ಅಂತಿಂಥ ಮನೆಯಲ್ಲ ಇದು “ರೇಷಮ್ ಘರ್’
Team Udayavani, Dec 22, 2018, 12:41 PM IST
ಕ್ರಿಸ್ಮಸ್ ಅಥವಾ ಹೊಸವರ್ಷಕ್ಕೆ ರೇಷ್ಮೆ ಸೀರೆ ಕೊಳ್ಳುವ ಇರಾದೆಯಿದ್ದರೆ ನಿಮಗಿದೋ ಸಿಹಿ ಸುದ್ದಿ. ಸಿಲ್ಕ್ಮಾರ್ಕ್ ಆರ್ಗನೈಸೇಷನ್ ಆಫ್ ಇಂಡಿಯಾ ಹಾಗೂ ಸೆಂಟ್ರಲ್ ಕಾಟೇಜ್ ಇಂಡಸ್ಟ್ರೀಸ್ ಕಾರ್ಪೊರೇಷನ್ ಸಹಯೋಗದಲ್ಲಿ “ರೇಷಮ್‌ಘರ್’ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯುತ್ತಿದೆ. ಶೇ. 100ರಷ್ಟು ಶುದ್ಧವಾದ ರೇಷ್ಮೆಯ ವೈವಿಧ್ಯಗಳನ್ನು ಇಲ್ಲಿ ಕಾಣಬಹುದು. ಮಲ್ಬರಿ, ಟಸ್ಸಾರ್, ಏರಿ ಮತ್ತು ಮುಗ ಮಾತ್ರವಲ್ಲದೇ ಕಾಂಚಿಪುರಂ, ಪೋಚಮ್‌ಪಲ್ಲಿ ಮತ್ತು ಮೈಸೂರು, ಬನಾರಸ್ ರೇಷ್ಮೆ ಉತ್ಪನ್ನಗಳು ಒಂದೇ ಕಡೆ ಸಿಗಲಿವೆ. ರೇಷಮ್ ಘರ್‌ನ ಪ್ರತಿ ಉತ್ಪನ್ನದೊಂದಿಗೆ ನ್ಯಾಚುರಲ್ ಸಿಲ್ಕ್ ಮತ್ತು ಸಿಲ್ಕ್ ಮಾರ್ಕ್ ಲೇಬಲ್‌ಗಳನ್ನು ನೀಡಲಾಗುತ್ತದೆ. ರೇಷ್ಮೆಯ ಶುದ್ಧತೆಯನ್ನು ಗುರುತಿಸುವುದು ಹೇಗೆ ಎಂಬುದರ ಬಗ್ಗೆ ಶಿಕ್ಷಣವನ್ನು ಕೂಡ ಪಡೆಯಬಹುದು. ಈ ಮೇಳದಲ್ಲಿ ಖರೀದಿಯ ಮೇಲೆ ಶೇ.10ರಷ್ಟು ರಿಯಾಯಿತಿ ಕೂಡ ಸಿಗುತ್ತದೆ.
ಎಲ್ಲಿ? : ಸೆಂಟ್ರಲ್ ಕಾಟೇಜ್ ಇಂಡಸ್ಟ್ರೀಸ್ ಕಾರ್ಪೊರೇಷನ್, 144, ಶುಭಾರಾಮ್ ಕಾಂಪ್ಲೆಕ್ಸ್, ಕೋಟಕ್ ಮಹೀಂದ್ರ ಬ್ಯಾಂಕ್ ಪಕ್ಕ, ಎಂಜಿ ರಸ್ತೆ
ಯಾವಾಗ? : ಡಿ. 22ರಿಂದ ಜನವರಿ 5
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.