![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Sep 1, 2018, 1:38 PM IST
ಕೋಲ್ಕತ್ತಾ ಎನ್ನುವುದೇ ಒಂದು ಸೆಳೆತ. “ಅದು ನೂರಾರು ಮಹಾತ್ಮರ ಬೀಡು, ಕಲೆಯ ನೆಲೆಬೀಡು’ ಎನ್ನುವುದು ಸಾಮಾನ್ಯವಾಗಿ ಆ ನಗರಿಯ ಮೇಲೆ ಕ್ರಷ್ ಇಟ್ಟುಕೊಂಡವರ ಹೇಳಿಕೆ. ಇದರೊಟ್ಟಿಗೆ ಆ ನಗರಿ ನಾನಾ ಐತಿಹಾಸಿಕ ಆಕರ್ಷಣೆಗಳನ್ನೂ ಇಂದಿಗೂ ಕಾಪಿಟ್ಟುಕೊಂಡಿದೆ. ಅಲ್ಲಿ ಹುಟ್ಟುವ ಕತೆಗಳು ದೇಶದುದ್ದಗಲ ನಮ್ಮದೇ ನೆಲದ ಕತೆಗಳಂತೆ ಆಪ್ತವಾಗುತ್ತವೆ… ಬೆಂಗಾಲಿ ನಾಡನ್ನು ಹೀಗೆಲ್ಲ ಬಣ್ಣಿಸುವಾಗ ಇನ್ನೊಂದು ಅಂಶ ಸೇರ್ಪಡೆಗೊಳ್ಳುವುದು, ಲೆಬು ಚಾಯ್! ಲಿಂಬೆಹಣ್ಣಿನಿಂದ ತಯಾರಿಸುವ ಈ ಚಹಾವೇ ಒಂದು ಅದ್ಭುತ ರುಚಿ.
ಬೆಂಗಳೂರಿನಲ್ಲಿ ಲೆಬು ಚಹಾದೊಂದಿಗೆ, ಕೋಲ್ಕತ್ತಾದ ಆಕರ್ಷಣೆಯನ್ನೂ ಸವಿಯುತ್ತಾ, ಆ ಲೋಕದೊಳಗೆ ಕಳೆದುಹೋಗುವ ಸಂಗತಿಯೊಂದು ಹೊಸ ಕ್ರಷ್ ಆಗುತ್ತಿದೆ. ಅದು ಇಂದಿರಾನಗರದ “ಕಿಚನ್ ಆಫ್ ಜಾಯ್’. ಇಲ್ಲಿ ಲೆಬು ಚಹಾವನ್ನು ಹೀರುತ್ತಲೇ, ರವೀಂದ್ರನಾಥ ಟ್ಯಾಗೋರರನ್ನು ಕಣ್ತುಂಬಿಕೊಳ್ಳಬಹುದು. ಸತ್ಯಜಿತ್ ರೇ ಅವರನ್ನು ಮಾತಾಡಿಸಬಹುದು. ಹೌರಾ ಬ್ರಿಡಿjನ ಮನೋಹರ ದೃಶ್ಯಕ್ಕೆ ಮನಸೋಲಬಹುದು. ಬೇಲೂರು ಮಠದ ಬೆಡಗಿಗೆ ಮೂಕರಾಗಬಹುದು. ಬೆಂಗಾಲಿ ಕಾಮಿಕ್ ಪಾತ್ರಗಳಿಗೆ ಬೆರಗಾಗಬಹುದು. ಏಕೆ ಗೊತ್ತಾ? ಕಿಚನ್ ಆಫ್ ಜಾಯ್‌ನ ಪ್ರತಿ ಗೋಡೆಗಳಲ್ಲಿ ಬೆಂಗಾಲಿ ಸಂಸ್ಕೃತಿಯ ದೃಶ್ಯಾವಳಿಗಳಿವೆ. ಬೆಂಗಾಲಿ ಮಹಾತ್ಮರ ಪೋಸ್ಟರ್, ಅವರ ನುಡಿಮುತ್ತುಗಳು, ಬಂಗಾಳದ ಐತಿಹಾಸಿಕ ನೋಟಗಳು… ಹೀಗೆ ಪ್ರತಿಯೊಂದಕ್ಕೂ ಇಲ್ಲಿ ಕೋಲ್ಕತ್ತಾ ಫ್ಲೇವರ್. ಕುಡಿಯುವ ಕಪ್‌ಗ್ಳಲ್ಲೂ ಬೆಂಗಾಲಿ ಕಲಾವಿದರೇ ಇಣುಕುತ್ತಾರೆ.
ಬೆಂಗಳೂರಿಗೇಕೆ ಬಂಗಾಳ ಬಂತು?
ಇದಕ್ಕೆ ಕಾರಣವೂ ಉಂಟು. ಈ ರೆಸ್ಟೋರೆಂಟ್ ಶುರುವಾಗಿದ್ದು, 2013ರಲ್ಲಿ. ಕೋಲ್ಕತ್ತಾದ ಸೋಹಿನಿ ಸೇನಗುಪ್ತಾ ಮತ್ತು ಕೇರಳದ ಆರ್. ಸುರೇಶ್ ದಂಪತಿ ಇದನ್ನು ಆರಂಭಿಸಿದರು. ಬೆಂಗಾಲಿ ಖಾದ್ಯಗಳು, ಬೆಂಗಳೂರಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತವೆಂಬ ಗ್ಯಾರಂಟಿಯಿಂದಲೇ “ಕಿಚನ್ ಆಫ್ ಜಾಯ್’ ಶುರುವಾಯಿತು.
ಬೆಂಗಾಲಿಯ ಬೊಂಬಾಟ್ ರುಚಿ
ಇಲ್ಲಿ ಲೆಬು ಚಾಯ್ ಮಾತ್ರವೇ ಅಲ್ಲ.. ಬೆಂಗಾಲಿ ಮತ್ತು ಪಶ್ಚಿಮ ಭಾರತ ಖಾದ್ಯಗಳು ಇಲ್ಲಿ ಆಹಾರಪ್ರಿಯರಿಗೆ ಆಸೆಹುಟ್ಟಿಸುತ್ತಿವೆ. ದಿಮರ್ ದೆವಿಲ್, ಲುಂಚಿ ದಮ್ ಆಲೂ, ಗ್ರೀನ್ ಪೀಸ್ ಕಚೋರಿ, ಎಗ್ ಪೊಟೇಟೊ ಚಾಪ್, ಕೋಲ್ಕತ್ತಾ ಮಟನ್ ಕರ್ರಿ, ಶಿಘರಿ , ಫಿಶ್ ಚಾಪ್ಸ್ ಇಲ್ಲಿನ ಫುಡ್ ಹೈಲೈಟ್ಸ್.
ಎಲ್ಲಿದೆ?: ದಿ ಕಿಚನ್ ಆಫ್ ಜಾಯ್, ಡಿಫೆನ್ಸ್ ಕಾಲೋನಿ, ದೊಮ್ಮಲೂರು
ಸಂಪರ್ಕ: 080 48658343
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.