ಬಾನಲಿ ತೇಲುವ ಖಾನಾವಳಿ
Team Udayavani, Oct 20, 2018, 5:46 PM IST
ಆಗಸದಲ್ಲಿ ತೇಲುವ ವಸ್ತುಗಳೆಂದರೆ ಮನುಷ್ಯನಿಗೆ ಹಿಂದಿನಿಂದಲೂ ಅದೇನೋ ಆಕರ್ಷಣೆ. ಚಂದ್ರ, ತಾರೆಗಳಲ್ಲದೆ ಮಾನವ ನಿರ್ಮಿತ ವಸ್ತುಗಳೂ ಈ ಆಕರ್ಷಣೆಯ ಕೇಂದ್ರಬಿಂದುಗಳಾಗಿವೆ. ಈ ಕಾರಣಕ್ಕೇ ಬ್ಯಾಬಿಲಾನಿನ ತೇಲುವ ಉದ್ಯಾನವನ ಒಂದು ಕಾಲದಲ್ಲಿ ಪ್ರಪಂಚದ ಅದ್ಭುತವೆಂದು ಪರಿಗಣಿತವಾಗಿದ್ದು. ಎಷ್ಟು ಸಲ ನೋಡಿದರೂ ಹ್ಯಾಂಗಿಂಗ್ ಬ್ರಿಜ್‌ಗೆ ಭೇಟಿ ನೀಡಿ ಅದರ ಮೇಲೆ ನಡೆದಾಡಿ ಖುಷಿಪಡುವುದಕ್ಕೂ ಇದೇ ಕಾರಣ. ಜಗತ್ತಿನಲ್ಲಿ ಕ್ರೇಝ್ ಹುಟ್ಟು ಹಾಕಿರುವ ತೇಲುವ ಖಾನಾವಳಿಯ ಟ್ರೆಂಡ್ ಬೆಂಗಳೂರಿಗೂ ಕಾಲಿಟ್ಟಿದೆ.
22 ಆಸನಗಳು
150 ಅಡಿ ಎತ್ತರ
360 ಡಿಗ್ರಿ ನೋಟ
ನಾಗವಾರ ಕೆರೆಯ ವಿಹಂಗಮ ದೃಶ್ಯ
ವಿಶೇಷ ಸಂದರ್ಭಗಳಲ್ಲಿ ನಾವು, ಆಪ್ತರನ್ನು ಮನೆಗೆ ಊಟಕ್ಕೆ ಬನ್ನಿ ಆಹ್ವಾನಿಸುತ್ತೇವೆ. ಇನ್ನು ಮುಂದೆ ಬನ್ನಿ ಆಕಾಶದಲ್ಲಿ ಊಟ ಮಾಡೋಣ ಎಂದು ಯಾರಾದರೂ ಆಹ್ವಾನಿಸಿದರೆ ಎಲ್ಲೋ ಹುಚ್ಚು ಎಂದು ನಕ್ಕುಬಿಡಬೇಡಿ. ಭಾರತದಲ್ಲೇ ಪ್ರಥಮ ಬಾರಿಗೆ ಆಕಾಶದಲ್ಲಿ ಭೋಜನ ಸರ್ವ್ ಮಾಡುವ ರೆಸ್ಟೋರೆಂಟೊಂದು ನಗರದಲ್ಲಿ ಪ್ರಾರಂಭವಾಗಿದೆ. ಇದರ ಹೆಸರು “ಫ್ಲೈ ಡೈನಿಂಗ್’.
ಏನಿದು ಫ್ರೈ ಡೈನಿಂಗ್?
ಶ್ರುತಿ ಮತ್ತು ವಿವೇಕ್ ಇಬ್ಬರಿಗೂ ಇದು ಮೊದಲ ಅನುಭವ. ಮದುವೆಯ ಮೊದಲ ವರ್ಷದ ಆ್ಯನಿವರ್ಸರಿಗೆಂದು ವಿವೇಕ್ ಫ್ಲೈ ಡೈನಿಂಗನ್ನು ಬುಕ್ ಮಾಡಿದ್ದ. ಅವಳಿಗೆ ಮೊದಲೇ ಅಡ್ವೆಂಚರ್ ರೈಡುಗಳೆಂದರೆ ಭಯ. ಫ್ಲೈಡೈನಿಂಗಿನ ಆಸನಗಳು ರೋಲರ್ ಕೋಸ್ಟರ್ ಮಾದರಿಯಂತಿರುವುದನ್ನು ನೋಡಿ ಅವಳಿಗೆ ಗಾಬರಿ. ಆದರೆ ಪತಿ ವಿವೇಕ್ ಜೊತೆಗಿದ್ದನಲ್ಲ. ಅವನ ಕೈ ಹಿಡಿದು ಬಿಗಿಯಾಗಿ ಕುಳಿತುಕೊಂಡಳು. ಅಂದ ಹಾಗೆ ಆಕಾಶ ಖಾನಾವಳಿಯನ್ನು ರೋಮಾಂಚನಕಾರಿ ಭೋಜನ ಸವಿಯುವ ವ್ಯವಸ್ಥೆ ಎಂದು ಕರೆಯಬಹುದು. ರೌಂಡ್ ಟೇಬಲ್ ಮಾದರಿಯಲ್ಲಿ 22 ಆಸನಗಳಿವೆ. ಆಸನ, ಟೇಬಲ್ ಎಲ್ಲವೂ ಬೆಸೆದುಕೊಂಡಿರುತ್ತದೆ. ಇದಕ್ಕೊಂದು ಗಾಜಿನ ಸೂರು ಕೂಡಾ ಇದೆ. ಇವಿಷ್ಟೇ ಖಾನಾವಳಿಯ ಬಾಗ.
ಗ್ರಾಹಕರು ಆಸನದಲ್ಲಿ ಕುಳಿತ ಮೇಲೆ ಸೀಟಿನ ಬೆಲ್ಟಾಗಳನ್ನು ಕಟ್ಟಿಕೊಳ್ಳಬೇಕಾಗುತ್ತದೆ. ಸುರಕ್ಷತಾ ತಂಡದವರು ಬಂದು ಪರೀಕ್ಷಿಸುತ್ತಾರೆ. ಎಲ್ಲವೂ ಸರಿಯಾಗಿದೆ ಎನ್ನುವುದನ್ನು ಖಾತರಿ ಪಡಿಸಿಕೊಂಡ ನಂತರವೇ ಹೊರಡುವುದು. ಬಾಣಸಿಗ ಸೇರಿದಂತೆ ಒಟ್ಟು ಐವರು ಮಂದಿ ಗ್ರಾಹಕರ ಜೊತೆಗಿರುತ್ತಾರೆ. ಖಾನಾವಳಿಯನ್ನು ಕ್ರೇನ್‌ಗೆ ಕಟ್ಟಲಾಗಿರುತ್ತದೆ. ಅದರ ಸಹಾಯದಿಂದ ನೆಲದಿಂದ ಮೇಲಕ್ಕೆ ನಿಧಾನವಾಗಿ ಎತ್ತಲಾಗುತ್ತದೆ. ಸಾಕಷ್ಟು ಎತ್ತರ ತಲುಪಿದ ಮೇಲೆ ಆಕಾಶದಲ್ಲೊಂದು ಸ್ಟಾಪ್ ನೀಡಲಾಗುತ್ತದೆ. ನಂತರ ಭೋಜನವನ್ನು ಸರ್ವ್ ಮಾಡಲಾಗುತ್ತದೆ. ಬೆಲೆ 4,000ದಿಂದ ಶುರುವಾಗುತ್ತದೆ.
ಗ್ರಾಹಕರ ಮನರಂಜನೆಗೆ
ಒಂದೊಂದು ಕಡೆ ಒಂದೊಂದು ರೀತಿಯ ಮನರಂಜನಾ ಚಟುವಟಿಕೆಗಳನ್ನು ತೇಲುವ ಖಾನಾವಳಿ ಹೊಂದಿರುತ್ತದೆ. ಗ್ರಾಹಕರನ್ನು ಹೊರತು ಪಡಿಸಿ ಫೋಟೋಗ್ರಾಫರ್ ಒಬ್ಬ ಇದ್ದೇ ಇರುತ್ತಾನೆ. ಗ್ರಾಹಕರ ಸಂತಸದ ಕ್ಷಣಗಳನ್ನು ಸೆರೆ ಹಿಡಿದು ಅದರ ಫೋಟೋ ಪ್ರತಿಯನ್ನು ನೀಡುವುದು ಅವನ ಕೆಲಸ. ಇನ್ನು ಕೆಲವೆಡೆ ತೇಲುವ ಖಾನಾವಳಿಗಳಲ್ಲಿ ಸಂಗೀತ ಕಛೇರಿಯನ್ನೇ ನಡೆಸುವುದುಂಟು. ಪಾಶ್ಚಾತ್ಯ ದೇಶಗಳಲ್ಲಿ ಮ್ಯೂಸಿಕ್ ಡಿ.ಜೆ.ಗಳನ್ನು ಕರೆಸುತ್ತಾರೆ. ಬೆಂಗಳೂರಿನ ತೇಲುವ ಖಾನಾವಳಿಯಲ್ಲಿ ಗಿಟಾರ್ ಮತ್ತು ವಯಲಿನ್ ವಾದಕರಿರುತ್ತಾರೆ.
ಬಿಸಿಲೇ ಇರಲಿ ಮಳೆಯೇ ಬರಲಿ
ಸಂಜೆಯ ವೇಳೆ ಈ ಖಾನಾವಳಿಗಳಲ್ಲಿ ಬೋಜನ ಸವಿಯುವುದು ಚೆನ್ನ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಮಿಕ್ಕ ಸಮಯದಲ್ಲೂ ಭೋಜನ ಸವಿಯಲು ಅನುವಾಗುವ ಹಾಗೆ ವ್ಯವಸ್ಥೆಯನ್ನು ಆಯೋಜಕರು ಮಾಡಿಕೊಂಡಿರುತ್ತಾರೆ. ಸಾಮಾನ್ಯವಾಗಿ ಗಾಜಿನ ಸೂರನ್ನು ಹೊದಿಸಿರುತ್ತಾರಾದರೂ, ಅವಶ್ಯಕತೆ ಇದ್ದಲ್ಲಿ, ಬಿಸಿಲಿಗೆ ರಕ್ಷಣೆ ನೀಡಲೆಂದು ಪ್ರತ್ಯೇಕ ಸೂರನ್ನೂ ಹೊದಿಸುತ್ತಾರೆ. ಸೆಕೆಗೆ ಎ.ಸಿ, ಚಳಿಗೆ ಇನ್‌ಫ್ರಾರೆಡ್ ಹೀಟಿಂಗ್ ವ್ಯವಸ್ಥೆಯೂ ಇಲ್ಲಿರುತ್ತದೆ.
ಅತ್ಯದ್ಭುತ ಸೆಲ್ಫಿ
ತೇಲುವ ಖಾನಾವಳಿಗಳಿಗೆ ಭೇಟಿ ನೀಡುವವರಲ್ಲಿ ಹೊಸತನ್ನು ಪ್ರಯತ್ನಿಸುವ ಅಡ್ವೆಂಚರ್ ಮನೋಭಾವದವರು ಒಂದು ಕೆಟಗರಿಯಾದರೆ ಇನ್ನು ಕೆಲವರು ಸೆಲ್ಪಿ ತೆಗೆದುಕೊಳ್ಳಲೆಂದೇ ಇಲ್ಲಿ ಬರುವವರಿದ್ದಾರೆ. ಪ್ಯಾರಿಸ್, ದುಬೈ ಮುಂತಾದ ಪ್ರಖ್ಯಾತ ಪ್ರವಾಸಿ ತಾಣಗಳ ತೇಲುವ ಖಾನಾವಳಿಗಳಲ್ಲಿ ಸೆಲ್ಫಿ ತೆಗೆದುಕೊಳ್ಳುವುದು ಪ್ರತಿಷ್ಠೆಯ ವಿಷಯವೂ ಹೌದು. ಅದಕ್ಕೆಂದೇ ಆಯೋಜಕರು ಫೋಟೋಗ್ರಾಫರ್‌ನನ್ನೂ ನೇಮಿಸಿಕೊಂಡಿರುತ್ತಾರೆ. ಗ್ರಾಹಕರು ಸೆಲ್ಪಿ ತೆಗೆದುಕೊಳ್ಳುವುದರ ಜೊತೆಗೆ ಫೋಟೋಗ್ರಾಫರ್ ನೀಡುವ ಗುಣಮಟ್ಟದ ಫೋಟೋ ಮತ್ತು ವಿಡಿಯೋಗಳನ್ನೂ ಪಡೆದುಕೊಳ್ಳಬಹುದು.
60ಕ್ಕೂ ಹೆಚ್ಚು ದೇಶಗಳಲ್ಲಿವೆ
ಭಾರತದಲ್ಲಿ ಇದು ಮೊದಲನೆಯದಾದರೂ, ತೇಲುವ ರೆಸ್ಟೋರೆಂಟಿನ ಪರಿಕಲ್ಪನೆ ಹೊಚ್ಚ ಹೊಸತೇನಲ್ಲ. 60ಕ್ಕೂ ಹೆಚ್ಚಿನ ದೇಶಗಳಲ್ಲಿ ಆಕಾಶದ ಖಾನಾವಳಿಗಳಿವೆ. ನಗರಕ್ಕೆ ಭೇಟಿ ನೀಡುವ ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತಿವೆ. ಅದಕ್ಕೆ ಕಾರಣವೂ ಇದೆ. ಈ ರೆಸ್ಟೋರೆಂಟುಗಳು ನಗರದ ವಿಭಿನ್ನ, ಯಾರೂ ಕಾಣದ ನೋಟವನ್ನು ನೀಡುವವು. ಸಂಜೆಗತ್ತಲಿನಲ್ಲಿ ಪಕ್ಷಿಗಳು ಗೂಡಿಗೆ ವಾಪಸ್ಸಾಗುವ ಹೊತ್ತಿನಲ್ಲಿ ದಡದಲ್ಲಿನ ಕಟ್ಟಡಗಳ ಪ್ರತಿಫಲನದಲ್ಲಿ ನಗರ ಬೇರೆಯದೇ ರಂಗು ಪಡೆದುಕೊಳ್ಳುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಈ ಆಕಾಶ ಖಾನಾವಳಿಯನ್ನು ರೂಪಿಸಿದ್ದು ಮತ್ತು ಉಸ್ತುವಾರಿಯ ಜವಾಬ್ದಾರಿಯನ್ನು ಹೊತ್ತುಕೊಂಡಿರುವುದು ಜರ್ಮನ್ ಸಂಸ್ಥೆ. ಜಗತ್ತಿನ ಪ್ರಖ್ಯಾತ ಪ್ರೇಕ್ಷಣೀಯ ಸ್ಥಳಗಳಲ್ಲಿರುವ ಆಕಾಶ ಖಾನಾವಳಿಯ ಜವಾಬ್ದಾರಿಯನ್ನೂ ಅದು ನೋಡಿಕೊಳ್ಳುತ್ತಿದೆ. ಸುರಕ್ಷತೆಯೇ ತೇಲುವ ಖಾನಾವಳಿಗಳ ಪ್ರಥಮ ಆದ್ಯತೆ.
– ನೇಹಾ, ಸಿ.ಇ.ಓ, ಫ್ಲೈಡೈನಿಂಗ್
ಮಾಹಿತಿಗೆ: www.flydining.com
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.