿ ವಸತಿ, ಊಟ ಸೌಕರ್ಯವಿದೆಯಾದರೂ ಮೊದಲೇ ಬುಕ್‌ ಮಾಡಿ ಹೋಗಬೇಕು. ನಂದಿಯ ಹೊರತಾಗಿ ನಂದಿ ಕೆಳಗೆ ಪುರಾತನ ಭೋಗ ನಂದೀಶ್ವರ ದೇವಾಲಯವಿದೆ. ದಾರಿಯ ಮಧ್ಯೆ ದೇವನಹಳ್ಳಿ, ಅಲ್ಲಿರುವ ಟಿಪ್ಪುಸುಲ್ತಾನರ ಕೋಟೆ, ಟಿಪ್ಪು ಹುಟ್ಟಿದ ಸ್ಥಳವನ್ನು ನೋಡಬಹುದು. 

ಟಾಪ್ ನ್ಯೂಸ್

BBK11: ಬಿಗ್‌ ಬಾಸ್‌ ಮನೆಯಲ್ಲಿ ಶೋಭಾ ಆರ್ಭಟಕ್ಕೆ ಗಪ್‌ ಚುಪ್‌ ಆದ ಮಂಜು.!

BBK11: ಬಿಗ್‌ ಬಾಸ್‌ ಮನೆಯಲ್ಲಿ ಶೋಭಾ ಆರ್ಭಟಕ್ಕೆ ಗಪ್‌ ಚುಪ್‌ ಆದ ಮಂಜು.!

Maharastra: ಕಾರಿನ ಮೇಲೆ ಕಲ್ಲು ತೂರಾಟ… ಮಾಜಿ ಸಚಿವ ಅನಿಲ್ ದೇಶಮುಖ್ ಹಣೆಗೆ ಗಾಯ

Maharastra: ಕಾರಿನ ಮೇಲೆ ಕಲ್ಲು ತೂರಾಟ… ಮಾಜಿ ಸಚಿವ ಅನಿಲ್ ದೇಶಮುಖ್ ಹಣೆಗೆ ಗಾಯ

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್‌ ಭೀತಿ!

Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್‌ ಭೀತಿ!

IPL-2025: ಓಂಕಾರ್‌ ಸಾಳ್ವಿ ಆರ್‌ಸಿಬಿ ಬೌಲಿಂಗ್‌ ಕೋಚ್‌

IPL-2025: ಓಂಕಾರ್‌ ಸಾಳ್ವಿ ಆರ್‌ಸಿಬಿ ಬೌಲಿಂಗ್‌ ಕೋಚ್‌

Siddu-Somanna

MUDA: ಸುಮ್ನಿರಯ್ಯ ಗೊತ್ತಿಲ್ದೆ ಮಾತಾಡ್ತಿಯಾ: ಸೋಮಣ್ಣಗೆ ಸಿದ್ದರಾಮಯ್ಯ ಪ್ರೀತಿಯ ಗದರಿಕೆ!

Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!

Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

BBK11: ಬಿಗ್‌ ಬಾಸ್‌ ಮನೆಯಲ್ಲಿ ಶೋಭಾ ಆರ್ಭಟಕ್ಕೆ ಗಪ್‌ ಚುಪ್‌ ಆದ ಮಂಜು.!

BBK11: ಬಿಗ್‌ ಬಾಸ್‌ ಮನೆಯಲ್ಲಿ ಶೋಭಾ ಆರ್ಭಟಕ್ಕೆ ಗಪ್‌ ಚುಪ್‌ ಆದ ಮಂಜು.!

3-hunsur

Hunsur: ಚಿನ್ನದ ಸರ ಅಪಹರಿಸಿದ್ದ ಇಬ್ಬರು ಆರೋಪಿಗಳ ಬಂಧನ

Maharastra: ಕಾರಿನ ಮೇಲೆ ಕಲ್ಲು ತೂರಾಟ… ಮಾಜಿ ಸಚಿವ ಅನಿಲ್ ದೇಶಮುಖ್ ಹಣೆಗೆ ಗಾಯ

Maharastra: ಕಾರಿನ ಮೇಲೆ ಕಲ್ಲು ತೂರಾಟ… ಮಾಜಿ ಸಚಿವ ಅನಿಲ್ ದೇಶಮುಖ್ ಹಣೆಗೆ ಗಾಯ

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್‌ ಭೀತಿ!

Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್‌ ಭೀತಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.