ರಂಗಶಂಕರ ಮ್ಯಾಂಗೋಪಾರ್ಟಿ


Team Udayavani, Jun 2, 2018, 12:13 PM IST

140a.jpg

ಮಾವನ್ನು ಹಣ್ಣುಗಳ ರಾಜ ಅಂತಾರೆ. ಅದರ ಪ್ರಚಂಡ ಪರಿಮಳ, ರುಚಿಯೇ ಅದಕ್ಕೆ ರಾಜನ ಪಟ್ಟ ತಂದುಕೊಟ್ಟಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಬಿರುಬೇಸಿಗೆ, ಮಳೆಯ ಹೊತ್ತಿನಲ್ಲಿ ಈ ರಾಜ ಬಂದನೆಂದರೆ, ಮಹಾನಗರ ತುಂಬಾ ಈತನಿಗೇನೋ ವಿಶೇಷ ಮರ್ಯಾದೆ. ಅಂಥದ್ದೇ ಒಂದು ರಾಜ ಮರ್ಯಾದೆ ಈಗ ರಂಗಶಂಕರದಲ್ಲಿ ಸಿಗಲು ಸಜ್ಜಾಗಿದೆ.


  ನಿತ್ಯವೂ ನಾಟಕಗಳಿಂದಲೇ ಸುದ್ದಿಯಾಗುವ ರಂಗಶಂಕರಕ್ಕೆ ಜೂ.10ರಂದು ಹೋಗಿಬಿಟ್ಟರೆ, ಅಲ್ಲಿ ಮಾವಿನ ಹಣ್ಣಿನ ಪರಿಮಳವೇ ಮೂಗನ್ನು ಸವರುತ್ತದೆ. ಅಲ್ಲಿ ಎಲ್ಲಿ ನೋಡಿದರೂ, ಥರಹೇವಾರಿ ಮಾವಿನ ಹಣ್ಣುಗಳೇ ಕಣ್ಣಿಗೆ ಬೀಳುತ್ತವೆ. ಪ್ರತಿದಿನವೂ ನಾನಾ ಬಣ್ಣಗಳನ್ನು ಪ್ರೇಕ್ಷಕರ ಮುಂದಿಡುವ ರಂಗಶಂಕರದಲ್ಲಿ ಅಂದು ಕಾಣುವುದು ಕೇವಲ ಹೊಂಬಣ್ಣ! ಕಾರಣ, ಅವತ್ತು ಅಲ್ಲಿ ಮ್ಯಾಂಗೋ ಪಾರ್ಟಿ! ಬೆಂಗಳೂರಲ್ಲಿ ಪಾರ್ಟಿ ಅಂದ್ರೆ, ಅಲ್ಲಿ ನಾನಾ ಆಕರ್ಷಣೆಗಳೇ ಹೆಚ್ಚು. ಆದರೆ, ಇದು ಸಂಪೂರ್ಣ ಮಾವಿನ ಹಣ್ಣಿನದ್ದೇ ಸಮಾರಾಧನೆ.

ಏನಿದು ಮ್ಯಾಂಗೋ ಪಾರ್ಟಿ?
ಇದು ಸಂಬಂಧಗಳನ್ನು ಬೆಸೆಯುವ ಪಾರ್ಟಿ. ಇಲ್ಲಿ ಮಾವು ಒಂದು ನೆಪ ಅಷ್ಟೇ. ನಗರದ ನಿತ್ಯದ ಜಂಜಾಟದಲ್ಲಿ ಪ್ರತಿವರ್ಷವೂ ಒಂದು ಸಿಹಿ ನೆನಪನ್ನು ಚಿರಸ್ಥಾಯಿಗೊಳಿಸಲು ರಂಗಶಂಕರ ಏರ್ಪಡಿಸಿರುವ ಕಾರ್ಯಕ್ರಮ. ಪುಟ್ಟ ಪುಟ್ಟ ಮಕ್ಕಳು ಎರಡೂ ಕೈಯಲ್ಲಿ ಮಾವಿನ ಹಣ್ಣನ್ನು ಹಿಡಿದು, ಬಟ್ಟೆ ತುಂಬಾ ಮಾವಿನ ಕಲೆಗಳನ್ನು ಮಾಡಿಕೊಂಡು, ನಡೆದಾಡುವ ಕಲಾಕೃತಿಯಂತೆ ಕಂಗೊಳಿಸುತ್ತಿರುತ್ತಾರೆ. ಯುವಕ- ಯುವತಿಯರು, ನಡುವಯಸ್ಸಿನವರು, ಹಿರಿಯರೆಲ್ಲ ನಿರ್ಮಲವಾದ ನಗುಸೂಸುತ್ತಾ, ಮಾವಿನ ಹಣ್ಣುಗಳನ್ನು ಕಚ್ಚುತ್ತಾ, ಅದರ ರಸಹೀರಿ ಹಿಗ್ಗುತ್ತಾ, ಅತ್ತಿತ್ತ ಓಡಾಡುತ್ತಿರುತ್ತಾರೆ.

ಅಲ್ಲೇನು ವಿಶೇಷವಿರುತ್ತೆ?
ಪ್ರವೇಶ ಸಂಪೂರ್ಣ ಉಚಿತವಾದರೂ, ಎಲ್ಲರೂ ತಲಾ ಒಂದೊಂದು ಕೆ.ಜಿ. ಮಾವಿನಹಣ್ಣುಗಳನ್ನು ಕೊಂಡೊಯ್ಯಬೇಕು. ಅಲ್ಲದೇ, ರಂಗಶಂಕರದವರೂ ತಾಜಾ ಮಾವಿನ ಹಣ್ಣುಗಳನ್ನು ನೀರು ತುಂಬಿದ ದೊಡ್ಡ ದೊಡ್ಡ ಬೋಗುಣಿಗಳಲ್ಲಿ ಇಟ್ಟಿರುತ್ತಾರೆ. ಮನಸ್ಸೂ ಮಾವಾಗಿ ಮಾಗಲು ಆ ಪರಿಮಳವೇ ಸಾಕು.

  ಮಹಾನಗರದ ಮನಸ್ಸುಗಳಿಗೆ ನಾಟಕಗಳನ್ನು ತೋರಿಸಿ, ಬಹುತೇಕ ತೆರೆಯ ಹಿಂದೆಯೇ ಇರುವ ಅರುಂಧತಿ ನಾಗ್‌, ಅಂದು ಮುಕ್ತವಾಗಿ ಮಾತಿಗೆ ಸಿಗುತ್ತಾರೆ. ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆಯುತ್ತಾರೆ. ಗಿರೀಶ್‌ ಕಾರ್ನಾಡ್‌ರಂಥ ತಾರೆಗಳೂ ಈ ಸಂಭ್ರಮದಲ್ಲಿ ಪಾಲ್ಗೊಳ್ಳುವರು.

ಕ್ಯಾಂಟೀನ್‌ನಲ್ಲೂ ಮಾವಿನ ಸ್ಪೆಷೆಲ್‌
ಅಂದು ರಂಶಂಕರದ ಕ್ಯಾಂಟೀನ್‌ ಕೂಡ ಮಾವುಮಯ. ಮಾವಿನ ಹಣ್ಣಿನ ಲಸ್ಸಿ, ಜ್ಯೂಸ್‌, ಮಾವಿನಹಣ್ಣಿನ ಚಿತ್ರಾನ್ನ, ಕಾಡು ಮಾವಿನಗೊಜ್ಜು, ಮಜ್ಜಿಗೆ ಮಾವಿನ ಕಾಯಿ ಸೇರಿದಂತೆ ಹಲವು ವೈವಿಧ್ಯಗಳನ್ನು ಅಲ್ಲಿ ಸವಿಯಬಹುದು. ಇಟ್ಟಿನಲ್ಲಿ ಇದೊಂದು ಶೇಕಡಾ ನೂರರ ಪ್ರಮಾಣದ ಸಂತೋಷದ ಕೂಟ. ಇಲ್ಲಿ ಮಾವಿನ ಹಣ್ಣಿನದ್ದೇ ರಸದೂಟ.

ಯಾವತ್ತು?: ಜೂ.10, ಭಾನುವಾರ, ಮ.3ರಿಂದ ರಾ.10
ಎಲ್ಲಿ?: ರಂಗಶಂಕರ, ಜೆ.ಪಿ. ನಗರ
ಪ್ರವೇಶ: ಉಚಿತ
ಮಾಹಿತಿಗೆ:  www.rangashankara.org

ಟಾಪ್ ನ್ಯೂಸ್

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

1-aaaaa

Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video

Khattar

2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್

6

VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್

naksal (2)

Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು

3-naxal

Naxalites ಶರಣಾಗತಿಯಲ್ಲಿ ಟ್ವಿಸ್ಟ್‌; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ

ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್‌ ನೇಮಕ: ಚಿನ್ನದ ಪದಕ ವಿಜೇತ VN  ಪರಿಚಯ…

ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್‌ ನೇಮಕ: ಚಿನ್ನದ ಪದಕ ವಿಜೇತ VN  ಪರಿಚಯ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಹೊಸ ಸೇರ್ಪಡೆ

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

1-aaaaa

Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video

Khattar

2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್

6

VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್

4-dandeli

Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.