ಅಸ್ಸಾಂ ಬಿದಿರಿನ ಪೀಟೋಪಕರಣಗಳು ಬೇಕೇ?


Team Udayavani, Jan 21, 2017, 4:15 PM IST

6544.jpg

ಅಸ್ಸಾಂ ಬಿದಿರಿಗೆ ವಿಶ್ವಮಾನ್ಯತೆ ಇದೆ. ಈ ಬಿದಿರು ಸುದೀರ್ಘ‌ ಬಾಳಿಕೆ ಬರುತ್ತದೆ ಅನ್ನುವುದು ಒಂದು ಕಾರಣ. ಅಸ್ಸಾಂ ಬಿದಿರಿನಲ್ಲಿ ಮಾಡಿರುವ ಪೀಠೊಪಕರಣಗಳು, ಕುಸುರಿ ಕೆತ್ತನೆಗಳಲ್ಲಿ ಅದ್ಭುತ ಫಿನಿಶಿಂಗ್‌ ಇರುತ್ತೆ, ಪ್ರಾದೇಶಿಕ ಸೊಗಡು ಇರುತ್ತೆ, ಎಲ್ಲಕ್ಕಿಂತ ಮುಖ್ಯವಾಗಿ ಅಸ್ಸಾಂ ಬಿದಿರಿನ ಕಲಾಪರಂಪರೆಗೆ ಸಾವಿರಾರು ವರ್ಷದ ಇತಿಹಾಸ ಇದೆ. ನಮ್ಮ ಬೆಂಗಳೂರಲ್ಲೂ ಅಸ್ಸಾಂ ಬಿದಿರಿನ ತರಹೇವಾರಿ ಪೀಠೊಪಕರಣಗಳು ಲಭ್ಯವಿವೆ. ಜೆಪಿ ನಗರದಲ್ಲಿರೋ ಅಸ್ಸಾಂ ಬ್ಯಾಂಬೂ ಫ‌ರ್ನಿಚರ್‌ ಎಂಬ ಶಾಪ್‌ನಲ್ಲಿ ಅಸ್ಸಾಮಿ ಬಿದಿರಿನ ಸೋಫಾ, ಆರಾಮ ಚೇರ್‌, ಬೆಡ್‌, ದಿವಾನ್‌, ಬಾರ್‌ ಕೌಂಟರ್‌, ಹಟ್‌ಗಳಿಂದ ಹಿಡಿದು ಕರಕುಶಲ ವಸ್ತುಗಳು ಸಿಗುತ್ತವೆ.

ಬ್ಯಾಂಬೂ ಸೋಫಾ : ಬಿದಿರಿನ ಸೋಫಾಗಳು ಮಾಮೂಲಾಗಿ ಎಲ್ಲ ಕಡೆ ಸಿಗುತ್ತವೆ. ಆದರೆ ಈ ಸೋಫಾಗಳ ವಿನ್ಯಾಸ ಮಾಮೂಲಿಗಿಂತ ಭಿನ್ನ. ಬಿದಿರಿನ ಆಕಾರವನ್ನು, ದೇಸಿಯತೆಯನ್ನು ಉಳಿಸಿಕೊಂಡೇ ನಿರ್ಮಿಸಿರುವ ಸೋಫಾಗಳು. ದಪ್ಪ ಹಾಗೂ ತೆಳುವಿನ ಬಿದಿರ‌ನ್ನು ಬಳಸಿ ಇವುಗಳನ್ನು ನಿರ್ಮಿಸಲಾಗಿದೆ. ತಳಭಾಗಕ್ಕೆ ಬಿದಿರಿನ ಹೆಣಿಗೆ ಇದೆ. ಪರಿಸರ ಸ್ನೇಹಿ, ದೇಸಿತನವನ್ನು ಉಳಿಸಿಕೊಂಡಂತಿರುವ ಈ ಸೋಫಾಗಳು ವಿಭಿನ್ನತೆಯಿಂದ ಗಮನಸೆಳೆಯುತ್ತವೆ.

ಬಿದಿರಿನ ಮಂಚ: ಸಿಟಿಯಲ್ಲಿರುವವರಿಗೆ ಮರದ ಮೇಲೆ ಬೊಡ್ಡೆಯ ಮೇಲೆ ಮಲಗಿದ ಅನುಭವವಿರಲಿಕ್ಕಿಲ್ಲ. ಬಿದಿರಿನ ಮಂಚ ನಿಮಗೆ ಮರದ ಬೆಚ್ಚನೆಯ ಅನುಭೂತಿ ಕೊಡುತ್ತೆ. ನಿದ್ದೆಯೂ ಚೆನ್ನಾಗಿ ಬರುತ್ತೆ. ಆಧುನಿಕ ಮತ್ತು ಸಾಂಪ್ರದಾಯಿಕ ಮಾದರಿಯ ಬಿದಿರಿನ ಮಂಚಗಳು ನಿಮಗಿಷ್ಟವಾಗಬಹುದು.

ಬಿದಿರಿನ ಗುಡಿಸಲು : ಮನೆಯಿರುವ ಜಾಗ ವಿಶಾಲವಾಗಿದ್ದರೆ ಗಾರ್ಡನ್‌ ಏರಿಯಾದಲ್ಲಿ ಬಿದಿರಿನ ಗುಡಿಸಲು ಹಾಕಿಕೊಳ್ಳಬಹುದು. ಸಂಜೆ ಪುಸ್ತಕ ಓದ್ತಾ ಅಥವಾ ಲ್ಯಾಪ್‌ಟಾಪ್‌ನಲ್ಲಿ ವರ್ಕ್‌ಮಾಡುತ್ತ ಇಲ್ಲಿ ಕೂರಬಹುದು. ರಿಲ್ಯಾಕ್ಸ್‌ ಆಗಲು ಹೇಳಿ ಮಾಡಿಸಿದ ಹಾಗಿದೆ ಈ ಗುಡಿಸಲು. ಗಾರ್ಡನ್‌ ಇಲ್ಲದವರು ಟೆರೆಸ್‌ ಮೇಲೂ ಇಂಥ ಗುಡಿಸಲು ಹಾಕ್ಕೊಳ್ಳಬಹುದು.

ಇದಲ್ಲದೇ ಬ್ಯಾಂಬೂ ಬಾರ್‌ ಕೌಂಟರ್‌ ಗಳನ್ನೂ ಇವರು ನಿರ್ಮಿಸಿಕೊಡುತ್ತಾರೆ. ಡ್ರೆಸ್ಸಿಂಗ್‌ ಟೇಬಲ್‌, ಬ್ಯಾಂಬೂ ಕಬೋರ್ಡ್‌ಗಳೂ ಇವೆ. 

ಎಲ್ಲಕ್ಕಿಂತ ಹೆಚ್ಚಾಗಿ ಇವರು ಅಸ್ಸಾಮಿ ಬಿದಿರಿನ ಮನೆಯನ್ನೂ ನಿರ್ಮಿಸಿಕೊಡುತ್ತಾರೆ. 
ಎಲ್ಲಿ?: ಅಸ್ಸಾಂ ಬ್ಯಾಂಬೂ ಫ‌ರ್ನಿಚರ್‌, ಆರ್‌ ವಿ ಡೆಂಟಲ್‌ ಕಾಲೇಜ್‌ ಎದುರು, ಐಟಿಐ ಲೇಔಟ್‌, ಜೆಪಿ ನಗರ

ಸಂಪರ್ಕ: 9740002754
ವಿವರಗಳಿಗೆ: http://www.assambamboofurniture.com/home-page.html

ಟಾಪ್ ನ್ಯೂಸ್

Perth Test: Jaiswal scores century; record partnership with Rahul

Perth Test: ಜೈಸ್ವಾಲ್‌ ಶತಕದಾಟ; ರಾಹುಲ್‌ ಜತೆ ದಾಖಲೆಯ ಜೊತೆಯಾಟ

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

5–COPD

COPD: ಕ್ರೋನಿಕ್‌ ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ (ಸಿಒಪಿಡಿ)

Maryade Prashne Review

Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ

4-Laparoscopic

Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ

3-darshan

Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್‌: ಫೋಟೋ ಸಾಕ್ಷ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

7-bus

Chikkamagaluru: ಸರ್ಕಾರಿ ಬಸ್-ಲಾರಿ ಮುಖಾಮುಖಿ ಡಿಕ್ಕಿ; ಹಲವರಿಗೆ ಗಾಯ

Perth Test: Jaiswal scores century; record partnership with Rahul

Perth Test: ಜೈಸ್ವಾಲ್‌ ಶತಕದಾಟ; ರಾಹುಲ್‌ ಜತೆ ದಾಖಲೆಯ ಜೊತೆಯಾಟ

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

5–COPD

COPD: ಕ್ರೋನಿಕ್‌ ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ (ಸಿಒಪಿಡಿ)

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.