ನಿರಂಜನ “ಕಲಾ ರಂಜನ”
Team Udayavani, Jul 20, 2019, 5:00 AM IST
ಚಿತ್ರಕಲೆ ಕೇವಲ ಕಲೆಯಲ್ಲ, ಅದೊಂದು ಧ್ಯಾನ. ತನ್ಮಯತೆಯಿಂದ ಗಂಟೆಗಟ್ಟಲೆ, ಕೆಲವೊಮ್ಮೆ ದಿನಗಟ್ಟಲೆ, ವಾರಗಟ್ಟಲೆ ಕುಳಿತು ಚಿತ್ರವೊಂದನ್ನು ಬಿಡಿಸುವ ತಾಳ್ಮೆ ಎಲ್ಲರಿಗೂ ಒಲಿಯುವುದಿಲ್ಲ. ಅಂಥ ಕಲೆಯ ಮೋಹಕ ಬಲೆಗೆ ಒಳಗಾದವರು ಉಡುಪಿಯ ನಿರಂಜನ್. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ನಿರಂಜನ್, ಶಾಲಾ ದಿನಗಳಿಂದಲೂ ಉತ್ತಮ ಚಿತ್ರಕಾರರು. ಅವರು ಬಿಡಿಸಿದ ಚಿತ್ರಗಳಿಗೆ
ಬಹುಮಾನಗಳು ಲಭಿಸುತ್ತಾ ಹೋದಂತೆ, ಕಲೆಯ ಮೇಲಿನ ಆಸಕ್ತಿಯೂ ಬೆಳೆಯುತ್ತಾ ಹೋಯ್ತು. ಈಗ, ನಿರಂಜನ್‌ರ ಕಲಾಕೃತಿಗಳ ಪ್ರದರ್ಶನ ಚಿತ್ರಕಲಾ ಪರಿಷತ್‌ನಲ್ಲಿ ನಡೆಯುತ್ತಿದೆ. 25 ಕಲಾಕೃತಿ ಪ್ರದರ್ಶನ ಜಲವರ್ಣ, ತೈಲವರ್ಣ, ಚಾರ್‌ಕೋಲ್ ಪೆನ್ಸಿಲ್ ಮತ್ತು ಕಾಫಿ ಡಿಕಾಕ್ಷನ್‌ನಲ್ಲಿ ರಚಿಸಿರುವ 25 ವಿಭಿನ್ನ ಕಲಾಕೃತಿಗಳು ಪ್ರದರ್ಶನದಲ್ಲಿ ಇರಲಿವೆ. ಓಶೋ, ಸದ್ಗುರು, ಸ್ವಾಮಿ ವಿವೇಕಾನಂದ, ಬುದ್ಧ, ರವೀಂದ್ರನಾಥ್ ಠ್ಯಾಗೋರ್ ಮುಂತಾದ ಮಹನೀಯರನ್ನು ಕುಂಚದಲ್ಲಿ ಮೂಡಿಸಿದ್ದಾರೆ ನಿರಂಜನ್.
ಯಾವಾಗ?:ಜು. 20-22, ಬೆಳಗ್ಗೆ 10- 7
ಎಲ್ಲಿ?: ಕರ್ನಾಟಕ ಚಿತ್ರಕಲಾ ಪರಿಷತ್
ಕಲಾ ಗ್ಯಾಲರಿ-1, ಕುಮಾರಕೃಪ ರಸ್ತೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.