ಹೋಗೋಣ ಟ್ರಾಕ್ಟರ್ ಸವಾರಿ!
Team Udayavani, Feb 2, 2019, 2:48 AM IST
ನಗರದ ದೈನಂದಿನ ಜಂಜಾಟದಿಂದ ಹೊರಬಂದು ಪುಟ್ಟ ವಿರಾಮ ತೆಗೆದುಕೊಳ್ಳಲು ಬಯಸುವಿರಾದರೆ ಇಲ್ಲಿದೆ ಅದಕ್ಕೊಂದು ಅವಕಾಶ. ಕೋಲಾರದಿಂದ ಒಂದು ಗಂಟೆ ಪ್ರಯಾಣಿಸಿದರೆ ಸಿಗುವ ‘ಸವಿ ಗರುಡ ಫಾಮ್ಸ್‌ರ್’, ಫಾರ್ಮ್ ಟೂರ್‌ಅನ್ನು ಆಯೋಜಿಸಿದೆ. ಇಲ್ಲಿನ ಪ್ರಶಾಂತ ತೋಟದಲ್ಲಿ ಕುಟುಂಬದೊಂದಿಗೆ ಸಮಯ ಕಳೆಯ ಬಹುದು. ಇಲ್ಲಿ ತರಹೇವಾರಿ ಹಣ್ಣು ಹಂಪಲು ಮತ್ತು ತರಕಾರಿಗಳಿವೆ, ನಡೆದಷ್ಟೂ ಸಾಗುವ ದಾರಿಯಿದೆ. ಟ್ರಾಕ್ಟರ್‌ನಲ್ಲಿ ಮೊದಲಿಗೆ ತೋಟಕ್ಕೆ ಕರೆದೊಯ್ಯುತ್ತಾರೆ. ಅಲ್ಲಿ ಹಣ್ಣು ತರಕಾರಿಗಳ ತೋಪಿನ ನಡುವೆ ಕಾಲ ಕಳೆಯಬಹುದು. ಅಲ್ಲದೆ ತೋಟದ ಹಣ್ಣುಗಳನ್ನು ಆರಿಸಬಹುದು. ಅದೃಷ್ಟವಿದ್ದರೆ ತೋಟದ ಬಳಿಯೇ ಚಿಂಕೆ, ನವಿಲು ಮೊದಲಾದ ಕಾಡು ಪ್ರಾಣಿಗಳ ದರ್ಶನವೂ ಆಗುವುದುಂಟು.
ಮನೆಯೂಟ
ತೋಟದಲ್ಲಿ ಹಣ್ಣು ತರಕಾರಿ ಆರಿಸಿ, ನಡೆದು ವಾಪಸ್ ಹಿಂದಿರುಗುವಷ್ಟರಲ್ಲಿ ದಣಿವಾಗಿರುತ್ತದೆ. ಇದೇ ಸಮಯಕ್ಕೆ ಮನೆಯಲ್ಲೇ ತಯಾರಿಸಲಾದ ಹಳ್ಳಿ ಸೊಗಡಿನ ಭೋಜನ ಸಿದ್ಧವಾಗಿರುತ್ತದೆ. ಬಾಳೆ ಎಲೆ ಊಟ, ಮುದ್ದೆ, ನ್ಪೊಪಿನ ಸಾರು, ಕಾಯಿ ಪಲ್ಯ, ಹಪ್ಪಳ, ಕಾಯಿ ಹೋಳಿಗೆ, ಚಿತ್ರಾನ್ನ, ಕೋಸಂಬರಿ, ಮೊಸರನ್ನ, ಅವರೆಕಾಳು ಸಾರು, ವಡೆ ಇವಿಷ್ಟನ್ನೂ ಒಳಗೊಂಡಿರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.