ಪ್ಲೇಟ್‌ ಬ್ಯಾಂಕ್‌ ಆಫ್ ಬೆಂಗ್ಳೂರ್‌


Team Udayavani, Feb 3, 2018, 4:21 PM IST

palete.jpg

“ಝೀರೋ ವೇಸ್ಟೇಜ್‌’ ಎಂಬ ಪದ ಕೇಳಿದ ತಕ್ಷಣ ಆಭರಣ ಪ್ರಿಯ ಹೆಣ್ಣುಮಕ್ಕಳ ಕಿವಿ ನೆಟ್ಟಗಾದೋದು ಸಹಜ. ಆದರೆ ಝೀರೋ ವೇಸ್ಟೇಜ್‌ ಅನ್ನೋ ಪ¨ ಕೇಳಿ ಸಂತಸ ಪಡುವವರಲ್ಲಿ ಬರೀ ಆಭರಣಪ್ರಿಯರು ಮಾತ್ರವೇ ಅಲ್ಲ ಪ್ರಕೃತಿ ಪ್ರಿಯರೂ ಇದ್ದಾರೆ. ತ್ಯಾಜ್ಯದ ಸಮಸ್ಯೆಯ ಕುರಿತು ಬೆಂಗಳೂರಿಗರಾದ ನಮಗೆ ಹೆಚ್ಚೇನೂ ಹೇಳಿಕೊಡುವ ಅಗತ್ಯವಿಲ್ಲ.

ವೇಸ್ಟ್‌ ಮ್ಯಾನೇಜ್‌ಮೆಂಟ್‌ ಅನ್ನೋದು ನಮ್ಮದೊಂದೇ ಅಲ್ಲ, ಎಲ್ಲಾ ಮಹಾನಗರಗಳ ದೊಡ್ಡ ಸಮಸ್ಯೆ. ಒಂದು ಕಡೆಯಿಂದ ಎತ್ತಿಕೊಂಡು ಇನ್ನೊಂದು ಕಡೆ ಹಾಕುವುದರಿಂದ ತ್ಯಾಜ್ಯ ವಿಲೇವಾರಿಯೇನೋ ಆಗುತ್ತೆ ಆದರೆ ಕಸದ ಸಮಸ್ಯೆಗೆ ಸಿಕ್ಕಂತಾಗುವುದಿಲ್ಲ ಎನ್ನುವುದು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಾದ ಸಂಗತಿ. ತ್ಯಾಜ್ಯದ ಉತ್ಪಾದಕರು ನಾವೇ ಆಗಿರುವುದರಿಂದ, ತ್ಯಾಜ್ಯ ಸಮಸ್ಯೆಯ ಪರಿಹಾರ ಕೂಡಾ ನಮ್ಮಲ್ಲೇ ಇದೆ. “ಪ್ಲೇಟ್‌ ಬ್ಯಾಂಕ್‌’ಗಳು ಇದಕ್ಕೊಂದು ಉದಾಹರಣೆ! 

ಹಬ್ಬ ಹರಿದಿನಗಳು, ಕೌಟುಂಬಿಕ ಕಾರ್ಯಕ್ರಮಗಳು ನಮ್ಮ ಜೀವನದ ಅವಿಭಾಜ್ಯ ಅಂಗ. ಆರ್ಥಿಕತೆ ಕುಸಿದರೂ, ಬಜೆಟ್‌, ರಿಸೆಷನ್‌ ಎಂಥ ವೈಪರೀತ್ಯಗಳು ಎದುರಾದರೂ ಕಾರ್ಯಕ್ರಮಗಳನ್ನು ಅದ್ಧೂರಿಯಾಗಿ ಮಾಡಲು ನಾವು ಹಿಂದೆ ಮುಂದೆ ನೋಡುವುದಿಲ್ಲ. ವರ್ಷದಲ್ಲಿ ಇಂತಿಷ್ಟು ಕಾರ್ಯಕ್ರಮಗಳಿಗೆಂದು ನಾವೆಲ್ಲರೂ ಹಾಜರಾಗಿಯೇ ತೀರುತ್ತೇವೆ. ಇಂಥ ಕಾರ್ಯಕ್ರಮಗಳಿಂದ ನಮ್ಮ ಸಂತಸ ಇಮ್ಮಡಿಯಾಗುತ್ತೆ ಅನ್ನೋದೇನೋ ನಿಜ. ಆದರೆ ಒಂದೊಂದು ಕಾರ್ಯಕ್ರಮ ಕೊನೆಗೊಂಡಾಗಲೂ ಟನ್‌ಗಟ್ಟಲೆ ತ್ಯಾಜ್ಯ ಸೃಷ್ಟಿಯಾಗುತ್ತೆ ಅನ್ನೋದು ನಮ್ಮಲ್ಲಿ ಎಷ್ಟು ಜನರಿಗೆ ಗೊತ್ತು? ಹೀಗಾಗಿಯೇ ಝೀರೋ ವೇಸ್ಟ್‌ ಕಾರ್ಯಕ್ರಮಗಳ ಆಯೋಜನೆ ಬೆಂಗಳೂರಿನಲ್ಲಿ ಮಹತ್ವವನ್ನು ಪಡೆದುಕೊಳ್ಳುತ್ತಿವೆ.

ಝೀರೋ ವೇಸ್ಟ್‌ ಹೇಗೆ?: ನಮ್ಮ ನಮ್ಮ ಮನೆಯ ಕಾರ್ಯಕ್ರಮಗಳನ್ನು “ಝೀರೋ ವೇಸ್ಟ್‌’ ಗೆ ಒಳಪಡಿಸಲು ಎಂ.ಬಿ.ಎ ಪದವಿ ಬೇಕಿಲ್ಲ, ತಾಂತ್ರಿಕ ವಿವರಣೆಗಳನ್ನು ತಿಳಿದುಕೊಳ್ಳಬೇಕಾದ ಅಗತ್ಯವೂ ಇಲ್ಲ. ಮನಸ್ಸು ಮಾಡಿದರೆ ಸಾಕು. ಕಾರ್ಯಕ್ರಮಗಳಲ್ಲಿ ಊಟ- ತಿಂಡಿ ಇದ್ದೇ ಇರುತ್ತೆ. ಅಲ್ಲಿ ಬಾಳೆ ಎಲೆಯನ್ನೋ, ಅಡಕೆ ಹಾಳೆಯನ್ನೋ ಅಥವಾ ಯೂಸ್‌ ಆ್ಯಂಡ್‌ ಥ್ರೋ ಪೇಪರ್‌ ತಟ್ಟೆಗಳನ್ನೋ ನಾವು ಬಳಸುತ್ತೇವೆ.

ಟನ್‌ಗಟ್ಟಲೆ ತ್ಯಾಜ್ಯದಲ್ಲಿ ಇವುಗಳದ್ದೇ ಸಿಂಹಪಾಲು. ಇದನ್ನು ಗಮನದಲ್ಲಿಟ್ಟುಕೊಂಡೇ ಅನೇಕ ಸ್ವಸಹಾಯ ಸಂಘಗಳು ಪ್ಲೇಟ್‌ ಬ್ಯಾಂಕುಗಳನ್ನು ಸ್ಥಾಪಿಸಿವೆ. ಯಾವುದೇ ಕಾರ್ಯಕ್ರಮ, ಸಭೆ ಸಮಾರಂಭಗಳಿಗೆ ಈ ಸಂಘಗಳು ಪಾತ್ರೆಗಳನ್ನು ಒದಗಿಸುತ್ತೆ. ಇವುಗಳಲ್ಲಿ ಕೆಲವು ಉಚಿತವಾಗಿ ನೀಡಿದರೆ, ಇನ್ನು ಕೆಲವು ಮಿನಿಮಂ ಶುಲ್ಕವನ್ನು ವಿಧಿಸುತ್ತವೆ. ಟನ್‌ಗಟ್ಟಲೆ ತ್ಯಾಜ್ಯ ಸೃಷ್ಟಿಯನ್ನು ತಡೆಯುವುದರಿಂದ ಇದು ಒಳ್ಳೆಯ ಬೆಳವಣಿಗೆ. ನಗರದಲ್ಲಿ ಕಾರ್ಯಾಚರಿಸುತ್ತಿರುವ ಕೆಲ ಪ್ಲೇಟ್‌ ಬ್ಯಾಂಕುಗಳ ಮಾಹಿತಿ ಇಲ್ಲಿದೆ. 

1. ಕೆ.ಆರ್‌.ಪುರಂ ರೈಸಿಂಗ್‌ ಪ್ಲೇಟ್‌ ಬ್ಯಾಂಕ್‌: ಸಾರ್ವಜನಿಕ ಸಮಸ್ಯೆಗಳನ್ನು ಪ್ರತಿಭಟನೆ ನ‚ಡೆಸುವ ಮೂಲಕ ಅಹವಾಲು ಸಲ್ಲಿಸುವ ಮೂಲಕ, ಸಂಬಂಧ ಪಟ್ಟವರಿಗೆ ದೂರು ನೀಡುವುದರ ಮೂಲಕ ವ್ಯವಸ್ಥೆಗೆ ಚುರುಕು ನೀಡುವ ಕೆಲಸದಲ್ಲಿ ತೊಡಗಿರು ಸಂಘಗಳಲ್ಲಿ ಒಂದು ಕೆ.ಆರ್‌.ಪುರಂ ರೈಸಿಂಗ್‌. ಪ್ಲಾಸ್ಟಿಕ್‌ ಬಳಕೆಯನ್ನು ತಡೆಗಟ್ಟುವ ಉದ್ದೇಶದಿಂದ ಸಂಘ, ಸ್ಥಳೀಯ ಕಾರ್ಪೊರೇಟರ್‌ ಪೂರ್ಣಿಮಾ ಶ್ರೀನಿವಾಸ್‌ ಅವರ ಸಹಾಯದಿಂದ ಪ್ಲೇಟ್‌ ಬ್ಯಾಂಕನ್ನು ಪ್ರಾರಂಭಿಸಿತು. ಈಗ ಇವರ ಸಂಗ್ರಹದಲ್ಲಿ ತಲಾ 150 ತಟ್ಟೆ, ಲೋಟ, ಸ್ಪೂನು ಸೇರಿದಂತೆ ಹಲವಾರು ಪಾತ್ರೆಗಳಿವೆ.

ಈ ವರ್ಷ ಇವುಗಳನ್ನು ಸಾವಿರಕ್ಕೆ ಏರಿಸುವ ಯೋಜನೆ ಇದೆ ಎನ್ನುತ್ತಾರೆ ಉದಯವಾಣಿ ಜೊತೆ ಮಾತಾಡಿದ ಕೆ.ಆರ್‌.ಪುರಂ ರೈಸಿಂಗ್‌ ಸಂಘದ ಉಪಾಧ್ಯಕ್ಷ ನವೀನ್‌ ಅವರು. ಇದು ಲಾಭರಹಿತ ಉದ್ದೇಶದಿಂದ ಹುಟ್ಟಿಕೊಂಡ ಪ್ಲೇಟ್‌ ಬ್ಯಾಂಕ್‌ ಆಗಿರುವುದರಿಂದ ಉಚಿತವಾಗಿ ಯಾರು ಬೇಕಾದರೂ ಇವುಗಳನ್ನು ಬಳಸಿ ಹಿಂದಿರುಗಿಸಬಹುದು. ಹಿಂದಿರುಗಿಸುವಾಗ ಅವುಗಳನ್ನು ತೊಳೆದು ಕೊಡಬೇಕು ಎಂಬುದೊಂದೇ ನಿಯಮ. ಸ್ವಚ್ಚತೆಗೆ ಮೊದಲ ಆದ್ಯತೆ. ಬೆಂಗಳೂರು ನಗರದಲ್ಲಿ ವಾಸವಿರುವ ಯಾರು ಬೇಕಾದರೂ ಈ ಪ್ಲೇಟ್‌ ಬ್ಯಾಂಕನ್ನು ಬಳಸಬಹುದು. 
ಸಂಪರ್ಕ ಸಂಖ್ಯೆ: 8880884999

2. ಸ್ಪಿಲ್‌ ಸೇವರ್: ಐಟಿ ಕ್ಷೇತ್ರದಲ್ಲಿ ದುಡಿಯುತ್ತಿದ್ದ ಇಬ್ಬರು ಹೆಣ್ಣುಮಕ್ಕಳು ಶುರುಮಾಡಿದ ಪ್ಲೇಟ್‌ ಬ್ಯಾಂಕ್‌ ಇದು. ಪೂಜಾ ಈಗ ಐಟಿ ಕ್ಷೇತ್ರದಲ್ಲಿಲ್ಲ, ಪೂರ್ಣಪ್ರಮಾಣದಲ್ಲಿ ಸಂಸ್ಥೆಯ ಅಭಿವೃದ್ಧಿಯಲ್ಲಿ ತೊಡಗಿಕೊಂಡಿದ್ದಾರೆ. ಶಾಲಿನಿ ಅವರು ಉದ್ಯೋಗದಲ್ಲಿದ್ದುಕೊಂಡೇ ಗೆಳತಿ ಪೂಜಾ ಅವರಿಗೆ ಸಹಕರಿಸುತ್ತಿದ್ದಾರೆ. “ಕಾರ್ಪೊರೇಟ್‌ ಮೀಟಿಂಗ್‌ ಮತ್ತು ಸಣ್ಣಪುಟ್ಟ ಪಾರ್ಟಿಗಳು ಮತ್ತು ಕೆಲ ಕೇಟರಿಂಗ್‌ ಸಂಸ್ಥೆಯವರೂ, ನಾವು ಒಳ್ಳೆಯ ಉದ್ದೇಶಕ್ಕೆ ಕೆಲಸ ಮಾಡುತ್ತಿರುವುದರಿಂದ ನಮ್ಮ ಪ್ಲೇಟು ಮತ್ತಿತರ ಪಾತ್ರೆಗಳನ್ನು ಕೊಂಡೊಯ್ಯುತ್ತಾರೆ. ಈಗೀಗ ಬಹಳಷ್ಟು ಜನರು ಸ್ವಯಂಪ್ರೇರಿತರಾಗಿ ನಮ್ಮನ್ನು ಸಂಪರ್ಕಿಸುತ್ತಿದ್ದಾರೆ.

ನಮ್ಮಂತೆಯೇ ಇನ್ನಷ್ಟು ಜನರು ಸ್ಪಿಲ್‌ ಸೇವರ್ ಥರದ ಪ್ಲೇಟ್‌ ಬ್ಯಾಂಕ್‌ಗಳನ್ನು ತೆರೆಯಬೇಕು. ಆಗ ನಮ್ಮ ನಗರದ ತ್ಯಾಜ್ಯ ಸಮಸ್ಯೆ ಖಂಡಿತ ನಿಯಂತ್ರಣಕ್ಕೆ ಬರುತ್ತೆ’ ಅನ್ನೋದು ಪೂಜಾ ಅವರ ಅಭಿಪ್ರಾಯ. ಇವರು ತಮ್ಮ ಸೇವೆಗೆ ಪ್ರತಿ ವ್ಯಕ್ತಿಗೆ 25 ರಂತೆ ಶುಲ್ಕ ವಿಧಿಸುತ್ತಾರೆ. ಒಂದು ಸೆಟ್‌ ಎಂದರೆ ಪ್ಲೇಟ್‌, ಲೋಟ, ಚಮಚ ಇತ್ಯಾದಿ ಪಾತ್ರೆಗಳು ಒಳಗೊಳ್ಳುತ್ತವೆ. ಒಂದು ವಿಶೇಷವೆಂದರೆ ಇಲ್ಲಿ ಪಾತ್ರೆಗಳನ್ನು ಸಂಸ್ಥೆಯವರೇ ತೊಳೆಯುತ್ತಾರೆ. ಗಿರಾಕಿಗಳು ತಾವೇ ತೊಳೆದು ಕೊಡುತ್ತೇವೆಂದರೆ ಶುಲ್ಕದಲ್ಲಿ ವಿನಾಯಿತಿ ಇದೆ. ಫೋನ್‌ ಮೂಲಕ ಆರ್ಡರ್‌ ಕೊಟ್ಟರೆ ಮನೆ ಬಾಗಿಲಿಗೇ ಪ್ಲೇಟುಗಳು ಸರಬರಾಜಾಗುವುದು.
ಫೇಸ್‌ಬುಕ್‌ ಪೇಜ್‌(ಫೇಸ್‌ಬುಕ್‌ ಸಿಂಬಲ್‌ ಹಾಕಿ): www.facebook.com/SpillSavers

3. ಅದಮ್ಯ ಚೇತನ: ತೇಜಸ್ವಿನಿ ಅನಂತಕುಮಾರ್‌ ಅವರ ನೇತೃತ್ವದ ಸ್ವಸಹಾಯ ಸಂಘ “ಅದಮ್ಯ ಚೇತನ’ ಕೂಡಾ ಪ್ಲೇಟ್‌ ಬ್ಯಾಂಕನ್ನು ನಡೆಸುತ್ತಿದೆ. ಇವರ ಸಂಗ್ರಹದಲ್ಲಿ ಸುಮಾರು 10,000 ಸ್ಟೀಲ್‌ ತಟ್ಟೆಗಳು, ಚಮಚಗಳು ಮತ್ತು ಲೋಟಗಳಿವೆ. ನಗರದಲ್ಲಿ ನಡೆಯುವ ಯಾವುದೇ ಸಭೆ ಸಮಾರಂಭಗಳಿಗೆ ಇಲ್ಲಿಂದ ಪಾತ್ರೆಗಳನ್ನು ಯಾರು ಬೇಕಾದರೂ ಪಡೆಯಬಹುದಾಗಿದೆ. ಯಾವುದೇ ಶುಲ್ಕವನ್ನು ನೀಡಬೇಕಿಲ್ಲ. ಬಸವನಗುಡಿಯ ಆಸುಪಾಸಿನಲ್ಲಿರುವ ಜನರು, ಬರ್ತ್‌ಡೇ ಪಾರ್ಟಿ, ಪೂಜೆ, ಹೀಗೆ ಮನೆಯಲ್ಲಿ ಯಾವ ಕಾರ್ಯಕ್ರಮಗಳಿದ್ದರೂ ಇಲ್ಲಿಂದ ಪಾತ್ರೆಗಳನ್ನು ಪಡೆದುಕೊಳ್ಳುತ್ತಾರೆ. ಸಂಸದ ಅನಂತಕುಮಾರ್‌ ಅವರ ಪತ್ನಿಯಾಗಿರುವ ತೇಜಸ್ವಿನಿಯವರು ಭವಿಷ್ಯದಲ್ಲಿ ತಮ್ಮ ಪ್ಲೇಟ್‌ ಬ್ಯಾಂಕ್‌ಅನ್ನು ವಿಸ್ತರಿಸುವ ಯೋಜನೆಯನ್ನು ಹೊಂದಿದ್ದಾರೆ. 
ಸಂಪರ್ಕ: 080-26620404

4. ರೆಂಟ್‌ ಎ ಕಟ್ಲರಿ: ಮನೆಯಲ್ಲಿ ಪರಿಸರಸ್ನೇಹಿ ವಸ್ತುಗಳನ್ನೇ ಬಳಸುತ್ತಿದ್ದರು ಲಕ್ಷಿ. ಎಷ್ಟರಮಟ್ಟಿಗೆ ಅವರು ಪ್ಲಾಸ್ಟಿಕ್‌ನಿಂದ ದೂರವಿದ್ದರು ಎಂದರೆ, ತಾವೆಲ್ಲೇ ಹೋದರೂ ಒಂದು ಸ್ಟೀಲ್‌ ತಟ್ಟೆ, ಸ್ಪೂನ್‌, ಲೋಟ ಇವು ಮೂರನ್ನು ಕೊಂಡೊಯ್ಯುತ್ತಿದ್ದರು. ಎಲ್ಲಾದರೂ ಕಾಫಿ ಕುಡಿಯಬೇಕಾಗಿ ಬಂದರೆ, ಹೋಟೆಲ್‌ನಲ್ಲಿ ತಿಂಡಿ ತಿನ್ನಬೇಕಾಗಿ ಬಂದರೆ ಅಲ್ಲಿನ ಪ್ಲಾಸ್ಟಿಕ್‌ ಲೋಟ ಅಥವಾ ತಟ್ಟೆಯಲ್ಲಿ ತಿನ್ನುವುದರ ಬದಲಾಗಿ ತಮ್ಮದೇ ತಟ್ಟೆಯನ್ನು ಬಳಸುತ್ತಿದ್ದಾರೆ. ಅವರು ತಮ್ಮ ಸ್ನೇಹಿತೆ ರಿಶಿತಾ ಅವರೊಂದಿಗೆ ಸೇರಿ ಶುರು ಮಾಡಿದ ಪ್ಲೇಟ್‌ ಬ್ಯಾಂಕ್‌ “ರೆಂಟ್‌ ಎ ಕಟ್ಲರಿ’.

ಸದ್ಯಕ್ಕೆ ಈ ಸಂಸ್ಥೆ ವೈಟ್‌ಫೀಲ್ಡ್‌ ಮತ್ತು ಸರ್ಜಾಪುರದ ಕಾರ್ಯವಾಪ್ತಿಯಲ್ಲಿ ಮಾತ್ರ ಕಾರ್ಯಾಚರಿಸುತ್ತಿದೆ. ಅದರೆ ಇವೆರಡು ಪ್ರದೇಶಗಳ ಗಿರಾಕಿಗಳಿಗೆ ಮಾತ್ರ ಹೋಂ ಡೆಲಿವರಿ ಸೌಲಭ್ಯವಿದೆ. “ಬೇರೆ ಪ್ರದೇಶದ ಜನರು ನಮ್ಮಲ್ಲಿಗೇ ಬಂದು ಕೊಂಡೊಯ್ದ ಉದಾಹರಣೆಗಳು ಬಹಳಷ್ಟಿವೆ. ನಾಗರಿಕರಲ್ಲಿ ಪರಿಸರ ಕಾಳಜಿ ಜಾಗೃತವಾಗುತ್ತಿದೆ ಎನ್ನುವುದು ಇದರಿಂದ ತಿಳಿಯಬಹುದು’ ಎನ್ನುತ್ತಾರೆ ಲಕ್ಷಿ. ಅಂದ ಹಾಗೆ ಪಾತ್ರೆಗಳನ್ನು ತೊಳೆಯಲು ವಿಶೇಷ ವ್ಯವಸ್ಥೆಯನ್ನು ಇಲ್ಲಿ ಅವರು ಮಾಡಿಕೊಂಡಿದ್ದಾರೆ. ತಾವೇ ತಯಾರಿಸಿದ ನಿಂಬೆಯ ಲಿಕ್ವಿಡ್‌ನಿಂದ ಪಾತ್ರೆಗಳನ್ನು ತೊಳೆಯಲಾಗುತ್ತೆ. ನಂತರ ಅವುಗಳನ್ನು ನೀರು ಉಳಿಯದಂತೆ ಸಂಗ್ರಹಿಸಲಾಗುತ್ತೆ. ಸ್ಟೀಲ್‌ ತಟ್ಟೆ, ಬೌಲ್‌, ಸ್ಪೂನ್‌ ಇವು ಮೂರರ ಒಂದು ಸೆಟ್‌ಗೆ ದಿನಕ್ಕೆ 15 ರೂ. ಶುಲ್ಕ ನಿಗದಿ ಪಡಿಸಿದ್ದಾರೆ.
ಫೇಸ್‌ಬುಕ್‌ ಪೇಜ್‌(ಫೇಸ್‌ಬುಕ್‌ ಸಿಂಬಲ್‌ ಹಾಕಿ): www.facebook.com/rentacutlery/

5. ರೆಂಟ್‌ ಆನ್‌ ಗೋ: ಇದು ಆನ್‌ಲೈನ್‌ ಪ್ಲೇಟ್‌ ಬ್ಯಾಂಕ್‌. ಇಲ್ಲಿ ನೀಡಲಾಗಿರುವ ಜಾಲತಾಣಕ್ಕೆ ಭೇಟಿ ನೀಡಿದರೆ ಅವರ ಬಳಿ ಸದ್ಯ ಲಭ್ಯ ಇರುವ ಪಾತ್ರೆಗಳ ಮಾಹಿತಿ ಮತ್ತು ಅದರ ಶುಲ್ಕವನ್ನು ತಿಳಿದುಕೊಳ್ಳಬಹುದು. ಒಂದು ಶರತ್ತೆಂದರೆ ಪಾತ್ರೆಗಳನ್ನು ಪಡೆಯುವ ಮುನ್ನ ಅಡ್ವಾನ್ಸ್‌ ಮೊತ್ತವನ್ನು ಪಾವತಿಸಬೇಕು. ಅವರ ಬಳಿ ಇರುವ ಸಂಗ್ರಹ ಸೀಮಿತವಾದರೂ ಗಿರಾಕಿಗಳ ಅಗತ್ಯಕ್ಕೆ ಹೊಂದಿದರೆ ಬಾಡಿಗೆಗೆ ಪಡೆಯಬಹುದು.
ವೆಬ್‌ಸೈಟ್‌: goo.gl/SyunwY

* ಹರ್ಷವರ್ಧನ್‌ ಸುಳ್ಯ

ಟಾಪ್ ನ್ಯೂಸ್

Sulya-Elephant

Sulya: ಆನೆಗುಂಡಿ: ಹೆದ್ದಾರಿ ಬದಿ ಎರಡು ಕಾಡಾನೆ ಸಂಚಾರ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

JDS protest: ಎಚ್‌ಡಿಕೆ ಕರಿಯ: ಜಮೀರ್‌ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ

JDS protest: ಎಚ್‌ಡಿಕೆ ಕರಿಯ: ಜಮೀರ್‌ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ

ಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

Uddhav Thackeray’s bag inspection by election commission, controversy

Maha Election; ಚು.ಆಯೋಗದಿಂದ ಉದ್ಧವ್‌ ಠಾಕ್ರೆ ಬ್ಯಾಗ್‌ ಪರಿಶೀಲನೆ, ವಿವಾದ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

Sulya-Elephant

Sulya: ಆನೆಗುಂಡಿ: ಹೆದ್ದಾರಿ ಬದಿ ಎರಡು ಕಾಡಾನೆ ಸಂಚಾರ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Karnataka by-election: 3 ಕ್ಷೇತ್ರದಲ್ಲಿ 33.33 ಕೋ.ರೂ. ಮೌಲ್ಯದ ಅಕ್ರಮ ವಶ

Karnataka by-election: 3 ಕ್ಷೇತ್ರದಲ್ಲಿ 33.33 ಕೋ.ರೂ. ಮೌಲ್ಯದ ಅಕ್ರಮ ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.