ದ್ವೀಪದ ಬುಡದಲ್ಲಿ ರಾಮನ ಬೆಳಕು


Team Udayavani, Jan 25, 2020, 6:07 AM IST

dweepada

ಲಂಕೆಯಲ್ಲಿ ಯುದ್ಧವೆಲ್ಲ ಮುಗಿದು, ಮರಳುವಾಗ ವಿಮಾನದ ಮೇಲಿಂದ ರಾಮನು ತನ್ನೊಲವಿನ ಮಡದಿ ಸೀತೆಗೆ ರಾಮೇಶ್ವರಂನ ದ್ವೀಪವನ್ನು ತೋರಿಸಿ- “ನೋಡಿಲ್ಲಿ, ಈ ದ್ವೀಪದಲ್ಲೇ ಮಹಾಪ್ರಭುವಾದ ಪರಮೇಶ್ವರನು ನನ್ನ ಮೇಲೆ ಅನುಗ್ರಹ ತೋರಿದನು’ ಅನ್ನುತ್ತಾನೆ…

ಕಿಷ್ಕಿಂಧೆಯ ನಂತರ ರಾಮನ ಹಾದಿಯ ಪುರಾಣ ಸಾಕ್ಷ್ಯಗಳು ಸಿಗುವುದು, ತಮಿಳುನಾಡಿನ ಧನುಷ್ಕೋಡಿ, ರಾಮೇಶ್ವರಂನಲ್ಲಿ. 13ನೇ ಶತಮಾನದಲ್ಲಿ ಚೋಳರ ರಾಜಸತ್ತೆ ಕೊನೆಯಾಗುವವರೆಗೂ ತಮಿಳುನಾಡು ಪಾಂಡ್ಯರು ಮತ್ತು ಚೋಳರ ರಾಜ್ಯವೆಂದು ಗುರುತಿಸಿಕೊಂಡಿತ್ತು. ರಾಮಾಯಣದಲ್ಲೂ ತಮಿಳುನಾಡನ್ನು ಪಾಂಡ್ಯರ ಮತ್ತು ಚೋಳರ ನೆಲವೆಂದು ಕರೆದಿರುವುದು ಗಮನಿಸಬೇಕಾದ ಅಂಶ. ತಮಿಳುನಾಡಿನ ದಕ್ಷಿಣ (ದಕ್ಷಿಣ ಪೂರ್ವ) ಕರಾವಳಿಯ ಒಂದು ದ್ವೀಪವೇ ಇವತ್ತಿನ ರಾಮೇಶ್ವರಂ.

ರಾಮಾಯಣದೊಟ್ಟಿಗಿನ ಸಂಬಂಧದಿಂದಾಗಿಯೇ ಇವತ್ತಿಗೂ ರಾಮೇಶ್ವರಂ, ಧಾರ್ಮಿಕ ಮಹತ್ತಿನ ಕೇಂದ್ರವಾಗಿ ಉಳಿದಿದೆ.  ಇಲ್ಲಿನ ಸಮುದ್ರ ತೀರದ ಮೇಲೆ ದರ್ಬೆಯ ಹುಲ್ಲನ್ನು ಹರವಿಕೊಂಡು ಶ್ರೀರಾಮಚಂದ್ರನು ಮೂರು ರಾತ್ರಿ, ಮೂರು ಹಗಲು ಸಮುದ್ರರಾಜನ ಕೃಪೆಗಾಗಿ ಪ್ರಾರ್ಥಿಸುತ್ತಾನೆ. ಪ್ರಾರ್ಥನೆಗೆ ಬಗ್ಗದಿರುವ ಸಮುದ್ರ ರಾಜನ ಮೇಲೆ ಕ್ರೋಧಗೊಂಡು ಬಿಲ್ಲನ್ನೆತ್ತಿ ಅಂಬೆಸೆದು ಸಮುದ್ರವನ್ನೆಲ್ಲ ಅಲ್ಲೋಲ ಕಲ್ಲೋಲಗೊಳಿಸಿಬಿಡುತ್ತೇನೆಂದು ನಿಂತಿದ್ದು ಇದೇ ನೆಲದಲ್ಲಿ.

ಪ್ರಸನ್ನನಾದ ಸಮುದ್ರರಾಜನು, ಸೇತು ನಿರ್ಮಾಣಕ್ಕೆ ಅಸ್ತು ಎಂದಿದ್ದೂ ಇಲ್ಲೇ. ಅಯೋಧ್ಯೆಯಿಂದ ಆರಂಭವಾದ ರಾಮಪ್ರಯಾಣವು ಭಾರತದ ದಕ್ಷಿಣತುದಿಯವರೆಗೆ ಹಾದು ಬರುವಷ್ಟು ಕಾಲದಲ್ಲಿ, ರಾಮನ ವ್ಯಕ್ತಿತ್ವದಲ್ಲೂ ಗಮನಿಸಬಹುದಾದ ಬದಲಾವಣೆಗಳಾಗುತ್ತವೆ. ಬದುಕು ಒದಗಿಸಿದ ಎಂಥ ದುಷ್ಕರವಾದ ಸ್ಥಿತಿಯಲ್ಲೂ ಕ್ರುದ್ಧನಾಗದ ರಾಮ, ಇಲ್ಲಿ ಈ ಮರಳ ದಂಡೆಯ ಮೇಲೆ ಸಮುದ್ರರಾಜನ ಅಸಹಕಾರದ ಕಾರಣಕ್ಕೆ ಕ್ರುದ್ಧನಾಗುತ್ತಾನೆ.

ಇಲ್ಲಿ ಶಿವನನ್ನು ಪ್ರತಿಷ್ಠಾಪಿಸಿದ್ದು ಶ್ರೀರಾಮನೇ?: ರಾಮೇಶ್ವರಂ ಎನ್ನುವ ಹೆಸರಿನಲ್ಲಿಯೇ ವಿಶೇಷತೆಯಿದೆ. ಭಾರತದ ಶೈವ ಮತ್ತು ವೈಷ್ಣವ ಸಂಪ್ರದಾಯಗಳೆರಡಕ್ಕೂ ಶ್ರದ್ಧೆಯ ಕೇಂದ್ರವಿದು. ಲಂಕೆಯಲ್ಲಿ ಯುದ್ಧವೆಲ್ಲ ಮುಗಿದು, ಮರಳುವಾಗ ವಿಮಾನದ ಮೇಲಿಂದ ರಾಮನು ತನ್ನೊಲವಿನ ಮಡದಿ ಸೀತೆಗೆ ರಾಮೇಶ್ವರಂನ ದ್ವೀಪವನ್ನು ತೋರಿಸಿ- “ನೋಡಿಲ್ಲಿ, ಈ ದ್ವೀಪದಲ್ಲೇ ಮಹಾಪ್ರಭುವಾದ ಪರಮೇಶ್ವರನು ನನ್ನ ಮೇಲೆ ಅನುಗ್ರಹ ತೋರಿದನು’ ಅನ್ನುತ್ತಾನೆ. ಅಂದರೆ, ರಾಮನು ಶಿವನ ಕೃಪೆಗೆ ಪಾತ್ರನಾಗಿದ್ದನೆನ್ನುವ ಮಾತನ್ನು ವಾಲ್ಮೀಕಿ ರಾಮಾಯಣದಲ್ಲೇ ಕಾಣುತ್ತೇವೆ.

ರಾಮೇಶ್ವರದಲ್ಲಿನ ಶಿವನನ್ನು ಪ್ರತಿಷ್ಠಾಪಿಸಿದ್ದೇ ರಾಮ ಎನ್ನುವ ಉಪಾಖ್ಯಾನಗಳಿಗೆ ವಾಲ್ಮೀಕಿ ರಾಮಾಯಣದಲ್ಲಿ ಪುರಾವೆಗಳಿಲ್ಲ. ಹಾಗಿದ್ದೂ ಸ್ಕಂದ, ಪದ್ಮ, ಲಿಂಗ ಪುರಾಣಗಳು ಮತ್ತು ತುಲಸೀರಾಮಾಯಣದಂಥ ರಾಮಾಯಣದ ಬೇರೆ ಆವೃತ್ತಿಗಳಲ್ಲಿ ರಾಮನೇ ಇಲ್ಲಿನ ಶಿವಲಿಂಗವನ್ನು ಪ್ರತಿಷ್ಠಾಪಿಸಿದನು ಎನ್ನುವ ವಿವರಗಳು ಬರುತ್ತವೆ. ರಾಮಾಯಣದ ಶ್ರೀರಾಮಚಂದ್ರನು ಇಲ್ಲಿ ಮರಳಿನ ಲಿಂಗವನ್ನು ಮಾಡಿ ಅರ್ಚನೆ ಮಾಡಿದನಂತೆ. ಆ ವಿಚಾರ ಏನೇ ಇದ್ದರೂ ರಾಮ ಮತ್ತು ಶಿವನೆಂಬ ಎರಡು ಸ್ರೋತಗಳು ಇಲ್ಲಿ ಒಟ್ಟಾಗಿರುವುದಂತೂ ನಿಜ.

ಹಡಗುಗಳಿಗೆ ದಾರಿಬಿಡುವ ಸೇತುವೆ: ಭಾರತದ ಮುಖ್ಯಭೂಮಿಯೊಡನೆ ರಾಮೇಶ್ವರಂ ದ್ವೀಪವನ್ನು ಬೆಸೆದು ನಿಂತಿರುವುದು ಒಂದು ಸೇತುವೆ. 1913ರಲ್ಲಿ ಭಾರತ ಮತ್ತು ರಾಮೇಶ್ವರಂ ನಡುವಿನ ಸಮುದ್ರದ ಮೇಲೆ ನಿರ್ಮಿತವಾದ 2 ಕಿ.ಮೀ. ಉದ್ದನೆಯ ಪಾಂಬನ್‌ ಸೇತುವೆ ರಾಮೇಶ್ವರಂ ಮತ್ತು ಭಾರತವನ್ನು ಬೆಸೆಯುವ ಕೊಂಡಿ. ತೀರಾ ಇತ್ತೀಚೆಗೆ ಬಾಂದ್ರಾ- ವರ್ಲಿ ಸಂಪರ್ಕ ಸೇತುವೆಯ ಉದ್ಘಾಟನೆಯಾಗುವವರೆಗೂ ಭಾರತದಲ್ಲಿ ಸಮುದ್ರವನ್ನು ಹಾಯ್ದು ಕಟ್ಟಿದ ಸೇತುವೆ ಇದೊಂದೇ ಆಗಿತ್ತು.

ಸಮುದ್ರಮಾರ್ಗವಾಗಿ ಸಾಗಿ ಹೋಗುವ ಹಡಗುಗಳಿಗೆ ಈ ಸೇತುವೆಯ ಚಾವಣಿಯ ಒಂದು ಭಾಗ ಮೇಲಕ್ಕೆದ್ದು ದಾರಿ ಬಿಟ್ಟುಕೊಡುವಂತೆ ರಚಿತವಾಗಿದೆ. ಇದು ಆಧುನಿಕ ನಿರ್ಮಿತಿಶಾಸ್ತ್ರದ ವಿಸ್ಮಯಗಳಲ್ಲೊಂದು. 12ನೇ ಶತಮಾನದಲ್ಲಿ ನಿರ್ಮಿತವಾದ ಇಲ್ಲಿನ ಶಿಲಾಮಯ ದೇವಾಲಯದ ಪ್ರಾಂಗಣವು ದೇಶದಲ್ಲೇ ಅತ್ಯಂತ ಉದ್ದವಾದ ದೇವಾಲಯ ಪ್ರಾಂಗಣವೂ ಹೌದು.

ರಾಮೇಶ್ವರಂನ ಮರಳು ಕಾಶಿಗೆ…: ಭಾರತದ ಮಹೋನ್ನತ ಸೌಂದರ್ಯವೇ ಸಾಂಸ್ಕೃತಿಕ ಏಕತೆ. ದಕ್ಷಿಣದವರು ತಮ್ಮ ಜೀವಿತದಲ್ಲಿ ಉತ್ತರಕ್ಕೆ ಒಮ್ಮೆಯಾದರೂ ಹೋಗಬೇಕೆನ್ನುವ ಸಂಕಲ್ಪ ಹೊತ್ತಿದ್ದರೆ, ಉತ್ತರದವರು ಭಾರತದ ದಕ್ಷಿಣದ ರಾಮೇಶ್ವರಂಗೆ ಬರುವ ಸಂಕಲ್ಪವನ್ನು ಹೊತ್ತಿರುತ್ತಾರೆ. ಈ ದೇಶದಲ್ಲಿ ಜ್ಯೋತಿರ್ಲಿಂಗಗಳು ಮತ್ತು ಶಕ್ತಿಪೀಠಗಳು ಒಂದೊಂದು ದಿಕ್ಕಿಗೆ ಚೆದುರಿಬಿದ್ದಿವೆ, ಮತ್ತು ಶ್ರದ್ಧೆಯುಳ್ಳವರು ಅವೆಲ್ಲವನ್ನೂ ಒಮ್ಮೆಯಾದರೂ ಸಂದರ್ಶಿಸುವ ಸಂಕಲ್ಪ ಹೊತ್ತಿರುತ್ತಾರೆ. ರಾಮೇಶ್ವರಂ ಸಮುದ್ರ ತೀರದ ಮಳಲನ್ನು ಕಾಶಿ ವಿಶ್ವನಾಥನ ಸನ್ನಿಧಿಯ ಗಂಗೆಗೂ, ಗಂಗೆಯ ನೀರನ್ನು ರಾಮೇಶ್ವರನ ಸನ್ನಿಧಿಗೂ ಕೊಂಡೊಯ್ದು ಹಾಕುವ ಸಂಪ್ರದಾಯವೂ ಇದೆ.

* ನವೀನ ಗಂಗೋತ್ರಿ

ಟಾಪ್ ನ್ಯೂಸ್

1-kann

Kannada; ಬಳ್ಳಾರಿಯಲ್ಲಿ 88ನೇ ಕನ್ನಡ ಸಾಹಿತ್ಯ ಸಮ್ಮೇಳನ

BBK11: ಫಿನಾಲೆಗೆ ಬರುತ್ತಾರೆ ಎನ್ನಲಾಗುತ್ತಿದ್ದ ದೈತ್ಯ ಸ್ಪರ್ಧಿಯೇ ಬಿಗ್ ಬಾಸ್ ನಿಂದ ಔಟ್?

BBK11: ಫಿನಾಲೆಗೆ ಬರುತ್ತಾರೆ ಎನ್ನಲಾಗುತ್ತಿದ್ದ ದೈತ್ಯ ಸ್ಪರ್ಧಿಯೇ ಬಿಗ್ ಬಾಸ್ ನಿಂದ ಔಟ್?

Forest

2 ವರ್ಷಗಳಲ್ಲಿ ಕರ್ನಾಟಕದಲ್ಲಿ 459 ಚ.ಕಿ.ಮೀ. ಅರಣ್ಯ ನಾಶ

congress

Ambedkar; ಅವಮಾನ ಖಂಡಿಸಿ ಕಾಂಗ್ರೆಸ್‌ ಆಂದೋಲನ

1-sara

Hindi ಹೇರಿದರೆ ಗೋಕಾಕ್‌ ಮಾದರಿ ಹೋರಾಟ: ಸಾ.ರಾ.ಗೋವಿಂದು

ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ

Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ

1-vvv

Virtual university ಸ್ಥಾಪಿಸಿ: ಚಿದಾನಂದ ಗೌಡ ಒತ್ತಾಯ..ಏನಿದು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-kann

Kannada; ಬಳ್ಳಾರಿಯಲ್ಲಿ 88ನೇ ಕನ್ನಡ ಸಾಹಿತ್ಯ ಸಮ್ಮೇಳನ

BBK11: ಫಿನಾಲೆಗೆ ಬರುತ್ತಾರೆ ಎನ್ನಲಾಗುತ್ತಿದ್ದ ದೈತ್ಯ ಸ್ಪರ್ಧಿಯೇ ಬಿಗ್ ಬಾಸ್ ನಿಂದ ಔಟ್?

BBK11: ಫಿನಾಲೆಗೆ ಬರುತ್ತಾರೆ ಎನ್ನಲಾಗುತ್ತಿದ್ದ ದೈತ್ಯ ಸ್ಪರ್ಧಿಯೇ ಬಿಗ್ ಬಾಸ್ ನಿಂದ ಔಟ್?

Forest

2 ವರ್ಷಗಳಲ್ಲಿ ಕರ್ನಾಟಕದಲ್ಲಿ 459 ಚ.ಕಿ.ಮೀ. ಅರಣ್ಯ ನಾಶ

congress

Ambedkar; ಅವಮಾನ ಖಂಡಿಸಿ ಕಾಂಗ್ರೆಸ್‌ ಆಂದೋಲನ

1-sara

Hindi ಹೇರಿದರೆ ಗೋಕಾಕ್‌ ಮಾದರಿ ಹೋರಾಟ: ಸಾ.ರಾ.ಗೋವಿಂದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.