ಮನದ ಬೀದಿಯಲ್ಲಿ ಹೊರಟ “ರಸೋತ್ಸವ’

ನಾಟ್ಯ ವಿಮರ್ಶೆ

Team Udayavani, Oct 12, 2019, 4:04 AM IST

manada

“ಸಾಧನ ಸಂಗಮ’ ನೃತ್ಯಸಂಸ್ಥೆಯು ಪ್ರತಿವರ್ಷ ಅರ್ಥಪೂರ್ಣವಾಗಿ ದಸರಾ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದೆ. ಈ ಬಾರಿ ದಸರಾ ಪ್ರಯುಕ್ತ ಮೂರು ದಿನಗಳ “ರಸೋತ್ಸವ’ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಶುಭಾರಂಭದಲ್ಲಿ “ಪ್ರಣವಾಕಾರ ಸಿದ್ಧಿವಿನಾಯಕ’ನಿಗೆ, ಕಿರಿಯ ವಿದ್ಯಾರ್ಥಿಗಳು ಸರಳ-ಸ್ಪುಟ ಆಂಗಿಕಗಳಿಂದ ಮುದವಾದ ನೃತ್ಯದ ಮೂಲಕ ವಂದಿಸಿದರು.

ನಾಟ್ಯಗುರು ಜ್ಯೋತಿಯವರ ಪರಿಕಲ್ಪನೆ- ನೃತ್ಯ ಸಂಯೋಜನೆಯ “ನವವಿಧ ಭಕ್ತಿ’- ನೃತ್ಯರೂಪಕದ ಮುನ್ನುಡಿ ಭಾಗವನ್ನು ಹಿರಿಯ ವಿದ್ಯಾರ್ಥಿಗಳು ಮನ ಸೆಳೆವ ಸ್ವರಮಾಧುರ್ಯದ ನೃತ್ಯಗಳಿಂದ ನವವಿಧ ಭಕ್ತಿಗೆ ಹೊನ್ನ ಕಳಶವಿಟ್ಟರು. ಖ್ಯಾತ ಕಲಾವಿದೆಯರಾದ ಶಮಾಕೃಷ್ಣ ಮತ್ತು ಅನುರಾಧಾ ವಿಕ್ರಾಂತ್‌, ಕೂಚಿಪುಡಿ ಮತ್ತು ಭರತನಾಟ್ಯದ ಜುಗಲ್‌ಬಂದಿ “ನೃತ್ಯಮಿಲನ’ವನ್ನು ನಾಟ್ಯಶಾಸ್ತ್ರದ ಚಲನೆಗಳನ್ನಾಧರಿಸಿ ಸಾಮರಸ್ಯದಿಂದ ನಡೆಸಿಕೊಟ್ಟರು.

“ಸ್ವರಾಂಜಲಿ’ಯಲ್ಲಿ ಗಣಪತಿಯ ಮಹಿಮೆಯನ್ನು ಮನೋಹರವಾಗಿ ಸಾದರಪಡಿಸಿ, “ನಾದಾ ತನುಮನಿಷಂಶಂಕರಂ’- ಕೃತಿಯಲ್ಲಿ ರಾವಣ, ಕಠಿಣತಪಸ್ಸು ಮಾಡಿ ಆತ್ಮಲಿಂಗವನ್ನು ಪಡೆಯುವ ಪ್ರಸಂಗವನ್ನು ಅತ್ಯಂತ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟರು. ಕನಕದಾಸರ, “ಬಾರೋ ಕೃಷ್ಣಯ್ಯ’ ದೇವರನಾಮದಲ್ಲಿ ಪೂರಕ ಪಾತ್ರಾಭಿನಯಗಳಿಂದ ರಮ್ಯ ನೃತ್ಯ ಲಾಸ್ಯಗಳಿಂದ ರಸಾನುಭವ ನೀಡಿದರು.

ಪ್ರೌಢ ಅಭಿನಯಕ್ಕೆ ಹೆಸರಾದ ಖ್ಯಾತ ಭರತನಾಟ್ಯ ಕಲಾವಿದೆ ಐಶ್ವರ್ಯ ನಿತ್ಯಾನಂದ, ಏಕವ್ಯಕ್ತಿ ಪ್ರದರ್ಶನದಲ್ಲಿ ಮನೋಜ್ಞವಾಗಿ ನರ್ತಿಸಿ ಹೃದಯ ಸ್ಪರ್ಶಿಸಿದರು. ರುದ್ರನರ್ತನದ “ಶಿವಕೃತಿ’ಯಲ್ಲಿ ದೈವೀಕತೆ ತಾಂಡವವಾಡಿತು. ಆಕಾಶಚಾರಿ, ಮಂಡಿ ಅಡವುಗಳಿಂದ ಕೂಡಿದ ಲೀಲಾಜಾಲ ಸಮರ್ಥ ನರ್ತನ ವಿಸ್ಮಯಗೊಳಿಸಿತು.

“ಸದ್ದು ಮಾಡಬೇಡವೋ ರಂಗಯ್ಯ’- ಶ್ರೀಪಾದರಾಜರ ಕೀರ್ತನೆಗೆ ಜೀವತುಂಬಿ ತನ್ನ ಸೂಕ್ಷ್ಮಾಭಿನಯದ ನೆಲೆಗಳಲ್ಲಿ ರಸಿಕರನ್ನು ಪರಾಕಾಷ್ಟತೆಗೊಯ್ದಳು. “ಯಮನೆಲ್ಲಿ ಕಾಣನೆಂದುಹೇಳಬೇಡ’- ಪುರಂದರದಾಸರ “ಅದ್ವೆ„ತ’ ಭಾವದಧ್ವನ್ಯಾರ್ಥದ ಕೃತಿಯ ಸಾರಸರ್ವಸ್ವವನ್ನು ಕಲಾವಿದೆ, ತನ್ನ ಪಕ್ವಾಭಿನಯದ ತಾದಾತ್ಮದಿಂದ ಪಾತ್ರಗಳಲ್ಲಿ “ಪರಕಾಯ ಪ್ರವೇಶ’ ಮಾಡಿ ದಿವ್ಯಾನುಭವ ನೀಡಿದಳು.

* ವೈ.ಕೆ. ಸಂಧ್ಯಾ ಶರ್ಮ

ಟಾಪ್ ನ್ಯೂಸ್

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Siddaramaiah

Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.