ಕಲೆಯೇ ಕ್ಲಾಸು: ಪರೀಕ್ಷೆಯ ತಲೆಬಿಸಿಯೇ ಇಲ್ಲದ ವಿದ್ಯಾರ್ಥಿಗಳ ಕತೆ


Team Udayavani, Feb 24, 2018, 6:08 PM IST

2-aa.jpg

 ಟೀಚರ್‌ಗಳೇ ಇಲ್ಲದ ಶಾಲೆಗಳು, ಪಾಠಗಳೇ ಇಲ್ಲದ ತರಗತಿಗಳು, ಶಿಕ್ಷೆಯೇ ಇಲ್ಲದ ಶಿಕ್ಷಣ… ಇವಿಷ್ಟನ್ನೂ ಕೇಳಲು ವಿದ್ಯಾರ್ಥಿಯೊಬ್ಬನ ಕನಸಿನಂತೆ ತೋರಬಹುದು. ಆದರೆ ಶಿಕ್ಷಣವನ್ನೇ  ಮನರಂಜನಾತ್ಮಕವಾಗಿ ನೀಡಲು ಸಾಧ್ಯವಾದರೆ? ಅಂಥಾ ಕೆಲಸವನ್ನು ಮಾಡುತ್ತಿರುವ ಎನ್‌.ಜಿ.ಒ ಪ್ರಾಜೆಕ್ಟ್ ಡಿಫೈ!

3 ಈಡಿಯೆಟ್ಸ್‌ ಸಿನಿಮಾದಲ್ಲಿ ವಿದ್ಯಾರ್ಥಿ ಆಮೀರ್‌ ಖಾನ್‌ ಮನಸ್ಸಿಗೆ ಅನಿಸಿದ್ದನ್ನು ಮಾಡುತ್ತಾ, ಇಷ್ಟ ಬಂದ ತರಗತಿಗಳಲ್ಲಿ ಕೂರುತ್ತಿದ್ದರು. ಸ್ನೇಹಿತರು ಕೇಳಿದಾಗ ಜ್ಞಾನ ಎಲ್ಲಾ ಕಡೆ ಇರುತ್ತೆ, ಎಲ್ಲಿ ಸಿಗುತ್ತೋ ಅಲ್ಲಿ ತಗೋಬೇಕು. ಅದನ್ನು ಪಡೆಯಲು ಶಾಲೆ ಕಾಲೇಜುಗಳಿಗೇ ಹೋಗಬೇಕಿಲ್ಲ ಎಂದಿದ್ದರು… ಅಷ್ಟೇ ಅಲ್ಲ, ಎಂಜಿನಿಯರಿಂಗ್‌ ಪದವಿ ಪಡೆದ ನಂತರ ಹುಟ್ಟೂರಲ್ಲಿ ಮಕ್ಕಳಿಗೆ ಒಂದು ಶಾಲೆಯನ್ನು ತೆರೆಯುತ್ತಾನೆ. ಅದು ಯಾವ ರೀತಿಯಲ್ಲೂ ಸಾಂಪ್ರದಾಯಿಕ ಶಾಲೆಗಳನ್ನು ಹೋಲುತ್ತಿರಲಿಲ್ಲ. ಅಲ್ಲಿ ಮಕ್ಕಳು ರೋಬೋಟ್‌ ತಯಾರಿ, ದೈನಂದಿನ ಕೆಲಸಗಳಿಗೆ ನೆರವಾಗುವ ಯಂತ್ರಗಳು ಹೀಗೆ ಇಷ್ಟ ಬಂದ ಪ್ರಾಜೆಕ್ಟ್ಗಳನ್ನು ಮಾಡುತ್ತಾ ವಿಜ್ಞಾನ, ಸಮಾಜಶಾಸ್ತ್ರ, ಮುಂತಾದ ವಿಷಯಗಳನ್ನು ತಮ್ಮದೇ ಆದ ರೀತಿಯಲ್ಲಿ ಕಂಡುಕೊಳ್ಳುತ್ತಿದ್ದರು. ಈ ವ್ಯವಸ್ಥೆಯನ್ನು ದೊಡ್ಡ ಪ್ರಮಾಣದಲ್ಲಿ, ಸಾರ್ವಜನಿಕವಾಗಿ ಅನುಷ್ಠಾನಕ್ಕೆ ತರಲು ಸಾಧ್ಯವಾಗದೇ ಇರಬಹುದು. ಆದರೆ, ಇಂಥದ್ದೊಂದು ಬದಲಾವಣೆಯನ್ನು ಪುಟ್ಟದಾಗಿಯಾದರೂ ತರಲು ಶ್ರಮಿಸುತ್ತಿರುವ ಸ್ವಸಹಾಯ ಸಂಸ್ಥೆ ಪ್ರಾಜೆಕ್ಟ್ ಡಿಫೈ (ಈಉಊY). 

ಏನಿದು ಪ್ರಾಜೆಕ್ಟ್ ಡಿಫೈ?
ಡಿಫೈ ಎನ್ನುವುದು ಡಿಸೈನ್‌ ಎಜುಕೇಷನ್‌ ಫಾರ್‌ ಯುವರ್‌ಸೆಲ್ಫ್  ಎಂಬುದರ ಸಂಕ್ಷಿಪ್ತ ರೂಪ. ಅಂದರೆ ಇಲ್ಲಿ ಶಾಲೆಗಳನ್ನು ವಿದ್ಯಾರ್ಥಿಗಳೇ ತಮಗೆ ಬೇಕಾದ ರೀತಿಯಲ್ಲಿ ರೂಪಿಸಿಕೊಳ್ಳುತ್ತಾರೆ. ತಮ್ಮ ಇಷ್ಟದ ಕ್ಷೇತ್ರದ ಬಗ್ಗೆ ಥಿಯರಿ ಮಾತ್ರವಲ್ಲದೆ ಪ್ರಾÂಕ್ಟಿಕಲ್‌ಗ‌ಳ ಮೂಲಕ ಕಲಿಯುತ್ತಾರೆ. ಅದಕ್ಕೆ ಬೇಕಾದ ವೇದಿಕೆಯನ್ನು ಡಿಫೈ ಸಂಸ್ಥೆ ಒದಗಿಸುತ್ತದೆ. ಎಸ್ಸೆಸ್ಸೆಲ್ಸಿ, ಪಿ.ಯು.ಸಿ ಶಿಕ್ಷಣ ಮುಗಿಸಿದ ವಿದ್ಯಾರ್ಥಿಗಳಿಗೆ ಮುಂದೆ ತಾವು ಯಾವ ಕೋರ್ಸನ್ನು ಆಯ್ಕೆ ಮಾಡಿಕೊಳ್ಳಬೇಕೆಂಬುದೇ ತಿಳಿದಿರುವುದಿಲ್ಲ. ಹೆತ್ತವರೋ, ನೆಂಟರಿಷ್ಟರೋ ಹೇಳಿದ ಕೋರ್ಸನ್ನು ಆರಿಸಿಕೊಂಡು ಎಷ್ಟೋ ಸಮಯದ ಬಳಿಕ ತಮ್ಮ ಇಷ್ಟದ ಕ್ಷೇತ್ರವನ್ನು ಕಂಡುಕೊಂಡು ಮುಂಚೆಯೇ ಗೊತ್ತಾಗಿದ್ದರೆ ಚೆನ್ನಾಗಿತ್ತು ಎಂದು ಪರಿತಪಿಸುತ್ತಾರೆ. ಆದರೆ, ವಿದ್ಯಾರ್ಥಿಗಳು ಪ್ರಾಥಮಿಕ ಹಂತದಲ್ಲಿಯೇ ತಮ್ಮ ಇಷ್ಟದ ಕ್ಷೇತ್ರವನ್ನು ಕಂಡುಕೊಂಡು ಅದರಲ್ಲೇ ಮುಂದುವರಿಯುವಂತಾದರೆ ಎಷ್ಟು ಚೆನ್ನ ಅಲ್ಲವೆ? ಅದೇ ಡಿಫೈ ಸಂಸ್ಥೆಯ ಉದ್ದೇಶ.

ಹೇಗೆ ಶುರುವಾಯಿತು?
ಸಂಸ್ಥೆಯ ಸ್ಥಾಪಕ ಅಭಿಜಿತ್‌ ಸಿನ್ಹಾ ಕೆಲ ವರ್ಷಗಳ ಹಿಂದೆ ಸರಕಾರಿ ಶಾಲೆಯ ಮಕ್ಕಳಿಗೆ ಕಂಪ್ಯೂಟರ್‌ ಹೇಳಿಕೊಡುತ್ತಿದ್ದರು. ಕಂಪ್ಯೂಟರ್‌ನಲ್ಲಿ ಗೇಮ್‌ಗಳನ್ನು ಹಾಕಿಕೊಟ್ಟು ಮಕ್ಕಳನ್ನು ಆಡಲು ಬಿಡುತ್ತಿದ್ದರು. ಕಂಪ್ಯೂಟರನ್ನೇ ನೋಡದ ಮಕ್ಕಳು ಸ್ವಲ್ಪವೇ ಹೊತ್ತಿನಲ್ಲಿ ಆಟದ ನಿಯಮಗಳನ್ನು ಕಲಿತು ಆಟ ಆಡಲು ಶುರುಮಾಡಿದ್ದರು. ಅದನ್ನು ನೋಡಿದ ಅಭಿಜಿತ್‌ಗೆ ಆಶ್ಚರ್ಯ. ಇಂಗ್ಲಿಷ್‌ ಬಾರದ ಮಕ್ಕಳು, ಕಂಪ್ಯೂಟರ್‌ ಆಪರೇಟ್‌ ಮಾಡಲು ಬಾರದ ಮಕ್ಕಳು ಅದು ಹೇಗೆ ತಮ್ಮಷ್ಟಕ್ಕೆ ಕಲಿತುಬಿಟ್ಟರು ಎಂದು. ಆ ಸಂದರ್ಭದಲ್ಲಿ ಮೊಳಕೆ ಒಡೆದಿದ್ದೇ ಡಿಫೈ ಸಂಸ್ಥೆ ಕಟ್ಟುವ ಐಡಿಯಾ.

ಏನ್‌ ಮಾಡ್ತಾರೆ?
– ಇಲ್ಲಿ ಮಕ್ಕಳು ನಾಲ್ಕು ಹಂತಗಳಲ್ಲಿ  ಜ್ಞಾನಾರ್ಜನೆ ಮಾಡುತ್ತಾರೆ.
– ತಮ್ಮ ಇಷ್ಟದ ಕ್ಷೇತ್ರವನ್ನು ಕಂಡುಕೊಳ್ಳುವುದು
– ಪ್ರಯೋಗ ಮಾಡುವುದು, ತಪ್ಪುಗಳ ಮೂಲಕ ಕಲಿಯುವುದು
– ತಮ್ಮ ಸುತ್ತಮುತ್ತಲ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಅವುಗಳಿಗೆ ಪರಿಹಾರ ರೂಪಿಸುವುದು
– ಆ ಸಮಸ್ಯೆ ಕುರಿತು ಆಳವಾದ ಅಧ್ಯಯನ ನಡೆಸಿ ತಾವು ಕಂಡು ಹಿಡಿದ ಪರಿಹಾರವನ್ನು ಉತ್ತಮ ಪಡಿಸುವುದು.

ಸಾಂಪ್ರದಾಯಿಕ ಶಾಲೆಗಳಿಗಿಂತ ಭಿನ್ನವಾದ ಡಿಫೈ ಶಾಲೆಗಳಿಗೆ ನೂಕ್‌ ಎಂದು ಹೆಸರು. ಸುಮಾರು 500- 1000 ಚದರ ಅಡಿಗಳಷ್ಟು ವಿಸ್ತಾರದ ಕೋಣೆಯಲ್ಲಿ ಮಕ್ಕಳನ್ನು ಅವರ ಪಾಡಿಗೆ ಬಿಡುತ್ತಾರೆ. ಅಲ್ಲಿ ಇಂಟರ್‌ನೆಟ್‌ ಸಂಪರ್ಕವಿರುತ್ತೆ, ಲ್ಯಾಪ್‌ಟಾಪ್‌ಗ್ಳಿರುತ್ತೆ. ಚಿಕ್ಕ ಎಲೆಕ್ಟ್ರಿಕಲ್‌ ಮತ್ತು ಮೆಕಾನಿಕಲ್‌ ಟೂಲ್‌ ಕಿಟ್‌ ಇರುತ್ತೆ. ಇವುಗಳ ಜೊತೆಗೆ ಸ್ಥಳೀಯವಾಗಿ ಸಿಕ್ಕ ಪ್ಲಾಸ್ಟಿಕ್‌, ಮರದ ತುಂಡುಗಳು, ಕಬ್ಬಿಣ ಮುಂತಾದ ಗುಜರಿ ವಸ್ತುಗಳೂ ಇರುತ್ತವೆ. ಒಬ್ಬ ವಿದ್ಯಾರ್ಥಿಗೆ ತಮ್ಮೂರಿನ ಹೊಳೆ ಎಷ್ಟರಮಟ್ಟಿಗೆ ಕಲುಷಿತವಾಗಿದೆ ಎಂಬುದನ್ನು ಕಂಡುಹಿಡಿಯಬೇಕು ಎಂದಿಟ್ಟುಕೊಳ್ಳೋಣ. ಆತನಿಗೆ ಯಾರೂ ಸಹಾಯ ಮಾಡುವುದಿಲ್ಲ. ಆತನೇ ತನ್ನ ಸುತ್ತಲಿರುವ ವಸ್ತುಗಳನ್ನು ಬಳಸಿ ದೋಣಿಯ ಮಾದರಿಯನ್ನು ತಯಾರಿಸುತ್ತಾನೆ. ಅದು ನೀರಿನಲ್ಲಿ ಮುಳುಗುತ್ತೆ ಎಂದು ಗೊತ್ತಾದಾಗ ಮುಳುಗದಂತೆ ಏನು ಮಾಡಬೇಕೋ ಅದನ್ನು ಮಾಡುತ್ತಾನೆ. ಹೀಗೆ ಪ್ರತಿ ಹಂತದಲ್ಲಿಯೂ ಪ್ರಯೋಗಗಳಿಗೆ ಒಗ್ಗಿಕೊಳ್ಳುತ್ತಾ ಜ್ಞಾನವನ್ನು ಸಂಪಾದಿಸುತ್ತಾ ಹೋಗುತ್ತಾನೆ. ತಂಡದ ಸದಸ್ಯರಿಗೆ ಪರಿಹಾರ ಸಿಕ್ಕದೇ ಇದ್ದ ಸಂದರ್ಭದಲ್ಲಿ ಸಂಸ್ಥೆಯವರು ಇಂಟರ್‌ನೆಟ್‌ನಲ್ಲಿ ಪರಿಹಾರ ಕಂಡುಕೊಳ್ಳುವುದನ್ನು ಕಲಿಸಿಕೊಡುತ್ತಾರೆ. ಈ ಪ್ರಾಜೆಕ್ಟ್‌ನಲ್ಲಿ ಬಾಗವಹಿಸುವವರಲ್ಲಿ ಕಾಲೇಜನ್ನು ಅರ್ಧಕ್ಕೇ ಬಿಟ್ಟ ಮಕ್ಕಳೂ ಇದ್ದಾರೆ, ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಮಕ್ಕಳೂ ಇದ್ದಾರೆ. ವಯಸ್ಸಿನ ಮಿತಿಯಿಲ್ಲದೆ ಯಾರು ಬೇಕಾದರೂ ಇವರನ್ನು ಸೇರಿಕೊಳ್ಳಬಹುದು.

ಫ‌ಲಿತಾಂಶ
ಪರೀಕ್ಷೆಯೇ ಇಲ್ಲದಿದ್ದರೂ ಫ‌ಲಿತಾಂಶವನ್ನು ಇಲ್ಲಿ ಕಾಣಬಹುದಾಗಿದೆ. ಹಳ್ಳಿಯ ನಿವಾಸಿ 20 ವರ್ಷದ ದೀಪಿಕಾ ಚಿಕ್ಕ ವಯಸ್ಸಿನಲ್ಲೇ ಗೃಹಿಣಿಯಾದವರು. ಅವರೀಗ ಕಂಪ್ಯೂಟರ್‌ ಬಳಸುತ್ತಾರೆ, ಕರಕುಶಲ ವಸ್ತುಗಳ ತಯಾರಿಯನ್ನು ಯೂಟ್ಯೂಬ್‌ ನೋಡಿ ಕಲಿಯುತ್ತಿದ್ದಾರೆ. ಡಿಪ್ಲೊಮಾ ಮುಗಿಸಿರುವ 19 ವರ್ಷದ ಕುಶಲ್‌ ರೇಡಿಯೊ ನಿಯಂತ್ರಿತ ವಿಮಾನ, ಸ್ವಯಂಚಾಲಿತ ದೋಣಿಯ ಮಾದರಿಗಳನ್ನು ತಯಾರಿಸಿದ್ದಾನೆ. ಸದಸ್ಯರು ತಯಾರಿಸಿದ ಪ್ರಾಜೆಕ್ಟ್ಗಳು ತುಂಬಾ ಸಹಕಾರಿ ಮತ್ತು ಉಪಕಾರಿ ಎಂದು ಕಂಡುಬಂದರೆ ಡಿಫೈನವರು ಅದನ್ನು ಅನುಷ್ಟಾನಕ್ಕೆ ತರಲು ಹಣಸಹಾಯವನ್ನೂ ಮಾಡುತ್ತಾರೆ.

ಸಂಪರ್ಕ- 9880893823
ಇಮೇಲ್‌- [email protected]

ಟಾಪ್ ನ್ಯೂಸ್

BGV-CM

Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ

UP-Ma-ki-rasoi

Full Meal: ಮಹಾಕುಂಭ ಮೇಳಕ್ಕೆ ಬರುವವರಿಗೆ ಸಿಗುತ್ತೆ 9 ರೂ.ಗೆ ಭರ್ಜರಿ ಭೋಜನ!

Sachin Panchal Case: CID interrogation of five including Raju Kapnoor

Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ

1-modi

Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ

Exam

SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ

Pratika Rawal’s brilliant batting: A good start to the series against Ireland

INDWvsIREW: ಪ್ರತಿಕಾ ರಾವಲ್‌ ಭರ್ಜರಿ ಬ್ಯಾಟಿಂಗ್‌; ಐರ್ಲೆಂಡ್‌ ವಿರುದ್ದ ಸರಣಿ ಶುಭಾರಂಭ

Mega Concert: Black ಮಾರ್ಕೆಟ್‌ ಟಿಕೆಟ್‌ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್‌ ವಜಾ

Mega Concert: Black ಮಾರ್ಕೆಟ್‌ ಟಿಕೆಟ್‌ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್‌ ವಜಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

BGV-CM

Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ

1-poco

POCO X7 5G; ಇದೀಗ ತಾನೆ ಬಿಡುಗಡೆಯಾದ ಫೋನ್ ನಲ್ಲಿ ಏನೇನಿದೆ?

UP-Ma-ki-rasoi

Full Meal: ಮಹಾಕುಂಭ ಮೇಳಕ್ಕೆ ಬರುವವರಿಗೆ ಸಿಗುತ್ತೆ 9 ರೂ.ಗೆ ಭರ್ಜರಿ ಭೋಜನ!

1-car

Shivamogga; ಕಾರು ಹಳ್ಳಕ್ಕೆ ಉರುಳಿ ಮೂವರಿಗೆ ಗಾಯ

Sachin Panchal Case: CID interrogation of five including Raju Kapnoor

Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.