ರೇಶಿಮೆ ಮಹಿಮೆ
Team Udayavani, Jul 28, 2018, 3:31 PM IST
ರೇಷ್ಮೆ ಸೀರೆ ಅಂದ್ರೆ ಸ್ತ್ರೀಯರಿಗೆ ಪಂಚಪ್ರಾಣ. ಸಿಟಿಯ ಟ್ರೆಂಡ್ ಆಧುನಿಕ ಉಡುಪುಗಳೇ ಆಗಿದ್ದರೂ ಸೀರೆ ಮೇಲಿನ ಆಸೆ ಎಂದಿಗೂ ಕಮ್ಮಿ ಆಗುವಂಥದ್ದಲ್ಲ. ಒಂದೆಡೆ ಆಕರ್ಷಕ ಜೀನ್ಸ್, ಚೂಡಿಯನ್ನೋ ಇಟ್ಟು, ಮತ್ತೂಂದೆಡೆ ರೇಷ್ಮೆ ಸೀರೆಯನ್ನಿಟ್ಟರೆ ಸ್ತ್ರೀ ಆರಿಸಿಕೊಳ್ಳೋದು ರೇಷ್ಮೆ ಸೀರೆಯನ್ನೇ! ಈಗ ರೇಷ್ಮೆ ಸೀರೆಯ ಗುಂಗಿನಲ್ಲಿ ತೇಲಿಸುತ್ತಾ, ಸುದ್ದಿಯಲ್ಲಿದೆ “ಸಿಲ್ಕ್ ಇಂಡಿಯಾ- 2018′.
ಈ ಮೇಳ ಹಸ್ತಶಿಲ್ಪಿ ಸಂಸ್ಥೆಯ ಸೃಷ್ಟಿ. ಕುಶಲಕರ್ಮಿಗಳ ಕಲೆಯನ್ನು ಸದಾ ಪ್ರೋತ್ಸಾಹಿಸುತ್ತಾ ಬಂದಿರುವ “ಹಸ್ತಶಿಲ್ಪಿ’ಯು, ನೇಕಾರರು ಮತ್ತು ಕುಶಲಕರ್ಮಿಗಳು ಉತ್ಪಾದಿಸುವ ಉತ್ಪನ್ನಗಳಿಗೆ ದೇಶದ ಮುಖ್ಯ ನಗರಗಳಲ್ಲಿ ಮಾರಾಟ ಮೇಳವನ್ನು ಆಯೋಜಿಸುತ್ತಾ ಬಂದಿದೆ. ನೇಕಾರರ ಉತ್ಪನ್ನಗಳು ನೇರವಾಗಿ ಗ್ರಾಹಕರಿಗೆ ತಲುಪುವ ಮೂಲಕ ಮೂಲ ದರಕ್ಕಿಂತ ಕಡಿಮೆ ದರದಲ್ಲಿ ರೇಷ್ಮೆ ಸೀರೆಗಳು ಮಹಿಳೆಯರ ಕೈಟಕುತ್ತಿವೆ. ಮಧ್ಯವರ್ತಿಗಳ ಹಾವಳಿಯಿಲ್ಲದೇ ಗಮನ ಸೆಳೆಯುತ್ತಿರುವ ಈ ಮೇಳವೇ “ಸಿಲ್ಕ್ ಇಂಡಿಯಾ’.
ಏನೇನು ಆಕರ್ಷಣೆ?
ತಸ್ಸರ್, ಕ್ರೇಪ್, ಶಿಫಾನ್ ಮತ್ತು ಜಾರ್ಜೆಟ್ ಸಿಲ್ಕ್ ಸೀರೆಗಳು, ಅರಿಣಿ, ಧರ್ಮಾವರಂ ಸೀರೆಗಳು, ಕಾಂಚಿಪುರಂ ಸಿಲ್ಕ್$Õ, ಕೋಸಾ ಸೀರೆಗಳು, ಕೋಲ್ಕತ್ತಾ ಗಣಪತಿ ಸೀರೆಗಳು, ಢಾಕಾ ಸೀರೆಗಳು, ಡಿಸೈನರ್ ಎಂಬಾಯಿಡರಿ ಸೀರೆ ಮತ್ತು ಡ್ರೆಸ್, ಬಲ್‌ಚೂರಿ ರೇಷ್ಮೆ, ಮಟ್ಕಾ ಸೀರೆಗಳು, ಪ್ರಿಂಟೆಡ್ ಸೀರೆಗಳು, ಪಶ್ಮೀನಾ ಸೀರೆಗಳು, ಡಿಸೈನರ್ ಡ್ರೆಸ್ ಮೆಟೀರಿಯಲ್ಸ್‌ಗಳು ಮತ್ತು ಸೀರೆಗಳು, ಬಾಗಲ್‌ಪುರ್ ರೇಷ್ಮೆ ಸೀರೆ ಮತ್ತು ಡ್ರೆಸ್, ಉಪ್ಪಡಾ ಮತ್ತು ಗೊಡ್ವಾಲ್ ಸೀರೆಗಳು, ಮಹೇಶ್ವರಿ ಮತ್ತು ಕೋಟಾ ಸಿಲ್ಕ್, ಟೆಂಪಲ್ ಬಾರ್ಡರ್ ಉಳ್ಳ ಮಲಾºರಿ ಸಿಲ್ಕ್, ಬನಾರಸ್ ಮತ್ತು ಜಮ್‌ದಾನಿ ರೇಷ್ಮೆ, ಚಂದೇರಿ ಸಿಲ್ಕ್ ಮತ್ತು ಕೈ ಅಚ್ಚಿನ ಸೀರೆಗಳು ಪ್ರದರ್ಶನಗೊಳ್ಳಲಿದೆ. ಇದಲ್ಲದೇ, ಕುರ್ತಾ, ಶಾಲುಗಳು, ಸಲ್ವಾರ್ ಕಮೀಜ್ ಮತ್ತು ಉಡುಪಿನ ಬಟ್ಟೆಗಳು, ಕುಶನ್ ಕವರ್‌ಗಳು, ಬೆಡ್‌ಶೀಟ್ಸ್- ಈ ಮೇಳದಲ್ಲಿ ಗಮನ ಸೆಳೆಯಲಿವೆ.
ಯಾವಾಗ?: ಜುಲೈ 28- 30, ಬೆ.11.30- ರಾ.8.30
ಎಲ್ಲಿ?: ಸಿಂಧೂರ್ ಕನ್ವೆನÒನ್ ಸೆಂಟರ್, ಜೆ.ಪಿ. ನಗರ
ಸಂಪರ್ಕ: 8553416929
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.