ಟೆಕ್ಕಿಗಳಿಗೆ ಕರೆ ಮಾಡಿದ್ರೆ, ಸಂಡಿಗೆ ಬರುತ್ತೆ!
Team Udayavani, Jul 15, 2017, 2:00 PM IST
ಆಷಾಡದ ಗಾಳಿ ಮೈ ಸೋಕುತ್ತಿದೆ. ಈ ಗಾಳಿಯೊಂದಿಗೆ ಮಳೆಯೂ ಜತೆಗೂಡಿದರೆ, ಮೈ ತಣ್ಣಗಾಗಿ, ನಡುಕ ಹುಟ್ಟುವುದರಲ್ಲಿ ಅನುಮಾನವೇ ಇಲ್ಲ. “ಕೂಲ್ ಸಿಟಿ’ ಖ್ಯಾತಿಯ ಬೆಂಗ್ಳೂರು ಮತ್ತಷ್ಟು ಕೋಲ್ಡ್ ಆಗಿ, ಏನಾದರೂ ಕುರುಕಲು ತಿಂಡಿಯನ್ನು ಮೆಲ್ಲಬೇಕೆಂಬ ಆಸೆಯೂ ಆ ಕ್ಷಣವೇ ಹುಟ್ಟುತ್ತದೆ. ಬೆಂಗ್ಳೂರಿಗರ ಈ ಬಾಯಿರುಚಿಯನ್ನು ತಣಿಸಲೆಂದೇ ಐಟಿ ಹುಡುಗರು, ಸಂಡಿಗೆ ತಯಾರಿಸಿದ್ದಾರೆ! ಹಾಗೆ ಸಂಡಿಗೆ ತಯಾರಿಸಿ, ಅವರೇನು ಸುಮ್ಮನೆ ಕೂರುವುದಿಲ್ಲ. ಅದನ್ನು ಮನೆಯ ಬಾಗಿಲಿಗೇ ತಲುಪಿಸುತ್ತಾರೆ!
ಹೌದು, ಇದು “Sandigeatdoors.com’ ಸಾಹಸ! ಮನೆಮನೆಗೂ ಹಪ್ಪಳ- ಸಂಡಿಗೆಯನ್ನು ಮಟ್ಟಿಸುವುದೇ ಇವರ ಕೆಲಸ. ಕೇವಲ ಸಂಡಿಗೆ ಅಲ್ಲದೆ, ಸಿಹಿ ತಿನಿಸು, ಚಟ್ನಿ ಪುಡಿ, ಸಾಂಬಾರು ಪುಡಿಗಳನ್ನೂ ಇವರು ಮನೆಯ ಬಾಗಿಲಿಗೆ ತಲುಪಿಸುತ್ತಾರೆ.
ಸಾಫ್ಟ್ವೇರ್ ಹುದ್ದೆಯಲ್ಲಿರೋರಿಗೆ ಸೈಡ್ ಬ್ಯುಸಿನೆಸ್‌ನ ಅಗತ್ಯ ಇಲ್ಲ ಎಂಬ ಮಾತು ಇವರ ಪಾಲಿಗೆ ಸುಳ್ಳಾಗಿದೆ. ರಂಜನ್ ಭಾರದ್ವಾಜ್, ಭೂಷಣ ನಾಗರಾಜ್, ರವಿ ಆರ್.ಎಸ್. ಮತ್ತು ಸಂಧ್ಯಾ ಎಂಬ ನಾಲ್ಕು ಟೆಕ್ಕಿಗಳು ಐಟಿ ಕೆಲಸದ ಜೊತೆಗೆ ಸಂಡಿಗೆ ಉದ್ದಿಮೆಯನ್ನೂ ಪೋಷಿಸಿಕೊಂಡು ಹೋಗುತ್ತಿದ್ದಾರೆ.
ಹುಟ್ಟಿಕೊಂಡಿದ್ದು ಹೇಗೆ?
ಈ ನಾಲ್ವರು ಟೆಕ್ಕಿಗಳು ಒಂದು ಸ್ಟಾರ್ಟ್‌ಅಪ್ ಕಂಪನಿಯನ್ನು ಆರಂಭಿಸಿದರು. ಕಂಪನಿ ಹೊಸತಾದ್ದರಿಂದ ಹಗಲು- ರಾತ್ರಿ ದುಡಿಮೆ ಅನಿವಾರ್ಯವಾಗಿತ್ತು. ಕಚೇರಿಯಲ್ಲಿಯೇ ಊಟ- ತಿಂಡಿಯನ್ನು ಸಿದ್ಧಪಡಿಸುವ ವ್ಯವಸ್ಥೆ ಇತ್ತಾದರೂ, ದಿನಸಿ ಸಾಮಗ್ರಿಗಳಿಗೆ ಹೊರಗಡೆಯ ಅಂಗಡಿಗಳಿಗೆ ಹೋಗಬೇಕಿತ್ತು. ಆದರೆ, ತಮ್ಮ ರುಚಿಗೆ ಬೇಕಾದಂಥ, ಗುಣಮಟ್ಟ ಪದಾರ್ಥಗಳು ಸಿಗದೆ ಬೇಸರಗೊಳ್ಳುತ್ತಿದ್ದರು. ಆಗ ಹುಟ್ಟಿಕೊಂಡಿದ್ದೇ “Sandigeatdoors.com’ ಐಡಿಯಾ!
ಏನೇನು ತಯಾರಿಸ್ತಾರೆ?
ಈ ನಾಲ್ವರು ಕೆಲಸದ ಜೊತೆಯಲ್ಲಿಯೇ ಹಪ್ಪಳ, ಸಂಡಿಗೆ, ಸಾಂಬಾರು ಪದಾರ್ಥ, ಮೆಂತ್ಯ ಚಟ್ನಿ ಪುಡಿ, ವಾಂಗೀಬಾತ್ ಪೌಡರ್‌ಗಳನ್ನು ತಯಾರಿಸತೊಡಗಿದರು. ಹೀಗೆ ತಯಾರಿಸಿದ ಪದಾರ್ಥಗಳಿಗೆ ಆನ್‌ಲೈನ್ ಮಾರುಕಟ್ಟೆಯಲ್ಲಿಟ್ಟರು. ಬೆಂಗಳೂರೆಂಬ ಬ್ಯುಸಿ ಊರಿನಲ್ಲಿ ಯಾರಿಗೂ ಅಡುಗೆ ಮಾಡುವಷ್ಟು ಸಮಯವಿಲ್ಲ. ಹಾಗೆ ಕೊಂಚ ಸಮಯ ಸಿಕ್ಕರೂ ಸಿಂಪಲ್ಲಾಗಿ, ಅಡುಗೆ ತಯಾರಿಸುವ, ಅನ್ನದೊಂದಿಗೆ ನೆಂಚಿಕೊಳ್ಳುವ ಪದಾರ್ಥಗಳಿದ್ದರೆ ಹೊಟ್ಟೆಯೇ ತುಂಬಿಬಿಡುತ್ತದೆ. ಬೆಂಗ್ಳೂರಿಗರ ಈ ಅವಸರದ ಬದುಕಿಗೆ ತಕ್ಕಂತೆ, ಇವರು ರುಚಿದಾಯಕ ಆಹಾರೋತ್ಪನ್ನಗಳನ್ನು ತಯಾರಿಸಿದ್ದಾರೆ.
ಯಾವ ಶೈಲಿಯ ಆಹಾರ?
ಸಾಮಾನ್ಯವಾಗಿ ಬೆಂಗಳೂರಿನ ಎಲ್ಲೆಡೆ ಮಂಗಳೂರು- ಉಡುಪಿ ಕಡೆಯ ಸಂಡಿಗೆ- ಹಪ್ಪಳ ಬಹಳ ಜನಪ್ರಿಯ. ಉತ್ತರ ಕರ್ನಾಟಕ ಶೈಲಿಯ ಚಟ್ನಿಪುಡಿಗಳೂ ರಾಜಧಾನಿಯಲ್ಲಿ ಹೆಚ್ಚು ಬೇಡಿಕೆ ಗಿಟ್ಟಿಸಿಕೊಂಡಿವೆ. ಆದರೆ, ಬೆಂಗಳೂರು- ಮೈಸೂರು ಭಾಗದ ಸಂಡಿಗೆಗಳು ಎಲ್ಲ ಕಡೆಗಳಲ್ಲೂ ಸಿಗುವುದಿಲ್ಲ. ಖಚnಛಜಿಜಛಿಚಠಿಛಟಟ್ಟs.cಟಞ ಜಾಲತಾಣಕ್ಕೆ ಭೇಟಿ ನೀಡಿದರೆ, ಮೈಸೂರು ಶೈಲಿಯ ಪದಾರ್ಥಗಳು ಸಿಗುತ್ತವೆ. ಫೋನ್ ಕರೆ ಮಾಡಿ ತಿಳಿಸಿದರೂ, ಮನೆಯ ಬಾಗಿಲಿಗೆ ಹಪ್ಪಳ- ಸಂಡಿಗೆಗಳು ಬರುತ್ತವೆ. ಸಭೆ- ಸಮಾರಂಭಗಳಿಗೂ ರಿಯಾಯಿತಿ ದರದಲ್ಲಿ ಕುರುಕಲು ಪದಾರ್ಥಗಳನ್ನು ತಲುಪಿಸುತ್ತಾರೆ.
ಏನೇನು ವಿಶೇಷತೆ?
– ಮೈಸೂರು ಶೈಲಿಯ ಸಂಡಿಗೆ, ಹಪ್ಪಳ, ಚಟ್ನಿಪುಡಿ, ಸಾಂಬಾರು ಪದಾರ್ಥ.
– ಡಯಾಬಿಟೀಸ್ ಇದ್ದವರಿಗೆ ಮೆಂತ್ಯೆ ಹಿಟ್ಟು, ವಿಶೇಷ ಚಟ್ನಿಪುಡಿ.
– ಸಮಾರಂಭಗಳಿಗೆ ವಿಶೇಷ ಹೋಳಿಗೆ, ಚಕ್ಕುಲಿ.
ಎಲ್ಲಿದೆ?
# 3, ಬಿಬಿಎಂಪಿ ಕಚೇರಿ ಎದುರು, ಹೆಸರಘಟ್ಟ ರಸ್ತೆ
– ಜಾಲತಾಣ: Sandigeatdoors.com
– ಮೊಬೈಲ್: 9945782127/9066603302
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Chhattisgarh: ನೀರಿನ ಬಾವೀಲಿ ಪೆಟ್ರೋಲ್: ಸಂಗ್ರಹಕ್ಕೆ ಮುಗಿಬಿದ್ದ ಜನ
Manipur: ಸಿಎಂ ಬಿರೇನ್ ಸಿಂಗ್ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.