ನಾವೇ ಬೇರೆ, ನಮ್‌ ಇಂಡಿಪೆಂಡೆನ್ಸ್‌ ಡೇನೇ ಬೇರೆ…


Team Udayavani, Aug 12, 2017, 4:40 PM IST

66-a.jpg

ಬ್ಯಾಂಡ್‌- ಶಂಖದ ನಾದ ಕೇಳಿಸುವ ಮಾಣಿಕ್‌ ಷಾ ಮೈದಾನದ ಪೆರೇಡಿನ ಸೊಬಗು, ಸಿಎಂ ಭಾಷಣ- ಮಕ್ಕಳ ಸಾಹಸ ಪ್ರದರ್ಶನದ ರಂಗು, ಲಾಲ್‌ಬಾಗ್‌ನ ಫ‌ಲಪುಷ್ಪ ಪ್ರದರ್ಶನದ ಬೆಡಗು… ಬೆಂಗ್ಳೂರಲ್ಲಿ ಸ್ವಾತಂತ್ರೋತ್ಸವ ಅಂದಾಕ್ಷಣ ಎಲ್ಲರ ಆಲೋಚನೆ ಬಹುತೇಕ ಇಷ್ಟಕ್ಕೇ ನಿಂತುಬಿಡುತ್ತೆ. ಆದರೆ, ಸಿಲಿಕಾನ್‌ ಸಿಟಿ ವಿಭಿನ್ನವಾಗಿ ಸ್ವಾತಂತ್ರ್ಯೋತ್ಸವವನ್ನು ಬರಮಾಡಿಕೊಳ್ಳೋದು ಅನೇಕರಿಗೆ ಗೊತ್ತೇ ಇಲ್ಲ. “ವ್ಹಾವ್‌’ ಎನ್ನಬಹುದಾದ ಪರಿಕಲ್ಪನೆಯಲ್ಲಿ ಹೆಜ್ಜೆಯಿಟ್ಟು, ಸ್ವಾತಂತ್ರ್ಯದ ಕಹಳೆ ಊದುವ ದೇಶಪ್ರೇಮಿಗಳ ಪರಿಚಯ ಇಲ್ಲಿದೆ…

ಬೀದಿಯ ಧ್ವಜಕ್ಕೆ ಫ್ಲ್ಯಾಗಥಾನ್‌ ವಂದನೆ

ದೇಶಭಕ್ತಿಯೆಂದರೆ ಥಟ್ಟನೆ ಹೊಳೆಯುವುದು ತ್ರಿವರ್ಣ ಧ್ವಜ. ಸ್ವಾತಂತ್ರ್ಯ ದಿನದಂದು ಬಾವುಟ ಹಿಡಿದು, ಟ್ರೈ ಕಲರ್‌ ಬ್ಯಾಂಡ್‌, ಸ್ಟಿಕರ್‌ ಅಂಟಿಸಿಕೊಂಡವನು ಮಹಾನ್‌ ದೇಶಪ್ರೇಮಿಯಂತೆ ಕಾಣಿಸುತ್ತಾನೆ ನಮಗೆ. ಆಮೇಲೆ ಬಾವುಟವನ್ನು ಒಂದು ಕಡೆ ಇಟ್ಟು ನಡೆದರೂ ಆಯ್ತು. ಅಲ್ಲಿಗೆ ಮುಗೀತು ನಮ್ಮ ಇಂಡಿಪೆಂಡೆನ್ಸ್‌ ಡೇ ಆಚರಣೆ.

ನಮ್ಮ ದೇಶಪ್ರೇಮ ಎಂಥದ್ದೆಂದು ತಿಳಿಯಲು, ಸ್ವಾತಂತ್ರ್ಯ ದಿನದ ಸಂಭ್ರಮವೆಲ್ಲ ಮುಗಿದ ಮೇಲೆ ಸಿಟಿಯಲ್ಲೊಂದು ರೌಂಡ್‌ ಹಾಕಬೇಕು. ಬೆಳಗ್ಗೆ ಬಾನಿಗೇರಿದ್ದ ಬಾವುಟಗಳು ಹಾದಿಬೀದಿಯಲ್ಲಿ ಸಿಗುತ್ತವೆ! ಹೀಗೆ ರಾಷ್ಟ್ರಧ್ವಜದ ಘನತೆ, ಗೌರವ ಮಣ್ಣುಪಾಲಾಗುವುದನ್ನು ತಡೆಯಲು “ದೇಶಭಕ್ತ’ರ ತಂಡವೊಂದು ಟೊಂಕ ಕಟ್ಟಿ ನಿಂತಿದೆ. ಅದೇ ಫ್ಲ್ಯಾಗಥಾನ್‌!

ಏನಿದು ಫ್ಲ್ಯಾಗಥಾನ್‌?
ಇದು 20-50 ಜನರಿರುವ ಒಂದು ತಂಡ. ಸ್ವಾತಂತ್ರ್ಯ ದಿನಾಚರಣೆಯ ನಂತರ ರಸ್ತೆ ಮೇಲೆ ಬಾವುಟವಾಗಲಿ, ತ್ರಿವರ್ಣದ ಬ್ಯಾಂಡ್‌ ಅಥವಾ ಇನ್ನಾéವುದೇ ಸಂಕೇತವಾಗಲಿ ಕಾಣಿಸಬಾರದು ಎಂಬುದು ಈ ತಂಡದ ಗುರಿ. ಕಿಶೋರ್‌ ಪಟವರ್ಧನ್‌ ಮತ್ತು ಸಮಾನ ಮನಸ್ಕರು ಕಳೆದ 4 ವರ್ಷಗಳಿಂದ ಈ ಕೆಲಸ ಮಾಡುತ್ತಿದ್ದಾರೆ. 

ನೀವೂ ಜೊತೆಯಾಗಿ
ಈ ಬಾರಿಯೂ ಆ.15ರ ಮಧ್ಯಾಹ್ನ ಇವರೆಲ್ಲ ಕಬ್ಬನ್‌ ಪಾರ್ಕ್‌ ಬಳಿ ಸೇರುತ್ತಾರೆ. ಸುಮಾರು 40 ಜನರಿರುವ ಈ  ತಂಡದ ಜತೆ ಆಸಕ್ತ ಸಾರ್ವಜನಿಕರು ಕೂಡ ಕೈ ಜೋಡಿಸಬಹುದು. ನಂತರ ಐದಾರು ತಂಡಗಳಾಗಿ ಇವರು 5-6 ಕಿ.ಮೀ ವ್ಯಾಪ್ತಿಯ ಬೀದಿ ಬೀದಿ ಅಲೆದು, ಅಲ್ಲಲ್ಲಿ ಬಿದ್ದಿರುವ ಬಾವುಟಗಳನ್ನು ಎತ್ತುತ್ತಾರೆ. ಸಂಜೆ 6ಕ್ಕೆ ಮತ್ತೆ ಕಬ್ಬನ್‌ಪಾರ್ಕ್‌ಗೆ ತಂಡ ಮರಳುತ್ತದೆ. ಹೀಗೆ ಸಂಗ್ರಹಿಸಲ್ಪಟ್ಟ ಪ್ಲಾಸ್ಟಿಕ್‌ ಬಾವುಟಗಳನ್ನು ರಿಸೈಕ್ಲಿಂಗ್‌ ಮಾಡಲಾಗುತ್ತದೆ.

ಮೊದಲ ವರ್ಷ ಬೀದಿಯಲ್ಲಿ 700 ಬಾವುಟಗಳು ಸಿಕ್ಕಿದ್ದವು. ನಂತರದ ವರ್ಷಗಳಲ್ಲಿ ಅದು 500, 150ಕ್ಕೆ ಇಳಿಯಿತು. ಒಂದೇ ಒಂದು ಬಾವುಟ ಕೂಡ ರಸ್ತೆಯಲ್ಲಿ ಬೀಳಬಾರದು. ಅಲ್ಲಿಯವರೆಗೂ ನಾವು ಈ ಕೆಲಸವನ್ನು ಮುಂದುವರಿಸಿಕೊಂಡು ಹೋಗುತ್ತೇವೆ. ರಾಷ್ಟ್ರಧ್ವಜ ಬೀದಿಯಲ್ಲಿ ಎಸೆಯಬಹುದಾದ ವಸ್ತುವಲ್ಲ ಎಂಬುದು ಜನರಿಗೆ ಅರ್ಥವಾಗಬೇಕು. ಆಗ ಮಾತ್ರ ನಮ್ಮ ಶ್ರಮ ಸಾರ್ಥಕ. 
ಕಿಶೋರ್‌ ಪಟವರ್ಧನ್‌, ಫ್ಲ್ಯಾಗಥಾನ್‌ ಆಯೋಜಕ

ಯಾವ್ಯಾವ ಏರಿಯಾ?
ಎಂ.ಜಿ. ರಸ್ತೆ, ಕಸ್ತೂರಬಾ ರಸ್ತೆ, ಸೇಂಟ್‌ ಮಾರ್ಕ್ಸ್ ರಸ್ತೆ, ರೆಸಿಡೆನ್ಸಿ ರಸ್ತೆ, ವಿಠಲ್‌ ಮಲ್ಯ ರಸ್ತೆ, ಬ್ರಿಗೇಡ್‌ ರೋಡ್‌, ಕಬ್ಬನ್‌ ರೋಡ್‌. 

ರಾಬಿನ್‌ ಹುಡ್‌ ಆರ್ಮಿಯ ಕೈತುತ್ತು!
 ಹೋರಾಟ ಶತ್ರುವೊಂದಿಗಲ್ಲ, ಹಸಿವಿನೊಂದಿಗೆ!

ರಾಬಿನ್‌ ಹುಡ್‌ ಆರ್ಮಿ ಅಂದಾಕ್ಷಣ ಯಾವುದೋ ಶತ್ರುಸೇನೆ ಅಂದುಕೊಳ್ಳಬೇಡಿ. ಇದು ಮದ್ದು ಗುಂಡುಗಳೊಂದಿಗೆ ಗುದ್ದಾಡುವ ಸೈನ್ಯವಲ್ಲ. ನೊಂದವರ ಕಷ್ಟಕ್ಕೆ ಸ್ಪಂದಿಸುವ ಮನಸ್ಸುಗಳು ಸೇರಿ ಕಟ್ಟಿದ ಸೇನೆಯಿದು. ಇವರ ಗುದ್ದಾಟ ಹಸಿವಿನೊಂದಿಗೆ. ಹಸಿದವರಿಗೆ ಊಟ ನೀಡುವುದು, ಉಳಿದು ಹಾಳಾಗುವ ಆಹಾರವನ್ನು ಸಂಗ್ರಹಿಸಿ ತಲುಪಬೇಕಾದಲ್ಲಿಗೆ ತಲುಪಿಸುವುದು ಇವರ ಕೆಲಸ!
ಹೌದು, ರಾಬಿನ್‌ ಹುಡ್‌ ಆರ್ಮಿ ಈ ಪುಣ್ಯದ ಕೆಲಸವನ್ನು ಮಾಡುತ್ತಿರುವುದು ಸ್ವಾತಂತ್ರ್ಯ ದಿನಾಚರಣೆಯಂದು!

“ಮಹಾಯುದ್ಧ’ಕ್ಕೆ ಸಜ್ಜು
ಸ್ವಾತಂತ್ರ್ಯದ ಹಬ್ಬವನ್ನು ವಿನೂತನವಾಗಿ ಆಚರಿಸುವ ನಿಟ್ಟಿನಲ್ಲಿ ರಾಬಿನ್‌ ಹುಡ್‌ ಆರ್ಮಿ ಈ ಬಾರಿ ಮಹಾಕೈಂಕರ್ಯವೊಂದಕ್ಕೆ ಸಜ್ಜಾಗಿದೆ. ಭಾರತದ ಹತ್ತು ಲಕ್ಷ ಬಡವರಿಗೆ ಆಹಾರ ಒದಗಿಸುವ ಕಾರ್ಯ ಹಮ್ಮಿಕೊಂಡಿದೆ ಈ ಆರ್ಮಿ. ಅನಾಥಾಶ್ರಮ, ವೃದ್ಧಾಶ್ರಮ, ಆಸ್ಪತ್ರೆ ರೋಗಿಗಳಿಗೆ ಊಟ ಕೊಡಲಾಗುತ್ತದೆ. ಈ ಎಲ್ಲ ಕೆಲಸಗಳ ಉಸ್ತುವಾರಿಯನ್ನು ಊಬರ್‌, ಝೊಮ್ಯಾಟೊ, 
ಪೇಟಿಎಂ ಕಂಪನಿಗಳು ವಹಿಸಿಕೊಂಡಿವೆ.

ನೀವೂ ಕೈ ಜೋಡಿಸಿ…
“#ಮಿಶನ್‌ 1 ಮಿಲಿಯನ್‌’ ಕಾರ್ಯದಲ್ಲಿ ನೀವೂ ಕೈ ಜೋಡಿಸಬಹುದು. ಇಲ್ಲಿ ಆರ್ಮಿ ನಿಮ್ಮಿಂದ ಹಣ ಅಥವಾ ದೇಣಿಗೆಯನ್ನು ಬಯಸುತ್ತಿಲ್ಲ. ಅವರಿಗೆ ಬೇಕಾಗಿರುವುದು ನಿಮ್ಮ ಸಮಯವಷ್ಟೇ. ಆಹಾರ ಹಂಚಲು ಸ್ವಯಂ ಸೇವಕರಾಗಿ ನೀವು ಭಾಗವಹಿಸಿದರಾಯ್ತು.

ಪಾಲ್ಗೊಳ್ಳುವುದು ಹೇಗೆ?
ಆಗಸ್ಟ್‌ 14 ಮತ್ತು 15ರಂದು ಬೆಂಗಳೂರು, ಮುಂಬೈ, ದೆಹಲಿ, ಗುರ್ಗಾಂವ್‌, ಪುಣೆಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಹಾಯ ಮಾಡೋಕೆ ರೆಡಿ ಇದ್ದೇನೆ ಅನ್ನುವವರು ಫೇಸ್‌ಬುಕ್‌ನಲ್ಲಿ 
www.facebook.com/robinhoodarmy ಪೇಜ್‌ಗೆ ಭೇಟಿ ನೀಡಿ ಹೆಚ್ಚಿನ ವಿವರ ಪಡೆಯಿರಿ. 

ಸ್ವಾತಂತ್ರ್ಯ “ಊಟ’!
ಭಾರತದ ಆತ್ಮ ಇರುವುದು ಹಳ್ಳಿಗಳಲ್ಲಿ. ಗೊತ್ತಿರೋ ಸಂಗತಿಯೇ ಇದು. ಆದರೆ, ಇಲ್ಲಿ ಹೇಳಹೊರಟಿರುವುದು ಆ ಸ್ಲೋಗನ್‌ ಅನ್ನೇ ಹೆಸರಾಗಿಸಿಕೊಂಡಿರೋ ಹೋಟೆಲ್‌ ಬಗ್ಗೆ. ಇದನ್ನು ಥೀಮ್‌ ಹೋಟೆಲ್‌ ಎಂದರೆ ಹೆಚ್ಚು ಸೂಕ್ತ. ಹಳ್ಳಿಯ ಸೊಗಡನ್ನು ನೆನಪಿಗೆ ತರುವ ಹಳ್ಳಿ ಕಟ್ಟೆ, ಸೈಕಲ್‌ನಲ್ಲಿ ಸರ್ವ್‌ ಮಾಡುವ ಸರ್ವರ್‌ಗಳು ಮತ್ತು ಹೋಟೆಲ್‌ನ ಒಳಾಂಗಣ ವಿನ್ಯಾಸ ಇಲ್ಲಿದೆ. 

ಉತ್ತರ ಮತ್ತು ದಕ್ಷಿಣ ಭಾರತದ ಸಾಂಪ್ರದಾಯಿಕ ತಿಂಡಿ ತಿನಿಸುಗಳು ಇಲ್ಲಿ ಸಿಗುತ್ತವೆ. ಸ್ವಾತಂತ್ರ್ಯ ದಿನದ ಸಂಭ್ರಮಾಚರಣೆಯ ಸಲುವಾಗಿ ಮನೆಯೊಡತಿಗೆ ರಜೆ ಕೊಟ್ಟು ಹೊರಗಡೆ ಡೈನ್‌ ಮಾಡುವ 
ಸ್ಥಳವನ್ನೇನಾದರೂ ಹುಡುಕುತ್ತಿದ್ದರೆ, ಈ ಸ್ಥಳದತ್ತ ಒಮ್ಮೆ ಕಣ್ಣು ಹಾಯಿಸಬಹುದು. ಸ್ವಾತಂತ್ರ್ಯ ದಿನಾಚರಣೆಯಂದು “ವಿಲೇಜ್‌’ನಲ್ಲಿ “ಇಂಡಿಪೆಂಡೆನ್ಸ್‌ ಡೇ ಸ್ಪೆಷಲ್‌’ ಮೆನುವನ್ನು ಸಿದ್ಧಪಡಿಸುತ್ತಾರೆ. ಇದೇ ಸಂದರ್ಭದಲ್ಲಿ ಗ್ರಾಹಕರ ಮನರಂಜನೆಗೆ ಮ್ಯೂಸಿಕ್‌ ಚೇರ್‌ ಮುಂತಾದ ಆಟ, ತಿರಂಗಾ ಸ್ಪೆಷಲ್‌, ಮೆಹಂದಿ ಸ್ಟಾಲ್‌ ಮತ್ತು ಗೊಂಬೆಯಾಟಗಳೂ ಆಯೋಜನೆಯಾಗಿವೆ. ಜಯನಗರದ ಸೆಂಟ್ರಲ್‌ ಮಾಲ್‌, ಮಲ್ಲೇಶ್ವರಂನ ಸಂಪಿಗೆ ರಸ್ತೆ ಮತ್ತು ಸರ್ಜಾಪುರದ ಮಾರ್ಕೆಟ್‌ ಸ್ಕ್ವೇರ್‌ ಮಾಲ್‌ ಸೇರಿದಂತೆ ಒಟ್ಟು ಮೂರು ಕಡೆಗಳಲ್ಲಿ ಈ ಹೋಟೆಲ್‌ನ ಶಾಖೆಗಳಿವೆ.

ಟಾಪ್ ನ್ಯೂಸ್

Fraud: “ವಿಡಿಯೋಗೆ ಲೈಕ್‌ ನೀಡಿ’ 13.97 ಲಕ್ಷ ಕಳೆದುಕೊಂಡರು!

Fraud: “ವಿಡಿಯೋಗೆ ಲೈಕ್‌ ನೀಡಿ’ 13.97 ಲಕ್ಷ ಕಳೆದುಕೊಂಡರು!

Surathkal: ಅಂಗನವಾಡಿ ಎದುರು ನಿಲ್ಲಿಸಿದ್ದ ಕಾರಿಗೆ ಬೆಂಕಿ…

Surathkal: ಅಂಗನವಾಡಿ ಎದುರು ನಿಲ್ಲಿಸಿದ್ದ ಕಾರು ಬೆಂಕಿಗಾಹುತಿ

4-gangavathi

Gangavathi: ಪತ್ನಿ ವರದಕ್ಷಿಣೆ ತಂದಿಲ್ಲ ಎಂದು ಮನೆಗೆ ಬೀಗ ಹಾಕಿ ಪತಿ ಹಾಗೂ ಮನೆಯವರು ಪರಾರಿ

Video: ಮದುವೆ ಸಂಭ್ರಮದಲ್ಲಿದ್ದ ವರನಿಗೆ ಹೃದಯಾಘಾತ… ಕುಟುಂಬ ಸದಸ್ಯರಿಗೆ ಆಘಾತ

Video: ಮದುವೆ ಸಂಭ್ರಮದಲ್ಲಿದ್ದ ವರನಿಗೆ ಹೃದಯಾಘಾತ… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು

BBK11: ಬಿಗ್‌ ಬಾಸ್‌ ಮನೆಯಲ್ಲಿ ಶೋಭಾ ಆರ್ಭಟಕ್ಕೆ ಗಪ್‌ ಚುಪ್‌ ಆದ ಮಂಜು.!

BBK11: ಬಿಗ್‌ ಬಾಸ್‌ ಮನೆಯಲ್ಲಿ ಶೋಭಾ ಆರ್ಭಟಕ್ಕೆ ಗಪ್‌ ಚುಪ್‌ ಆದ ಮಂಜು.!

Maharastra: ಕಾರಿನ ಮೇಲೆ ಕಲ್ಲು ತೂರಾಟ… ಮಾಜಿ ಸಚಿವ ಅನಿಲ್ ದೇಶಮುಖ್ ಹಣೆಗೆ ಗಾಯ

Maharastra: ಕಾರಿನ ಮೇಲೆ ಕಲ್ಲು ತೂರಾಟ… ಮಾಜಿ ಸಚಿವ ಅನಿಲ್ ದೇಶಮುಖ್ ಹಣೆಗೆ ಗಾಯ

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

‌Max Movie: ಬಿಗ್‌ ಬಾಸ್‌ ವೇದಿಕೆಯಲ್ಲಿ  ʼಮ್ಯಾಕ್ಸ್‌ʼ ಬಗ್ಗೆ ಮಾತನಾಡಿದ ಕಿಚ್ಚ ಸುದೀಪ್

‌Max Movie: ಬಿಗ್‌ ಬಾಸ್‌ ವೇದಿಕೆಯಲ್ಲಿ ʼಮ್ಯಾಕ್ಸ್‌ʼ ಬಗ್ಗೆ ಮಾತನಾಡಿದ ಕಿಚ್ಚ ಸುದೀಪ್

Fraud: “ವಿಡಿಯೋಗೆ ಲೈಕ್‌ ನೀಡಿ’ 13.97 ಲಕ್ಷ ಕಳೆದುಕೊಂಡರು!

Fraud: “ವಿಡಿಯೋಗೆ ಲೈಕ್‌ ನೀಡಿ’ 13.97 ಲಕ್ಷ ಕಳೆದುಕೊಂಡರು!

Anekal: ರೌಡಿಶೀಟರ್‌ ಮೇಲೆ ಮಾರಕಾಸ್ತ್ರಗಳಿಂದ ದಾಳಿ

Anekal: ರೌಡಿಶೀಟರ್‌ ಮೇಲೆ ಮಾರಕಾಸ್ತ್ರಗಳಿಂದ ದಾಳಿ

Surathkal: ಅಂಗನವಾಡಿ ಎದುರು ನಿಲ್ಲಿಸಿದ್ದ ಕಾರಿಗೆ ಬೆಂಕಿ…

Surathkal: ಅಂಗನವಾಡಿ ಎದುರು ನಿಲ್ಲಿಸಿದ್ದ ಕಾರು ಬೆಂಕಿಗಾಹುತಿ

6

Accident: ಆರೋಪಿ ಸೆರೆಗೆ 200 ಕ್ಯಾಮೆರಾ ಪರಿಶೀಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.