“ಪೊಲೀಸ್’ ಬಂದು, ಅಡ್ವಾನ್ಸ್ ಕೊಡಿಸಿದ!
Team Udayavani, Sep 2, 2017, 3:02 PM IST
ಬೆಂಗಳೂರಿಗೆ ವರ್ಗವಾಗಿ ಬಂದ ಕಾಲ. ಬಾಡಿಗೆ ಮನೆ ಸಿಗುವವರೆಗೂ ಹೆಂಡತಿ ತವರಲ್ಲಿ, ನಾನು ಸ್ನೇಹಿತನ ಮನೆಯಲ್ಲಿ. ಮನೆ ಹುಡುಕುವಾಗ ಕೊನೆಗೂ “ಟು ಲೆಟ್’ ಬೋರ್ಡ್ ಕಾಣಿಸಿತು. ಸೀದಾ ಅಲ್ಲಿಗೆ ಹೋದೆ. ಬಾಡಿಗೆ, ಅಡ್ವಾನ್ಸ್, ಮನೆ ಪರಿಸರ, ಎಲ್ಲವೂ ಒಪ್ಪಿಗೆಯಾಯಿತು. ಟೋಕನ್ ಅಡ್ವಾನ್ಸ್ ಒಂದು ಸಾವಿರ ರೂ. ತೆತ್ತು, ರೆವಿನ್ಯೂ ಸ್ಟಾಂಪ್ ಹಚ್ಚಿದ ರಶೀದಿಯನ್ನು ಮಾಲೀಕ ಕೊಟ್ಟ. ಕೀ ಇಲ್ಲವೆಂದು ಮಾಲೀಕ ಮನೆಯನ್ನು ಕಿಟಕಿಯಿಂದಲೇ ತೋರಿಸಿದ್ದ. ಮನೆಯ ಒಳಗಿನ ವಾತಾವರಣ ನೋಡಲು, ಎರಡು- ಮೂರು ಸಲ ಹೋದರೂ ಏನೇನೋ ಸಬೂಬು ಹೇಳಿ, ಸಾಗ ಹಾಕಿದ್ದ. ಅವನ ಆಟ ನನ್ನ ಅನುಮಾನಕ್ಕೆ ಕಾರಣವಾಯಿತು. ನನ್ನ ಸ್ನೇಹಿತನೊಬ್ಬನಿಗೆ ವಿಷಯ ತಿಳಿಸಿದೆ. ಹೇಗಾದರೂ ನನ್ನ ಅಡ್ವಾನ್ಸ್ ಹಣ ವಾಪಸ್ ಕೊಡಿಸಲು ದುಂಬಾಲು ಬಿದ್ದೆ.
ಒಂದು ದಿನ ಬೆಳಗ್ಗೆ ಏಳು ಗಂಟೆಗೆ ನನ್ನ ಸ್ನೇಹಿತ ಬುಲೆಟ್ ಬೈಕಿನಲ್ಲಿ ಮನೆಯ ಮುಂದೆ ಹಾಜರಾದ. ಕಂದು ಬಣ್ಣದ ಶೂ, ಖಾಕಿ ಪ್ಯಾಂಟನ್ನು ಧರಿಸಿದ್ದ. ಕಟ್ಟುಮಸ್ತಾದ ಶರೀರ, ಪೆಡಸು ಮುಖ ಅವನ ಪೊಲೀಸ್ ಫ್ಯಾನ್ಸಿ ಡ್ರೆಸ್ಸಿಗೆ ಸರಿಯಾಗಿ ಹೊಂದಾಣಿಕೆಯಾಗುತ್ತಿತ್ತು. ಅಡ್ವಾನ್ಸ್ ಕೊಟ್ಟ ಮನೆಯ ಮುಂದೆ ಬೈಕ್ ನಿಲ್ಲಿಸಿ, ಬಾಗಿಲು ಬಡಿದ. ಕೆಲವೇ ಕ್ಷಣಗಳಲ್ಲಿ ಮಾಲೀಕ ಪ್ರತ್ಯಕ್ಷನಾದ. ಪೊಲೀಸ್ ಡ್ರೆಸ್ಸಿನಲ್ಲಿದ್ದ ನನ್ನ ಗೆಳೆಯನನ್ನು ಕಂಡು ಕೊಂಚ ಅಂಜಿದಂತೆ ಕಂಡ. ಪೊಲೀಸ್ ಭಾಷೆಯಲ್ಲಿ ಮಾತು ಪ್ರಾರಂಭಿಸಿದ ಸ್ನೇಹಿತ ಕೊನೆಗೆ, “ನಾಳೆ ಬೆಳಗ್ಗೆ ಹಣ ಇವರಿಗೆ ವಾಪಸ್ ಕೊಡಲಿಲ್ಲಾಂದ್ರೆ ಒದ್ದು ಒಳಗೆ ಹಾಕ್ತೀನಿ’ ಎಂದು ಬೆದರಿಕೆ ಹಾಕಿದ
ಮರುದಿನ ನಾನು ಅವನ ಮನೆಗೆ ಹೋದಾಗ ಅವನು ನನ್ನನ್ನೇ ಕಾಯುತ್ತಿದ್ದ. ಮರುಮಾತಿಲ್ಲದೆ, ರಶೀದಿ ಪಡೆದು ಹಣ ಕೊಟ್ಟ. ನಾನು ತಕ್ಷಣ ರಂಗಭೂಮಿ ಕಲಾವಿದನಾದ ನನ್ನ ಸ್ನೇಹಿತನಿಗೆ ಕೃತಜ್ಞತೆ ಹೇಳಿದೆ. ನನ್ನ ಸ್ನೇಹಿತ ಹೇಗೆ ಪೊಲೀಸ್ ಅಲ್ಲವೋ, ಹಾಗೆಯೇ ಆತ ಮನೆಯ ಮಾಲೀಕನೂ ಆಗಿರಲಿಲ್ಲ!
ಕೆ.ಕೆ. ಗಂಗಾಧರನ್, ಬ್ಯಾಡರಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.