ಮರಗಳೊಂದಿಗೆ ಮಾತುಕಥೆ


Team Udayavani, Feb 11, 2017, 3:45 PM IST

13.jpg

ಪ್ರತಿ ವರ್ಷವೂ ನೂರಾರು ಬೆಂಗಳೂರಿಗರು ತಮ್ಮ ಕೆಲಸದ ನಡುವೆ ಬಿಡುವು ಮಾಡಿಕೊಂಡು ಮರಗಳ ಸಂರಕ್ಷಣೆ ಕುರಿತು ಚರ್ಚೆಗಳನ್ನು ಮಾಡುವುದು ಹಾಗು ಮರಗಳ ಹಬ್ಬವನ್ನು ಆಚರಿಸುವುದರಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 

ಎಂದಿನಂತೆ ಈ ವರ್ಷವೂ ನಾಲ್ಕನೆಯ ಬಾರಿ ಫೆಬ್ರವರಿ 18 ಹಾಗು 19ರಂದು ಟ್ರೀ ವಾಕ್‌ ಫೆಸ್ಟಿವಲ… ಅನ್ನು ಬೆಂಗಳೂರಿಗರು ಆಚರಿಸುತ್ತಿ¨ªಾರೆ. ಈ ಹಬ್ಬವನ್ನು ಪರಿಸರ ಪ್ರೇಮಿಗಳು, ಕಲಾವಿದರು, ಉದ್ದಿಮೆದಾರರು ಹಾಗು ಟೆಕ್ಕಿಗಳು ಎಲ್ಲರೂ ಒಂದುಗೂಡಿ ಆಚರಿಸುತ್ತಿದ್ದಾರೆ ಎಂಬುದೇ ವಿಶೇಷ. ಇದರ ಹಿಂದಿರುವವರು “ನೆರಳು’ ಮತ್ತು “ಟೆರ್ರಾತಾಳ’ ಎನ್ನುವ ಪರಿಸರ ಸಂಘಟನೆಗಳು.

ಮಾನವನಿಗೆ ಹೇಗೆ ಪರಿಸರ ಮತ್ತು ಮರಗಳ ಅವಶ್ಯಕತೆಯಿದೆಯೋ ಅದೇ ರೀತಿ ಪರಿಸರ ಮತ್ತು ಮರಗಳಿಗೆ ಮನುಷ್ಯನ ಅವಶ್ಯಕತೆ ಇದೆ. ಪ್ರಕೃತಿ ಮತ್ತು ಮಾನವನ ನಡುವೆ ಇದ್ದ ಸಂಬಂಧ ಈಗಿಲ್ಲ. ಮನುಷ್ಯ ಯಂತ್ರಗಳಿಗೆ ಹತ್ತಿರವಾಗುತ್ತಿರುವುದು ಇದಕ್ಕೆ ಪ್ರಮುಖ ಕಾರಣ. ಇಂತಹ ಸಂದರ್ಭದಲ್ಲಿ ಟ್ರೀ ವಾಕ್‌ ಫೆಸ್ಟಿವಲ್‌ ನಂತಹ ಕಾರ್ಯಕ್ರಮಗಳು ಮುಖ್ಯವೆನಿಸಿಕೊಳ್ಳುತ್ತವೆ. ಹೀಗಾಗಿ ಟ್ರೀ ವಾಕ್‌ ಕಾರ್ಯಕ್ರಮ ಮನುಷ್ಯ ಮತ್ತು ಮರಗಳ ನಡುವೆ ಸಂಬಂಧ ಬೆಸೆಯುವಲ್ಲಿ ಸಹಕಾರಿಯಾಗಲಿದೆ ಎನ್ನುವುದು ಈ ಸಂಘದ ಸದಸ್ಯರ ಅಭಿಪ್ರಾಯವಾಗಿದೆ.

ವಾಹನ ದಟ್ಟಣೆ, ಮಾಲಿನ್ಯ ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಿರುವ ಬೆಂಗಳೂರಿಗರಲ್ಲಿ ಪರಿಸರ ಪ್ರೇಮ ಹಾಗು ಮರಗಳ ಸಂರಕ್ಷಣೆ ಕುರಿತು ತಿಳಿವಳಿಕೆ ಮೂಡಿಸುವ ಕೆಲಸ ಮಾಡುತ್ತಿದೆ ಟ್ರೀ ವಾಕ್‌ ಹಬ್ಬ. ಟ್ರೀ ವಾಕ್‌ನ ಸಂಘಟಕರು ಜನರನ್ನು ಆಹ್ವಾನಿಸಿ ಮರಗಳ ನಡುವೆ ‘ವಾಕ್‌’ ಏರ್ಪಡಿಸಿ ಮರಗಳ ಬಗ್ಗೆ ಪರಿಚಯ ಮಾಡಿಸಿಕೊಡುತ್ತಾರೆ. ಇಲ್ಲಿ ಜನರು ಪ್ರƒತಿ ನಡುವೆ ನಡೆದಾಡುತ್ತಾ ಶುದ್ಧ ಗಾಳಿ ಸೇವಿಸುತ್ತಾ ಪ್ರಕೃತಿಯೊಂದಿಗೆ ತಮ್ಮನ್ನು ತಾವು ಕಂಡುಕೊಳ್ಳುತ್ತಾರೆ. ಟ್ರೀ ವಾಕ್‌ನ ಮೊದಲನೆಯ ಆವೃತ್ತಿಯಲ್ಲಿ ಭಾಗವಹಿಸಿದ್ದವರಿಗೆ ಮರಗಳ ನಡುವೆ ಆಟವನ್ನು ಏರ್ಪಡಿಸಿದ್ದು, ಪಾಲ್ಗೊಂಡವರು ಅದು ಬಹಳ ಉತ್ಸಾಹಭರಿತವಾಗಿತ್ತು ಎಂದು ನೆನೆದು ಸಂತಸ ಪಡುತ್ತಾರೆ. ಹೂವಿನಿಂದ ತುಂಬಿರುವ ಮರಗಳಿರುವ ಲಾಲ್‌ಭಾಗ್‌ ಹಾಗು ಅರಮನೆಯ ರಸ್ತೆ ಇಲ್ಲಿನ ಸ್ವಯಂಸೇವಕರಿಗೆ ಬಹಳ ಇಷ್ಟವಾದ ಜಾಗಗಳೆಂದು ಸಂಘಟಕರು ಹೇಳುತ್ತಾರೆ. 

ಈ ಬಾರಿಯ ಟ್ರೀ ಫೆಸ್ಟಿವಲ್‌ ಶಾಲಾ ಕಾಲೇಜು ಮಕ್ಕಳನ್ನು ಪರಿಸರಕ್ಕೆ ಪರಿಚಯಿಸಲಿದೆ. ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ ಹಾಗೂ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನ ಹಸಿರು ಪರಂಪರೆಯನ್ನು ಗುರುತಿಸಲು ಇದೊಂದು ಸುವರ್ಣಾವಕಾಶ. ವಿದ್ಯಾರ್ಥಿಗಳಿಗೆ, ಪರಿಸರ ಪ್ರೇಮಿಗಳಿಗೆ ಟ್ರಿ ವಾಕ್‌ ಅನ್ನು ಏರ್ಪಡಿಸಲಾಗಿದೆ. 

ಟಾಪ್ ನ್ಯೂಸ್

BUS driver

RTO; ಫಿಟ್‌ನೆಸ್‌ ಸರ್ಟಿಫಿಕೇಟ್‌ಗಿನ್ನು ಆರ್‌ಟಿಒ ಬೇಕಿಲ್ಲ!

Pro Kabaddi: ಹರಿಯಾಣ- ಪಾಟ್ನಾ ಫೈನಲ್‌ ಹಣಾಹಣಿ

Pro Kabaddi: ಹರಿಯಾಣ- ಪಾಟ್ನಾ ಫೈನಲ್‌ ಹಣಾಹಣಿ

1-kkk

ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಇನ್ನು ಕರಾವಳಿ ಪ್ರದೇಶಾಭಿವೃದ್ಧಿ ಮಂಡಳಿಯಾಗಿ ಕಾರ್ಯನಿರ್ವಹಣೆ

1-stamp

Stamp Paper; ನಕಲಿ ಹಾವಳಿಗೆ ತಡೆ: ಎ.1ರಿಂದ ಡಿಜಿಟಲ್‌ ಪಾವತಿ ಪದ್ಧತಿ ಜಾರಿ

1-manmohan

Belagavi; ಕಾಂಗ್ರೆಸ್‌ ಅಧಿವೇಶನ ಶತಮಾನೋತ್ಸವ: ಮಾಜಿ ಪ್ರಧಾನಿ ನಿಧನದಿಂದ ಆಘಾತ

ct rav

BJP ದೂರು ಬೆನ್ನಲ್ಲೇ ಗೆಹ್ಲೋಟ್‌ ಅಖಾಡಕ್ಕೆ; ಸಿ.ಟಿ.ರವಿಗೆ ರಾಜ್ಯಪಾಲ ಬುಲಾವ್‌?

1-spo

Mangaluru; ಶೀಘ್ರವೇ ರಾತ್ರಿಯೂ ಪ್ರವಾಸಿಗರಿಗೆ ಬೀಚ್‌ಗೆ ಪ್ರವೇಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

BUS driver

RTO; ಫಿಟ್‌ನೆಸ್‌ ಸರ್ಟಿಫಿಕೇಟ್‌ಗಿನ್ನು ಆರ್‌ಟಿಒ ಬೇಕಿಲ್ಲ!

Pro Kabaddi: ಹರಿಯಾಣ- ಪಾಟ್ನಾ ಫೈನಲ್‌ ಹಣಾಹಣಿ

Pro Kabaddi: ಹರಿಯಾಣ- ಪಾಟ್ನಾ ಫೈನಲ್‌ ಹಣಾಹಣಿ

High Court: ತೃತೀಯ ಲಿಂಗಿಗಳ ಜನನ, ಮರಣ ಪ್ರಮಾಣ ಪತ್ರದಲ್ಲಿ ಮಾರ್ಪಾಡು ಮಾಡಿ; ಹೈಕೋರ್ಟ್‌

High Court: ತೃತೀಯ ಲಿಂಗಿಗಳ ಜನನ, ಮರಣ ಪ್ರಮಾಣ ಪತ್ರದಲ್ಲಿ ಮಾರ್ಪಾಡು ಮಾಡಿ; ಹೈಕೋರ್ಟ್‌

1-havya

Havyaka Sammelana; ಹೆಚ್ಚು ಮಕ್ಕಳನ್ನು ಹೆರಿ, ಮಠ ಸಲಹುತ್ತದೆ: ಸ್ವಾಮೀಜಿ ಕರೆ

1-kkk

ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಇನ್ನು ಕರಾವಳಿ ಪ್ರದೇಶಾಭಿವೃದ್ಧಿ ಮಂಡಳಿಯಾಗಿ ಕಾರ್ಯನಿರ್ವಹಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.