ಇದುವೇ  ರಾಜಭ”ವನ’ ರಾಜನೂರಿನ ತೋಟ ನೋಡ ಬನ್ನಿ…


Team Udayavani, Aug 18, 2018, 5:31 PM IST

600.jpg

 ನಮ್ಮ ಬೆಂಗಳೂರು ಗಾರ್ಡನ್‌ ಸಿಟಿ ನಿಜ. ಈ ಮಾತನ್ನು ಒಪ್ಪುವವರು ಲಾಲ್‌ಬಾಗ್‌, ಕಬ್ಬನ್‌ ಪಾರ್ಕುಗಳಿಗಷ್ಟೇ ತಮ್ಮ ದೃಷ್ಟಿಯನ್ನು ಸೀಮಿತಗೊಳಿಸಿಕೊಂಡುಬಿಟ್ಟಿರುತ್ತಾರೆ. ನಗರಕ್ಕೆ ಹೊಸದಾಗಿ ಬಂದವರೂ ಅಷ್ಟೆ. ಲಾಲ್‌ಬಾಗ್‌ ಮತ್ತು ಕಬ್ಬನ್‌ ಪಾರ್ಕ್‌, ಇವೆರಡು ಜಾಗಗಳಿಗೆ ಭೇಟಿ ಕೊಟ್ಟು “ಬ್ಯಾಂಗಲೋರ್‌ ಈಸ್‌ ಕೂಲ್‌’ ಎಂದುಬಿಡುತ್ತಾರೆ. ಆದರೆ, ಕಬ್ಬನ್‌ ಪಾರ್ಕ್‌ ಹೆಸರಿನಲ್ಲಿರುವ ಮಹಾನುಭಾವ, ಮಾರ್ಕ್‌ ಕಬ್ಬನ್‌ನೇ ಕಟ್ಟಿಸಿರುವ ರಾಜಭವನ ಕೂಡಾ ಹಸುರಿನಿಂದ ಸಮೃದ್ಧವಾಗಿದೆ ಎಂಬುದರ ಅಂದಾಜು ಬಹುತೇಕರಿಗೆ ಇರಲಿಕ್ಕಿಲ್ಲ. “ಅಂದಾಜು ಹೇಗೆ ಸಿಗುತ್ತೆ? ಒಳಗೆ ಬಿಟ್ಟರೆ ತಾನೇ ಗೊತ್ತಾಗೋದು…’ ಎಂದಿರಾ? ಅದು ನಿಜ. ರಾಜಭವನಕ್ಕೆ ಸಾರ್ವಜನಿಕ ಪ್ರವೇಶ ನಿಷಿದ್ಧ. ಆದರೀಗ ನೀವೂ ಒಳಕ್ಕೆ ಹೋಗಿ ನೋಡಿಕೊಂಡು ಬರುವ ಸಮಯ ಬಂದಿದೆ!

  ಸುಮಾರು 16 ಎಕರೆಗಳಷ್ಟು ವ್ಯಾಪ್ತಿಯನ್ನು ಹೊಂದಿದೆ ರಾಜಭವನ. ಅಷ್ಟರಲ್ಲಿ ಕಟ್ಟಡ ಸಮುಚ್ಚಯ ಒಳಗೊಂಡಿರುವುದು ಸುಮಾರು ಒಂದು ಎಕರೆಯಷ್ಟು ಜಾಗ ಮಾತ್ರ. ಉಳಿದ ಸುಮಾರು 15 ಎಕರೆಗಳಷ್ಟು ಜಾಗ ಹಚ್ಚ ಹಸುರಿನಿಂದ ಆವೃತವಾಗಿದೆ. 

ಸಸಿ ನೆಟ್ಟರು ಗಣ್ಯರು
18ನೇ ಶತಮಾನದ ಮಧ್ಯಭಾಗದಲ್ಲಿ ಕಟ್ಟಲಾದ ರಾಜಭವನವನ್ನು, ಹಿಂದೆ “ಬೆಂಗಳೂರು ರೆಸಿಡೆನ್ಸಿ’ ಎಂದು ಕರೆಯಲಾಗುತ್ತಿತ್ತು. ಆಗಿನಿಂದಲೂ ಜಗತ್ತಿನಾದ್ಯಂತ ರಾಜ- ಮಹಾರಾಜರುಗಳನ್ನು, ಗಣ್ಯ ವ್ಯಕ್ತಿಗಳನ್ನು ನಮ್ಮ ರಾಜಭವನ ಆಕರ್ಷಿಸುತ್ತಲೇ ಇದೆ. ಬಂದವರಲ್ಲಿ ಅನೇಕರು ಭೇಟಿಯ ಜ್ಞಾಪಕಾರ್ಥ ಸಸಿ ನೆಟ್ಟು ಹೋಗಿದ್ದಾರೆ. ಅದರಲ್ಲೂ ಭಾರತದ ಬಹುತೇಕ ಪ್ರಧಾನಮಂತ್ರಿಗಳು ಇಲ್ಲಿನ ಉದ್ಯಾನವನದಲ್ಲಿ ಸಸಿ ನೆಟ್ಟಿದ್ದಾರೆ. ಉದ್ಯಾನವನ ಎಷ್ಟು ಹಳೆಯದು ಎಂಬುದರ ಕಲ್ಪನೆ ನಿಮಗೆ ಸಿಗಬೇಕೆಂದರೆ ಇಲ್ಲಿನ ಬೃಹಾದಾಕಾರದ ಮರಗಳನ್ನು ನೋಡಬೇಕು. ಶತಮಾನಕ್ಕೂ ಹಳೆಯ ಯೂಕಲಿಪ್ಟಸ್‌, ಅರಕೇರಿಯ ಮರಗಳನ್ನು ಇಲ್ಲಿ ಕಾಣಬಹುದು. ಇಲ್ಲಿ ಸಸಿ ನೆಟ್ಟಿರುವವರ ಪೈಕಿ ಭಾರತದ ಮಾಜಿ ಪ್ರಧಾನಿ ಇಂದಿರಾಗಾಂಧಿ, ಪಿ.ವಿ. ನರಸಿಂಹರಾವ್‌ ಮುಂತಾದ ನಾಯಕರಿದ್ದಾರೆ. ರಾಜಭವನದ ಉದ್ಯಾನದಲ್ಲಿ ಸಸಿ ನೆಟ್ಟವರು ಇಂದು ನಮ್ಮ ನಡುವೆ ಇಲ್ಲದೇ ಇರಬಹುದು ಆದರೆ ಶುದ್ಧ ಗಾಳಿ ಮತ್ತು ಜೀವ ಸಂಕುಲಕ್ಕೆ ಆಶ್ರಯ ನೀಡುತ್ತಿರುವ ಮರಗಳ ಮೂಲಕ ಜೀವಂತವಿದ್ದಾರೆ. ಹೇಳಬೇಕೆಂದರೆ, ಇಲ್ಲಿರುವ ಸಸಿಗಳನ್ನು ನೆಟ್ಟವರೆಲ್ಲರೂ ಗಣ್ಯರೇ!

ದೇಶ ವಿದೇಶಗಳ ಮರಗಳಿವೆ…
ರುದ್ರಾಕ್ಷಿ ಮರ ಎಲ್ಲಿದೆ? ಎಂದು ಯಾರನ್ನಾದರೂ ಕೇಳಿದರೆ ಕೊಂಚ ತಡವಾಗಿಯಾದರೂ ಹಿಮಾಲಯ ತಪ್ಪಲಿನ ಪ್ರದೇಶಗಳಲ್ಲಿ ಎಂಬ ಉತ್ತರ ಸಿಕ್ಕೀತು. ಆದರೆ ಬಹಳಷ್ಟು ಮಂದಿಗೆ ತಿಳಿದಿರಲಿಕ್ಕಿಲ್ಲ. ರಾಜಭವನದಲ್ಲೂ ರುದ್ರಾಕ್ಷಿ ಮರವಿದೆ. ದೇಶ ವಿದೇಶಗಳ ವಿವಿಧ ಪ್ರಭೇದಗಳ ಮರಗಳನ್ನು ಇಲ್ಲಿ ನೋಡಬಹುದು. ಅದಷ್ಟೇ ಅಲ್ಲದೆ ಫಿಕಸ್‌, ರಾಯಲ್‌ ಪಾಮ್ಸ್‌, ಕೇಸಿಯಾ, ತಬುಬಿಯಾ ಮುಂತಾದ ಪ್ರಭೇದಗಳ ಮರಗಳಿವೆ. ಇಲ್ಲಿನ ಮರಗಳಲ್ಲಿ ಆಲದ ಮರದ ಹಾಗೆ ಆಕಾಶದಿಂದ ಹರಡಿಕೊಂಡಿರುವ ಮರಗಳೇ ಹೆಚ್ಚಂತೆ. ಇವನ್ನು “ವಿಂಡ್‌ ಬ್ಯಾರಿಯರ್’ ಎಂದು ಕರೆಯುತ್ತಾರೆ. ಜೋರಾಗಿ ಬೀಸುವ ಗಾಳಿಯನ್ನು ತಡೆಹಿಡಿದು, ಅದರ ಆರ್ಭಟವನ್ನು ತಗ್ಗಿಸುವುದರಿಂದ ಈ ಮರಗಳಿಗೆ “ವಿಂಡ್‌ ಬ್ಯಾರಿಯರ್’ ಎಂಬ ವಿಶೇಷಣ ಸೇರಿಕೊಂಡಿದೆ. ಉದ್ಯಾನದಲ್ಲಿ “ಆಕಾಶ ಮಲ್ಲಿಗೆ’ ಎಂಬ ಮರವಿದೆ. ಇಷ್ಟು ಚೆಂದದ ಹೆಸರನ್ನು ಹೊಂದಿರುವ ಆ ಮರವೂ ಅಷ್ಟೇ ಚೆಂದಕ್ಕಿದೆ. ನೋಡಲು ಆಲದ ಮರವನ್ನು ಹೋಲುವ ಈ ಮರ ತುತ್ತ ತುದಿಗಳಲ್ಲಿ ಬಿಳಿ ಹೂಗಳನ್ನು ಬಿಡುತ್ತದೆ. ಆಕಾಶದೆತ್ತರದಲ್ಲಿ ಹೂಗಳಿರುವುದರಿಂದ “ಆಕಾಶ’, ಗಾಢವಾದ ಸುವಾಸನೆಯನ್ನು ಬೀರುವುದರಿಂದ “ಮಲ್ಲಿಗೆ’. ಹೀಗಾಗಿ, ಅದು ಆಕಾಶ ಮಲ್ಲಿಗೆ!

ಪಾತರಗಿತ್ತಿ ಪಕ್ಕ ನೋಡಬನ್ನಿ…
ಉದ್ಯಾನವನವನ್ನು ಪಾತರಗಿತ್ತಿ ಸ್ನೇಹಿ ಮತ್ತು ಪಕ್ಷಿ ಸಂಕುಲ ಸ್ನೇಹಿಯನ್ನಾಗಿ ಮಾಡಲು ತೋಟಗಾರಿಕಾ ಇಲಾಖೆ ರಾಜಭವನದ ಆಡಳಿತ ಮಂಡಳಿ ಅನೇಕ ಕೆಲಸಗಳನ್ನು ಹಮ್ಮಿಕೊಂಡಿದೆ. ಹೀಗಾಗಿಯೇ ಪಾತರಗಿತ್ತಿ ಮತ್ತು ಪಕ್ಷಿಗಳನ್ನು ಆಕರ್ಷಿಸುವ ಹೂವಿನ ಗಿಡಗಳನ್ನು ಬೆಳೆಸಲಾಗಿದೆ. ಮುಸ್ಸೇಂಡ, ಇಕೊÕàರಾ, ಪೆಂಟಾಸ್‌, ಮೈಸೂರು ಮಲ್ಲಿಗೆ ಮತ್ತು ಕನಕಾಂಬರ, ಹೂವುಗಳ ಸೌಂದರ್ಯರಾಶಿ ಇಲ್ಲಿ ಮೈದಳೆದಿದೆ. ಸಸ್ಯರಾಶಿಯ ನಡುವೆ ಸ್ವಚ್ಚಂದವಾಗಿ ಹಾರಾಡುವ ಪಾತರಗಿತ್ತಿ ತನ್ನ ಸುತ್ತಲಿನ ಜಗತ್ತನ್ನು ಸಗ್ಗವಾಗಿಸಿದೆ. ಈ ಪುಟ್ಟ ಉದ್ಯಾನವನದಲ್ಲಿ ಒಂದು ರೀತಿಯ ಪ್ರಾಕೃತಿಕ ಸಮತೋಲನವನ್ನು ಗಮನಿಸಬಹುದಾಗಿದೆ. ಇದಲ್ಲದೆ ಬ್ರಿಟಿಷರ ಕಾಲದಿಂದಲೂ ಪದ್ಧತಿಯೆಂಬಂತೆ ಕ್ರೋಟಾನ್‌ ಗಿಡಗಳನ್ನು ಬೆಳೆಸಿಕೊಂಡು ಬರಲಾಗಿದೆ. 

ಹಸಿರು ಪ್ರಾಣಿಗಳುಂಟು
ಪ್ರಾಕೃತಿಕ ಸಂಪತ್ತಿನಿಂದ ತುಳುಕುತ್ತಿರುವ ಈ ಪ್ರದೇಶದಲ್ಲಿ ಕಾಡುಪ್ರಾಣಿಗಳೂ ಇವೆ ಎಂದರೆ ಗಾಬರಿ ಬೀಳದಿರಿ. ಅರಣ್ಯ ಪ್ರದೇಶದಲ್ಲಿ ವಾಸಿಸುವ ಪ್ರಾಣಿಗಳು ರಾಜಭವನಕ್ಕೆ ಹೇಗೆ ಬಂದವು? ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ. ಇವು ಹಸುರಿನಿಂದ ಕಂಗೊಳಿಸುತ್ತಿರುವ ಪ್ರಾಣಿಗಳು. ಉದ್ಯಾನವನದಲ್ಲಿ ಪೊದೆಯಂತೆ ಬೆಳೆಯುವ ಕೆಲ ಗಿಡಗಳನ್ನು ಆಕರ್ಷಕವಾಗಿ ಕತ್ತರಿಸಿಕೊಂಡು ಅವುಗಳಿಗೆ ವಿವಿಧ ರೂಪ ನೀಡುವುದನ್ನು ನೀವು ನೋಡಿರಬಹುದು. ಅದೇ ಮಾದರಿಯಲ್ಲಿ ಪ್ರಾಣಿಗಳ ಚಿತ್ರಗಳನ್ನು ಇಲ್ಲಿನ ಗಿಡಗಳ ಮೂಲಕ ಪ್ರಸ್ತುತ ಪಡಿಸಲಾಗಿದೆ. ಆನೆ, ಜಿಂಕೆ, ನವಿಲು ಮುಂತಾದ ಪ್ರಾಣಿಗಳು ಇಲ್ಲಿ ಸ್ತಬ್ದವಾಗಿ ಅಪರೂಪಕ್ಕೆ ಬರುವ ವೀಕ್ಷಕರಿಗಾಗಿ ಕಾದಿವೆ.

ಇನ್ನಷ್ಟು ಆಕರ್ಷಣೆಗಳು
ಸಮಯ ತೋರಿಸುವ ಆರಡಿ ಎತ್ತರದ ಫ್ಲೋರಲ್‌ ಕ್ಲಾಕ್‌, ಮತ್ಸéಕನ್ಯೆ ಕಾರಂಜಿ, ಮಂತ್ರಿಗಳು ಪ್ರಮಾಣ ವಚನ ಸ್ವೀಕರಿಸುವ ಗ್ಲಾಸ್‌ ಹೌಸ್‌, ಬ್ಯಾಂಕ್ವೆಟ್‌ ಹಾಲ್‌, ರಷ್ಯನ್‌ ಚಿತ್ರಕಲಾವಿದ ರೋರಿಚ್‌ರ ಪೇಂಟಿಂಗ್‌, ಉಡುಗೊರೆಯಾಗಿ ಬಂದ  ಕಲಾಕೃತಿಗಳು, ಸ್ವಾತಂತ್ರ್ಯ ಪೂರ್ವ ಕಾಲದ ಬೆಳ್ಳಿ ತಟ್ಟೆಗಳು, ಸಾಸರ್‌ಗಳು, ಪ್ರಾಣಿಗಳ ಕಲಾಕೃತಿಗಳು ಇನ್ನೂ ಹಲವು ಆಕರ್ಷಣೆಗಳನ್ನು ಕಣ್ತುಂಬಿಕೊಳ್ಳಬಹುದು. ಒಟ್ಟಿನಲ್ಲಿ, ಒಳಕ್ಕೆ ಕಾಲಿಟ್ಟರೆ ಬ್ರಿಟಿಷರ ಕಾಲಕ್ಕೆ ಹೋದ ಅನುಭವವಾದರೂ ಅಚ್ಚರಿಯಿಲ್ಲ.

ಈ ಬಾರಿಯ ವಿಶೇಷ
16 ವರ್ಷಗಳ ಹಿಂದೆ ಮೊತ್ತ ಮೊದಲ ಬಾರಿ ರಾಜಭವನ ಸಾರ್ವಜನಿಕ ಪ್ರವೇಶಕ್ಕೆ ತೆರೆದುಕೊಂಡಾಗ, ಕೆಲವೇ ಜಾಗಗಳಿಗೆ ಮಾತ್ರ ಭೇಟಿ ಕೊಡಬಹುದಿತ್ತು. ಆದರೆ, ಈ ಬಾರಿ ಗೈಡ್‌ನ‌ ಮಾರ್ಗದರ್ಶನದಲ್ಲಿ ಹೆಚ್ಚಾ ಕಡಿಮೆ ಇಡೀ ರಾಜಭವನಕ್ಕೇ ರೌಂಡ್‌ ಹಾಕಲು ರಾಜ್ಯಪಾಲರು ಅನುಮತಿ ನೀಡಿದ್ದಾರೆ. 

ಪ್ರವೇಶ ದಿನಾಂಕ ಮುಂದೂಡಲ್ಪಟ್ಟಿದೆ
ಈ ಹಿಂದೆ ಆಗಸ್ಟ್‌ 16ರಿಂದ ಸಾರ್ವಜನಿಕರು ರಾಜಭವನಕ್ಕೆ ಭೇಟಿ ನೀಡಬಹುದೆಂದು ಹೇಳಲಾಗಿತ್ತು. ಆದರೆ ಮಾಜಿ ಪ್ರಧಾನಿ ವಾಜಪೇಯಿ ಅವರ ನಿಧನದಿಂದಾಗಿ, ಪ್ರವೇಶ ದಿನಾಂಕವನ್ನು ಮುಂದೂಡಲಾಗಿದೆ. ಅದರಂತೆ ಸೆಪ್ಟೆಂಬರ್‌ 1ರಿಂದ ಸೆಪ್ಟೆಂಬರ್‌ 6ರ ತನಕ ರಾಜಭವನ ಸಾರ್ವಜನಿಕ ಪ್ರವೇಶಕ್ಕೆ ತೆರೆಯಲಿದೆ. ಜನರ ಸ್ಪಂದನೆಯ ಅನುಸಾರ ಗಡುವನ್ನು ವಿಸ್ತರಿಸುವ ಇಚ್ಚೆಯನ್ನು ರಾಜ್ಯಪಾಲ ವಜೂಭಾಯಿ ವಾಲಾ ಅವರು ಈಗಾಗಲೇ ವ್ಯಕ್ತಪಡಿಸಿರುವುದು ಖುಷಿಯ ಸಂಗತಿ.

ಪ್ರವೇಶಾಕಾಂಕ್ಷಿಗಳು ಏನು ಮಾಡಬೇಕು?
ರಾಜಭವನಕ್ಕೆ ಭೇಟಿ ನೀಡಲಿಚ್ಚಿಸುವವರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಅದಕ್ಕಾಗಿ ಕೆಳಗಿನ ಆನ್‌ಲೈನ್‌ ಕೊಂಡಿಗೆ ಭೇಟಿ ನೀಡಿ. ಅದರಲ್ಲಿ ನೀಡಿರುವ ಸೂಚನೆಗಳನ್ನು ಯಥಾವತ್ತಾಗಿ ಪಾಲಿಸಿ.
goo.gl/RB3jdP 
ಹೆಚ್ಚಿನ ಮಾಹಿತಿಗೆ: 080-  22254102 080- 22253555

ಹವನ

ಟಾಪ್ ನ್ಯೂಸ್

Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ

Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು

MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ

MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾವು, 20 ಮಂದಿ ರಕ್ಷಣೆ

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ

Basavaraj-horatti

Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್‌ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?

BGV-Gandhi-bharatha

Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ

1-horoscope

Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ

Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ

2-shirva

Shirva ಹ‌ಳೆವಿದ್ಯಾರ್ಥಿ ಸಂಘ; ಡಿ.29: ದಶಮಾನೋತ್ಸವ, ನೂತನ ಉಪಹಾರ ಗೃಹ ಸಮರ್ಪಣೆ

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು

MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ

MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾವು, 20 ಮಂದಿ ರಕ್ಷಣೆ

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.