ತಾರಸಿ ಅಲ್ಲ, ಮಿನಿಕಾಡು


Team Udayavani, Mar 21, 2020, 6:09 AM IST

taarasi

ಕಾಡು ನೋಡಲೆಂದೇ ಬೆಂಗಳೂರಿಗರು ಎಲ್ಲೆಲ್ಲಿಗೋ, ಬೈಕ್‌- ಕಾರನ್ನೇರಿಕೊಂಡು ಟ್ರಿಪ್‌ ಹೋಗುತ್ತಾರೆ. ಮತ್ತೆ ಕೆಲವರು ತಾವು ಇರುವಲ್ಲಿಯೇ ಕಾಡು ಸೃಷ್ಟಿಸುತ್ತಾರೆ. ಅಂಥವರಲ್ಲಿ ಒಬ್ಬರು ಮಂಟಪ ನಟರಾಜ ಉಪಾಧ್ಯ. ಇವರ ಮನೆಯಲ್ಲಿ 300ಕ್ಕೂ ಅಧಿಕ ಗಿಡಗಳು ಹಸಿರು ಹಬ್ಬಿಸಿಕೊಂಡು, ಮಿನಿಕಾಡನ್ನೇ ಸೃಷ್ಟಿಸಿವೆ. ವಿಶ್ವ ಅರಣ್ಯ ದಿನದ ಈ ದಿನ, ಉಪಾಧ್ಯರ ಮನೆಯ ಮಿನಿಕಾಡನ್ನು ಸುತ್ತಿ ಬರೋಣ…

ಉದ್ಯಾನ ನಗರಿ ಎಂದು ಖ್ಯಾತವಾಗಿರುವ ಬೆಂಗಳೂರಿನಲ್ಲಿ ಒಂದು ಕಾಲದಲ್ಲಿ ಎಲ್ಲಿ ನೋಡಿದರಲ್ಲಿ ಹಸಿರು ತುಂಬಿತ್ತು. ರಸ್ತೆಯ ಇಕ್ಕೆಲಗಳಲ್ಲಿದ್ದ ಆಳೆತ್ತರದ ಮರಗಿಡಗಳು ಹಸಿರಿನ ಭವ್ಯತೆಯನ್ನು ನೀಡಿ, ಅಲ್ಲಿ ಸಾಗುವವರಿಗೆ ಆಹ್ಲಾದವನ್ನು ನೀಡುತ್ತಿದ್ದುದು ಸುಳ್ಳಲ್ಲ. ಆದರೆ, ಇತ್ತೀಚೆಗೆ ನಗರೀಕರಣದ ಪ್ರಭಾವದಿಂದ, ರಸ್ತೆ ಪಕ್ಕದಲ್ಲಿರುವ ಮರಗಳಿಗೆ ಕೊಡಲಿ ಏಟು ಬಿದ್ದು ಹಸಿರೆಲ್ಲವೂ ಮಾಯವಾಗಿರುವುದು ಹೌದಾದರೂ, ಜನತೆಯಲ್ಲಿ ಮಾತ್ರ ಗಿಡ- ಮರಗಳ ಬಗ್ಗೆ ವಿಶೇಷ ಆಸಕ್ತಿ ಬೆಳೆದು, ತಮ್ಮ ಮನೆ ಮುಂದೆ, ತಾರಸಿ ಮೇಲೆ, ಬಾಲ್ಕನಿಗಳಲ್ಲಿ ಹಸಿರನ್ನು ಬೆಳೆಸುವ ಕೈಂಕರ್ಯವನ್ನು ಸದ್ದಿಲ್ಲದೆ ನಡೆಸಿ, ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತಿದ್ದಾರೆ.

ಈ ನಿಟ್ಟಿನಲ್ಲಿ ಮಾಜಿ ಟೆಕ್ಕಿಯೊಬ್ಬರು, ತಮ್ಮ ಇಡೀ ಮನೆಯ ಮೇಲೆ ಮತ್ತು ಸುತ್ತ ಗಿಡ ಬಳ್ಳಿ ಮರಗಳನ್ನು ಬೆಳೆಸಿ ಸಣ್ಣ ಕಾಡಾಗಿ ಪರಿವರ್ತಿಸಿದ್ದಾರೆ. ಸುತ್ತಲೂ ಇರುವ ಕಾಂಕ್ರೀಟ್‌ ಕಾಡಿನ ಮಧ್ಯೆ ಈ ಕಾಡು ಗಮನ ಸೆಳೆಯುತ್ತದೆ. ಈ ಸಾಹಸಕ್ಕೆ ಮುಂದಾಗಿರುವ ಪರಿಸರ ಪ್ರೇಮಿ, ಉಡುಪಿ ಮೂಲದ ಮಂಟಪ ನಟರಾಜ ಉಪಾಧ್ಯ. ಬೆಂಗಳೂರು ನಗರದ ಹೃದಯ ಭಾಗದಲ್ಲಿರುವ ಬಸವನಗುಡಿಯಿಂದ ಹೊರಟು, ಕತ್ರಿಗುಪ್ಪೆ ಮುಖ್ಯರಸ್ತೆಯಲ್ಲಿ ವಿದ್ಯಾಪೀಠ ಮತ್ತು ಬಿಗ್‌ ಬಜಾರ್‌ ಮಧ್ಯೆ, ಐಟಿಐ ಕಾಲೊನಿ ಕೆಳಭಾಗದಲ್ಲಿ ಮುಖ್ಯರಸ್ತೆಯಿಂದ 100 ಒಳಗೆ ಮೀಟರ್‌ ಕೆಳ ಸಾಗಿದರೆ, ವಿವೇಕಾನಂದ ನಗರದ ಮುಖ್ಯರಸ್ತೆಯಲ್ಲಿ ನಿಮಗೊಂದು ವಿಶೇಷ ಎದುರಾಗುತ್ತದೆ. ನೋಡುವಾಗಲೇ ಇದು ಮನೆಯೋ ಅಥವಾ ಯಾವುದೋ ಅರಣ್ಯ ಭಾಗದ ಮುಂಭಾಗಕ್ಕೆ ಬಂದಿದ್ದೇವೋ ಎಂಬ ಅನುಮಾನ ನಿಮ್ಮನ್ನು ಕಾಡುವುದು ಸುಳ್ಳಲ್ಲ.

ಲತೆಗಳ ನಡುವೆ: ಮನೆಯ ಗೇಟ್‌ಗೆ ಹಬ್ಬಿರುವ ಹಸಿರು ಬಳ್ಳಿಗಳು. ಎಲ್ಲಿ ನೋಡಿದರಲ್ಲಿ ಹಸಿರುಟ್ಟ ಗಿಡ- ಮರ- ಬಳ್ಳಿಗಳು ನಿಮಗೆ ಮುದವನ್ನು ಕೊಡುತ್ತವೆ. ಇಡೀ ಮನೆ ಹಸಿರಿನಿಂದ ಮುಚ್ಚಿಹೋಗಿದೆ. ಇದರ ಜೊತೆಗೆ ಇವರ ತಾರಸಿ ವಿಶೇಷವಾಗಿ ಗಮನಸೆಳೆಯುತ್ತದೆ. ತಾರಸಿಗೆ ಹೋಗಬೇಕೆಂದರೆ, ಕಮಾನಿನ ಆಕೃತಿಯಲ್ಲಿ ಬೆಳೆದಿರುವ ಲತೆಗಳ ಮಧ್ಯದಲ್ಲಿ ಮೆಟ್ಟಿಲನ್ನು ಏರಿ ಸಾಗಬೇಕು. ಅದೊಂದು ಸುರಂಗದಂತೆ ಕಂಗೊಳಿಸಿ, ವಿಶಿಷ್ಟ ಅನುಭೂತಿಯನ್ನು ನೀಡುತ್ತದೆ. ಇನ್ನೂ ಮೇಲೆ ಸಾಗಿ ಬಂದರೆ, 30 ಅಡಿ * 50 ಅಡಿ ಸ್ಥಳದ ತಾರಸಿಯು ಗಿಡ, ಮರ, ಬಳ್ಳಿಗಳಿಂದ ವಿಜೃಂಭಿಸುತ್ತದೆ. ನಡೆದಾಡುವುದಕ್ಕೆ ಸ್ಥಳ ಹೊರತು ಪಡಿಸಿದರೆ, ಇಡೀ ತಾರಸಿಯು ಗಿಡ, ಮರ, ಬಳ್ಳಿಗಳಿಂದ ಅಲಂಕೃತವಾಗಿದೆ.

300ಕ್ಕೂ ಅಧಿಕ ಗಿಡಗಳು: ಇಲ್ಲಿ ಸುಮಾರು 300ಕ್ಕೂ ಅಧಿಕ ಬೇರೆ ಬೇರೆ ಜಾತಿಯ ಗಿಡಗಳನ್ನು ಕಾಣಬಹುದಾಗಿದೆ. ಜೊತೆಗೆ ಹೂವಿನ ಮಕರಂದವನ್ನು ಹೀರುವುದಕ್ಕೆ ಬರುವ ಬಣ್ಣ ಬಣ್ಣದ ದುಂಬಿಗಳು, ಚಿಟ್ಟೆಗಳು ಮನಸ್ಸಿಗೆ ಉಲ್ಲಾಸ ನೀಡುತ್ತವೆ. ಇಷ್ಟೇ ಅಲ್ಲದೆ, ಹತ್ತಕ್ಕೂ ಅಧಿಕ ಜಾತಿಯ ಪಕ್ಷಿಗಳು ಭೇಟಿ ಕೊಡುತ್ತವೆ. ಅಳಿಲುಗಳು, ಅವುಗಳನ್ನು ಹಿಡಿಯಲು ಬೆಕ್ಕುಗಳು ಇಲ್ಲಿ ವಾಸವಾಗಿವೆ. ಅಪರೂಪಕ್ಕೆ ಭೇಟಿಕೊಡುವ ಕೋತಿಗಳ ಹಿಂಡಿಗೂ ಇಲ್ಲಿ ಸ್ವಾಗತವಿದೆ. ಈ ಸ್ವಾಗತದ ಪರಿಣಾಮವೋ ಏನೋ, ಅವು ಕೂಡಾ ಬೇಕಾದುದನ್ನು ತಿಂದು ಉಳಿದುದನ್ನು ಹಾಳು ಮಾಡದೇ ಹಿಂದಿರುಗುತ್ತವೆ. ಇಷ್ಟೇ ಅಲ್ಲದೆ, ಮನೆಯ ಹೊರಗೆ, ಕಾಂಪೌಂಡ್‌ ಒಳಗೂ ಹೊರಗೂ ಅನೇಕ ಗಿಡ ಮರ ಬಳ್ಳಿಗಳನ್ನು ಬೆಳೆಸಿ, ತಮ್ಮ ಮನೆಯ ಮೆರುಗನ್ನು ಹೆಚ್ಚಿಸಿದ್ದಾರೆ.

ಸಾವಯವ ಪೋಷಣೆ: ಈ ಮಿನಿ ವನವನ್ನು ಸೃಷ್ಟಿಸುವುದಕ್ಕೆ ಉಪಾಧ್ಯರು, ರಾಸಾಯನಿಕ ಪದಾರ್ಥಗಳನ್ನು ಬಳಸಲಿಲ್ಲ. ರಸ್ತೆಬದಿಯಲ್ಲಿ ಬೀಳುವ ಒಣ ಎಲೆ, ಬಾಳೆಗಿಡ, ಎಳನೀರಿನ ಗರಟೆ, ಪಕ್ಕದ ಗೌಳಿಗರಲ್ಲಿ ಸಿಗುವ ಸಗಣಿ ಇತ್ಯಾದಿ ಹಸಿ ತ್ಯಾಜ್ಯವಸ್ತುಗಳನ್ನೇ ಬಳಸಿ ತಮ್ಮ ಮಿನಿ ಕಾಡನ್ನು ಬೆಳೆಸುತ್ತಿದ್ದಾರೆ. ಈ ಕಾರಣದಿಂದಲೇ, ಈಗ ಅವರ ಮನೆ ಎಂಥ ಬೇಸಿಗೆಯಲ್ಲೂ ಮಲೆನಾಡಿನ ಸ್ವಾಭಾವಿಕ ವಾತಾವರಣದ ಅನುಭವವನ್ನು ನೀಡುತ್ತಿದೆ. ಇರುವ ಒಂದು ಭೂಮಿ ಕೇವಲ ಮಾನವನಿಗೆ ಮಾತ್ರ ಸೀಮಿತವಲ್ಲ, ಪ್ರಪಂಚದ ಜೀವಜಾಲಗಳಿಗೂ ಜೀವನ ನಡೆಸುವ ಹಕ್ಕಿದೆ ಎನ್ನುವುದನ್ನು ಉಪಾಧ್ಯರ ಈ ಕಾರ್ಯದಲ್ಲಿ ಕಾಣಬಹುದಾಗಿದೆ.

ಶತಕೋಟಿ ಮರಗಳ ಕನಸು: ಉಪಾಧ್ಯರು, “ಶತಕೋಟಿ ಮರಗಳು- ಮತ್ತಿನ್ನಷ್ಟು’ (Billion Trees and Beyond; www.billiontreesandbeyond.com) ಎಂಬ ಅಭಿಯಾನವನ್ನೂ ಪ್ರಾರಂಭಿಸಿದ್ದಾರೆ. ಜನ ಸೇರುವಲ್ಲಿ ನಿಂತು ಜನಸಾಮಾನ್ಯರಿಂದ ಜೀವಮಾನದಲ್ಲಿ ಒಂದಿಷ್ಟು ಮರ ನೆಡುವ ಸಂಕಲ್ಪ ಮಾಡಿಸಿ, ಆ ಬಗ್ಗೆ ಅವರ ಸಹಿ ಇರುವ ಪ್ರಮಾಣಪತ್ರವನ್ನು ಕೊಟ್ಟು, ಸಂಕಲ್ಪಗಳನ್ನು ವೆಬ್‌ಸೈಟ್‌ನಲ್ಲಿ ಜಗಜ್ಜಾಹೀರು ಮಾಡುತ್ತಾರೆ. ಈವರೆಗೆ 1.5 ಕೋಟಿ ಮರಗಳನ್ನು ನೆಡುವ ಸಂಕಲ್ಪವಾಗಿದೆ.

* ರವಿ ಮಡೋಡಿ

ಟಾಪ್ ನ್ಯೂಸ್

Dinesh-Gundurao

Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್‌

Priyank-Kharghe

Inquiry Report: ಬಿಜೆಪಿಗೆ ’40 ಪರ್ಸೆಂಟ್‌’ ಕ್ಲೀನ್‌ಚಿಟ್‌ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್‌

nelamangala

Leopard Attack: ನೆಲಮಂಗಲ ಸಮೀಪ ಚಿರತೆ ದಾಳಿಗೆ ರೈತ ಮಹಿಳೆ ಬಲಿ

World Cup; ಖೋ ಖೋ ಪಂದ್ಯಾವಳಿಗೆ ಐಒಎ ಬೆಂಬಲ

World Cup; ಖೋ ಖೋ ಪಂದ್ಯಾವಳಿಗೆ ಐಒಎ ಬೆಂಬಲ

ATP Finals : ಜಾನಿಕ್‌ ಸಿನ್ನರ್‌ಗೆ ಮೊದಲ ಪ್ರಶಸ್ತಿ

ATP Finals : ಜಾನಿಕ್‌ ಸಿನ್ನರ್‌ಗೆ ಮೊದಲ ಪ್ರಶಸ್ತಿ

Women’s Asian Hockey Semi-Finals: ಜಪಾನ್‌ ವಿರುದ್ಧ ಭಾರತ ಫೇವರಿಟ್‌

Women’s Asian Hockey Semi-Finals: ಜಪಾನ್‌ ವಿರುದ್ಧ ಭಾರತ ಫೇವರಿಟ್‌

China Master Badminton: ಸಾತ್ವಿಕ್‌-ಚಿರಾಗ್‌ ಜೋಡಿ ಮರಳಿ ಕಣಕ್ಕೆ

China Master Badminton: ಸಾತ್ವಿಕ್‌-ಚಿರಾಗ್‌ ಜೋಡಿ ಮರಳಿ ಕಣಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Dinesh-Gundurao

Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್‌

CN-Manjunath

Mysuru: ಕೋವಿಡ್‌ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್‌.ಮಂಜುನಾಥ್‌

Priyank-Kharghe

Inquiry Report: ಬಿಜೆಪಿಗೆ ’40 ಪರ್ಸೆಂಟ್‌’ ಕ್ಲೀನ್‌ಚಿಟ್‌ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್‌

4

Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್‌ ಪರಾರಿ!

nelamangala

Leopard Attack: ನೆಲಮಂಗಲ ಸಮೀಪ ಚಿರತೆ ದಾಳಿಗೆ ರೈತ ಮಹಿಳೆ ಬಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.