ಕರೆಂಟ್‌ನಿಂದ ಓಡೋ ಗಾಡಿ…
Team Udayavani, Jan 6, 2018, 12:57 PM IST
ಹೊಗೆಯುಗುಳುವ ಪೆಟ್ರೋಲ್/ಡೀಸೆಲ್ ವಾಹನಗಳ ಬದಲು ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳೇ ನಮ್ಮ ಭವಿಷ್ಯ ಅನ್ನುವುದು ಪರಿಸರಪ್ರೇಮಿಗಳ ವಾದ. ಹಾಗಿದ್ದರೆ ಎಲೆಕ್ಟ್ರಿಕ್ ಗಾಡಿಗಳ ಇತಿಹಾಸವೇನು? ಅದರ ಹಿಂದಿರುವ ತಂತ್ರಜ್ಞಾನವೇನು? ಈ ಕ್ಷೇತ್ರದಲ್ಲಿ ಏನೇನು ಬೆಳವಣಿಗೆ ಆಗಿವೆ? ಎಂಥಾ ಸವಾಲುಗಳು ಮುಂದಿವೆ? “ಎಕೋ ಫ್ರೆಂಡ್ಲಿ’ ಎಂಬ ಹಣೆಪಟ್ಟಿ ಹೊತ್ತ ವಾಹನಗಳು ನಿಜಕ್ಕೂ ಪರಿಸರ ಸ್ನೇಹಿಯೇ? ಎಂಬಿತ್ಯಾದಿ ಪ್ರಶ್ನೆಗಳು ನಿಮ್ಮಲ್ಲಿಯೂ ಮೂಡಿರಬಹುದು. ಈ ಬಾರಿಯ “ಅರಿಮೆ ಮಾತುಕತೆ’ಯಲ್ಲಿ, ಆಟೋಮೊಬೈಲ್ ಇಂಜಿನಿಯರ್ ಕಾರ್ತಿಕ್ ಪ್ರಭಾಕರ್ ಈ ಬಗ್ಗೆ ಮಾತನಾಡಲಿದ್ದಾರೆ. ತಂತ್ರಜ್ಞಾನದ ಬಗ್ಗೆ ನಿಮಗಿರುವ ಆಸಕ್ತಿಯನ್ನು ಇವರು ಇನ್ನಷ್ಟು ಹೆಚ್ಚಿಸಬಹುದು.
ಎಲ್ಲಿ?: ಮುನ್ನೋಟ ಪುಸ್ತಕ ಮಳಿಗೆ, ನಂ.67, ಸೌತ್ ಅವೆನ್ಯೂ ಕಾಂಪ್ಲೆಕ್ಸ್, ಡಿವಿಜಿ ರಸ್ತೆ, ಬಸವನಗುಡಿ
ಯಾವಾಗ?: ಜ.7, ಭಾನುವಾರ ಬೆಳಗ್ಗೆ 11.30
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.