ಪ್ರಸಾದದಷ್ಟೇ ಸವಿರುಚಿ ಟೆಂಪಲ್ ಮೀಲ್ಸ್
Team Udayavani, Dec 29, 2018, 7:20 AM IST
ದೇವಾಲಯಗಳಲ್ಲಿ ನೀಡುವ ಪ್ರಸಾದದ ರುಚಿ ನಾಲಿಗೆಗೆ ಹತ್ತುವ ರೀತಿ ಬೇರೆ ಯಾವುದೂ ಹತ್ತುವುದಿಲ್ಲ. ಇದೇ ಕಾರಣಕ್ಕಾಗಿಯೇ ದೇವಸ್ಥಾನದ ಪ್ರಸಾದಕ್ಕೆ ಅತ್ಯಂತ ಮಹತ್ವವಿದೆ. ಒಂದು ಹೋಟೆಲ್‌ನಲ್ಲೂ ಕೂಡ ದೇವರ ಪ್ರಸಾದದಷ್ಟೇ ರುಚಿ ಇರುವ ಭೋಜನ, ಉಪಾಹಾರ ದೊರಕುತ್ತಿದೆ ಅಂದರೆ ಯಾರಿಗೆ ತಾನೇ ಬಾಯಲ್ಲಿ ನೀರೂರುವುದಿಲ್ಲ? ಹೌದು, ನಾವು ಹೇಳಲು ಹೊರಟಿದ್ದು ಮಲ್ಲೇಶ್ವರಂನ 7ನೇ ಅಡ್ಡರಸ್ತೆಯಲ್ಲಿರುವ ಟೆಂಪಲ್ ಮೀಲ್ಸ್ ಹೆಸರಿನ ಹೋಟೆಲ್ ಬಗ್ಗೆ.
ದೇವಾಲಯದ ಅನುಭವ…
ಟೆಂಪಲ್ ಮೀಲ್ಸ್ ಹೋಟೆಲಿನ ತಿನಿಸುಗಳ ವಿಶೇಷವೆಂದರೆ, ಇಲ್ಲಿ ಅಡುಗೆಗೆ ಈರುಳ್ಳಿ, ಬೆಳ್ಳುಳ್ಳಿ ಬಳಸುವುದಿಲ್ಲ. ಈ ಹೋಟೆಲಿನ ಮೇಲಂತಸ್ತು ಪ್ರವೇಶಿಸುತ್ತಿದ್ದಂತೆ ದೇವಾಲಯವನ್ನೇ ಹೋಲುವ ಪ್ರಾಂಗಣ, ಗೋಡೆಗಳ ಮೇಲೆÇÉಾ ಯಕ್ಷಗಾನ ಕಲಾವಿದರು ಬಳಸುವ ಮುಖವರ್ಣಿಕೆಗಳು ಕಣ್ಮನ ಸೆಳೆಯುತ್ತವೆ. ಆಗಾಗ್ಗೆ ಘಂಟೆಗಳ ನಿನಾದ ಕೇಳಿಸಿ ದೇವಾಲಯದ ಪ್ರಶಾಂತತೆ ಮನಸ್ಸಿನೊಳಗೂ ಮೂಡಿಬಿಡುತ್ತದೆ.
ಸಾಂಪ್ರದಾಯಿಕ ಶೈಲಿಯ ಭೋಜನ
ಬಾಳೆಎಲೆ ಊಟ ಇಲ್ಲಿನ ವಿಶೇಷ. ಊಟಕೆ ಅಣಿಯಾಗಿ ಕುಳಿತರೆ ಉಪ್ಪು, ಉಪ್ಪಿನಕಾಯಿ, ಕೋಸಂಬರಿ ಹಾಗೂ ಪಲ್ಯ ಬಾಳೆಎಲೆಯನ್ನು ಆವರಿಸುತ್ತೆ. ಕೋಸಂಬರಿ ಹಾಗೂ ಪಲ್ಯ ಸವಿದರೆ ತಕ್ಷಣ ನೆನಪಾಗುವುದು ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳದಲ್ಲಿನ ಸಾಂಪ್ರದಾಯಿಕ ಊಟದ ರುಚಿ. ಗೋಡಂಬಿ, ದ್ರಾಕ್ಷಿಗಳಿಂದ ಸಮೃದ್ಧಗೊಂಡ ಪಾಯಸ ಸವಿಯುತ್ತಿರುವಾಗಲೇ ಬಾಳೆಎಲೆ ಸೇರುವ ಮೈಸೂರ್ ಪಾಕ್ ನಾಲಿಗೆಯನ್ನು ಜಾಗೃತಗೊಳಿಸುತ್ತದೆ.
ಇದಾದ ಮೇಲೆ ಅಕ್ಕಿರೊಟ್ಟಿ, ಬರುತ್ತದೆ. ನಂತರ ತೊವ್ವೆಗೆ ಅನ್ನ. ಬಿಸಿ ಅನ್ನದ ಮೇಲೆ ಘಮ ಘಮಿಸುವ ತುಪ್ಪದ ಜೊತೆ ತೊವೆೆÌಯನ್ನು ಕಲಸಿ ತಿಂದು, ಮಂಗಳೂರು ತೊಂಡೆಕಾಯಿ ಸಾಂಬಾರ್‌ನ ರುಚಿ ನೋಡುವ ವೇಳೆಗೆ ಉದುರುದುರು ಅನ್ನ ಬರುತ್ತದೆ. ಘಮಘಮಿಸುವ ರಸಂನ ಪರಿಮಳಕ್ಕೆ ಮತ್ತೂಮ್ಮೆ ಅನ್ನ ಸವಿಯುವ ಆಸೆ ಬಾರದೇ ಇರದು.
ಪಡುಕೋಣೆಯ ಜಾಣ ಗಣೇಶ್…
ಕುಂದಾಪುರದ ಪಡುಕೋಣೆಯವರಾದ ಗಣೇಶ್, ಟೆಂಪಲ್ ಮೀಲ್ಸ್‌ನ ಮಾಲೀಕರು. ಈ ಹೋಟೆಲ್ ಆರಂಭಿಸುವ ಮುನ್ನ ವಿಪ್ರೋ ಸೇರಿದಂತೆ ವಿವಿಧ ಐಟಿ ಕಂಪೆನಿಗಳಲ್ಲಿ ಸ್ಟೋರ್ ಎಂಜಿನಿಯರ್ ಆಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ಚಿಕ್ಕಂದಿನಿಂದಲೂ ದೇವಾಲಯಗಳಲ್ಲಿ ಊಟದ ವಿಭಿನ್ನ ರುಚಿಯ ಬಗ್ಗೆ ಕುತೂಹಲವಿತ್ತು. ಅದೇ ರುಚಿ ಹೊಂದಿದೆ. ಊಟವನ್ನು ಜನರಿಗೆ ಉಣ ಬಡಿಸಬೇಕೆಂಬ ಸದುದ್ದೇಶದಿಂದ ಈ ಹೋಟೆಲ್ ಆರಂಭಿಸಿದೆ ಅನ್ನುತ್ತಾರೆ ಗಣೇಶ್.
90ರೂ ಗೆ ಸಾಂಪ್ರದಾಯಿಕ ಭೋಜನ…..
ಉಪ್ಪಿನ ಕಾಯಿ, ಕೋಸಂಬರಿ, ಚಟ್ನಿ, ಪಲ್ಯ, ಬಜ್ಜಿ/ ಹಪ್ಪಳ, ಚಪಾತಿ/ಪೂರಿ, ಪಾಯಸ, ಸ್ವೀಟ್ಸ್, ಅನ್ನ-ತೊವ್ವೆೆ-ತುಪ್ಪ, ಅನ್ನ-ರಸಂ, ಅನ್ನ-ಹುಳಿ, ಅನ್ನ- ಮೊಸರು
ರುಚಿಯ ಗುಟ್ಟು
ಆಹಾರ ತಯಾರಿಸಲು ಬಳಸುವ ತರಕಾರಿ, ಅಕ್ಕಿ ಹಾಗೂ ವಿವಿಧ ಧಾನ್ಯಗಳನ್ನು ದಕ್ಷಿಣ ಕನ್ನಡ ಜಿÇÉೆಯ ರೈತರಿಂದಲೇ ನೇರವಾಗಿ ಖರೀದಿಸುತ್ತೇನೆ. ನುರಿತ ಬಾಣಸಿಗರ ಅನುಭವವೇ ಈ ಹೋಟೆಲಿನ ಸವಿರುಚಿಯ ಹಿಂದಿರು ಗುಟ್ಟು ಎನ್ನುತ್ತಾರೆ ಗಣೇಶ್.
ದಿನಕ್ಕೊಂದು ಪಾಯಸ
ಹಬ್ಬ ಹರಿದಿನಗಳಲ್ಲಿ ಟೆಂಪಲ್ ಮೀಲ್ಸ್‌ನಲ್ಲಿ ವಿಶೇಷ ಮೆನುಗಳಿರುತ್ತವೆ. ಪ್ರತಿ ಶನಿವಾರ ಹಾಗೂ ಭಾನುವಾರ ಹೋಳಿಗೆ ಊಟ ಇಲ್ಲಿ ಕಾಯಂ. ಅಪ್ಪೆ ಮಿಡಿಯ ಉಪ್ಪಿನಕಾಯಿ, ಹಬ್ಬದೂಟದ ವಿಶೇಷ. ಖರ್ಜೂರ, ಸಬ್ಬಕ್ಕಿ, ಗೋಧಿ ಕಡಿ, ಶಾವಿಗೆ, ಅಂಜೂರ ಹೀಗೆ ಪ್ರತಿ ದಿನವೂ ಬಗೆಬಗೆಯ ಪಾಯಸಗಳು ಭೋಜನದೊಂದಿಗೆ ಇರುತ್ತವೆ. ಹಲಸಿನ ಹಣ್ಣಿನ ಪಾಯಸ ಟೆಂಪಲ್ ಮೀಲ್ಸ್‌ನ ಫೇವರೆಟ್ ಖಾದ್ಯ.
ಗ್ರಾಹಕರು ಬಯಸಿದರೆ 10 ರಿಂದ 25 ಮಂದಿಗೆ ಆಗುವಷ್ಟು ಊಟವನ್ನು ಪ್ರತ್ಯೇಕ ಕ್ಯಾರಿಯರ್‌ಗಳಲ್ಲಿ ಮನೆಗೆ ತಲುಪಿಸುವ ಸೇವೆಯೂ ಇಲ್ಲಿ ಲಭ್ಯ.
ಸಂಪರ್ಕ ಸಂಖ್ಯೆ : 9632203201, 080-23361212
ಹೋಟೆಲಿನ ಕೆಲಸದ ಅವಧಿ: ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ.
ಪುಷ್ಪಲತಾ. ಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.