ಪುರಂದರ ದಾಸ, ತ್ಯಾಗರಾಜರ ಆರಾಧಾನಾ ಮಹೋತ್ಸವ
Team Udayavani, Feb 1, 2020, 6:01 AM IST
ಗುರುಗುಹ ಸಂಗೀತ ಮಹಾವಿದ್ಯಾಲಯವು, ಪುರಂದರದಾಸರು ಮತ್ತು ತ್ಯಾಗರಾಜ ಸ್ವಾಮಿಗಳ ಆರಾಧನಾ ಮಹೋತ್ಸವವನ್ನು ಹಮ್ಮಿಕೊಂಡಿದೆ. ದಿನವಿಡೀ ನಡೆಯುವ ಈ ಗಾನ ಸಮಾರಾಧನೆಗೆ ಓಂಕಾರಾಶ್ರಮದ ಶ್ರೀ ಮಧುಸೂದನಾನಂದ ಪುರಿ ಸ್ವಾಮೀಜಿ ಚಾಲನೆ ನೀಡಲಿದ್ದಾರೆ. ಇದೇ ವೇಳೆ, ಸಂಗೀತ ವಿದ್ವಾಂಸ ಶೃಂಗೇರಿ ಎಚ್.ಎಸ್. ನಾಗರಾಜರ ಮಾರ್ಗದರ್ಶನದಲ್ಲಿ ನಡೆದ ಉಚಿತ ದೇವರನಾಮ ಶಿಬಿರವು ಕೂಡಾ ಸಮಾರೋಪಗೊಳ್ಳಲಿದೆ.
ಸಾವಿರ ಮಹಿಳೆಯರು ಏಕಕಂಠದಿಂದ ತಾವು ಕಲಿತ ದೇವರ ನಾಮಗಳನ್ನು ಹಾಡಲಿದ್ದಾರೆ. ಬೆಳಗ್ಗೆ 7ಕ್ಕೆ ಪ್ರಾಕಾರೋತ್ಸವ ನಡೆಯಲಿದ್ದು, ದ್ವಾದಶ ಜ್ಯೋತಿರ್ಲಿಂಗ ದೇವಾಲಯದ ಸುತ್ತ 10 ಬಾರಿ ಪ್ರದಕ್ಷಿಣೆ ಹಾಕಿದ ನಂತರ, ಗಾಯಕರೆಲ್ಲರೂ “ಪ್ರಾಕಾರ ಸಂಕೀರ್ತನೆ’ ಮಾಡುವರು. ನಂತರ ವಿದ್ಯಾಲಯದ ಹಿರಿಯ ವಿದ್ಯಾರ್ಥಿಗಳಿಂದ ದಿವ್ಯನಾಮ ಸಂಕೀರ್ತನೆ, ತ್ಯಾಗರಾಜರ ಘನರಾಗ ಪಂಚರತ್ನ ಗೋಷ್ಠಿ ಗಾಯನ, ನವರತ್ನ ಮಾಲಿಕೆ ಕೃತಿಗಳ ಗಾಯನ ನಡೆಯಲಿದೆ.
ಎಲ್ಲಿ?: ಓಂಕಾರ ಆಶ್ರಮ, ದ್ವಾದಶ ಜ್ಯೋತಿರ್ಲಿಂಗ ದೇವಸ್ಥಾನ ಆವರಣ, ಓಂಕಾರ ಹಿಲ್ಸ್, ಕೆಂಗೇರಿ
ಯಾವಾಗ?: ಫೆ.2, ಭಾನುವಾರ ಬೆಳಗ್ಗೆ 7
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್ ಸಾಥ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.