ಲಕ್ಷ ದೀಪ! ಚಿತ್ರಶಾಲೆಯಲಿ ಹಣತೆಗಳ ಶಾಪಿಂಗ್
Team Udayavani, Oct 27, 2018, 1:16 PM IST
ಹಬ್ಬ ಹರಿದಿನಗಳಲ್ಲಿ ಪೂಜೆ, ಅಡುಗೆ, ಮನೆಯ ಅಲಂಕಾರ ಇದ್ದದ್ದೇ. ಈ ಸಂದರ್ಭಗಳಲ್ಲಿ ಅಗತ್ಯವಾಗಿ ಬೇಕಾದುದು ದೀಪಗಳು, ಹಣತೆಗಳು. ಅವುಗಳನ್ನು ಆನ್‌ಲೈನ್‌ನಲ್ಲಿ ಖರೀದಿಸಲೂ ಹಲವರಿಗೆ ಮನಸ್ಸಾಗದು. ಕಣ್ಣಾರೆ ಕಂಡು, ಮುಟ್ಟಿ, ಗುಣಮಟ್ಟ, ಬಣ್ಣ ಎಲ್ಲಾ ಗಮನಿಸಿ ಕೊಳ್ಳುವುದೆಂದರೆ ಅನೇಕರಿಗೆ ಬಲು ಇಷ್ಟ. ದೀಪಾವಳಿಯೂ ಸಮೀಪಿಸುತ್ತಿರುವುದರಿಂದ ಮನೆಗಳಲ್ಲಿ ಹಬ್ಬಕ್ಕೆ ತಯಾರಿ ಈಗಲೇ ಶುರುವಾಗಿರುತ್ತದೆ. ಈ ಸಂದರ್ಭದಲ್ಲಿ ಹಣತೆಗಳದೇ ಸಂತೆ ಇದ್ದರೆ ಎಷ್ಟು ಚೆನ್ನ ಅಲ್ಲವೇ? ಅದೀಗ ಚಿತ್ರಕಲಾ ಪರಿಷತ್ತಿನಲ್ಲಿ ನಡೆಯುತ್ತಿದೆ. ಹತ್ತು ದಿನಗಳ “ಬೆಂಗಳೂರು ಉತ್ಸವ’ದಲ್ಲಿ ಹಬ್ಬದ ಸಾಮಗ್ರಿಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜನೆಯಾಗಿದೆ.
ದೀಪಗಳ ಸಾಲು
ಬೆಳಕಿನ ಹಬ್ಬಕ್ಕೆ ಪ್ರಮುಖವಾಗಿ ಬೇಕಾದ ದೀಪಗಳ ಬೃಹತ್ ಸಂಗ್ರಹ ಇಲ್ಲಿದೆ. ದೇಶದ ವಿವಿಧ ಭಾಗಗಳ ಕಲಾಕಾರರು, ಲೋಹ, ಗಾಜು, ಕಲ್ಲು, ಮರ ಇತ್ಯಾದಿ ವಸ್ತುಗಳಿಂದ ರಚಿಸಿರುವ ದೀಪಗಳನ್ನು ಇಲ್ಲಿ ಪ್ರದರ್ಶನಕ್ಕಿಟ್ಟಿದ್ದಾರೆ. ಕರಕುಶಲ ವಸ್ತುಗಳು, ಪೂಜಾ ಸಾಮಗ್ರಿಗಳು, ಅಲಂಕಾರಿಕ ವಸ್ತುಗಳು, ಆಭರಣಗಳು, ಮೂರ್ತಿಗಳು, ಮನೆ ಮಂದಿಗೆ ಬೇಕಾದ ಬಟ್ಟೆಗಳು, ಸಿಹಿ ತಿಂಡಿಗಳೂ ಇಲ್ಲಿ ಲಭ್ಯ.
ನೂರಾರು ಮಳಿಗೆಗಳು
ಕಾಶ್ಮೀರದಿಂದ ಕಾಂಜೀಪುರಂವರೆಗಿನ ರೇಷ್ಮೆ ಸೀರೆ ಉತ್ಪಾದಕರು, ರೇಷ್ಮೆ ಸೀರೆ ವಿನ್ಯಾಸಗಾರರು, ರೇಷ್ಮೆ ಸಹಕಾರ ಸಂಘಗಳೂ ಸೇರಿ 100ಕ್ಕೂ ಹೆಚ್ಚಿನ ಮಳಿಗೆಗಳಲ್ಲಿ ಸಾಂಪ್ರದಾಯಿಕ ರೇಷ್ಮೆ ಸೀರೆ ಮತ್ತು ಕರಕುಶಲ ಉತ್ಪನ್ನಗಳು ಪ್ರದರ್ಶನಕ್ಕಿವೆ. ಹುಲ್ಲಿನ ಹಾಸು, ಬೆಳ್ಳಿಯ ಸೂಕ್ಷ್ಮಕೆತ್ತನೆಯ ಆಭರಣಗಳು, ಸೆಣಬಿನ ಚಪ್ಪಲಿ, ಅಂದದ ಆಟಿಕೆಗಳು, ಜವಳಿ ಮತ್ತು ಗೃಹೋಪಾಲಂಕಾರಿ ಸಾಮಗ್ರಿಗಳು ಸೇರಿದಂತೆ ಅನೇಕ ಕರಕುಶಲ ವಸ್ತುಗಳು ಲಭ್ಯ. ಕಣ್ಮನ ಸೆಳೆಯುವ ಪುರಾತನ ಹಿತ್ತಾಳೆಯ ಕರಕುಶಲ ವಸ್ತುಗಳು, ಸೌರ ಚಿತ್ರಕಲಾಕೃತಿಗಳು, ಬೆಳ್ಳಿಯ ಆಭರಣಗಳು, ಆಧುನಿಕತೆಯ ಹಿನ್ನೆಲೆಯಲ್ಲಿ ಪುರಾತನ ಸೊಬಗನ್ನು ಬಿಂಬಿಸಲಿವೆ. ಪೆಂಡೆಟ್‌ಗಳು, ಬಳೆಗಳು, ಹೇರ್‌ಪಿನ್‌ಗಳಷ್ಟೇ ಅಲ್ಲದೆ ಮುತ್ತಿನ ಆಭರಣದ ಕುಂಕುಮ ಬಾಕ್ಸ್‌ಗಳೂ ಕಣ್ಮನ ಸೆಳೆಯುತ್ತವೆ. ಉತ್ಸವದಲ್ಲಿ ಪ್ರತಿದಿನ ಸಂಜೆ, ಸಂಗೀತ ಕಾರ್ಯಕ್ರಮಗಳೂ ನೀಡಲಿದೆ.
ಎಲ್ಲಿ?: ಕರ್ನಾಟಕ ಚಿತ್ರಕಲಾ ಪರಿಷತ್, ರೇಸ್ ಕೋರ್ಸ್ ರಸ್ತೆ
ಯಾವಾಗ?: ಅಕ್ಟೋಬರ್ 27- ನವೆಂಬರ್ 4, ಬೆಳಗ್ಗೆ 11- 7.30
ಪ್ರವೇಶ: ಉಚಿತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?
Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.