ಮಕ್ಕಳಿಗೆ “ಸಮ್ಮರ್” ಕಲೆ!
Team Udayavani, Apr 14, 2018, 3:45 PM IST
ಶಾಲೆ, ಓದು ಅಂತ ಮಕ್ಕಳ ಕಲಿಕೆ ವರ್ಷಪೂರ್ತಿ ಇದ್ದಿದ್ದೇ. ರಜೆ ಬಂದಾಕ್ಷಣ ಅದೇ ಮಕ್ಕಳಲ್ಲಿ ವಿಶೇಷತೆ ಏನಾದ್ರೂ ಇದೆಯಾ ಅಂತ ಕಂಡುಕೊಳ್ಳಲು, ಅದನ್ನು ಪೋಷಿಸಲು ನೆರವಾಗುವುದು ಬೇಸಿಗೆ ಶಿಬಿರಗಳು. ಬೆಂಗಳೂರಿನ ವಿವಿಧೆಡೆ ಈಗಾಗಲೇ ಸಮ್ಮರ್ ಕ್ಯಾಂಪ್‌ನ ಹವಾ ಶುರುವಾಗಿದ್ದು, ಅದರಿಂದ ಹೊರಗುಳಿದ ಮಕ್ಕಳಿಗೆ ಇನ್ನೂ ಅತ್ಯಮೂಲ್ಯ ಅವಕಾಶಗಳಿವೆ. ಈ ಟಾಪ್ 3 ಆಯ್ಕೆಗಳು ನಿಮ್ಮ ಮುಂದಿವೆ…
1 ಬಾಲಭವನ ಬೇಸಿಗೆ ಶಿಬಿರ
ಕಬ್ಬನ್ ಪಾರ್ಕಿಗೆ ಮಕ್ಕಳನ್ನು ಕರಕೊಂಡು ಹೋದ ಪ್ರತಿಯೊಬ್ಬರಿಗೂ ಬಾಲಭವನ ಪ್ರಮುಖ ಆಕರ್ಷಣೆ. ಅಲ್ಲೇನಾದರೂ ಮಕ್ಕಳನ್ನು ಆಡಲು ಬಿಟ್ಟರೆ, ಜಪ್ಪಯ್ಯ ಅಂದ್ರೂ ಅವು ವಾಪಸು ಬರೋದಿಲ್ಲ. ಇಂತಿಪ್ಪ ಬಾಲಭವನವು ಇದೀಗ ಬೇಸಿಗೆ ಶಿಬಿರವನ್ನು ಹಮ್ಮಿಕೊಂಡಿದೆ. ಏಪ್ರಿಲ್ 16ರಿಂದ ಮೇ 13ರ ವರೆಗೆ ನಡೆಯುವ ಶಿಬಿರಕ್ಕೆ ಈಗಾಗಲೇ ಅರ್ಜಿಯನ್ನು ವಿತರಿಸಲಾಗುತ್ತಿದೆ.
ಸಂಗೀತ, ಯೋಗ, ತಬಲ ಕಲೆಯನ್ನು° ಹೇಳಿಕೊಡಲಾಗುತ್ತದೆ. ಜೇಡಿಮಣ್ಣಿನ ಕಲೆ, ಕರಕುಶಲ ಕಲೆಯಯ ಪಾಠವೂ ಸಿಗಲಿದೆ. ಯಕ್ಷಗಾನ, ಮೆಹಂದಿ ಹಾಕುವ ಕಲೆಯನ್ನೂ ಹೇಳಿಕೊಡುತ್ತಾರೆ.
ಒಟ್ಟು 3 ಶ್ರೇಣಿಗಳಲ್ಲಿ ಶಿಬಿರ ನಡೆಯಲಿದೆ. 5ರಿಂದ 7 ವರ್ಷದ ಮಕ್ಕಳಿಗೆ 750 ರೂ. ಶುಲ್ಕ ಇಡಲಾಗಿದೆ. ಬೆಳಗ್ಗೆ 9.30ರಿಂದ ಮ. 1.30ರ ವರೆಗೆ ಈ ಮಕ್ಕಳಿಗೆ ಶಿಬಿರವಿರುತ್ತದೆ. 8ರಿಂದ 14 ವರ್ಷದ ಮಕ್ಕಳಿಗೆ, ಬೆ.9.30ರಿಂದ 5ರ ವರೆಗೆ ಶಿಬಿರ ನಡೆಯಲಿದ್ದು, 1000 ರೂ. ಶುಲ್ಕವಿರುತ್ತದೆ. 12ರಿಂದ 16 ವರ್ಷದ ವಿಭಾಗದವರಿಗೂ ಇದೇ ಸಮಯದಲ್ಲಿಯೇ ಕಲಿಕೆಯಿದ್ದು, 1500 ರೂ. ಶುಲ್ಕ ನಿಗದಿಪಡಿಸಲಾಗಿದೆ.
ಸಂಪರ್ಕ: 080- 22864189
2 ಕುದುರೆ ಸವಾರಿ ಹೇಳಿಕೊಡ್ತಾರೆ…
ಕುದುರೆ ಏರೋದು, ಕತ್ತಿವರಸೆ ಕಲಿಯೋದು ಈಗಿನ ಕಾಲಕ್ಕೆ ಆಗಿಬರುವ ಮಾತಲ್ಲ. ಆದರೆ, ನಮ್ಮ ಮಕ್ಕಳೂ ಕುದುರೆ ಮೇಲೆ ಏರಬೇಕು, ರಾಜಕುಮಾರನಂತೆ ಅದನ್ನು ಸವಾರಿ ಮಾಡಬೇಕು ಎಂಬ ಕನಸಂತೂ ಎಲ್ಲ ಪೋಷಕರಿಗೂ ಇರುತ್ತೆ. ಬೆಂಗಳೂರಿನಲ್ಲಿ ಈ ಕನಸನ್ನು ಸಾಕಾರಗೊಳಿಸಲು ಝಿಪ್ಪಿ ಇಕ್ವೆಸ್ಟ್ರಿಯನ್ ಸೆಂಟರ್ ಮುಂದಾಗಿದೆ. ಕನಕಪುರ ರಸ್ತೆಯಲ್ಲಿರುವ ಝಿಪ್ಪಿ ಸಂಸ್ಥೆಯು ಮಕ್ಕಳಿಗಾಗಿ ಬೇಸಿಗೆ ಶಿಬಿರವನ್ನು ಆಯೋಜಿಸಿದ್ದು, ಕೇವಲ 12 ದಿನಗಳಲ್ಲಿ ಕುದುರೆ ಸವಾರಿ ಕಲಿಸುತ್ತಿದೆ. ಏಪ್ರಿಲ್ 17, ಮೇ 1, ಮೇ 15, ಮೇ 29ರಂದು ಬ್ಯಾಚ್‌ಗಳು ಪ್ರತ್ಯೇಕ ವಿಭಾಗದಲ್ಲಿ ಶುರುವಾಗಲಿದೆ.
ಸಂಪರ್ಕ: 7259296899
3
ಕೃಷ್ಣನೊಂದಿಗೆ ತಮಾಷೆ…
ಹರೇ ಕೃಷ್ಣ ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ ಎಂದು ಕೃಷ್ಣನನ್ನು ಜಪಿಸಲು ಇಸ್ಕಾನ್‌ಗೆ ಆಗಾಗ್ಗೆ ಹೋಗುತ್ತಲೇ ಇರುತ್ತೀರಿ. ಅದೇ ಇಸ್ಕಾನ್ ಈಗ ಮಕ್ಕಳಲ್ಲಿ ಅಧ್ಯಾತ್ಮ ಜಾಗೃತಿ ಮೂಡಿಸಲು ಬೇಸಿಗೆ ಶಿಬಿರವನ್ನು ಆಯೋಜಿಸಿದೆ. ಅಲ್ಲಿ ಕಿವಿ ತಂಪು ಮಾಡುವ ಕೃಷ್ಣನ ಕತೆಗಳ ಜತೆಗೆ ಭಾರತೀಯ ಸಂಸ್ಕೃತಿಯ ಮೌಲ್ಯಗಳನ್ನೂ ಮಕ್ಕಳಿಗೆ ಕಲಿಸಲಾಗುತ್ತದೆ. ಭಗವದ್ಗೀತ ಶ್ಲೋಕ, ಮಂತ್ರ ಪಠಣ, ಕೃಷ್ಣನ ಜತೆ ತಮಾಷೆಯ ಆಟಗಳನ್ನು ಹೇಳಿಕೊಡಲಾಗುತ್ತದೆ. ಅಂದಹಾಗೆ ಈ ಶಿಬಿರವು ಬೆಂಗಳೂರಿನ ಬೇರೆ ಬೇರೆ ಭಾಗಗಳಲ್ಲಿ ಆಯೋಜಿಸಲಾಗಿದೆ. ಈಗಾಗಲೇ ಕೆಲವೆಡೆ ಶುರುವಾಗಿದ್ದು, ಮುಂದಿನ ಆರಂಭಗಳು ಹೀಗಿವೆ: ರಾಜಾಜಿನಗರದ ಇಸ್ಕಾನ್‌ನಲ್ಲಿ ಏಪ್ರಿಲ್ 15ರಿಂದ, ಕನಕಪುರ ರಸ್ತೆಯ ವಿಕೆ ಹಿಲ್‌ನಲ್ಲಿ ಏ.23ರಿಂದ, ಕಡುಬೀಸನಹಳ್ಳಿಯ ಗೀತಾಂಜಲಿ ಒಲಿಂಪಿಯಾಡ್ ಸ್ಕೂಲ್‌ನಲ್ಲಿ ಮೇ 7ರಿಂದ ಶಿಬಿರಗಳು ನಡೆಯಲಿವೆ.
ಸಂಪರ್ಕ: 9341124222
4. ಸ್ಕೆಚ್ ಹಾಕೋದ್ ಹೀಗೆ!
ಮಕ್ಕಳಿಗೆ ಅದನ್ನು ಕಲಿಸೋ ತರಗತಿಯೂ ಇದೆಯಾ ಎಂದು ಚಕಿತರಾಗಬೇಡಿ. ಅಂದ ಹಾಗೆ ಇದು ಆ ಸ್ಕೆಚ್ ಅಲ್ಲ, ಪೆನ್ಸಿಲ್ ಸ್ಕೆಚ್! ಪೆನ್ಸಿಲ್‌ನಲ್ಲಿ ಚಿತ್ರ ಬರೆಯುವುದೆಂದರೆ ಬಹುತೇಕರಿಗೆ ಮನೆ, ಎರಡು ತೆಂಗಿನ ಮರ, ಆಕಾಶದಲ್ಲೊಂದು ಸೂರ್ಯ ಮತ್ತು ಅದರ ಮೇಲೆ ಹಾರುತ್ತಿರುವ ಎರಡು ಹಕ್ಕಿಗಳು, ಇವಿಷ್ಟೇ. ಆದರೆ ಪೆನ್ಸಿಲ್ ಬಳಸಿಕೊಂಡು ವರ್ಣಚಿತ್ರಗಳಿಗಿಂತ ಮಿಗಿಲಾದ ಚಿತ್ರಗಳನ್ನು ರಚಿಸಬಹುದು ಎನ್ನುವುದು ತಿಳಿದವರ ಮಾತು. ಹೀಗಾಗಿ ಮಕ್ಕಳಿಗೆ ಈಗಿನಿಂದಲೇ ಪೆನ್ಸಿಲ್ ಸ್ಕೆಚ್‌ನ ಮಹತ್ವವನ್ನು ತಿಳಿಸಿಕೊಟ್ಟರೆ ಚೆನ್ನ ಅಲ್ಲವೇ? ಹಾಗಾದರೆ ಈ ಬಾರಿಯ ಬೇಸಿಗೆಗೆ ಪೆನ್ಸಿಲ್ ಸ್ಕೆಚ್ ಒಂದನ್ನೇ ಹೇಳಿಕೊಡುವ ಶಿಬಿರಕ್ಕೆ ಸೇರಿಸಬಹುದು. ಬ್ಲೂಮ್ ಆ್ಯಂಡ್ ಗ್ರೋ, 17ನೇ ಡಿ ಮುಖ್ಯರಸ್ತೆ, ಕೋರಮಂಗಲ 6ನೇ ಬ್ಲಾಕ್‌ನಲ್ಲಿ ಈ ಶಿಬಿರ ನಡೆಯುತ್ತೆ.
ಯಾವಾಗ?: ಏಪ್ರಿಲ್ 14- 28, ಬೆಳಗ್ಗೆ 10.30- ಮಧ್ಯಾಹ್ನ 1
ಶುಲ್ಕ: 1000 ರು.
ಆನ್‌ಲೈನ್ ಬುಕ್ಕಿಂಗ್‌ಗೆ- ಜಟಟ.ಜl/5fಖೀಘಗಘ
5. ಹಳ್ಳಿಯ ಆಟಗಳು
ಮಕ್ಕಳು ಮೂರು ಹೊತ್ತೂ ಸ್ಮಾರ್ಟ್‌ಪೋನು ಕೈಲಿ ಹಿಡಿದು ಕೂರುತ್ತಾರೆ ಅಂತ ಬೇಸರವೇ? ಪಾಲಕರು ಅವರಿಗೆ “ಆಟವಾಡಿಕೊಳ್ಳಿ’ ಎಂದರೆ ಆ್ಯಂಡ್ರಾಯ್ಡ ಗೇಮ್ಸ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳುವ ಮಟ್ಟಿಗೆ ಆಟ ಎನ್ನುವುದು ಕಂಪ್ಯೂಟರೀಕರಣಗೊಂಡುಬಿಟ್ಟಿದೆ. ಆದರೆ ಇದರಲ್ಲಿ ತಪ್ಪು ಅವರದೆಂದು ಖಡಾಖಂಡಿತವಾಗಿ ಹೇಳಲು ಬರುವುದಿಲ್ಲ. ಮಹಾನಗರಗಳಲ್ಲಿ ಬೆಳೆಯುವ ಮಕ್ಕಳಿಗೆ ನಮ್ಮ ಕರ್ನಾಟಕದ ಗ್ರಾಮೀಣ ಸೊಗಡು, ಆಟಗಳು ಹೇಗೆ ತಾನೇ ತಿಳಿಯಬೇಕು. ಪಾಲಕರಲ್ಲಿ ಹೆಚ್ಚಿನವರು ಗ್ರಾಮೀಣ ಹಿನ್ನೆಲೆಯಿಂದ ಬಂದವರಾಗಿರುವುದರಿಂದ ತಮ್ಮ ಬಾಲ್ಯ ಮಕ್ಕಳಿಗೂ ಸಿಗಬೇಕು ಎಂದು ಅಪೇಕ್ಷಿಸುವುದು ಸಹಜ. ಅದರೆ ಅದಕ್ಕೆ ಪೂರಕವಾದ ವಾತಾವರಣ ಇಲ್ಲಿಲ್ಲ ಎನ್ನುವುದು ವಿಪರ್ಯಾಸ. ಅದಕ್ಕೇ ಈ ಬೇಸಿಗೆ ಶಿಬಿರವನ್ನು ಆಯೋಜಿಸಿದ್ದಾರೆ. ಹಳ್ಳಿ ಬದುಕು ಎನ್ನುವ ಹೆಸರಿನ ಈ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ಹಳ್ಳಿಯ ಆಟಗಳು, ಅಲ್ಲಿನ ಆಚಾರ ವಿಚಾರಗಳು ಮುಂತಾದವುಗಳ ಕುರಿತು ಮಾಹಿತಿ ನೀಡಲಾಗುತ್ತದೆ. ನಗರಪ್ರದೇಶದ ಮಕ್ಕಳು ಸ್ಮಾರ್ಟ್‌ಫೋನಿಂದ ದೂರ ಉಳಿದು, ಗ್ರಾಮೀಣ ಆಟಗಳನ್ನು ಆಡಿ ನಲಿಯುತ್ತಾರೆ ಎನ್ನುವುದಕ್ಕಿಂತ ದೊಡ್ಡ ಖುಷಿ ಬೇಕಾ? ರಾಜರಾಜೇಶ್ವರಿ ನಗರದ ವಿನ್ಸೆಂಟ್ ಆರ್ಟ್ ವರ್ಲ್ಡ್ ಈ ಬೇಸಿಗೆ ಶಿಬಿರದ ರೂವಾರಿ
ಹೆಚ್ಚಿನ ಮಾಹಿತಿಗೆ: 098863 25655
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Actress: ರೊಮ್ಯಾನ್ಸ್ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.