ಕಟ್ಟುವ ಹೆಗ್ಗಳಿಕೆಯಲ್ಲೇ ಮಸುಕಾದ ಶಾಕುಂತಲಾ
Team Udayavani, Jul 29, 2017, 4:30 PM IST
ಕಾಳಿದಾಸದನ ವಿಖ್ಯಾತ ನಾಟಕ ಕೃತಿ “ಅಭಿಜ್ಞಾನ ಶಾಕುಂತಲ’ವನ್ನು ಆಯಾ ಕಾಲಧರ್ಮದ ಸಂವೇದನೆಯಲ್ಲಿ ತೂಗಿ ನೋಡಲು ಬಯಸುವವರು ಮರು ವ್ಯಾಖ್ಯಾನಕ್ಕೆ ಈ ಕೃತಿಯನ್ನು ಒಡ್ಡಲು ಬಯಸುತ್ತಿರುತ್ತಾರೆ. ನಾಟಕ ಕೃತಿಯೊಂದು ಕಾಲದೇಶ ಮೀರಿ ಹೀಗೆ ಬೆಳೆಯುತ್ತಲೇ ಸಾಗುತ್ತಿರುತ್ತದೆ. ಹೊಸ ಸಂವೇದನೆಗಳ ಲೇಖಕರು ಆಧುನಿಕ ಪ್ರಜಾಪ್ರಭುತ್ವದಲ್ಲಿನ ಸವಾಲುಗಳು ಮತ್ತು ವೈರುಧ್ಯಗಳನ್ನು ತುಂಬ ಸೂಚ್ಯವಾಗಿ ವ್ಯಾಖ್ಯಾನಿಸಿ ನಾಟಕ ಕೃತಿಯಲ್ಲಿ ಹೊಸ ಭಾಷ್ಯ ಬರೆಯುತ್ತಿರುತ್ತಾರೆ. ಕೆ.ವಿ. ಸುಬ್ಬಣ್ಣ “ಲೋಕ ಶಾಕುಂತಲ’ದಲ್ಲಿ ಈ ಕೆಲಸ ಮಾಡಿದ್ದಾರೆ. ಕಾಳಿದಾಸನ ಮನೋಧರ್ಮದ ಜೊತೆಗೆ ಇವತ್ತಿನ ಕಾಲದ ವೈಪರೀತ್ಯಗಳನ್ನು ಅಲ್ಲಲ್ಲಿ ಸೂಚ್ಯವಾಗಿ ಹೇಳಿಸಿದ್ದಾರೆ. ಇದು ಅನುವಾದ ಮತ್ತು ಬರವಣಿಗೆಯಲ್ಲಿನ ದರ್ಶನ.
ಅಂತರಂಗ ತಂಡ ಈಚೆಗೆ ರಂಗಶಂಕರದಲ್ಲಿ ಕೆ.ವಿ. ಸುಬ್ಬಣ್ಣ ಕನ್ನಡೀಕರಿಸಿದ “ಲೋಕ ಶಾಕುಂತಲ’ ನಾಟಕವನ್ನು ಪ್ರದರ್ಶಿಸಿತ್ತು. ನಿರ್ದೇಶಕ ಜಂಬೆಯವರು ಪ್ರತಿಯೊಂದನ್ನೂ ಶೈಲೀಕೃತ ರೀತಿಯಲ್ಲಿ ಕಟ್ಟಿನಿಲ್ಲಿಸಬೇಕೆನ್ನುವ ಹಂಬಲದಲ್ಲಿ ಅಥವಾ ಕಡೆದು ನಿಲ್ಲಿಸಬೇಕೆನ್ನುವ ಹಠ ತೊಡಲು ಹೋಗಿ, ಪ್ರಯೋಗದ ಮೇಲೆ ಹಿಡಿತ ಸಾಧಿಸುವಲ್ಲಿ ವಿಫಲರಾದಂತೆ ಕಂಡುಬಂದರು.
ಕಾಳಿದಾಸನ “ಶಾಕುಂತಲ’ ನಾಟಕ ಕಾವ್ಯಮಯವಾದದ್ದು; ಬೆರಗುಗೊಳಿಸುವ ಪ್ರತಿಮೆಗಳಿಂದ ಕೂಡಿರುವಂಥದ್ದು; ಪ್ರಕೃತಿಯ ರಮ್ಯತೆಯ ಮೂಲಕ ಸ್ಮೃತಿ ವಿಸ್ಮೃತಿಗಳ ಕಥೆಗಳನ್ನು ಬಹಳ ಸ್ವಾರಸ್ಯಕರವಾಗಿ ಬಿಚ್ಚಿಡುವಂಥದ್ದು; ಪ್ರಾಣಿಲೋಕದ ವಿಶಿಷ್ಟ ಕಥಾನಕಗಳು ರೂಪಕಗಳಾಗಿ ಅದರ ಒಡಲಲ್ಲಿ ಅಡಕಗೊಂಡಿವೆ; ಕಾವ್ಯಗುಣ, ಅನನ್ಯ ಅನಿಸುವಂಥ ರೂಪಕಗಳ ಮೂಲಕ ಜಾಗತಿಕ ಓದುಗರನ್ನು ಇಂದಿಗೂ ಸೆಳೆಯುತ್ತಿರುವ ನಾಟಕ ಕೃತಿಯಾದ “ಶಾಕುಂತಲ’ದ ಪ್ರಸ್ತುತಿ ಮತ್ತು ಪ್ರಯೋಗದ ವಿಚಾರ ಬಂದಾಗ ನಿರ್ದೇಶಕ ರೂಪಕಗಳನ್ನು ಗೌಣಗೊಳಿಸಬಾರದು; ನಾಟಕಕೃತಿ ಯಾವ ಪ್ರಧಾನ ಅಂಶಗಳಿಂದ ತನ್ನ ಆವರಣ ಕಟ್ಟಿಕೊಂಡಿದೆಯೋ, ಅದನ್ನು ಮೀರಿದ್ದನ್ನು ಕಟ್ಟಿನಿಲ್ಲಿಸುವ ಸೃಜನ ಕಾರ್ಯಕ್ಕೆ ನಿರ್ದೇಶಕ ಮುಂದಾಗಬಾರದು.
ಆದರೆ, ನಿರ್ದೆಶಕ ಜಂಬೆ ಅವರು ಲೋಕಶಾಕುಂತಲದಲ್ಲಿ ಈ ಕಟ್ಟುವಿಕೆಯ ಕಡೆಗೇ ಹೆಚ್ಚು ಗಮನಹರಿಸಲು ಹೋಗಿ ನಾಟಕ ಕೃತಿಯಲ್ಲಿ ಧ್ವನಿತವಾಗಬೇಕಾದ ರೂಪಕಗಳನ್ನು ಮರೆಯಾಗಿಸಿರುವುದು ಕಂಡುಬಂತು. ಕೃತಿಯ ಸತ್ವ ಕಾಣಿಸುವ ಬದಲಾಗಿ ತನ್ನ ಸೃಜನ ಕಟ್ಟುವಿಕೆಯ ಹಿರಿಮೆ ಮತ್ತು ಗರಿಮೆಗಳನ್ನು ಅದರಲ್ಲಿ ಕಾಣಿಸಲು ಮುಂದಾದಂತೆ ಇತ್ತು. ಆದರೆ, ಇದರಲ್ಲೂ ಅವರಿಗೆ ಸಿದ್ಧಿ ಲಭಿಸಿದಂತೆ ತೋರಲಿಲ್ಲ. ಜಂಬೆ ತಮ್ಮ ಸೃಜನಶಕ್ತಿಯ ಕಾಣೆRಯ ಆವರಣ ಮತ್ತು ಮ್ಯಾನರಿಸಂಗಳನ್ನೇನೂ ಇಲ್ಲಿ ಸೃಷ್ಟಿಸಿಲ್ಲ. ಯಕ್ಷಗಾನದ ನಡೆಗೆ ಮನಸೋತವರಂತೆ ಅಲ್ಲಿನ ನಡೆಯನ್ನು ಈ ನಾಟಕದಲ್ಲಿ ಅಳವಡಿಸಲು ಹೋಗಿ ಅಲ್ಲೂ ಸೋತಿದ್ದಾರೆ. ಮಾತಿನ ಧಾಟಿಯೂ ಯಕ್ಷಗಾನದ ನಕಲೇ. ಭಾಗವತಿಕೆಯವರನ್ನು ಬೇರೆ ಪೋಷಾಕಿನಲ್ಲಿ ಸೂಚ್ಯವಾಗಿ ಕೂರಿಸಿದ್ದರು ಅಷ್ಟೇ; ಆದರೆ, ಅಸಲಿ ಯಕ್ಷಗಾನದ ಪ್ರಯೋಗಗಳು ನೀಡುವ ಚೇತೋಹಾರಿ ಅನುಭವವನ್ನೂ ಈ ಪ್ರಯೋಗ ನೀಡಲಿಲ್ಲ. ಯಕ್ಷಗಾನದ ಪ್ರಯೋಗಮೊಂದು ತೀರಾ ಡೈಲ್ಯೂಟಾದರೆ ಹೇಗಿರುತ್ತದೆಯೋ ಹಾಗಿತ್ತು “ಲೋಕ ಶಾಕುಂತಲಾ’. ದೃಶ್ಯಗಳ ನಡುವೆ ಅನಗತ್ಯ ಅನಿಸುವ ಮತ್ತದೇ ಯಕ್ಷಗಾನ ಹೆಜ್ಜೆಗಳ ನೃತ್ಯ- ಅದೂ ದೀರ್ಘವಾಗಿ; ಅಷ್ಟು ಲಂಬಿಸುವ ಅಗತ್ಯವಿರಲಿಲ್ಲ. ಮಾತುಗಳ ಧಾಟಿಯಲ್ಲೂ ಅಸಲಿ ಯಕ್ಷಗಾನಗಳಲ್ಲಿನ ಅರ್ಥಗಾರಿಕೆ ಮತ್ತು ಧಾಟಿ ಎರಡೂ ವ್ಯಕ್ತವಾಗಲಿಲ್ಲ.
ಹಾಡುಗಳು, ದೃಶ್ಯಗಳಲ್ಲೂ ಸಾಂದ್ರತೆ ಇರಲಿಲ್ಲ. ದೀಪಕ್ ಸುಬ್ರಹ್ಮಣ್ಯ ನಕಲಿ ಭಟ್ಟನಾಗಿ ಚೂರು ನಗಿಸಿದ್ದು ಬಿಟ್ಟರೆ, ಉಳಿದವರ ಮಾತುಗಳಲ್ಲಿ ಪಸೆಯೇ ಇರಲಿಲ್ಲ. ಕನ್ನಡದ ಸರಾಗವಿದ್ದರೂ ಏಕಾಏಕಿ ಸಂಸ್ಕೃತದ ಮಾತುಗಳು ನಡುವೆ ನುಸುಳಿ ಅರ್ಥಗ್ರಹಿಕೆಗೆ ತೊಡಕು ಸೃಷ್ಟಿಸಿದವು. ನಿರ್ದೇಶಕ ಜಂಬೆಯ ಹೆಸರಿನಲ್ಲಿದ್ದ ನಿರೀಕ್ಷೆ ಈ ಪ್ರಯೋಗದಲ್ಲಿ ಹುಸಿಯಾದದ್ದು ಅಚ್ಚರಿಯೂ ಹೌದು, ಸತ್ಯವೂ ಹೌದು.
ಎನ್.ಸಿ. ಮಹೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ
Birds: ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ
Darshan; ಶೂಟಿಂಗ್ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.