ಪೌಲಸ್ಥ್ಯನ ಪ್ರಣಯದ ಹೊಸ ಮೆರುಗು


Team Udayavani, Aug 5, 2017, 5:03 PM IST

56666.jpg

ರಾಮಾಯಣ ಮಹಾಕಾವ್ಯದಿಂದ ಸಾಕಷ್ಟು ನಾಟಕಗಳು ರಂಗಕ್ಕೆ ಜಿಗಿದಿವೆ. “ಪೌಲಸ್ಥ್ಯನ ಪ್ರಣಯ ಕಥೆ’ ಎಂಬ ಹೊಸ ಪ್ರಯೋಗವೂ ರಾಮಾಯಣದ ಇನ್ನೊಂದು ಮಜಲು. ಇತ್ತೀಚೆಗೆ “ಸೇವಾಸದನ’ದಲ್ಲಿ ಸಂಧ್ಯಾ ಕಲಾವಿದರು ಅಭಿನಯಿಸಿದ ಈ ನಾಟಕ “ರಾವಣನ ದೃಷ್ಟಿಯಲ್ಲಿ ಮೂಡಿಬಂದ ರಾಮಾಯಣ’ ದ ಉತ್ತಮ ಪರಿಕಲ್ಪನೆಯನ್ನು ಹೊಂದಿದ್ದು, ಇಲ್ಲಿ ಸಾಕಷ್ಟು ಒಳನೋಟಗಳು ಇದ್ದವು.
“ಹನುಮದ್ರಾಮಾಯಣ’ವನ್ನು ಆಧರಿಸಿ ಲತಾ ಅವರು ತೆಲುಗಿನಲ್ಲಿ ರಚಿಸಿದ ಕಾದಂಬರಿಯನ್ನು ವಂಶಿಯವರು ಕನ್ನಡಕ್ಕೆ ಅನುವಾದಿಸಿದ್ದು, ಅದನ್ನಾಧರಿಸಿ ಹಿರಿಯ ನಾಟಕಕಾರ ಮತ್ತು ನಟರಾದ ಎಸ್‌.ವಿ. ಕೃಷ್ಣ ಶರ್ಮ ನಾಟಕ ಹೆಣೆದಿ¨ªಾರೆ. ರಾವಣನ ಪಾತ್ರವೇ ಇಲ್ಲಿ ಕೇಂದ್ರಬಿಂದು. ಅವನ ಸುತ್ತ ರಾಮಾಯಣದ ಕಥೆ ಘಟಿಸುತ್ತದೆ. ವಾಲ್ಮೀಕಿಗಳಿಂದ ಈ ಕಾವ್ಯವನ್ನು ಬರೆಸಲು ಪರೋಕ್ಷ ಕಾರಣನಾದ ರಾವಣ, ನಾವು ಹಿಂದಿನಿಂದ ನಂಬಿಕೊಂಡು ಬಂದಿರುವ ಜನಜನಿತ ದುಷ್ಟ ವ್ಯಕ್ತಿಯಲ್ಲ. ಇಡೀ ಅವನ ವ್ಯಕ್ತಿತ್ವಕ್ಕೊಂದು ಹೊಸ ಮೆರುಗಿನ ಪ್ರಭಾವಳಿ ನೀಡುವ, ಮನುಷ್ಯಸಹಜ ಗುಣಗಳಿಂದ ಕಂಗೊಳಿಸುವ ಇಲ್ಲಿನ ರಾವಣ ನಮ್ಮನ್ನಾವರಿಸಿಕೊಳ್ಳುತ್ತಾನೆ.

ವಾತ್ಸಲ್ಯಮಯಿ, ಉನ್ನತಗುಣಗಳ ಪ್ರತೀಕನಾದ ಇಲ್ಲಿಯ “ಪೌಲಸ್ಥ್ಯ’  ಮಹಾ ಸಂಗೀತಜ್ಞ, ವೈಣಿಕ, ಕವಿ, ವಾಗ್ಮಿ, ರಸಿಕ, ಒಳ್ಳೆಯ ಪತಿ, ಪ್ರೇಮಿ, ಅಣ್ಣ , ಉತ್ತಮ ರಾಜ ಹಾಗೆಯೇ ದೌರ್ಬಲ್ಯಗಳ ದಾಸನೂ ಹೌದು. ವಾಲಿಯಿಂದ ಎರಡು ಬಾರಿ ಬಲಾತ್ಕರಿಸಲ್ಪಟ್ಟ ಮಂಡೋದರಿಯನ್ನು ಧರ್ಮಪತ್ನಿಯಾಗಿ ಸ್ವೀಕರಿಸಿ ಪಟ್ಟದರಾಣಿಯನ್ನಾಗಿ ಮಾಡಿಕೊಳ್ಳುವಂಥ ಹೃದಯವೈಶಾಲ್ಯ ತೋರಿದವ, ಸೀತೆ ತನ್ನ ಹೆಂಡತಿಯ ಮಗಳೆಂದು ತಿಳಿದು ಅವಳ ಯೋಗಕ್ಷೇಮಕ್ಕಾಗಿ ತೌರಿಗೆ ಕರೆತರುವ ಸದುದ್ದೇಶದಿಂದ ಸೀತಾಪಹರಣದ ಅಪವಾದವನ್ನೂ ಲೆಕ್ಕಿಸದೆ ಮಗಳನ್ನು ತೌರಿಗೆ ಕರೆತರುವ ಉದಾರಿ. ಇವೆಲ್ಲಕ್ಕಿಂತ ಮಹತ್ತರವಾಗಿ ನಿಲ್ಲುವುದು ಅವನು ವಾಲ್ಮೀಕಿಯ ಕಾವ್ಯಪ್ರೇರಕನಾಗಿ ರಾಮಾಯಣದ ಕಥೆ ಬರೆಯಲು ಸೂತ್ರಧಾರನಾಗಿ ಮುಖ್ಯಪಾತ್ರ ವಹಿಸುವುದು ಇಲ್ಲಿನ ವೈಶಿಷ್ಟ್ಯ. 

ಜೋಡಿಯಾಗಿದ್ದ ಕ್ರೌಂಚಗಳಲ್ಲಿ ಗಂಡುಹಕ್ಕಿಯ ವಧೆಯನ್ನು ಕಂಡು ನೋವಿನಿಂದ ಕಿರಾತನಿಗೆ ಶಾಪ ಕೊಡುವ ವಾಲ್ಮೀಕಿಗೆ ಅದು ಶೋಕದ ಘಟನೆಯಾದರೆ, ರಾವಣನಿಗೆ (ಕ್ರೌಂಚ) ಅದು ಮಧುರಗಾನ. ಆ ಶಾಪವಾಕ್ಯವನ್ನೇ ಹಾಡಿ ವಾಲ್ಮೀಕಿಯಲ್ಲಿದ್ದ ಕವಿಹೃದಯವನ್ನು ಜಾಗೃತಗೊಳಿಸುತ್ತಾನೆ. ಅವನು ಬರೆಯುವ ಮಹಾಕಾವ್ಯಕ್ಕೆ ರಾಮನೇ ನಾಯಕನಾಗಬೇಕೆಂದು ಆಗ್ರಹಿಸಿ, ಅದರಲ್ಲಿ ತಾನೇ ಪ್ರತಿನಾಯಕನೆಂದು ನಿರ್ಣಯಿಸಿ ವಾಲ್ಮೀಕಿಯ ಮನಸ್ಸನ್ನು ಗೆದ್ದುಬಿಡುವ ಔದಾರ್ಯ ತೋರುತ್ತಾನೆ.

ಪೂರ್ವಾಭಿಪ್ರಾಯ ನಿರ್ಮಿತ ಪಾತ್ರಗಳನ್ನು ಮುರಿದು ಕಟ್ಟುವ ಕೆಲಸದಲ್ಲಿ ನಾಟಕಕಾರ ಎಸ್‌.ವಿ. ಕೃಷ್ಣಶರ್ಮ ಅವರ ಚಿಂತನಾಕ್ರಮ ಮನವರಿಕೆ ಮಾಡಿಕೊಡುವುದರಲ್ಲಿ ಯಶಸ್ಸು ಕಂಡಿದೆ. ಅಂತಿಮ ದೃಶ್ಯದಲ್ಲಿ ಪೌಲಸ್ಥ್ಯ, ರಾಮನ ಕೈಯಲ್ಲಿ ಯುದ್ಧಕಂಕಣ ಕಟ್ಟಿಸಿಕೊಂಡು ಕೃತಕೃತ್ಯ ಭಾವದಿಂದ ನಿರ್ಗಮಿಸುವ ದೃಶ್ಯ ನೋಡುಗರ ಹೃದಯವನ್ನು ಭಾರವಾಗಿಸುತ್ತದೆ.

ಮಹಾಜ್ಞಾನಿಯಾದ ರಾವಣನು ಅರಿತ “ಮೃತ್ಯು ರಹಸ್ಯ’ ಕುರಿತ ವೈಜ್ಞಾನಿಕ, ಚಿಂತನಶೀಲ ಮಾತುಗಳು, ವಾಲ್ಮೀಕಿಯೊಡನೆ ನಡೆವ ಚರ್ಚೆಗಳು ಆಸಕ್ತಿದಾಯಕವಾಗಿವೆ. ಸ್ವಾರಸ್ಯ ಸಂಭಾಷಣೆಗಳಿಂದ ಕೂಡಿದ ನಾಟಕದ ಸನ್ನಿವೇಶಗಳು ಸಾಂದ್ರವಾಗಿದ್ದು, ಗಂಭೀರ ಅಷ್ಟೇ ಆಳವಾದ ಚಿಂತನೆಗೆ ಹಚ್ಚುತ್ತವೆ. ರಾಮನ ಬಗ್ಗೆ ಅಪಾರ ಗೌರವ ಮತ್ತು ಭಕ್ತಿಯನ್ನುಳ್ಳ ರಾವಣ, ಅವನಲ್ಲಿ ಐಕ್ಯನಾಗಿ ಮುಕ್ತಿ ಸಾಧಿಸುವ ಪರಮಗುರಿಯನ್ನು ಹೊಂದಿದ್ದು, ಈ ಕಥೆ ರಾಮಾಯಣವಾಗಬೇಕೆಂದು ಸಂಕಲ್ಪಿಸಿ, ವಾಲ್ಮೀಕಿಯಿಂದ ಈ ಕೃತಿ ರಚನೆಯಾಗಲು ಕಾರಣೀಭೂತನಾಗುವುದು ನಾಟಕದ “ಹೈಲೈಟ್‌’. 

ರಂಗತಂತ್ರಗಳ ಜಾಣ್ಮೆ, ಕೌಶಲ್ಯಪೂರ್ಣ ನಿರ್ದೇಶನದ ಜೊತೆಗೆ, ಪರಿಣತ ಅಭಿನಯದಿಂದ ಕೃಷ್ಣ ಶರ್ಮ ಪ್ರೇಕ್ಷಕನ ಮನ ಗೆಲ್ಲುತ್ತಾರೆ. ಉತ್ತಮ ಪ್ರಸಾಧನ (ರಾಮಕೃಷ್ಣ ಮೂಚಿ) ದ ಕುಸುರಿ ಕೆಲಸದಿಂದ ವಾಲ್ಮೀಕಿ- ರಂಗನಾಥರಾವ್‌, ಮಾರೀಚ- ಪ್ರದೀಪ್‌ ಅಂಚೆ ಅವರ ಸುಂದರ ಅಭಿನಯ ಸಹಜತೆಯಿಂದ ಮಿಂಚಿತ್ತು. ಉಳಿದಂತೆ ರಾಧಿಕಾ ಭಾರಧ್ವಾಜ, ಪಲ್ಗುಣಿ ,ಅನನ್ಯ ಕಶ್ಯಪ್‌ ,ಅಶೋಕ್‌, ಸುಜಿತ್‌, ಕುಲದೀಪ್‌ ಮುಂತಾದವರ ಅಭಿನಯ ಇಷ್ಟವಾಗುತ್ತದೆ. ನಾಟಕದ ಜೀವಾಳವಾದ ಸಂಗೀತ ಸೌಂದರ್ಯಕ್ಕೆ ಪಾಲುದಾರರು ಖ್ಯಾತ ಸಂಗೀತ ಸಂಯೋಜಕ ಪದ್ಮಚರಣ್‌ ಹಾಗೂ ಗಾಯಕ, ಎಸ್‌. ಶಂಕರ್‌. ರಂಗಸಜ್ಜಿಕೆ, ಬೆಳಕು ಸಂಯೋಜನೆ ಎಲ್ಲವೂ ಸೂಕ್ತವಾಗಿದ್ದವು.

ಹೆಚ್‌.ಎನ್‌. ರಂಗನಾಥ ರಾವ್‌ 

ಟಾಪ್ ನ್ಯೂಸ್

Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…ಡ್ರೋನ್‌ ಏರ್‌ಟ್ಯಾಕ್ಸಿ

Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ

ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ

Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ

Australia’s assistant coach to skip Perth test because of the IPL auction!

BGT 2024: ಐಪಿಎಲ್‌ ಹರಾಜಿನ ಕಾರಣಕ್ಕೆ ತಂಡ ತೊರೆದ ಆಸ್ಟ್ರೇಲಿಯಾದ ಸಹಾಯಕ ಕೋಚ್‌!

Explained: ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!

Explained:ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!

ಹೋಮ್‌ ವರ್ಕ್‌ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ

ಹೋಮ್‌ ವರ್ಕ್‌ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ

Belagavi: ವರ್ಷದ ಹಿಂದೆ ಪಕ್ಷಕ್ಕೆ ಬರುವಂತೆ ಬಿಜೆಪಿ ಆಹ್ವಾನಿಸಿತ್ತು: ಬಾಬಾಸಾಹೇಬ ಪಾಟೀಲ್

Belagavi: ಹೊಸಬರು, ಹಳಬರನ್ನೂ ಬಿಜೆಪಿಯವರು ಟಚ್ ಮಾಡ್ತಿದ್ದಾರೆ: ಶಾಸಕ ಬಾಬಾಸಾಹೇಬ ಪಾಟೀಲ್

BGT Series: ವಿರಾಟ್‌ ಕೊಹ್ಲಿ ಜತೆ ವೈಯಕ್ತಿಕ ಪೈಪೋಟಿಗೆ ಇಳಿದಿದ್ದೆ: ಮಿಚೆಲ್‌ ಜಾನ್ಸನ್

BGT Series: ವಿರಾಟ್‌ ಕೊಹ್ಲಿ ಜತೆ ವೈಯಕ್ತಿಕ ಪೈಪೋಟಿಗೆ ಇಳಿದಿದ್ದೆ: ಮಿಚೆಲ್‌ ಜಾನ್ಸನ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ

Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ

Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…ಡ್ರೋನ್‌ ಏರ್‌ಟ್ಯಾಕ್ಸಿ

Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ

T20 series: ಪಾಕಿಸ್ಥಾನಕ್ಕೆ ವೈಟ್‌ವಾಶ್‌ ಟಿ20: ಆಸ್ಟ್ರೇಲಿಯ 3-0 ಜಯಭೇರಿ

T20 series: ಪಾಕಿಸ್ಥಾನಕ್ಕೆ ವೈಟ್‌ವಾಶ್‌ ಟಿ20: ಆಸ್ಟ್ರೇಲಿಯ 3-0 ಜಯಭೇರಿ

ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ

Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ

Australia’s assistant coach to skip Perth test because of the IPL auction!

BGT 2024: ಐಪಿಎಲ್‌ ಹರಾಜಿನ ಕಾರಣಕ್ಕೆ ತಂಡ ತೊರೆದ ಆಸ್ಟ್ರೇಲಿಯಾದ ಸಹಾಯಕ ಕೋಚ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.