ಚೈನೀಸ್‌ ಫ‌ುಡ್‌ ಬೇಕಾದರೆ ನೆಟ್ಟಕಲ್ಲಪ್ಪ ಸರ್ಕಲ್‌ಗೆ ಹೋಗಿ


Team Udayavani, Mar 11, 2017, 4:22 PM IST

18.jpg

ಮುಂಚೆಲ್ಲಾ ಒಂದು ಮಾತಿತ್ತು: ಚಂದ್ರನ ಮೇಲೆ ಹೋದರೂ, ಅಲ್ಲಿ ಟೀಗೆ ಮೋಸವಿಲ್ಲ ಅಂತ. ಏಕೆಂದರೆ, ಮಲಯಾಳಿಗಳು ಯಾವುದೋ ರಾಕೆಟ್‌ ಹತ್ತಿಕೊಂಡು ಬಂದು, ಅಲ್ಲಿ ಚಾಯ್‌ ಚಾಯ್‌ ಅಂತ ಟೀ ಮಾರುತ್ತಿರುತ್ತಾರೆ ಎಂಬ ಜೋಕ್‌ ಇತ್ತು. ಈಗ ಅದಕ್ಕೆ ಇನ್ನಷ್ಟು ಸೇರಿಸುವುದಾದರೆ, ಪಕ್ಕದಲ್ಲೇ ಗೋಬಿ ಮಂಚೂರಿ ಗಾಡಿಯೊಂದಿರುತ್ತದೆ. ಆ ಮಟ್ಟಿಗೆ ಚೈನೀಸ್‌ ಫ‌ುಡ್‌ ಜನಪ್ರಿಯವಾಗಿದೆ. ಒಂದು ಪಕ್ಷದಲ್ಲಿ ಚೀನಾದಲ್ಲಿ ಚೈನೀಸ್‌ ಖಾದ್ಯಗಳು ಸಿಗದಿರಬಹುದು. ಆದರೆ, ಭಾರತದಲ್ಲಿ ಮಾತ್ರ ಮೋಸವಿಲ್ಲ. ಪ್ರತಿ ಏರಿಯಾದಲ್ಲೂ ಗೋಬಿ, ನೂಡಲ್ಸ್‌, ಫ್ರೈಡ್‌ ರೈಸ್‌ ಮಾರುವ ಅಂಗಡಿ, ಗಾಡಿ, ಹೋಟಲ್‌, ರೆಸ್ಟೋರೆಂಟ್‌ ಏನಾದರೂ ಇದ್ದೇ ಇರುತ್ತದೆ. ಆ ಮಟ್ಟಿಗೆ ಚೈನೀಸ್‌ ಫ‌ುಡ್‌ ಇಲ್ಲಿ ಜನಪ್ರಿಯವಾಗಿದೆ. ಈಗ ಇಡ್ಲಿ, ದೋಸೆ, ಚಟ್ನಿಗಳಿಗೆ ಫೇಮಸ್‌ ಆಗಿರುವ ಬಸವನಗುಡಿಯಲ್ಲೊಂದು ಪಕ್ಕಾ ಚೈನೀಸ್‌ ಹೋಟೆಲ್‌ವೊಂದು ಕಳೆದ ಕೆಲವು ತಿಂಗಳುಗಳಿಂದ ಕಾರ್ಯನಿರ್ವಹಿಸುತ್ತಿದೆ. ಅದರ ಹೆಸರು ಚೈನೀಸ್‌ ಸ್ಕ್ವೇರ್‌.

ರಸ್ತೆಗೊಂದು ಗೋಬಿ ಮಂಚೂರಿ ಗಾಡಿ ಸಿಗುತ್ತದೆ ಈಗ. ಅಲ್ಲಿ ತಿನ್ನೋಕೆ ಭಯ. ಸ್ವಲ್ಪ ದೊಡ್ಡ ಹೋಟೆಲ್‌ಗೆ ಹೋಗೋಣ ಅಂದರೆ, ಅಲ್ಲಿ ರೇಟು ಜಾಸ್ತಿ. ಹೀಗೆಲ್ಲಾ ಇರುವಾಗ ಚೈನೀಸ್‌ ಫ‌ುಡ್‌ ತಿನ್ನೋದು ಕಷ್ಟ ಎಂಬ ತೀರ್ಮಾನಕ್ಕೆ ಬಂದು ಬಿಡಬೇಡಿ. ಆ ಕಡೆ ಆರಕ್ಕೂ ಏರದ, ಈ ಕಡೆ ಮೂರಕ್ಕೂ ಇಳಿಯದ ಒಂದು ಚೈನೀಸ್‌ ಜಾಯಿಂಟ್‌ ಇದೆ. ಹೆಸರು ಚೈನೀಸ್‌ ಸ್ಕ್ವೇರ್‌ ಅಂತ. ಬಸವನಗುಡಿಯ ನೆಟ್ಟಕಲ್ಲಪ್ಪ ಸರ್ಕಲ್‌ ಬಸ್‌ಸ್ಟಾಂಡ್‌ ಹಿಂಭಾಗದಲ್ಲೇ ಈ ಚೈನೀಸ್‌ ಸ್ಕ್ವೇರ್‌ ಇದೆ. ಈ ಚೈನೀಸ್‌ ಸ್ಕ್ವೇರ್‌ನ ವಿಶೇಷತೆಯೆಂದರೆ, ಕಡಿಮೆ ಬೆಲೆಯ ಆರೋಗ್ಯಕರ ಚೈನೀಸ್‌ ಫ‌ುಡ್‌.

ಚೈನೀಸ್‌ ಫ‌ುಡ್‌ ಎಂದರೆ ಸಾಕು, ಮೊದಲು ನೆನಪಿಗೆ ಬರುವ ಖಾದ್ಯಗಳೆಂದರೆ ಗೋಬಿ, ನೂಡಲ್ಸ್‌ ಮತ್ತು ಫ್ರೈಡ್‌ ರೈಸ್‌. ಈ ಮೂರು ಶೈಲಿಗಳು ಚೈನೀಸ್‌ ಫ‌ುಡ್‌ನ‌ ಆಧಾರಸ್ತಂಭಗಳೆಂದರೆ ತಪ್ಪಲ್ಲ. ಈ ಮೂರು ಶೈಲಿಯಲ್ಲೇ ಹಲವಾರು ಖಾದ್ಯಗಳನ್ನು ಇಲ್ಲಿ ಮಾಡಿಕೊಡಲಾಗುತ್ತದೆ.

ಪ್ರಮುಖವಾಗಿ ಇಲ್ಲಿ ಸೂಪ್‌ನಲ್ಲಿ ಐದು ತರಹದ ಸೂಪ್‌ಗ್ಳಿವೆ. ಹಾಟ್‌ ಆ್ಯಂಡ್‌ ಸೌರ್‌, ಸ್ವೀಟ್‌ ಕಾರ್ನ್, ವೆಜ್‌ ಮಂಚೂರಿ, ವೆಜ್‌ ಕ್ಲಿಯರ್‌ ಮತ್ತು ಯಮ್ಮಿ ಟೊಮೇಟೋ ಸೂಪ್‌ಗ್ಳು ಇಲ್ಲಿ ಸಿಗುತ್ತವೆ. ಈ ಸೂಪ್‌ಗ್ಳಲ್ಲಿ ಯಾವುದನ್ನೇ ತೆಗೆದುಕೊಂಡರೂ 15 ರೂಪಾಯಿ ಮಾತ್ರ. ಇನ್ನು ವೆಜ್‌ ಫ್ರೈಡ್‌ ರೈಸ್‌ ಜೊತಗೆ ಪನ್ನೀರ್‌ ಫ್ರೈಡ್‌ ರೈಸ್‌, ಮಶ್ರೂಮ್‌ ಫ್ರೈಡ್‌ ರಸ್‌ ಮತ್ತು ಸಿಜುವಾನ್‌ ಫ್ರೈಡ್‌ ರೈಸ್‌ ರೈಸ್‌ ಐಟಂಗಳೂ ಇಲ್ಲಿ ಸಿಗುತ್ತವೆ. ನೂಡಲ್ಸ್‌ನಲ್ಲೂ ಅಷ್ಟೇ. ನಾಲ್ಕು ವಿಧ. ವೆಜ್‌ ನೂಡಲ್ಸ್‌, ಪನ್ನೀರ್‌ ನೂಡಲ್ಸ್‌, ಮಶ್ರೂಮ್‌ ನೂಡಲ್ಸ್‌ ಮತ್ತು ಸಿಜುವಾನ್‌ ನೂಡಲ್ಸ್‌ ಈ ಚೈನೀಸ್‌ ಸ್ಕ್ವೇರ್‌ನ ಸ್ಪೆಷಾಲಿಟಿ. ರೈಸ್‌ ಮತ್ತು ನೂಡಲ್ಸ್‌ನಲ್ಲಿ 40 ರೂಪಾಯಿಗಳಿಂದ ಶುರುವಾಗಿ, 70ರವರೆಗೂ ಹಲವು ಖಾದ್ಯಗಳು ಸಿಗುತ್ತವೆ.

ಇವೆಲ್ಲಾ ಮೇಯ್ನ ಮೆನು ಕಥೆ. ಸ್ಟಾರrರ್ನಲ್ಲಿ ಗೋಬಿ ಮಂಚೂರಿಯನ್‌, ಗೋಬಿ ಚಿಲ್ಲಿ, ಪನ್ನೀರ್‌ ಮಂಚೂರಿಯನ್‌, ಪನ್ನೀರ್‌ ಚಿಲ್ಲಿ, ಬೇಬಿ ಕಾರ್ನ್ ಮಂಚೂರಿಯನ್‌, ಬೇಬಿ ಕಾರ್ನ್ ಚಿಲ್ಲಿ, ಫಿಂಗರ್‌ ಚಿಪ್ಸ್‌ ಮತ್ತು ವೆಜ್‌ ಸ್ಪ್ರಿಂಗ್‌ಗಳು ಇಲ್ಲಿಯ ಸ್ಪೆಷಾಲಿಟಿ. ಇದರ ಜೊತೆಗೆ ಫ್ರೆಶ್‌ ಚೂÂಸ್‌ಗಳು, ಮಿಲ್ಕ್ಶೇಕ್‌ಗಳು ಸಿಗುತ್ತವೆ.

ಚೈನೀಸ್‌ ಫ‌ುಡ್‌ ಬೇಕೆಂದರೆ, ಅದರಲ್ಲೂ ನಿಮ್ಮ ಮನೆ ನೆಟ್ಟಕಲ್ಲಪ್ಪ ಸರ್ಕಲ್‌ ಆಸುಪಾಸಿನಲ್ಲೇಲಾದರೂ ಇದ್ದರೆ, ಒಮ್ಮೆ ಚೈನೀಸ್‌ ಸ್ಕ್ವೇರ್‌ ಟ್ರೈ ಮಾಡಿ ಬನ್ನಿ.

ಟಾಪ್ ನ್ಯೂಸ್

Delhi: ಆಮ್‌ ಆದ್ಮಿಯ ಮಾಜಿ ಶಾಸಕ ಸುಖ್ಬೀರ್‌ ದಲಾಲ್‌ ಬಿಜೆಪಿ ಸೇರ್ಪಡೆ, ಕೇಜ್ರಿಗೆ ಹಿನ್ನಡೆ

Delhi: ಆಮ್‌ ಆದ್ಮಿಯ ಮಾಜಿ ಶಾಸಕ ಸುಖ್ಬೀರ್‌ ದಲಾಲ್‌ ಬಿಜೆಪಿ ಸೇರ್ಪಡೆ, ಕೇಜ್ರಿಗೆ ಹಿನ್ನಡೆ

Nodidavaru Enanthare Movie: ನವೀನ್‌ ಶಂಕರ್‌ ಚಿತ್ರದ ಟೀಸರ್‌ ಬಂತು

Nodidavaru Enanthare Movie: ನವೀನ್‌ ಶಂಕರ್‌ ಚಿತ್ರದ ಟೀಸರ್‌ ಬಂತು

Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾವು

Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾ*ವು

Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್‌ ಸಿಇಒ ಸುಂದರ್‌ ಪಿಚೈ

Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್‌ ಸಿಇಒ ಸುಂದರ್‌ ಪಿಚೈ

Arrest Warrant Against Robin Uthappa

Arrest Warrant: ರಾಬಿನ್ ಉತ್ತಪ್ಪ ವಿರುದ್ದ ಬಂಧನ ವಾರೆಂಟ್;‌ ಜೈಲು ಪಾಲಾಗ್ತಾರಾ ಕ್ರಿಕೆಟಿಗ

Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ

Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ

Why is there a hesitation to name the M. Chinnaswamy stand after Shantha Rangaswamy? What is the controversy?

M. Chinnaswamy ಸ್ಟಾಂಡ್‌ಗೆ ಶಾಂತಾ ರಂಗಸ್ವಾಮಿ ಹೆಸರಿಡಲು ಯಾಕೆ ಹಿಂದೇಟು? ಏನಿದು ವಿವಾದ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

6(1

Kundapura: ಕಸದಿಂದಲೇ ಕಲಾಕೃತಿ; ಕಾಲ್ತೋಡಿನಲ್ಲೊಂದು ಸುಂದರ ಅಂಗನವಾಡಿ

Delhi: ಆಮ್‌ ಆದ್ಮಿಯ ಮಾಜಿ ಶಾಸಕ ಸುಖ್ಬೀರ್‌ ದಲಾಲ್‌ ಬಿಜೆಪಿ ಸೇರ್ಪಡೆ, ಕೇಜ್ರಿಗೆ ಹಿನ್ನಡೆ

Delhi: ಆಮ್‌ ಆದ್ಮಿಯ ಮಾಜಿ ಶಾಸಕ ಸುಖ್ಬೀರ್‌ ದಲಾಲ್‌ ಬಿಜೆಪಿ ಸೇರ್ಪಡೆ, ಕೇಜ್ರಿಗೆ ಹಿನ್ನಡೆ

5(1

ಹೆಬ್ಬಾಗಿಲಿನಲ್ಲಿ ಆರಂಭವಾದ ಶಾಲೆ ಇಂದು ಈ ಊರ ಮಕ್ಕಳ ಪಾಲಿನ ಶಿಕ್ಷಣದ ಹೆಬ್ಬಾಗಿಲೇ ಆಗಿದೆ

Nodidavaru Enanthare Movie: ನವೀನ್‌ ಶಂಕರ್‌ ಚಿತ್ರದ ಟೀಸರ್‌ ಬಂತು

Nodidavaru Enanthare Movie: ನವೀನ್‌ ಶಂಕರ್‌ ಚಿತ್ರದ ಟೀಸರ್‌ ಬಂತು

4

Kundapura ದೊಡ್ಡಾಸ್ಪತ್ರೆಗೆ ವೈದ್ಯರ ಕೊರತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.